Crime Reports: CEN Crime PS Mangaluru City
ದಿನಾಂಕ 01-05-2023 ರಂದು ಪಿರ್ಯಾದಿದಾರರ ಇಮೇಲ್ ಐಡಿ ನೇದಕ್ಕೆ lyall-nalda@xtra.co.nz ಎಂಬ ಇಮೇಲ್ ಐಡಿಯಿಂದ ಸಮಯ 16-35 ಕ್ಕೆ Netflix Order Failed-action needed ಎಂಬ ಸಂದೇಶ ಇದ್ದು ಆ ಸಂದೇಶದಲ್ಲಿ ತರೆದು ನೋಡಿದಾಗ ಅದರಲ್ಲಿ ನಿಮ್ಮ ಕ್ರೇಡಿಟ್ ಕಾರ್ಡ ವಿಫಲವಾಗಿದೆ ಅದನ್ನು Re Register ಮಾಡಬೇಕು ಎಂಬುದಾಗಿ ತಿಳಿಸಿ ಅದರಲ್ಲಿ ಲಿಂಕ್ ನ್ನು ಕಳುಹಿಸಿರುತ್ತಾರೆ ಆ ಲಿಂಕ್ ನ್ನು ಪಿರ್ಯಾದಿದಾರರು ತೆರೆದು ನೋಡಿದಾಗ ನಿಮ್ಮ ಕ್ರೇಡಿಟ್ ಕಾರ್ಡ ವಿವರಗಳನ್ನು ಹಾಕುವಂತೆ ಸಂದೇಶ ಇರುತ್ತದೆ. ಇದನ್ನು ನಂಬಿ ಪಿರ್ಯಾದಿದಾರರು ತಮ್ಮ ಕ್ರೇಡಿಟ್ ಕಾರ್ಡನ ವಿವರಗಳನ್ನು ಅದರಲ್ಲಿ ನಮೂದು ಮಾಡಿದ್ದು ನಂತರ ಅದನ್ನು ವೇರಿಫೆಕೇಷನ್ ಮಾಡಲು ಓಟಿಪಿ ಬಂದಿದ್ದು ಅದರಂತೆ ಪಿರ್ಯಾದಿದಾರರು ಆ ಓಟಿಪಿ ಅದರಲ್ಲಿ ಹಾಕಿರುತ್ತಾರೆ ಆ ಕೂಡಲೇ ಪಿರ್ಯಾದಿದಾರರ ಕ್ರೆಡಿಟ್ ಕಾರ್ಡ್ ನಿಂದ ರೂ. 1,37,432/- ಹಣ ವರ್ಗಾವಣೆಯಾದ ಬಗ್ಗೆ ಸಂದೇಶ ಬಂದಿರುತ್ತದೆ ಈ ರೀತಿಯಾಗಿ ಪಿರ್ಯಾದಿದಾರರ ಇಮೇಲ್ ಐಡಿ ಗೆ ಸಂದೇಶ ಕಳುಹಿಸಿ ಯಾರೋ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಕ್ರೆಡಿಟ್ ಕಾರ್ಡ್ ವಿವರ ಪಡೆದು ರೂ. 1,37,432/- ಹಣವನ್ನು ವರ್ಗಾವಣೆಮಾಡಿಕೊಂಡು ಮೋಸಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ.
CEN Crime PS Mangaluru City
ದಿನಾಂಕ 30-04-2023 ರಂದು ಪಿರ್ಯಾದಿದಾರರ ಇನ್ಸ್ಟಾ ಗ್ರಾಂ ಖಾತೆಗೆ ಯಾರೋ ಅಪರಿಚಿತ ವ್ಯಕ್ತಿಯ orange_forex89 ಇನ್ಸ್ಟಾ ಗ್ರಾಂ ಖಾತೆಯಿಂದ ಟ್ರೇಡಿಂಗ್ App ಮೂಲಕ ಹಣ ಗಳಿಸುವ ಬಗ್ಗೆ ಸಂದೇಶ ಬಂದಿರುತ್ತದೆ.ಅದನ್ನು ನಂಬಿ ಫಿರ್ಯಾದಿದಾರರು ಆ ವ್ಯಕ್ತಿಯ ಜೊತೆಗೆ ಟ್ರೇಡಿಂಗ್ App ನ ಬಗ್ಗೆ ಇನ್ಸ್ಟಾ ಗ್ರಾಂ ಮುಖೇನ್ ಚಾಟಿಂಗ್ ಮಾಡುತ್ತಿರುವ ಸಮಯ ಆ ವ್ಯಕ್ತಿಯು ಹಣ ವರ್ಗಾವಣೆ ಮಾಡುವಂತೆ ತಿಳಿಸಿ ಕೆನರಾ ಬ್ಯಾಂಕಿನ 2380 ನಂಬ್ರದ QR ಕೋಡ್ ನ್ನು ಕಳುಹಿಸಿರುತ್ತಾರೆ ಆ QR ಕೋಡ್ ನ್ನು ಪಿರ್ಯಾದಿದಾರರು ಸ್ಕಾನ್ ಮಾಡಿ ದಿನಾಂಕ 30-04-2023 ರಂದು ರೂ.2,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಇದೇ ರೀತಿ ಟ್ರೇಡಿಂಗ್ App ಮೂಲಕ ಹಣ ಗಳಿಸುಬಹುದೆಂದು ನಂಬಿ ಫಿರ್ಯಾದಿದಾರರು ಹಂತ ಹಂತವಾಗಿ 17,949/- ಹಣವನ್ನು ವರ್ಗಾವಣಿ ಮಾಡಿರುತ್ತಾರೆ ನಂತರ ಇನ್ನು ಹಣ ವರ್ಗಾವಣೆ ಮಾಡುವಂತೆ ಆ ವ್ಯಕ್ತಿಯು amir76091-1@okicici ಎಂಬ UPI ID ನ್ನು ಕಳುಹಿಸಿರುತ್ತಾನೆ ಅದಕ್ಕೆ ಪಿರ್ಯಾದಿದಾರರು ರೂ.14,999/-ಹಣವನ್ನು ವರ್ಗಾವಣೆ ಮಾಡಿರುತ್ತಾರೆ.ಈ ರೀತಿಯಾಗಿ ಟ್ರೇಡಿಂಗ್ App ಮೂಲಕ ಹಣ ಗಳಿಸಬಹುದೆಂದು ತಿಳಿಸಿ ಫಿರ್ಯಾದಿದಾರರ ಖಾತೆ ನಂಬ್ರ ನೇದರಿಂದ ಒಟ್ಟು ರೂ,32,948/- ಹಣವನ್ನು ವರ್ಗಾವಣಿ ಮಾಡಿಸಿಕೊಂಡು ಮೋಸಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ.
CEN Crime PS Mangaluru City
ದಿನಾಂಕ 25-04-20223 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರ ಪರಿಚಯದ xxxx ಎಂಬವರು ಫೋನ್ ಮಾಡಿ ಕಡಿಮೆ ದರದಲ್ಲಿ ಸಿಮೆಂಟ್ ಸಿಗುತ್ತದೆ ಎಂಬುದಾಗಿ ತಿಳಿಸಿದಾಗ ಪಿರ್ಯಾದುದಾರರು ಒಪ್ಪಿದರು. ಆ ಬಳಿಕ ಪಿರ್ಯಾದುದಾರರಿಗೆ 9880681702 ನಂಬ್ರದಿಂದ ಅಲ್ಟ್ರಾ ಟೆಕ್ ಸಿಮೆಂಟ್ ನ ಸೇಲ್ ಆಫೀಸರ್ ಎಂದು ಕರೆ ಮಾಡಿ ರೂಪಾಯಿ 355/- ರಂತೆ ಒಟ್ಟು 200 ಬ್ಯಾಗ್ ಸಿಮೆಂಟ್ ಇದೆ ಎಂದು ತಿಳಿಸಿದರು. ಆಗ ಪಿರ್ಯಾದುದಾರರು ತನಗೆ ತಲಾ 60 ಬ್ಯಾಗ್ ಸಿಮೆಂಟ್ ಎರಡು ಸೈಟ್ ಗೆ ಅವಶ್ಯಕತೆ ಇದೆ ಎಂದು ಹೇಳಿದಾಗ, ಕರೆ ಮಾಡಿದ ವ್ಯಕ್ತಿ ಒಪ್ಪಿದರು. ಅದರಂತೆ ಒಂದು ಸೈಟ್ ಗೆ 60 ಬ್ಯಾಗ್ ಸಿಮೆಂಟ್ ಡೆಲಿವರಿ ಆಗಿತ್ತು. ಅದರ ಹಣವನ್ನು ರೂಪಾಯಿ 5000/- ಮತ್ತು 16300/- ನ್ನು ಗೂಗಲ್ ಪೇ ಮೂಲಕ ಪಾವತ್ತಿಸಿದ್ದರು. 2 ನೇ ಸೈಟ್ ಗೆ ಬಂದ 60 ಬ್ಯಾಗ್ ಡೆಲಿವರಿಗೆ ಬಂದಾಗ ಪೇಮೆಂಟ್ ಸಿಗದ ಕಾರಣ ಡ್ರೈವರ್ ಅನ್ ಲೋಡ್ ಗೆ ಒಪ್ಪಿರಲಿಲ್ಲ. ನಂತರ ಪಿರ್ಯಾದುದಾರರು ಕೂಡಲೇ ಗೂಗಲ್ ಪೇ ಮೂಲಕ ರೂಪಾಯಿ 20,000/- ವನ್ನು ಗೂಗಲ್ ಪೇ ಮೂಲಕ ಪಾವತ್ತಿಸಿದ್ದರು. ಅದಾದ ಬಳಿಕ ಸದ್ರಿ ಫೋನ್ ನಂಬ್ರ ಸ್ವಿಚ್ ಆಗಿತ್ತು. ಫಿರ್ಯಾದಿದಾರರಿಗೆ ಸದ್ರಿ ಸಿಮೆಂಟ್ ಪೃಥ್ವಿ ಎಂಟರ್ ಪ್ರೈಸೆಸ್ ಕಪಿತಾನಿಯೋ ಎಂಬಲ್ಲಿಂದ ಬಂದಿದ್ದು, ಸದ್ರಿ ಸಿಮೆಂಟ್ ಅಂಗಡಿಯ ಮಾಲಿಕ ಫಿರ್ಯಾದುದರಾರರು ಗೂಗಲ್ ಪೇ ಮೂಲಕ ಪಾವತ್ತಿಸಿದ ಹಣ ಬರಲಿಲ್ಲ ಎಂಬ ಕಾರಣಕ್ಕೆ ಫಿರ್ಯಾದಿದಾರರ ಎರಡೂ ಸೈಟ್ ಗೆ ಹಾಕಿದ ಸಿಮೆಂಟ್ ಬ್ಯಾಗನ್ನು ವಾಪಸ್ಸು ಕೊಂಡು ಹೋದರು. ಈ ಬಗ್ಗೆ ಫಿರ್ಯಾದುದಾರರ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ಗೂಗಲ್ ಪೇ ಮೂಲಕ ಪಾವತ್ತಿಸಿದ ಹಣವು alamsarfaraz99980-1@oksbi, alamsarfaraz99980-1@okicici ಎಂಬುದಾಗಿ ಇರುವುದು ಕಂಡು ಬಂತು. ಫಿರ್ಯಾದುದಾರರಿಗೆ 9880681702 ನಂಬ್ರದಿಂದ ಅಲ್ಟ್ರಾ ಟೆಕ್ ಸಿಮೆಂಟ್ ನ ಸೇಲ್ ಆಫೀಸರ್ ಎಂದು ಹೇಳಿ ಮೋಸದಿಂದ ಫಿರ್ಯಾದುದಾರರ ಖಾತೆಯಿಂದ ಒಟ್ಟು ರೂಪಾಯಿ 41,300/- ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ
Mulki PS
ಪಿರ್ಯಾದಿ Chandrashekhar ಮುಲ್ಕಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ: 01-05-2023 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಮುಲ್ಕಿ ಠಾಣಾ ಹೊಯ್ಸಳ 18ನೇರವರು ಎಸ್ ಕೋಡಿಯ ಕಂಬಳಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ 112ಗೆ ದೂರು ಬಂದ ವಿಚಾರ ತಿಳಿಸಿದ ಮೇರೆಗೆ ದಿನಾಂಕ 02-05-2023 ರಂದು ರಾತ್ರಿ ಗಂಟೆ ಸಮಯ ಸುಮಾರು 02.45ಕ್ಕೆ ಸದ್ರಿ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿಯವರ ಜೊತೆಯಲ್ಲಿ ಹೋದಾಗ ಅಲ್ಲಿ ದೂರುದಾರರಾದ ಅರುಣ್, ಹಾಗೂ ಎದ್ರಿದಾರರಾದ ಪ್ರವೀಣ್ ಯಾನೆ ಅನಿಲ್, ರಾಹುಲ್ ಮತ್ತು ಪುರುಷೊತ್ತಮ್ ನಡುವೆ ಗಲಾಟೆ ನಡೆಯುತ್ತಿದ್ದು ಈ ಸಮಯದಲ್ಲಿ ಪ್ರವೀಣ್ ಯಾನೆ ಅನಿಲ್ ಎಂಬಾತನನ್ನು ಸಮಾಧಾನ ಪಡಿಸುತ್ತಿರುವಾಗ ಪಿರ್ಯಾದಿದಾರರಿಗೆ ಪ್ರವೀಣ್ ಯಾನೆ ಅನಿಲ್ ಅವಾಚ್ಯ ಶಬ್ದಗಳಿಂದ ಬೈದು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದವರನ್ನು ತಡೆದು ನಿಲ್ಲಿಸಿ ಕೈಯಿಂದ ಎದೆಯ ಮೇಲೆ ಕೈ ಹಾಕಿ ದೂಡಿ ಹಲ್ಲೆ ಮಾಡಿದ್ದಲ್ಲದೆ ಚಾಕುವಿನಿಂದ ಪಿರ್ಯಾದಿದಾರರ ಕಡೆ ಬೀಸಿ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದ್ದು ಹಾಗೂ ಮತ್ತೊಬ್ಬ ಆರೋಪಿತರಾದ ರಾಹುಲ್ ಎಂಬಾತನು ಅಂಗಿಯ ಕಾಲರ್ ಹಿಡಿದು ಎಳದಿದ್ದಲ್ಲದೆ ಆರೋಪಿತ ಪುರುಷೋತ್ತಮ್ ಎಂಬಾತ ಪಿರ್ಯಾದಿದಾರರ ಎಡೆ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿರುವುದಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ, ಜೀವ ಬೆದರಿಕೆ ಹಾಕಿದ ಪ್ರವೀಣ್ ಯಾನೆ ಅನಿಲ್, ರಾಹುಲ್ ಮತ್ತು ಪುರುಷೋತ್ತಮ್ ರವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಎಂಬಿತ್ಯಾದಿ.
Traffic South Police Station
ದಿನಾಂಕ:01-05-2023 ರಂದು ಪಿರ್ಯಾದಿ MOHAMMED SHAMI ಹೆಂಡತಿ ಮುಜಾಬಿನ್ ,ಅತ್ತೆ ಶಕೀಲಾಬಾನು, ನಾದಿನಿ ಸಾಜ್ ಬೀನ್, ಭಾವ ಕೌಸರ್ ಖಾನ್ ಎಂಬವರ ಜೊತೆಯಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಬಂಧಿಕರನ್ನು ನೋಡುವರೇ ದಾವಣಗೆರೆಯಿಂದ ಕಾರಿನಲ್ಲಿ ಬಂದು ಸಂಜೆ ಸುಮಾರು 7:15 ಗಂಟೆಗೆ ಎಕ್ಕೂರು ಬಳಿ ತಲುಪಿ ರಸ್ತೆಬದಿಯಲ್ಲಿರುವ ಟೀ ಅಂಗಡಿಯಲ್ಲಿ ಟೀ ಕುಡಿದು ಬಳಿಕ ಹೋಗಲು ರೆಡಿಯಾಗುತ್ತಿದ್ದಂತೆ ಸಮಯ ಸುಮಾರು ಸಂಜೆ 7:30 ಗಂಟೆಗೆ ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರ ಜೊತೆಗೆ ಬಂದಿದ್ದ ಕೌಸರ್ ಖಾನ್ (27ವರ್ಷ)ಎಂಬಾತನಿಗೆ. ಪಂಪವೆಲ್ ಕಡೆಯಿಂದ ತೊಕ್ಕೂಟು ಕಡೆಗೆ ರಾ.ಹೆ-66 ರಲ್ಲಿ KL-08-BZ-4531 ನೇ ನಂಬ್ರದ ಟಿಪ್ಪರ್ ಲಾರಿ ಯನ್ನು ಅದರ ಚಾಲಕನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಾಗ ಕೌಸರ್ ಖಾನ್ ಮುಗ್ಗರಿಸಿ ರಸ್ತೆಗೆ ಬಿದ್ದಾಗ ಟಿಪ್ಪರ್ ಲಾರಿಯ ಎಡ ಬಾಗದ ಮುಂದಿನ ಚಕ್ರವು ಕೌಸರ್ ಖಾನ್ ನ ಬಲ ಕಾಲಿನ ಮೇಲೆ ಹಾದುಹೋದ ಪರಿಣಾಮ ಬಲಕಾಲಿನ ತೊಡೆಯಿಂದ ಕೊಲು ಕಾಲಿನವರೆಗೆ ಜಜ್ಜಿ ಹೋಗಿ,ಚರ್ಮ ಬೇರ್ಪಟ್ಟು ತೀವ್ರ ರಕ್ತಗಾಯವಾಗಿರುತ್ತದೆ .ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪಿರ್ಯಾಧಿದಾರರು ಮತ್ತು ಸಂಬಂಧಿಕರು ದೇರಳಕಟ್ಟೆ ಯೆನೆಪೊಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಅಪಘಾತ ಎಸಗಿದ ಟಿಪ್ಪರ್ ಲಾರಿ ಚಾಲಕನು ಅಪಘಾತ ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.
Surathkal PS
ಪಿರ್ಯಾದಿ ಮೊಹಮ್ಮದ್ ನೌಫಲ್ ಮತ್ತು ಆರೋಪಿಯಾದ ಸಿರಾಜ್ ನೊಂದಿಗೆ ಹಣಕಾಸಿನ ವ್ಯವಹಾರ ನಡೆಸಿಕೊಂಡಿದ್ದು ಇದೆ ವ್ಯವಹಾರದಲ್ಲಿ ಅವರೊಳಗೆ ತಕಾರರಾಗಿದ್ದು ಪಿರ್ಯಾದಿದಾರರು ಆರೋಪಿ ಸಿರಾಜ್ ಗೆ ಏಪ್ರಿಲ್ 10 ನೇ ತಾರಿಖು ಹತ್ತು ಸಾವಿರ ಹಣ ನೀಡಲು ಇದ್ದು, ಅದನ್ನು ನೀಡದೆ ಇರುವುದರಿಂದ ದಿನಾಂಕ 01-05-2023 ರಂದು ರಾತ್ರಿ 10:30 ಗಂಟೆ ವೇಳೆಗೆ ಪಿರ್ಯಾದಿದಾರರು ಅವರ ಬಾಬ್ತು ಟಾಟಾ ಇಂಟ್ರಾ ವಾಹನದಲ್ಲಿ ಪಿರ್ಯಾದಿದಾರರ ಹೆಂಡತಿ ಶಬನಾಜ್ ರವರೊಂದಿಗೆ ಬರುತ್ತಿರುವಾಗ ಕಾನದಲ್ಲಿರುವ ಮನೆ ಹತ್ತಿರ ತಲುಪಿದಾಗ ಆರೋಪಿ ಶಿರಾಜ್ ನು ಅವರ ಬಾಬ್ತು ಬಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬಂದು ಪಿರ್ಯಾದಿದಾರರ ವಾಹನಕ್ಕೆ ಅಡ್ಡ ನಿಂತು ಪಿರ್ಯಾದರರನ್ನು ಅವರ ವಾಹನದಿಂದ ಎಳೆದು ಕೈಯಿಂದ ಹೊಡೆದುದಲ್ಲದೇ ಆರೋಪಿಯೊಂದಿಗೆ ಇನ್ನೊಂದು ಕಾರಿನಲ್ಲಿ ಬಂದಿದ್ದ ರಜ್ಮಾಲ್, ಅಲ್ತಾಫ್ ಮತ್ತಿತರರು ಸೇರಿ ಪಿರ್ಯಾದಿದಾರರಿಗೆ ಹೊಡೆಯುತ್ತಿರುವಾಗ ತಡೆಯಲು ಬಂದ ಶಬನಾಜ್ ರವರನ್ನು ದುಡಿ ಹಾಕಿ ಎದೆ ಮೇಲೆ ಕೈಹಾಕಿ ಹೊಡೆದುದಲ್ಲದೇ ಬಾಕಿ ಇರುವ ಹಣವನ್ನು ಕೊಡದೆ ಇದ್ದರೆ ನಿಮ್ಮನ್ನು ಜೀವ ಸಹಿತ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ ಅವರುಗಳು ಎರಡು ವಾಹನದಲ್ಲಿ ಒಟ್ಟು 08 ಜನ ಬಂದಿದ್ದು ಅವರುಗಳು ಇನ್ನುಮುಂದೆಯು ನಮ್ಮ ಮೇಲೆ ಹಲ್ಲೆ ಮಾಡುವುದಾಗಿ ತಿಳಿಸಿರುವುದರಿಂದ ಸದ್ರಿ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ.
CEN Crime PS Mangaluru City
ಪಿರ್ಯಾದಿಯವರು 99acres ಎಂಬ ಸೋಶಿಯಲ್ ಫ್ಲಾಟ್ ಫಾರ್ಮ್ ನೇದ್ದರಲ್ಲಿ ಬೆಂಗಳೂರಿನಲ್ಲಿರುವ ತಮ್ಮ ಮನೆ ಬಾಡಿಗೆಗೆ ಇರುವುದಾಗಿ ಜಾಹಿರಾತನ್ನು ಹಾಕಿರುತ್ತಾರೆ.ಅದನ್ನು ನೋಡಿದ ಆರೋಪಿಯು ಪಿರ್ಯಾದಿದಾರರ ಮೋಬೈಲ್ ನಂಬ್ರ- ನೇದಕ್ಕೆ ಕರೆ ಮಾಡಿ ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿಯು ಮನೆ ಬಾಡಿಗೆ ಅವಶ್ಯಕತೆ ಇದೆ ಎಂದು ಹೇಳಿ, ಅಡ್ವಾನ್ಸ್ ಹಣವನ್ನು ಕಳುಹಿಸಲು ಪಿರ್ಯಾದಿದಾರರು ಹೊಂದಿರುವ ಆಕ್ಸಿಸ್ ಬ್ಯಾಂಕ್ ಖಾತೆ ನಂಬ್ರ- ಮತ್ತು ಗೂಗಲ್ ಪೇ ನಂಬ್ರ-ವಿವವರಗಳನ್ನು ಕಳುಹಿಸಲು ತಿಳಿಸಿರುತ್ತಾರೆ ಇದನ್ನು ನಂಬಿದ ಪಿರ್ಯಾದಿದಾರರು ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆಯ ಮತ್ತು ಗೂಗಲ್ ಪೇ ವಿವವರಗಳನ್ನು ಕಳುಹಿಸಿಕೊಟ್ಟಿರುತ್ತಾರೆ ಆ ಕೂಡಲೆ ಆರೋಪಿಯು ಪಿರ್ಯಾದಿದಾರರು ಹೊಂದಿರುವ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ರೂ 50,000/ ರಂತೆ ಎರಡು ಬಾರಿ ಒಟ್ಟು 100,000/- ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ
CEN Crime PS Mangaluru City
ಪಿರ್ಯಾದಿ ಸ್ವಂತ ವ್ಯವಹಾರ ನಡೆಸುವ ಸಲುವಾಗಿ ಗೂಗಲ್ ನಲ್ಲಿ ಸಾಲಕ್ಕಾಗಿ ಹುಡುಕಾಟ ನಡೆಸಿರುತ್ತಾರೆ. ಅಂತೆಯೇ ಯಾರೋ ಅಪರಿಚಿತ ವ್ಯಕ್ತಿ ಫಿರ್ಯಾದುದಾರರ ದೂರವಾಣಿ ಸಂಖ್ಯೆ ನೇದಕ್ಕೆ 8961318728 ನೇದರರಿಂದ ಕರೆ ಮಾಡಿ ತಾನು ಕ್ರಾಂತಿ ಫೈನಾನ್ಸ್ ಎಂಬ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡು ಹಾಗೂ ಫಿರ್ಯಾದುದಾರರಿಗೆ ಸ್ವಂತ ಬಿಸಿನೆಸ್ ಮಾಡಲು ಒಂದು ಕೋಟಿ ಸಾಲ ಒದಗಿಸುವುದಾಗಿ ನಂಬಿಸಿ ಅದಕ್ಕಾಗಿ ತಮ್ಮ ಕಂಪನಿಯ ಕೆಲವು ದಾಖಲಾತಿಗಳನ್ನು ಫಿರ್ಯಾದುದಾರರಿಗೆ ಕಳುಹಿಸಿರುತ್ತಾರೆ. ನಂತರ ಫಿರ್ಯಾದುದಾರರಿಗೆ ಸಾಲ ಒದಗಿಸಲು ಪ್ರೋಸೆಸಿಂಗ್ ಶುಲ್ಕ ಪಾವತಿಸುವಂತೆ ಅಪರಿಚಿತ ವ್ಯಕ್ತಿಯು ತಿಳಿಸಿರುತ್ತಾರೆ, ಮೊದಲಿಗೆ 12,500/- ರೂಗಳನ್ನು ಪಾವತಿ ಮಾಡಲು ಹೇಳಿರುತ್ತಾರೆ. ಫಿರ್ಯಾದುದಾರರು ಸದ್ರಿ ಸಂಗತಿಯನ್ನು ಸತ್ಯವೆಂದು ನಂಬಿಕೊಂಡು ಸಾಲ ದೊರಕಬಹುದೆಂಬ ಇರಾದೆಯಿಂದ ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗಳಿಗೆ ಫಿರ್ಯಾದುದಾರರ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸುರತ್ಕಲ್ ಶಾಖೆ,ಖಾತೆ ನೇದರಿಂದ ಹಂತ ಹಂತವಾಗಿ ದಿನಾಂಕ 29-12-2022 ರಿಂದ ದಿನಾಂಕ 19-01-2023 ರತನಕ ಒಟ್ಟು 10,14,106/-ರೂಗಳನ್ನು ಅಪರಿಚಿತ ವ್ಯಕ್ತಿ ನೀಡಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ-045722010000550 ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಖಾತೆ ಸಂಖ್ಯೆ- 0474059000006058 ನೇದಕ್ಕೆ ಐಎಂಪಿಎಸ್ ಮೂಲಕ ವರ್ಗಾಯಿಸಿರುತ್ತಾರೆ.ಸದ್ರಿ ಅಪರಿಚಿತ ವ್ಯಕ್ತಿಯೂ ಫಿರ್ಯಾದುದಾರರಿಂದ ಇನ್ನೂ ಹಣ ಪಾವತಿಸುವಂತೆ ಒತ್ತಾಯಿಸಿರುತ್ತಾರೆ ಆದರೆ ಫಿರ್ಯಾದುದಾರರು ಯಾವುದೇ ಹಣವನ್ನು ಪಾವತಿಸಿರುವುದಿಲ್ಲ ಹಾಗೂ ಫಿರ್ಯಾದುದಾರರು ಇದೂವರೆಗೂ ಸಾಲ ದೊರಕಬಹುದೆಂಬ ನಿರೀಕ್ಷೆಯಲ್ಲಿದ್ದು, ಯಾವುದೇ ಸಾಲ ದೊರಕದಿರುವ ಕಾರಣ ಯಾರೋ ಅಪರಿಚಿತ ವ್ಯಕ್ತಿ ಆನ್ಲೈನ್ ಮೂಲಕ ಸಾಲ ಒದಗಿಸುವುದಾಗಿ ನಂಬಿಸಿ ಫಿರ್ಯಾದುದಾರರಿಂದ ಒಟ್ಟು 10,14,106/-ರೂಗಳನ್ನು ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ
CEN Crime PS Mangaluru City
ಪಿರ್ಯಾದಿಗೆ ದಿನಾಂಕ 29-04-2023 ರಂದು ಸಂಜೆ 12:46 ಗಂಟೆಗೆ ಯಾರೋ ಅಪರಿಚಿತರ ವ್ಯಕ್ತಿಯ +1(660)6160182 ಮೊಬೈಲ್ ನಂಬ್ರದಿಂದ ಪಿರ್ಯಾದಿದಾರರ ವಾಟ್ಸಾಫ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ. ನಂತರ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಟೆಲಿಗ್ರಾಂ ಆಪ್ ನ https:llt.me/Receptionistlakshmi04 ಲಿಂಕ್ ನ್ನು ಕಳುಹಿಸಿರುತ್ತಾನೆ. ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ Daly Task ಎಂಬುದಾಗಿ ಅದರಲ್ಲಿ Prepaid Task ಕಳಿಸಿ ಆ ವ್ಯಕ್ತಿಯು ಆತನ ಬ್ಯಾಂಕ ವಿವರ ಕಳಿಸಿ ಹಣ ಜಮಾ ಮಾಡುವಂತೆ ತಿಳಿಸಿರುತ್ತಾರೆ ಅದರಂತೆ ಪಿರ್ಯಾದಿದಾರರು ಮೊಬೈಲ್ ಬ್ಯಾಂಕಿಂಗ್ ಮೂಲಕ 9,000/-ಹಣವನ್ನು ವರ್ಗಾಯಿಸಿರುತ್ತಾರೆ. ಅದರಲ್ಲಿ ಪಿರ್ಯಾದಿದಾರರಿಗೆ ಹಣವನ್ನು ಆನ್ ಲೈನ್ ಮೂಲಕ ದ್ವಿಗುಣ ಮಾಡಲು 3 ಟಾಸ್ಕ್ ಮಾಡಲು ತಿಳಿಸಿದ್ದು, ಬಳಿಕ ಪಿರ್ಯಾದಿದಾರರ ವಿವಿಧ ಬ್ಯಾಂಕ್ ಗಳಿಂದ ಹಂತ ಹಂತವಾಗಿ ರೂಪಾಯಿ 1,34,000/- ಹಣವನ್ನು ದಿನಾಂಕ 29-04-2023 ರಿಂದ 30-04-2023 ರವರೆಗೆ ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.
Bajpe PS
ಪಿರ್ಯಾದಿ Mohammed Nazeer ದಿನಾಂಕ 30.04.2023 ರಂದು ಸಂಜೆ ಸುಮಾರು 4.15 ಗಂಟೆಗೆ ಮನೆಯಿಂದ ಮಂಗಳೂರಿಗೆ ಹೋಗುವ ಸಮಯ ಮಂಗಳೂರು ತಾಲೂಕು ಬಜಪೆ ಗ್ರಾಮದ ತಾರಿಕಂಬ್ಲ ಈದ್ಗಾ ಮಸೀದಿ ತೀರುವು ಬಳಿ KA19MM6535 ನೇ ಕಾರಿನ ಚಾಲಕನಾದ ಮಹಮ್ಮದ್ ಆರೀಪ್ ಎಂಬುವನು ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಕಾರು ನೀರು ಹರಿಯುವ ತೊಡಿಗೆ ಮಗುಚಿ ಬಿದಿದ್ದು ಈ ಅಪಘಾತದಿಂದ ಕಾರಿನಲ್ಲಿ ಪ್ರಯಾಣಿಸುತಿದ್ದ ಇಬ್ರಾಹಿಂ ರವರ ತಲೆಗೆ ರಕ್ತಗಾಯವಾಗಿದ್ದು, ಇಬ್ರಾಹಿಂ ರವರ ಹೆಂಡತಿ ಸಫಿಯಾ ರವರಿಗೂ ತಲೆಗೆ ಮತ್ತು ಕಾಲಿಗೆ ಗಾಯವಾಗಿದ್ದು ,ಇಬ್ರಾಹಿಂ ಮಕ್ಕಳಾದ ಜಾಫರ್ ಸಾದಿಕ್ ಹಾಗೂ ಅಲಿಮಾ ಶಾಹಿದಾ ಅವರಿಗೂ ಗುದ್ದಿದ ಗಾಯವಾಗಿದ್ದು ,ಅಲ್ಲದೆ ಚಾಲಕನಾಗಿದ್ದ ಮಹಮ್ಮದ್ ಆರಿಫ್ ನಿಗೂ ಮುಖಕ್ಕೆ ಗಾಯವಾಗಿರುತ್ತದೆ ಎಂಬಿತ್ಯಾದಿ
Traffic North Police Station
ಪಿರ್ಯಾದಿ Jagadhish ಪ್ರತಿಭಾ ನರೇಶ್ ರವರ ಮಾಲಿಕತ್ವದ KA-19-C-8353 ನಂಬ್ರದ ರಾಜಲಕ್ಷ್ಮಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸಮಾಡಿಕೊಂಡಿದ್ದು, ಈ ದಿನ ದಿನಾಂಕ 01-05-2023 ರಂದು ಮಧ್ಯಾಹ್ನ ಸಮಯ ಸುಮಾರು 2:05 ಗಂಟೆಗೆ ಸುರತ್ಕಲ್ ಚೊಕ್ಕಬೆಟ್ಟು ಕ್ರಾಸ್ ಬಳಿ ಪಿರ್ಯಾದಿದಾರರು ಊಟ ಮುಗಿಸಿಕೊಂಡು, ಬಸ್ಸನ್ನು ಸುರತ್ಕಲ್ –ಕಾನಾ ರಸ್ತೆಗೆ ತರುತ್ತಿದ್ದಂತೆ ರಸ್ತೆಯ ವಿರುದ್ದ ದಿಕ್ಕಿನಿಂದ ಬಂದಂತಹ KL-60-G-3179 ನೇ ಮಿನಿ ಟೂರಿಸ್ಟ್ ಟ್ಯಾಕ್ಸಿ ಟೆಂಪೊವನ್ನು ಅದರ ಚಾಲಕ ಪ್ರವೀಣ್ ಅಶ್ವತ್ ಪಿಂಟೋ ಎಂಬಾತನು ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿದ್ದ ಪಿರ್ಯಾದಿದಾರರ ಬಸ್ಸಿನ ಮುಂಭಾಗದ ಬಲಬದಿಗೆ ಡಿಕ್ಕಿ ಪಡಿಸಿದ್ದು, ಬಸ್ಸಿನ ಮುಂದಿನ ಗ್ಲಾಸ್ ಸಂಪೂರ್ಣ ಹುಡಿಯಾಗಿದ್ದು ಅಲ್ಲದೇ ಬಲಬದಿಯ ಮುಂದಿನ ಭಾಗಗಳು ಸಂಪೂರ್ಣ ಜಖಂಗೊಂಡಿರುವುದಾಗಿದೆ ಎಂಬಿತ್ಯಾದಿ.