ಅಭಿಪ್ರಾಯ / ಸಲಹೆಗಳು

Mangalore East Traffic PS                                                 

ಪಿರ್ಯಾದಿ ಮೊಹಮ್ಮದ್ ಜಾಸ್ಸಿಮ್ (20 ವರ್ಷ) ರವರು ದಿನಾಂಕ 02-03-2023 ರಂದು ಬೆಳಗಿನ ಜಾವ ಚಹಾ ಕುಡಿಯಲೆಂದು ಸ್ನೇಹಿತನ KL-14-U-4606 ನೊಂದಣಿ ನಂಬ್ರದ ಸ್ಕೂಟರಿನಲ್ಲಿ  ಆನಂದು ಪ್ರದೀಪ್ ಎಂಬಾತನನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಬೆಂದೂರ್ ವೆಲ್ ಕಡೆಯಿಂದ ವೆಲೆನ್ಸಿಯಾ ಕಡೆಗೆ ಹೋಗುತ್ತಾ ಬೆಳಗಿನ ಜಾವ 3.50 ಗಂಟೆಗೆ ಕರಾವಳಿ ಜಂಕ್ಷನ್ ತಲುಪುತ್ತಿದ್ದಂತೆ ಪಂಪ್ ವೆಲ್ ಕಡೆಯಿಂದ KA-19-AC-5669 ನೊಂದಣಿ ನಂಬ್ರದ ಲಾರಿಯನ್ನು ಅದರ ಚಾಲಕ ಕಂಕನಾಡಿ ಸರ್ಕಲ್ ಮೂಲಕ ಫಳ್ನೀರ್ ಕಡೆಗೆ ಹೋಗುವ ಭರದಲ್ಲಿ ದುಡುಕುತನ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ರಭಸಕ್ಕೆ ಪಿರ್ಯಾದಿದಾರರು ಹಾಗೂ ಸಹ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎರಡು ಭುಜಗಳಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ತಲೆಯ ಬಲ ಬದಿಯಲ್ಲಿ ತರಚಿದ ಗಾಯ, ಹೊಟ್ಟೆಗೆ ಗುದ್ದಿದ ರೀತಿಯ ಗಾಯ ಹಾಗೂ ಎರಡು ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಸಹ ಸವಾರ ಆನಂದು ಪ್ರದೀಪ್ ರವರಿಗೆ ಎಡಕಣ್ಣಿ ಬಳಿ ಹಾಗೂ ಹಣೆಗೆ, ಎಡಕೈಗೆ ತರಚಿದ ಗಾಯಗಳು ಹಾಗೂ ಎಡಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ  ಗಾಯಗಳಾದವರನ್ನು ಲಾರಿಯ ಚಾಲಕ ಹಾಗೂ ಇತರ ವಾಹನಗಳ ಚಾಲಕರು ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ. 

Panambur PS

ಪಿರ್ಯಾದಿ SHAILAJA  ಬೈಕಂಪಾಡಿಯ ಕೈಗಾರಿಕಾ  ಪ್ರದೇಶದಲ್ಲಿರುವ  ಅಚಲ್ ಇಂಡಸ್ಟ್ರೀಸ್ ನಲ್ಲಿ ಕೂಲಿ ಕೆಲಸ  ಮಾಡಿಕೊಂಡಿದ್ದು 03 ಜನ ಮಕ್ಕಳು ಸುದೇಶ್  ಮೊದಲಿನವನಾಗಿದ್ದು  ಸುಧೇಶ್ ನು 06 ವರ್ಷಗಳಿಂದ  ಮನೋರೋಗದಿಂದ  ಬಳಲುತ್ತಿದ್ದು ವೈದ್ಯಾಧಿಕಾರಿಯವರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದು ಮನೆಯಲ್ಲೇ ಇರುವುದಾಗಿದೆ. ಪಿರ್ಯಾದಿದಾರರ ಇನ್ನಿಬ್ಬರು ಮಕ್ಕಳು ಬೆಳಿಗ್ಗೆ ಕೆಲಸಕ್ಕೆ  ಹೋಗಿ ಸಂಜೆ  ವಾಪಸ್ಸು ಬರುವುದು. ದಿನಾಂಕ: 01-03-2023 ರಂದು  ಪಿರ್ಯಾದಿ ಮತ್ತು ತನ್ನ ಗಂಡ ಹಾಗೂ ಇನ್ನಿಬ್ಬರು ಮಕ್ಕಳು ಕೆಲಸಕ್ಕೆ  ಹೋಗಿದ್ದು ವಾಪಸ್ಸು ಮದ್ಯಾಹ್ನ 1.00 ಗಂಟೆಗೆ  ತನ್ನ ಗಂಡ ಮದ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಸುದೇಶ್ ನು ಮನೆಯಲ್ಲಿರಲಿಲ್ಲ. ಗಂಡನವರು ಅಕ್ಕ ಪಕ್ಕದವರಲ್ಲಿ ವಿಚಾರಿಸಿದಾಗ ಸುಧೇಶ್ ನು ಸುಮಾರು 12.30 ಗಂಟೆಗೆ ಮನೆಯಿಂದ ಹೋಗಿರುವುದಾಗಿ ತಿಳಿಸಿದ್ದು ಅವರು ಅಕ್ಕ ಪಕ್ಕ  ಹಾಗೂ ಬೀಚ್ ಪ್ರದೇಶದಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ತಾನು ಕೆಲಸ  ಮುಗಿಸಿ ಸಂಜೆ 6.00 ಗಂಟೆಗೆ ಮನೆಗೆ  ಹೋದಾಗ ಗಂಡ ಸುದೇಶ್ ನು ಮದ್ಯಾಹ್ನ 12.30 ಗಂಟೆಗೆ ಮನೆಯಲ್ಲಿ ಯಾರೂ  ಇಲ್ಲದಾಗ ಮನೆಯಿಂದ ಹೋದವನು ಈವರೆಗೂ  ಪತ್ತೆಯಾಗಿರುವುದಿಲ್ಲವಾಗಿ ತಿಳಿಸಿರುತ್ತಾರೆ. ನಂತರ   ಪಿರ್ಯಾದಿ  ಮತ್ತು ಮನೆಯವರು  ಸೇರಿ ಈವರೆಗೆ  ಕೂಳೂರು ಮಂಗಳೂರು  ಕಡೆಗಳಲ್ಲಿ   ಸುದೇಶ್ ನನ್ನು ಹುಡುಕಾಡಿ  ಎಲ್ಲಿಯೂ  ಪತ್ತೆಯಾಗದೇ  ಇರುವುದಿಲ್ಲ. ಆದ್ದರಿಂದ ಕಾಣೆಯಾದ ನನ್ನ ಮಗ ಸುದೇಶ ಪ್ರಾಯ 26 ವರ್ಷ ಎಂಬಾತನನ್ನು ಪತ್ತೆ ಮಾಡಿಕೊಡಬೇಕಾಗಿ  ಕೋರಿಕೆ.

ಕಾಣೆಯಾಗಿರುವವರ ವಿವರ:

ಹೆಸರು: ಸುದೇಶ್ ಪ್ರಾಯ:26 ವರ್ಷ, ಎತ್ತರ: ಸುಮಾರು 5.9 ಅಡಿ

ಸಪುರ ಶರೀರ  ಕಪ್ಪು ಮೈ ಬಣ್ಣ ಕೆಂಪು, ನೀಲಿ , ಬಿಳಿ ಉದ್ದ ಗೆರೆಗಳಿರುವ ಅರ್ಧ ತೋಳಿನ ಟೀ ಶರ್ಟ್   ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್  ಧರಿಸಿರುತ್ತಾರೆ.

ಕನ್ನಡ, ಹಿಂದಿ,ತುಳು  ಭಾಷೆಯನ್ನು ಮಾತನಾಡುತ್ತಾರೆ.

ಎಲ್ಲ ಕಡೆ ಹುಡುಕಾಡಿ ಬಂದ ಕಾರಣ ದೂರು ನೀಡಲು ತಡವಾಗಿರುತ್ತದೆ.

Traffic North Police Station               

ಪಿರ್ಯಾದಿ ಹುಸೈನಬ್ಬ (59 ವರ್ಷ) ರವರು ದಿನಾಂಕ: 01-03-2023 ರಂದು ಕೂಳೂರಿನಿಂದ ವಾಹನ ವೊಂದರಲ್ಲಿ ಪಂಜಿಮೊಗರಿಗೆ ಬಂದು ರಾತ್ರಿ ಸುಮಾರು 08:30 ಘಂಟೆಗೆ ಪಂಜಿಮೊಗರು ಜಂಕ್ಷನ್ ಬದ್ರಿಯಾ ಸ್ಟೋರ್ ಬಳಿ ರಸ್ತೆಯನ್ನು ದಾಟುತ್ತಿರುವಾಗ ಕೂಳೂರು ಕಡೆಯಿಂದ ಕಾವೂರು ಕಡೆಗೆ ಮೋಟಾರ್ ಸೈಕಲ್ ವೊಂದನ್ನು ಅದರ ಸವಾರನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮಣಿಗಂಟಿನ ಬಳಿ ಮೂಳೆ ಮುರಿತದ ಗಾಯವಾಗಿದ್ದು ಡಿಕ್ಕಿ ಪಡಿಸಿದ ಮೋಟಾರ್ ಸೈಕಲನ್ನು ಅದರ ಸವಾರನು ಸ್ಥಳದಲ್ಲಿ ನಿಲ್ಲಿಸದೇ ಹೋಗಿದ್ದು ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ನೋಂದಣಿ ನಂಬ್ರ ಮತ್ತು ಹೆಸರು ತಿಳಿದಿಲ್ಲವಾಗುಯೂ, ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಸುರತ್ಕಲಿನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Mangalore South PS                         

ಪಿರ್ಯಾದಿ ಶ್ರೀ ಮುಹಮ್ಮದ್ ರಶಿದ್ ಉದಿನೂರ್ ಪಳ್ಳಿಕಂಡಮ್ [34] ರವರ ಸಹೋದರ ಮೊಹಮ್ಮದ್ ಕುನ್ಹಿ [26] ರವರು ದೇರಳಕಟ್ಟೆಯ ಎನಪೋಯಾ ಮೇಡಿಕಲ್ ಕಾಲೇಜಿನಲ್ಲಿ 2015 ನೇ ಬ್ಯಾಚಿನಲ್ಲಿ ಎಮ್.ಬಿ.ಬಿ.ಎಸ್ ಕೊರ್ಸ್ ಅದ್ಯಯನ ಮಾಡುತ್ತಿದ್ದು, ದಿನಾಂಕ: 13.11.2022 ರಂದು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಹತ್ತಿರ ಇರುವ, ಎನಪೋಯಾ ನರ್ಸಿಂಗ್ ಹೋಮ್ ನಲ್ಲಿ ಅನಾರೋಗ್ಯದ ಸಲುವಾಗಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ: 28.02.2023 ರಂದು ಸಮಯ ಸುಮಾರು 09:00 ಗಂಟೆಗೆ ನರ್ಸಿಂಗ್ ಹೋಮ್ ನಲ್ಲಿ ಯಾರಿಗೂ ತಿಳಿಸದೇ ಹೋಗಿದ್ದು, ಕೂಡಲೇ ಪಿರ್ಯಾದಿದಾರರು ಮಂಗಳೂರಿಗೆ ಬಂದು ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಅಲ್ಲದೇ ಕಾಣೆಯಾದ ತನ್ನ ಸಹೋದರನ ಬಗ್ಗೆ ಪರಿಚಯದವರಲ್ಲಿ ಮತ್ತು ಸಂಭಂದಿಕರಲ್ಲಿ ವಿಚಾರಿಸಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಆದುದರಿಂದ ಕಾಣೆಯಾದ ಪಿರ್ಯಾದಿ ಸಹೋದರ ಮೊಹಮ್ಮದ್ ಕುನ್ಹಿ [26] ರವರನ್ನು ಪತ್ತೆಮಾಡಿಕೊಡಬೇಕೆಂದು ಈ ಮೂಲಕ ವಿನಂತಿ ಎಂಬಿತ್ಯಾದಿಯಾಗಿರುತ್ತದೆ.

ಚಹರೆ ವಿವರ:-                                                      

ಎತ್ತರ: 5 ಅಡಿ 10 ಇಂಚು

ಎಡ ಕುತ್ತಿಗೆ ಬಾಗದಲ್ಲಿ ಕಪ್ಪು ಬಣ್ಣದ ಕಲೆ

ಬಣ್ಣ : ಗೋದಿ ಮೈಬಣ್ಣ 

ದಪ್ಪ ಶರೀರ

ಇತ್ತೀಚಿನ ನವೀಕರಣ​ : 02-03-2023 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080