ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore South PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನಂದರೆ, ಪ್ರಕರಣದ ಪಿರ್ಯಾದಿದಾರರಾದ ಡೊನಾಲ್ಡ್ ಡಿ’ಸೋಜಾ ರವರ ಮಂಗಳೂರು ನಗರದ ಅತ್ತಾವರ ಗ್ರಾಮದ ಜೆಪ್ಪು ಬಪ್ಪಾಲ್ ಡಿ’ಸೋಜಾ ಕಂಪೌಂಡ್ ನ ವಾಸದ ಮನೆಯಲ್ಲಿ ಕಳೆದ 1 ½  ವರ್ಷದಿಂದ ಯೋಗೀಶ್ ಎಂಬವರು ಬಾಡಿಗೆ ನೆಲೆಯಲ್ಲಿ ವಾಸವಾಗಿರುತ್ತಾರೆ. ಯೋಗಿಶ್ ರವರ ಬಾವ ರಾಜೇಶ್ ರವರು ಸದ್ರಿ ಮನೆಯ ಗೇಟನ್ನು ಅಲ್ಲಾಡಿಸಿ ನಷ್ಟುವನ್ನುಂಟುಮಾಡಿದ್ದ ಬಗ್ಗೆ ದಿನಾಂಕ : 02-04-2024 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ರಾಜೇಶ್ ರವರಲ್ಲಿ ಕೇಳಿದ್ದಕ್ಕೆ, ರಾಜೇಶ್ ರವರು ಏಕಾಏಕಿ ಪಿರ್ಯಾದಿದಾರರನ್ನು ತಡೆದು, ಪಿರ್ಯಾದಿದಾರರ ಎದೆಗೆ ಒದ್ದು, ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ

 

 

Ullal PS

ದಿನಾಂಕ:01-04-2024 ರಂದು ರಾತ್ರಿ 9-30 ಗಂಟೆ ಸಮಯಕ್ಕೆ ಉಳ್ಳಾಲ ಗ್ರಾಮದ  ಉಳ್ಳಾಲ ಮದನಿ ದರ್ಗಾದಲ್ಲಿ ಪಿರ್ಯಾದಿದಾರರಾದ  ಮೊಹಮ್ಮದ್ ಹುಸೈನ್ ರವರು ಪ್ರಾರ್ಥನೆ ಮುಗಿಸಿ ದರ್ಗಾದ ಹೊರಗೆ ಆಫೀಸಿನ ಬಳಿ ಬಾವಿ ಹತ್ತಿರ ನಡೆದುಕೊಂಡು ಬರುವಾಗ ಆರೋಪಿಗಳಾದ ಖಾಲಿದ್ ಮತ್ತು ಹಂಝ ಸಮದ್ ರವರು  ಪಿರ್ಯಾದಿದಾರರನ್ನು ಕೈ ಹಿಡಿದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಬ್ಯಾವರ್ಸಿ, ರಂಡೇ ಮಗ ಎಂಬಿತ್ಯಾದಿ ಅವ್ಯಾಚ್ಯ ಶಬ್ದಗಳಿಂದ ಬೈದು ಹಂಝ ಸಮದನು ಆತನ ಕಿಸೆಯಲ್ಲಿದ್ದ  ಕಬ್ಬಿಣದ ಪಂಚನ್ನು ತೆಗೆದು ಪಿರ್ಯಾದಿಗೆ ತೋರಿಸಿ ನಿನ್ನನ್ನು ಇಲ್ಲಿಯೇ ಕೊಂದು ಹಾಕುವುದಾಗಿ ಹೇಳಿ ಪಂಚ್ ನಿಂದ ಪಿರ್ಯಾದಿ ಹಣೆಗೆ ಗುರಿಯಿಟ್ಟು ಬಲವಾಗಿ ಬೀಸಿದಾಗ ಪಿರ್ಯಾದಿದಾರರು ಬಗ್ಗಿಸಿ ತಪ್ಪಿಸಿದ್ದು , ಎರಡನೇ ಬಾರಿ ಎಡ ಕೆನ್ನೆಗೆ ಗುರಿಯಿಟ್ಟು ಬಲವಾಗಿ ಬೀಸಿದಾಗ ಆಗ ಕೂಡಾ ತಲೆಯನ್ನು ಬಗ್ಗಿಸಿ ತಪ್ಪಿಸಿದ್ದು ನಂತರ ಖಾಲಿದನು ಅಲ್ಲಿಯೇ ಇದ್ದ ಇಂಟರ್ ಲಾಕ್ ತುಂಡಿನಿಂದ ಪಿರ್ಯಾದಿ ತಲೆಗೆ ಗುರಿಯಿಟ್ಟು ಕೊಂದು ಹಾಕುವ ಉದ್ದೇಶದಿಂದ ಬಲವಾಗಿ ಬೀಸಿದಾಗ  ಮತ್ತೆ ಬಗ್ಗಿ ತಪ್ಪಿಸಿದ್ದು ಈ ಸಂದರ್ಭ ಹಂಝ ಸಮದನು ಪಂಚ್ ನಿಂದ ಪಿರ್ಯಾದಿ ಎಡ ಕಿವಿ ಬಳಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದ್ದು ಈ ಘಟನೆಗೆ ದಿನಾಂಕ:31-03-2024 ರಂದು ರಾತ್ರಿ 10-00 ಗಂಟೆಗೆ ನಿಯಮದಂತೆ ದರ್ಗಾದ  ಮಹಿಳೆಯರ ಪ್ರವೇಶಧ್ವಾರಕ್ಕೆ  ವಾಚ್ ಮೆನ್ ರವರು ಬೀಗ ಹಾಕಿದ್ದನ್ನು ಕಂಡು ಆರೋಪಿ ಖಾಲಿದನು ದರ್ಗಾದ ಕಾರ್ಯದರ್ಶಿಯವರಲ್ಲಿ ಗೇಟು ತೆರೆಯುವಂತೆ ತಕರಾರು ಮಾಡಿದಾಗ ಕಾರ್ಯದರ್ಶಿಯವರು ಒಪ್ಪದೇ ಇದ್ದು ಆ ಸಂದರ್ಭ ಪಿರ್ಯಾದಿದಾರರು ಕೂಡಾ ಖಾಲಿದ್ ನಲ್ಲಿ ದರ್ಗಾದ ಕಾರ್ಯಾದರ್ಶಿಯವರು ಹೇಳಿದರಲ್ಲ , ನೀವು ಹೋಗಿ ಎಂದು ಹೇಳಿದ್ದು ಇದೇ ಸಿಟ್ಟಿನಿಂದ  ಆರೋಪಿಗಳು ಪಿರ್ಯಾದಿದಾರರನ್ನು ಮಾರಕಾಯುಧದಿಂದ ಕೊಲೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿದ್ದು, ಗಾಯಾಳು ಪಿರ್ಯಾದಿ ಉಳ್ಳಾಲ ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 05-04-2024 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080