ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

 Mangalore West Traffic PS               

 ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ ANITHA  D SOUZA ಇವರು ದಿನಾಂಕ:15-02-2024 ರಂದು ಉರ್ವ ಚರ್ಚ್ ಗೆ ಪೂಜೆಗೆ ಬಂದವರು ವಾಪಾಸ್ಸು ಮನೆ ಕಡೆಗೆ ಹೋಗಲು ಅಶೋಕ ನಗರದ ಸಾರ್ವಜನಿಕ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಸಮಯ ಸುಮಾರು ಸಂಜೆ 07;30 ಗಂಟೆಗೆ ಅಶೋಕ ನಗರದ ವಿಧ್ಯಾಲಯ ಕ್ರಾಸ್ ರಸ್ತೆ ಕಡೆಯಿಂದ KA-19-MJ-1357ನೇ ಕಾರನ್ನು ಅದರ ಜಾಲಕ ಸರ್ವೇಶ್ವರಾವ್ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕೈ ಮಣಿಗಂಟಿನ ಬಳಿ ಮೂಳೆಮುರಿತದ ಗಾಯವಾದವರು ನಗರದ ಇಂದಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈ ಘಟನೆಯ ಬಗ್ಗೆ  ಯಾವುದೇ ಕಾನೂನು ಕ್ರಮದ ಅಗತ್ಯವಿಲ್ಲ ಎಂದು ಲಿಖಿತವಾಗಿ ನೀಡಿದ್ದು ನಂತರ ಪಿರ್ಯಾದಿದಾರರ ಗಾಯ ಉಲ್ಬಣಗೊಂಡಿದರಿಂದ ಮನೆಯವರಲ್ಲಿ ಚರ್ಚಿಸಿ ಈ ದಿನ ದೂರು ನೀಡಿರುವುದಾಗಿದೆ ಎಂಬಿತ್ಯಾದಿ

 

CEN Crime PS Mangaluru City

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೆನೆಂದರೆ, ಪಿರ್ಯಾದಿದಾರರಾದ ಶ್ರೀಮತಿ. ಗಾಯತ್ರಿ ಯವರು ಮಂಗಳೂರು ನಗರದ ಶಕ್ತಿನಗರ ದಲ್ಲಿರುವ ಕೆನರಾ ಬ್ಯಾಂಕ್ ಖಾತೆ ಯಲ್ಲಿ ಉಳಿತಾಯ ಖಾತೆ ಹೊಂದಿದ್ದು,  ದಿನಾಂಕ 23-02-2024 ರಂದು ಪಿರ್ಯಾದಿದಾರರ ಟೆಲಿಗ್ರಾಂ ನಂಬರ್ ಗೆ https:// t.me/+ Rw2gid3tyjaomjex. ಲಿಂಕ್ ಮೂಲಕ  ಮೇಸೆಜ್ ಬಂದಿದ್ದು, ಸದ್ರಿ ಮೇಸೆಜ್ ನಲ್ಲಿದ್ದ ಲಿಂಕ್ ನ್ನು ಓಪನ್ ಮಾಡಿದಾಗ  ಟೆಲಿಗ್ರಾಂ ಆಪ್ ನಲ್ಲಿ ಒಂದು 2754 CRYPTO TRADING VIP GROUP ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಗೆ ಪಿರ್ಯಾದಿದಾರರನ್ನು  ಸೇರಿಸಲಾಗಿರುತ್ತದೆ. ನಂತರ ಪಿರ್ಯಾದಿದಾರರಿಗೆ ಸ್ಟಾರ್ ರೇಟಿಂಗ್ ಎಂಬ ಟಾಸ್ಕ್ ನ್ನು ನೀಡಲಾಗಿದ್ದು, ಅದನ್ನು ಪಿರ್ಯಾದಿದಾರರು ಮೊದಲು 3,000/- ಹಣವನ್ನು ಹಾಕಿದ್ದು, ನಂತರ ಪಿರ್ಯಾದಿದಾರರ ಖಾತೆಗೆ ಒಟ್ಟು. 9,440/- ರೂ ಹಣವನ್ನು ಜಮಾ ಮಾಡಿರುತ್ತಾರೆ. ನಂತರ ಗ್ರೂಪ್ ಮರ್ಚೆಂಟ್ ಟಾಸ್ಕ್ ಎನ್ನುವ ಮಿಷನ್ ನ್ನು ಪೂರ್ಣಗೊಳಿಸಬೇಕು ಇದಕ್ಕೆ ಹಣ ಸಂದಾಯ ಮಾಡಬೇಕೆಂದು ಹೇಳಿ ಪಿರ್ಯಾದಿದಾರರಿಂದ ಹಂತ-ಹಂತವಾಗಿ ದಿನಾಂಕ 24-02-2024 ರಿಂದ 28-02-2024 ರವರೆಗೆ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರ ಖಾತೆಯಿಂದ ಹಂತ ಹಂತವಾಗಿ ಒಟ್ಟು 11,15,500/- ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

 

 

Traffic North Police Station            

 ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ನಿನ್ನೆ ದಿನ ದಿನಾಂಕ 01-03-2024 ರಂದು ಪಿರ್ಯಾದಿ  Dheeraj ಇವರು ತಮ್ಮ ಸಂಬಂದಿಕರ ಮೆಹಂದಿ ಕಾರ್ಯಕ್ರಮಕ್ಕೆ ಪಿರ್ಯಾದಿದಾರರು ಹಾಗೂ ಅವರ ತಾಯಿ ಮಾಲತಿ (50),ಅತ್ತೆ ಅಮಿತ(40)ರೊಂದಿಗೆ ಪರಿಚಯದ ಬ್ರಿಜೇಶ್ ಎಂಬುವರ KA-19-AE-2339 ರಿಕ್ಷಾದಲ್ಲಿಹೋಗಿ  ಕಾರ್ಯಕ್ರಮ ಮುಗಿಸಿ ಅದೇ ರಿಕ್ಷಾದಲ್ಲಿ ವಾಪಸ್ ಮನೆಕಡೆ ಬರುತ್ತಾ ಮಂಗಳೂರು-ಉಡುಪಿ NH-66 ರಲ್ಲಿ ಬಂದು ಹೊನ್ನಕಟ್ಟೆ ಜಂಕ್ಷನ್ ನಲ್ಲಿ ತೆರೆದ ಡಿವೈಡರ್ ನಲ್ಲಿ ಕಾನ ಕಡೆಗೆ ಹೋಗಲು ಬಲಬದಿಗೆ ಸುರತ್ಕಲ್-ಮಂಗಳೂರು NH-66 ರಸ್ತೆಯನ್ನು ದಾಟುತ್ತಾ ಅಂಚಿಗೆ ತಲುಪುತ್ತಿದ್ದಂತೆ ಸಮಯ ಸುಮಾರು 11.00 ಗಂಟೆಗೆ ಸುರತ್ಕಲ್ ಕಡೆಯಿಂದ KA-20-Z-9711 ಮಾರುತಿ ಕಂಪನಿಯ ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಮೊಹಮ್ಮದ್ ತನ್ವಿರ್ ಹುಸೈನ್ ಎಂಬಾತನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಅಂಚಿಗೆ ತಲುಪಿದ್ದ ನಮ್ಮ ರಿಕ್ಷಾದ ಎಡಬದಿಯ ಹಿಂಬಾಗಕ್ಕೆ ಡಿಕ್ಕಿ ಪಡಿಸಿದ್ದರಿಂದ ರಿಕ್ಷಾ ಮಗುಚಿ ಬಿದ್ದು ರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಬಲ ಬದಿಯ ಹಣೆಯ ಬಳಿ,ಬಲಕಣ್ಣಿನ ಬಳಿ ರಕ್ತಗಾಯ,ಬಲಗೈ ಭುಜಕ್ಕೆ ಗುದ್ದಿದ ರೀತಿಯ ಗಾಯವಾಗಿರುತ್ತದೆ ,ರಿಕ್ಷಾದಲ್ಲಿದ್ದ ಅಮಿತಾ  ರವರಿಗೆ ಎಡ ಬದಿಯ ಹಣೆಯ ಬಳಿ ರಕ್ತ ಗಾಯ ,ಮಾಲತಿಯವರಿಗೆ ಬಲಬದಿಯ ಕೆನ್ನೆಯ ಬಳಿ ರಕ್ತ ಗಾಯ ಹಾಗೂ ಬಲಕಣ್ಣಿನ ಬಳಿ ಮತ್ತು ಎದೆಗೆ ಗುದ್ದಿದ ಗಾಯವಾಗಿದ್ದು,ರಿಕ್ಷಾ ಚಾಲಕ ಬ್ರಿಜೇಶ್ ರವರಿಗೆ ಎಡಕಿವಿಗೆ ಸಣ್ಣ ರಕ್ತಗಾಯ ,ಎಡಕಾಲಿನ ಮೊಣಗಂಟಿನ ಬಳಿ ತರಚಿದ ಗಾಯ, ಬಲಕಿವಿಯಲ್ಲಿ ರಕ್ತ ಬರುತ್ತಿದ್ದು  ಹಾಗೂ  ತಲೆಗೆ ಗುದ್ದಿದ ರೀತಿಯ ಗಾಯವಾಗಿ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ  ಎಂಬಿತ್ಯಾದಿ

 

Urva PS       

 ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಅನಿತ ಹೆಚ್ ಬಿ ರವರು ದಿನಾಂಕ 01-03-2024 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ  ಠಾಣಾ ವ್ಯಾಪ್ತಿಯ ಬಿಜೈ ಕಾಫಿಕಾಡ್ ಬಳಿ ದಿನಾಂಕ 02-03-2024 ರಂದು ಸುಮಾರು 00:15 ರ ವೇಳೆಗೆ ತಲುಪಿದಾಗ ಸಾರ್ವಜನಿಕ ರಸ್ತೆ ಬದಿಯಲ್ಲಿ Muhammed Fasil K (24), S/O Muhammed, R/O Kalthingal House, Kacherimukk Village Kizhakkoth Post Thammarssy Taluku Kozhikode Dist Kerala  ಎಂಬಾತನು ಸೀಗರೇಟ್ ಸೇದುತ್ತಾ ನಿಂತಿದ್ದು, ಇಲಾಖಾ ವಾಹನ ನೋಡಿ ಕೈಯಲಿದ್ದ ಸಿಗರೇಟ್ ಬಿಸಾಡಿದ್ದರಿಂದ ಸಂಶಯಗೊಂಡ ಈತನ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದುದರಿಂದ ಮುಂದಿನ ಕ್ರಮದ ಬಗ್ಗೆ  ಆತನನ್ನು ಎ ಜೆ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ವೈದ್ಯರು ಈತನು ಗಾಂಜ ಸೇವನೆ ಮಾಡಿರುವುದಾಗಿ ದೃಢಪಡಿಸಿ ವರದಿ ನೀಡಿರುವುದಾಗಿದೆ.

 

 

Urva PS

ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಅನಿತ ಹೆಚ್ ಬಿ ರವರು ದಿನಾಂಕ 01-03-2024 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ  ಠಾಣಾ ವ್ಯಾಪ್ತಿಯ ಹ್ಯಾಟ್ ಹಿಲ್ ಬಳಿ ದಿನಾಂಕ 02-03-2024 ರಂದು ಸಾರ್ವಜನಿಕ ರಸ್ತೆ ಬದಿಯಲ್ಲಿ Sabad S (25), S/O Siddeeq, R/O Baithul House, Povval, Village Muliyar Post & Taluk, Kasaragodu Kerala ಎಂಬಾತನು ಸೀಗರೇಟ್ ಸೇದುತ್ತಾ ನಿಂತಿದ್ದು, ಇಲಾಖಾ ವಾಹನ ನೋಡಿ ಕೈಯಲಿದ್ದ ಸಿಗರೇಟ್ ಬಿಸಾಡಿದ್ದರಿಂದ ಸಂಶಯಗೊಂಡು ಈತನ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದುದರಿಂದ ಮುಂದಿನ ಕ್ರಮದ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ವೈದ್ಯರು ಈತನು ಗಾಂಜ ಸೇವನೆ ಮಾಡಿರುವುದಾಗಿ ದೃಢಪಡಿಸಿ ವರದಿ ನೀಡಿರುವುದಾಗಿದೆ

ಇತ್ತೀಚಿನ ನವೀಕರಣ​ : 02-03-2024 10:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080