ಅಭಿಪ್ರಾಯ / ಸಲಹೆಗಳು

Crime Reported in Mangalore East PS

ಮಂಗಳೂರು ಪೂರ್ವ ಪೊಲೀಸ್ ಠಾಣಾ ಹೆಚ್.ಸಿ ಸುರೇಶ್ ಹಾಗೂ ಪಿ.ಸಿ ಬಿರೇಂದ್ರ ರವರೊಂದಿಗೆ  ದಿನಾಂಕ: 01-06-2023 ರಂದು ಮಧ್ಯಾಹ್ನ್ 01-00 ಗಂಟೆ ಸಮಯಕ್ಕೆ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಕುಲಶೇಖರ್ ರಸ್ತೆಯ ಬಳಿಯ ಬಸ್ ಸ್ಟಾಪ್ ನಲ್ಲಿ ಒಬ್ಬನ್ನು ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore East PS

ಮಂಗಳೂರು ಪೂರ್ವ ಪೊಲೀಸ್ ಠಾಣಾ ಹೆಚ್.ಸಿ ಸುರೇಶ್ ಹಾಗೂ ಪಿ.ಸಿ ಬಿರೇಂದ್ರ ರವರೊಂದಿಗೆ  ದಿನಾಂಕ: 01-06-2023 ರಂದು ಇಲಾಖಾ ವಾಹನದಲ್ಲಿ ಸಂಜೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ 10-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಕರಾವಳಿ ಜಂಕ್ಷನ್ ಬಳಿಯ ಬಸ್ ಸ್ಟಾಪ್ ನಲ್ಲಿ ಇಬ್ಬರು ವ್ಯಕ್ತಿಗಳು ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಠಾಣಾ ಸಿಬ್ಬಂದಿಯವರ ಮೂಲಕ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈವರುಗಳ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

CEN Crime PS

ಪಿರ್ಯಾದಿಯವರು ಇಂಡಿಯಾ ಪೋಸ್ಟ್  ಪೇಮೆಂಟ್  ಬ್ಯಾಂಕ್ , ಕೋಟೆಕಾರು ಇಲ್ಲಿ  ಬ್ಯಾಂಕ್ ಖಾತೆ ನೇದ್ದನ್ನು ಹೊಂದಿದ್ದು  ದಿನಾಂಕ: 28-05-2023 ರಂದು ಪಿರ್ಯಾದಿದಾರರ ಮೊಬೈಲ್ ನಂಬ್ರ. ನೇದ್ದಕ್ಕೆ ಮೊಬೈಲ್ ನಂ.7328868392, 9948824849  ನೇದ್ದರಿಂದ ಒಂದು  ಸಂದೇಶ ಬಂದಿರುತ್ತದೆ. ಅದರಲ್ಲಿ ಪಿರ್ಯಾದಿದಾರರ ಇಂಡಿಯಾ ಪೋಸ್ಟ್ ಪೇಮೆಂಟ್  ಬ್ಯಾಂಕ್  ಖಾತೆಯು ಈ ದಿನ  ಸ್ಥಗಿತವಾಗುವುದಾಗಿಯೂ ಅದನ್ನು ತಡೆಯಲು  ಪಾನ್ ಕಾರ್ಡ್ ಮಾಹಿತಿಯನ್ನು  ಅಪ್ ಡೇಟ್ ಮಾಡುವಂತೆ https://9owg.short.gy/IPPB-ePAN ಒಳಗೊಂಡ ಒಂದು ಲಿಂಕ್ ಕಳುಹಿಸಿರುತ್ತಾರೆ, ಅದರಂತೆ ಪಿರ್ಯಾದಿದಾರರು ದಿನಾಂಕ: 30-05-2023 ರಂದು    ಸದ್ರಿ ಲಿಂಕ್ ನ್ನು  ಕ್ಲಿಕ್ ಮಾಡಿ ನೋಡಿದ್ದು, ಅದರಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್  ಬ್ಯಾಂಕ್ ನ ಪೋರ್ಟಲ್  ರೂಪದ ಪೇಜ್ ತೆರೆದಿದ್ದು ಸದ್ರಿ ಪೇಜ್ ಅನ್ನು ನಂಬಿ ಅದರಲ್ಲಿ  ಹೆಸರು, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ. ಬ್ಯಾಂಕ್ ಖಾತೆಯ ಸಂಖ್ಯೆ ತುಂಬಿರುತ್ತಾರೆ ಬಳಿಕ ಪಿರ್ಯಾದಿದಾರರ ಮೊಬೈಲ್ ಸಂಖ್ಯೆಗೆ ಒಟಿಪಿ ಬಂದಿರುತ್ತದೆ. ಅದರಂತೆ ಪಿರ್ಯಾದಿದಾರರು ಒಟಿಪಿಯನ್ನು ಸದ್ರಿ ಇಂಡಿಯಾ ಪೋಸ್ಟ್ ಪೇಮೆಂಟ್  ಬ್ಯಾಂಕ್ ನ ಪೋರ್ಟಲ್ಪೇಜ್ ನಲ್ಲಿ ನಮೂದಿಸಿರುತ್ತಾರೆ, ಬಳಿಕ ಪಿರ್ಯಾದಿದಾರರು   ಹೊಂದಿರುವ ಇಂಡಿಯಾ ಪೋಸ್ಟ್  ಪೇಮೆಂಟ್  ಬ್ಯಾಂಕ್ ಖಾತೆ ನಂ. ನೇದ್ದರಿಂದ ಹಂತ ಹಂತವಾಗಿ  ರೂ.43,551/- ರೂ ಹಣ ಕಡಿತಗೊಂಡಿರುತ್ತದೆ. ಈ ರೀತಿ ಪಿರ್ಯಾದಿದಾರರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

 

Surathkal PS

ಪಿರ್ಯಾದಿ ಶ್ರೀಮತಿ ಪುಷ್ಪಾವತಿ ಪ್ರಾಯ 75 ವರ್ಷ ರವರು ದಿನಾಂಕ 02-06-2023 ರಂದು ಬೆಳಿಗ್ಗೆ 05:45 ಗಂಟೆ ಸಮಯ ಸುಮಾರಿಗೆ ಮನೆಯ ಕಂಪೌಂಡಿನ ಒಳಗೆ ಇರುವ ಬಾವಿಯಿಂದ ನೀರನ್ನು ಸೇದುತ್ತಿದ್ದಾಗ ಮನೆಯ  ಕಂಪೌಂಡ್ ಗೇಟ್ ಬಳಿ ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಬಂದಿದ್ದು ಪಿರ್ಯಾದಿದಾರರನ್ನು ನೋಡಿ ಸಹ ಸವಾರನು ಪಿರ್ಯಾದಿದಾರರ ಗೇಟಿನ ಒಳಗೆ ಬಂದಾಗ ಪಿರ್ಯಾದಿಯು ಆತನಲ್ಲಿ ನೀನು ಯಾರು ಎಂದು ಕೇಳಿದಾಗ ಆತನು ವಾಪಸು ಕಂಪೌಂಡ್ ಗೇಟ್ ಬಳಿ ಹೋಗಿ ಒಮ್ಮೆ ಸುತ್ತಲು ನೋಡಿಕೊಂಡು ಯಾರು ಇಲ್ಲದನ್ನು ಗಮನಿಸಿ ಪುನಃ ಹಿಂತಿರುಗಿ ಪಿರ್ಯಾದಿಯ ಬಳಿ ಬಂದು ಪಿರ್ಯಾದಿಯ ಕುತ್ತಿಗೆಯಲ್ಲಿದ್ದ 2 ಎಳೆ ಚಿನ್ನದ ಕೊತ್ತಂಬರಿ ಸರ ಸುಮಾರು 28 ಗ್ರಾಂ ನೇಯದನ್ನು ಕಸಿದು ಹೊರಗಡೆ ಚಾಲನೆಯಲ್ಲಿ ನಿಂತಿದ್ದ ದ್ವಿಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತು ಪರಾರಿಯಾಗಿರುವುದಾಗಿದೆ, ಈ ಚಿನ್ನದ ಸರ ಅಂದಾಜು ಮೌಲ್ಯ 1,25,000 /- ರೂ ಆಗಬಹುದು ಎಂಬಿತ್ಯಾದಿ ಆಗಿದೆ.

Mangalore South PS

ಪಿರ್ಯಾದಿ  ಅಶ್ಫನ್ ಅಲಿ ಎಂಬವರ ತಂಗಿ ಕುಮಾರಿ ಶರೀನ್  ಬಾನು ಪ್ರಾಯ 19 ವರ್ಷ ಎಂಬವರು ಮೂಲತಃ ಮೂಡಿಗೆರೆ ವಾಸಿಯಾಗಿದ್ದು, ಪ್ರಸ್ತುತ ಮಂಗಳೂರು ನಗರದ ಬದ್ರಿಯಾ ಎಂಬಲ್ಲಿ B.Sc ವಿದ್ಯಾಭ್ಯಾಸ ಮಾಡುತ್ತಿದ್ದು, ಇದರ ಜೊತೆಗೆ ನವಭಾರತ್ ಸರ್ಕಲ್ ಬಳಿಯ  ಕೆಫೆಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದರು. ದಿನಾಂಕ 01-06-2023 ರಂದು ಬೆಳಿಗ್ಗೆ ಮೂಡಿಗೆರೆಗೆ ಬರುವುದಾಗಿ ಪಿರ್ಯಾದಿದಾರರಿಗೆ ಫೋನ್ ಮಾಡಿ ತಿಳಿಸಿದ್ದು, ವಾಪಾಸು ಪಿರ್ಯಾದಿದಾರರು ಶರೀನ್ ಬಾನು ರವರ ಬರುವಿಕೆಗಾಗಿ ವಿಚಾರಿಸಲು ಮಧ್ಯಾಹ್ನ 3-00 ಗಂಟೆಗೆ ಫೋನ್ ಮಾಡಿದಾಗ ಫೊನ್ ಸ್ವಿಚ್ ಆಫ್ ಆಗಿರುತ್ತದೆ. ಪಿರ್ಯಾದಿದಾರರು ಫೋನ್ ಗೆ ಹಲವಾರು ಬಾರಿ ಪ್ರಯತ್ನಿಸಿ ಈ ದಿನ ದಿನಾಂಕ 02-06-2023 ರಂದು ಮಂಗಳೂರಿಗೆ ಬಂದು ಪಿರ್ಯಾದಿದಾರರು ಶರೀನ್ ಬಾನು ರವರ ಬಗ್ಗೆ ಎಲ್ಲಾ ಕಡೆಗಳಲ್ಲಿ ವಿಚಾರಿಸಲಾಗಿ,  ಶರೀನ್ ಬಾನು ರವರು  ವಾಸವಿದ್ದ ಸ್ಟೇಟ್ ಬ್ಯಾಂಕ್ ಬಳಿಯ  ಪಿ.ಜಿ ಯಿಂದ ಬೆಳಿಗ್ಗೆ ಸಮಯ  ಹೋದವರು ವಾಪಾಸು ಬಂದಿರುವುದಿಲ್ಲವಾಗಿ ಮಾಹಿತಿ ತಿಳಿದು ಈ ದಿನ ಠಾಣೆಗೆ ಬಂದು  ಕಾಣೆಯಾದ ತನ್ನ ತಂಗಿ ಶರೀನ್ ಬಾನು ಎಂಬವರನ್ನು ಪತ್ತೆ ಮಾಡಿಕೊಡಬೇಕು ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ. 01-06-2023  ರಂದು ಪಿರ್ಯಾದಿ ಅಬೂಬಕ್ಕರ್ ಆಶೀಕ್ ರವರು ತನ್ನ ಸ್ನೇಹಿತರಾದ ಮುಜೀಬ್ ರೆಹಮಾನ್ ಮತ್ತು ಜಾಫರ್ ಶರೀಫ್ ರವರುಗಳು ಜೊತೆ ಸೇರಿಕೊಂಡು ಬೆಳಿಗ್ಗೆ ತಮ್ಮ ಮನೆಗಳಿಂದ ಮಂಗಳೂರಿಗೆ ಬಂದವರು ಕಂಕನಾಡಿ ಫಾದರ್ ಮುಲ್ಲರ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಿರಂಜನ, ನೀಲು, ಶಿವಾನಿಯವರನ್ನು ಭೇಟಿ ಮಾಡಿ ನಂತರ ಇವರು 6 ಮಂದಿಯು ಒಟ್ಟು ಸೇರಿಕೊಂಡು ಮಂಗಳೂರಿನ ಸಿಟಿಸೆಂಟರ್ ಹೋಗಿ ಅಲ್ಲಿಂದ ಸಾಯಂಕಾಲ ಸೋಮೇಶ್ವರ ಬೀಚ್ ಗೆ ಹೊರಟು ಬಂದವರು ಸಂಜೆ 6-45 ಗಂಟೆಗೆ ಸೋಮೇಶ್ವರ ಬೀಚ್ ಗೆ ತಲುಪಿ ಅಲ್ಲಿನ ರುದ್ರಪಾದೆಯಲ್ಲಿ ಈ ಆರು ಮಂದಿಯು ಕುಳಿತುಕೊಂಡಿದ್ದಾಗ ಸುಮಾರು 5 ನಿಮಿಷದ ನಂತರ ಸಮಾನ ಉದ್ದೇಶಿತರಾಗಿ ಅಕ್ರಮ ಕೂಟದೊಂದಿಗೆ ಸುಮಾರು 10-15 ಮಂದಿ ಆರೋಪಿಗಳು ಇವರ ಬಳಿಗೆ ಬಂದು ಇವರುಗಳ ಗುರುತು ಚೀಟಿ ಹಾಗೂ ಹೆಸರು ವಿಚಾರಿಸಿಕೊಂಡು ಇವರುಗಳಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ನಂತರ ಆರೋಪಿಗಳು ಬೆಲ್ಟ್, ಕಲ್ಲು, ಕೋಲು, ಬೆತ್ತಗಳಿಂದ ಫಿರ್ಯಾದಿದಾರರಾದ ಅಬೂಬಕ್ಕರ್ ಆಶೀಕ್, ಮುಜೀಬ್ ರೆಹಮಾನ್, ಜಾಫರ್ ಶರೀಫ್ ರವರಿಗೆ ಮೈಕೈಗೆ, ಹಾಗೂ ದೇಹದ ಹಲವು ಭಾಗಗಳಿಗೆ ಹಲ್ಲೆ ನಡೆಸಿ ರಕ್ತಗಾಯಗೊಳಿಸಿದ ಪರಿಣಾಮ ಗಾಯಾಳುಗಳನ್ನು ನಿರಂಜನ ಎಂಬವರು ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ಪರೀಕ್ಷಿಸಿಕೊಂಡಂತೆ ಇವರುಗಳನ್ನು ಸದ್ರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Mulki PS

ದಿನಾಂಕ 01-06-2023 ರಂದು ಸಂಜೆ 19.30 ಗಂಟೆಗೆ ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಪ್ರಶಾಂತ್ ವೈನ್ ಶಾಪ್ ಬಳಿ ಆರೋಪಿ ಮಂಜುನಾಥ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿ.ಎಸ್.ಐ ಮುಲ್ಕಿ ಶ್ರೀ ವಿನಾಯಕ್ ತೋರಗಲ್ ರವರು ತಮ್ಮ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ  ಸಂಗ್ರಹಿಸುತ್ತಿದ್ದ ನಗದು ಹಣ 1140/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಾಳೆ 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಪೆನ್ನು 01 ಇವುಗಳನ್ನು ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ಪ್ರಕರಣ ದಾಖಾಲಿಸಿರುವುದು ಎಂಬಿತ್ಯಾದಿ.

Mulki PS

ದಿನಾಂಕ 01-06-2023 ರಂದು ಸಂಜೆ 20.00 ಗಂಟೆಗೆ ಮುಲ್ಕಿ ತಾಲೂಕು ಹಳೆಯಂಗಡಿ ಜಂಕ್ಷನ್ ಬಳಿ ಸಾರ್ಜಜನಿಕ ಸ್ಥಳದಲ್ಲಿ ಆರೋಪಿ ಮೊಹಮ್ಮದ್ ನಾಸೀರ್ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿ.ಎಸ್.ಐ ಮುಲ್ಕಿ ಶ್ರೀ ಮಾರುತಿ ಪಿ ರವರು ತಮ್ಮ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ  ಸಂಗ್ರಹಿಸುತ್ತಿದ್ದ ನಗದು ಹಣ 620/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಾಳೆ 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಪೆನ್ನು 01 ಇವುಗಳನ್ನು ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ಪ್ರಕರಣ ದಾಖಾಲಿಸಿರುವುದು ಎಂಬಿತ್ಯಾದಿ.

Urva PS

ದಿನಾಂಕ 01-06-2023 ರಂದು ಸಂಜೆ ಸಮಯ 18-00 ಗಂಟೆಗೆ ಉರ್ವಾಸ್ಟೋರ  ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ರಸ್ತೆ ಬದಿಯಲ್ಲಿ ಒರ್ವ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡು ಸಿಗರೇಟನ್ನು ಸೇದುತ್ತಿದ್ದು ಹೆಸರು ರತೀಶ್ ರತ್ನಮಾಲ, ಪ್ರಾಯ 30ವರ್ಷ,  ವಾಸ: ಶ್ರೀ ಅಯ್ಯಪ್ಪ ಮಂದಿರ, ಉರ್ವಾಸ್ಟೋರ್, ಅಶೋಕನಗರ ಪೋಸ್ಟ್, ಮಂಗಳೂರು, , ಎಂಬುದಾಗಿ ತಿಳಿಸಿದ್ದು, ಆತನನ್ನು ವಶಕ್ಕೆ ಪಡೆದು ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ  ಕುಂಟಿಕಾನ ಎ ಜೆ ಆಸ್ಪತ್ರೆಯ  ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ಈತನನ್ನು ವೈದ್ಯಕೀಯ ತಪಾಸಣೆ ನಡೆಸಿ ಈತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪಡಿಸಿರುವುದರಿಂದ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Urva PS

ಪಿರ್ಯಾಧಿ ಸುದರ್ಶನ್ ಬಿ ಎನ್, ಪಿಎಸ್ಐ ರವರು ದಿನಾಂಕ 01-06-2023 ರಂದು ಸಂಜೆ ಸುಮಾರು 07-30 ಗಂಟೆಯಿಂದ ಠಾಣಾ ಪಿ ಸಿ ಅರ್ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ತಾಲೂಕು ಚಿಲಿಂಬಿ ಗುಡ್ಡೆ ಪ್ರದೇಶದಲ್ಲಿರುವ ಖಾಲಿ ಜಾಗದಲ್ಲಿ 4 ಜನ ಯುವಕರು ಪರಸ್ಪರ ಗುಂಪಾಗಿ ಮಾತನಾಡುತ್ತಿರುವವರನ್ನು ವಿಚಾರಿಸಲಾಗಿ ಅವರು ಹೆಸರು ವಿಳಾಸ 1) ಶಾಮಿಲ್ 22 ವರ್ಷ ತಂದೆ ವಾಸ: ಚೀನಿಕಲ್ ಹೌಸ್ ಪತ್ರಿಯಲ್ ಅಂಚೆ , ತಿರುವಾಲ್ಲ ಗ್ರಾಮ , ನಿಲಾಂಬರ್ ತಾಲೂಕು ಮಲಪುರಮ್ ಜಿಲ್ಲೆ ಕೇರಳ ರಾಜ್ಯ 2) ರೋಹಿತ್ ದಿವಾಕರ್  20 ವರ್ಷ ವಾಸ: ಸತ್ಯಂ ಮನೆ, ಪುತ್ತೂರ್ ಅಂಚೆ ಮತ್ತು ಗ್ರಾಮ, ತಳಚೆರಿ ತಾಲೂಕು ಕಣ್ಣೂರು ಜಿಲ್ಲೆ  ಕೇರಳ ರಾಜ್ಯ. 3) ಸೋನು ಸಾಬು 20 ವರ್ಷ ವಾಸ: ವೆಲಿಯವಿಟ್ಟಿಲ್ ಹೌಸ್, ತಿರುವಾಲ್ಲ ಗ್ರಾಮ, ಅಲ್ಲಂತುರ್ತಿ  ಅಂಚೆ, ಪಟ್ಟನಮ್ ತಿಟ್ಟ  ಜಿಲ್ಲೆ ಕೇರಳ ರಾಜ್ಯ.4) ನಿಹಾಲ್ ಪಿವಿ 21 ವರ್ಷ ವಾಸ: ಚೆಯಿಂಗೋಟ್ ಹೌಸ್, ಚೆಟ್ಟಿಪಡಿ ಅಂಚೆ, ತಿರುರಂಗಡಿ ತಾಲೂಕು ಮಲಪುರಮ್ ಜಿಲ್ಲೆ ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದು, ಸದ್ರಿ ಪರಿಸರದಲ್ಲಿ ಯುವಕರು ಸಂಜೆ ಸಮಯದಲ್ಲಿ ಬಂದು ಮಾದಕವಸ್ತುಗಳನ್ನು ಸೇವನೆ ಮಾಡುತ್ತಿರುವ ಬಗ್ಗೆ ಹಿಂದಿನಿಂದ ಸ್ಥಳೀಯರಿಂದ ದೂರು ಬರುತ್ತಿದ್ದ ಹಿನ್ನಲೆಯಲ್ಲಿ ಅವರನ್ನು ಸಿಬ್ಬಂದಿಗಳ ಬೆಂಗಾವಲಿನಲ್ಲಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿ ಸದ್ರಿಯವರು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪಡಿಸಿರುವುದರಿಂದ ಇವರುಗಳ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

CEN Crime PS

ದಿನಾಂಕ 11-10-2022 ರಂದು ಪಿರ್ಯಾದಿದಾರರ ದೂರವಾಣಿ ಸಂಖ್ಯೆ ನೇದಕ್ಕೆ ಯಾರೋ ಅಪರಿಚಿತ ವ್ಯಕ್ತಿ ನಕಲಿ ಕೆವೈಸಿ ಅಪ್ಡೇಟ್ ಲಿಂಕ್ ಹೊಂದಿರುವ ಎಸ್ ಎಂ ಎಸ್ ಸಂದೇಶವನ್ನು ಕಳುಹಿಸಿರುತ್ತಾರೆ. ಪಿರ್ಯಾದಿದಾರರು ದಿನಾಂಕ 14-10-2022 ರಂದು ಸದ್ರಿ ಸಂದೇಶದಲ್ಲಿರುವ ದೂರವಾಣಿ ಸಂಖ್ಯೆ-7320001982 ನೇದಕ್ಕೆ ಕರೆ ಮಾಡಿ ವಿಚಾರಿಸಿದಾಗ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ ಬ್ಲಾಕ್ ಆಗಿರುವುದಾಗಿಯೂ ಹಾಗೂ ಅದನ್ನು ಸರಿಪಡಿಸಲು ಡೆಬಿಟ್ ಕಾರ್ಡ್ ಮತ್ತು ಅಕೌಂಟ್ ವಿವರಗಳನ್ನು ತಿಳಿಸುವಂತೆ ಅಪರಿಚಿತ ವ್ಯಕ್ತಿಯು ಹೇಳಿರುತ್ತಾರೆ, ಪಿರ್ಯಾದಿದಾರರು ಈ ಸಂಗತಿಯನ್ನು ನಿಜವೆಂದು ನಂಬಿ ಪಿರ್ಯಾದಿದಾರರು ತಮ್ಮ ಗಂಡನ ಕೆನಾರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಡೆಬಿಟ್ ಕಾರ್ಡ್ ವಿವರವನ್ನು ತಿಳಿಸಿದರು,ನಂತರ ಓಟಿಪಿ ಯನ್ನು ಶೇರ್ ಮಾಡಿದರು ಮತ್ತು ಸದ್ರಿ ಅಪರಿಚಿತ ವ್ಯಕ್ತಿಯು ಇದೇ ರೀತಿ ಪಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಖಾತೆ ವಿವರ ಮತ್ತು ಡೆಬಿಟ್ ಕಾರ್ಡ್ ವಿವರವನ್ನು ಕೇಳಿರುತ್ತಾರೆ, ಅದರಂತೆ  ಪಿರ್ಯಾದಿದಾರರು ತಮ್ಮ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ-ಮತ್ತು ಡೆಬಿಟ್ ಕಾರ್ಡ್ ವಿವರವನ್ನು ತಿಳಿಸಿರುತ್ತಾರೆ,ನಂತರ ಓಟಿಪಿ ಯನ್ನು ಶೇರ್ ಮಾಡಿರುತ್ತಾರೆ,ಸ್ವಲ್ಪ ಸಮಯದ ಬಳಿಕ ಕೂಡಲೇ ಪಿರ್ಯಾದಿದಾರರ ಗಂಡನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ- ನೇದರಿಂದ ಒಟ್ಟು 71,400/- ಮತ್ತು ಪಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ ನೇದರಿಂದ ಒಟ್ಟು 50,000/- ರೂಗಳು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ನಕಲಿ ಕೆವೈಸಿ ಅಪ್ಡೇಟ್ ಲಿಂಕ್ ಕಳುಹಿಸಿ ಒಟ್ಟು 1,21,400/-ರೂಗಳನ್ನು ಮೋಸದಿಂದ ವರ್ಗಾಹಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ, ಎಂಬಿತ್ಯಾದಿ.

Konaje PS

ದಿನಾಂಕ  01-06-2023 ರಂದು 16-00 ಗಂಟೆಗೆ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ಜಂಕ್ಷನ್  ಎಂಬಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಚೀಟಿ ಬರೆದು ಕೊಟ್ಟು ಹಣವನ್ನು ಸಂಗ್ರಹಿಸಿಕೊಂಡು ಮಟ್ಕಾ ಎಂಬ ನಸೀಬಿನ ಆಟವನ್ನು ಆಡುತ್ತಿರುವುದಾಗಿ ಠಾಣಾ ಸಿಬ್ಬಂದಿಯಾದ ಹೆಚ್ ಸಿ ಶೈಲೇಂದ್ರರವರು ಠಾಣೆಗೆ ನೀಡಿದ ಲಿಖಿತ ಮಾಹಿತಿಯಂತೆ, ಬಾಳೆಪುಣಿ  ಗ್ರಾಮದ ಹೂಹಾಕುವ ಕಲ್ಲು ಜಂಕ್ಷನ್ ಬಳಿ 17-30 ಗಂಟೆಗೆ ಹೋದಾಗ ಅಲ್ಲಿನ ಜಂಕ್ಷನ್ ಅಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದುಕೊಂಡು ಮಟ್ಕಾ ಆಟವನ್ನು ಆಡಿಸುತ್ತಿದ್ದ ಆರೋಪಿ ಶಶಿಕುಮಾರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವಾಧೀನದಲ್ಲಿದ್ದ ನಗದು ಹಣ ರೂ 540/-, ಅಂಕೆಗಳನ್ನು ಬರೆದ ಸಣ್ಣ ಚೀಟಿ-1, ಪೆನ್-1 ಇವುಗಳನ್ನು   ಸ್ವಾಧೀನಪಡಿಸಿಕೊಂಡು, ಪ್ರಕರಣ ದಾಖಲಿಸಲಾಗಿರುತ್ತದೆ ಎಂಬಿತ್ಯಾದಿ.

 

Moodabidre PS

ದಿನಾಂಕ 31-05-2023ರಂದು ಪಿರ್ಯಾದಿ Shridhara Acharya  ಮಗನಾದಂತ ಗಣೇಶ ಮತ್ತು ಸಂಬಂಧಿ ಪುರುಷೋತ್ತಮರವರು ಬಜಪೆಯಲ್ಲಿ ರಾತ್ರಿ ಕೆಲಸ ಮುಗಿಸಿ KA19HE5085 ನಂಬ್ರದ ಮೋಟಾರು ಸೈಕಲಿನಲ್ಲಿ ಗಣೇಶನು ಸವಾರನಾಗಿ ಪುರುಷೋತ್ತಮನು ಸಹ ಸವಾರನಾಗಿ ಕುಳಿತುಕೊಂಡು ಬಜಪೆಯಿಂದ ಹೊರಟು ಬರುತ್ತಾ 22:50 ಗಂಟೆ ಸಮಯಕ್ಕೆ ಪುತ್ತಿಗೆ ಬಳಿ ಇರುವ ಆಳ್ವಾಸ್ ಹೈಸ್ಕೂಲ್ ಕಡೆಗೆ ಹಾದು ಹೋಗಿರುವ ಕ್ರಾಸ್ ರಸ್ತೆಯನ್ನು ದಾಟಿ ಮುಂದಕ್ಕೆ ತಲುಪುತಿದ್ದಂತೆ ಮೂಡಬಿದ್ರೆ ಕಡೆಯಿಂದ KA19D9830 ನಂಬ್ರದ ನೀರಿನ ಟ್ಯಾಂಕರ್ ಲಾರಿಯನ್ನು ಅದರ ಚಾಲಕನು ಅತೀ ವೇಗ ಹಾಗು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಗಣೇಶ ಮತ್ತು ಪುರುಷೋತಮನಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಣೇಶನ ಹಣೆಗೆ, ಸೊಂಟಕ್ಕೆ, ಕೈ ಕಾಲುಗಳಿಗೆ ಗಂಭೀರ ರೀತಿಯ ಗಾಯ ಮತ್ತು ಪುರುಷೋತ್ತಮನಿಗೆ ಕೈ, ಕಾಲುಗಳಿಗೆ ಸಾಮಾನ್ಯ ಸ್ವರೂಪದ ಗಾಯವಾದವರು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಗಣೇಶನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಸಾರಾಂಶ.

Surathkal PS

ದಿನಾಂಕ: 01-06-2023 ರಂದು ಸಂಜೆ 15.00 ಗಂಟೆಯಲ್ಲಿ ಪಿರ್ಯಾದಿ Pradeep T R ಠಾಣೆಯಲ್ಲಿದ್ದ ಸಮುಯ ಸಾರ್ವಜನಿಕರಿಂದ ಸಿಬ್ಬಂದಿ ಪಿ.ಸಿ. ನೇ ದಿಲೀಪ್ ರಾಜ್ ಅರಸ್ ರವರಿಗೆ ಬಂದ ಮಾಹಿತಿಯಂತೆ ಸುರತ್ಕಲ್ ಸರ್ವೀಸ್ ಬಸ್ ನಿಲ್ದಾಣದ  ಸರ್ವೀಸ್ ರಸ್ತೆಯ ನಿರ್ಜನ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ, ವ್ಯಕ್ತಿ ಯೋರ್ವರು ಕುಳಿತು ಕೊಂಡು ಕೇರಳ ರಾಜ್ಯದ ರಾಜ್ಯದ ಲಾಟರಿ ನಂಬರ್ ನ ಫಲಿತಾಂಶದ ಮೇಲೆ ಮಟ್ಕಾ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ತಿಳಿಸಿದಂತೆ ಸುರತ್ಕಲ್ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ  ರಸ್ತೆಯ ದೂರದಲ್ಲಿ ತೆರಳಿ ನಮ್ಮ ಠಾಣೆಯ  ಸರ್ಕಾರಿ ವಾಹನ ಕೆಎ-19-ಜಿ-623  ಅನ್ನು ದೂರದಲ್ಲಿ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ  ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಯೋರ್ವರು ಕಾಗದದ ಚೀಟಿಗಳಲ್ಲಿ  ಸಂಖ್ಯೆಯನ್ನು ಬರೆಯುತ್ತಾ, ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿಕೊಂಡಿರುವುದು ಕಂಡು ಬಂದಿರುತ್ತದೆ. ಸದ್ರಿ ವ್ಯಕ್ತಿಯು ಅಕ್ರಮವಾಗಿ ಕೇರಳದ ಲಾಟರಿ ಡ್ರಾ ಆಧಾರದಲ್ಲಿ ಅದೃಷ್ಟದ ಸಂಖ್ಯೆಗಳನ್ನು ಬರೆಯಿಸಿ ಹಣ ಪಡೆದು ಅಕ್ರಮ ಬೆಟ್ಟಿಂಗ್ ನಡೆಸುತ್ತಿರುವುದನ್ನು ಖಚಿತ ಪಡಿಸಿಕೊಂಡು, ಕೂಡಲೇ ಸಿಬ್ಬಂದಿಯವರೊಂದಿಗೆ 17:30 ಗಂಟೆಗೆ  ದಾಳಿ ಮಾಡಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಸದ್ರಿಯವರ ವಿಚಾರಣೆ ನಡೆಸಿ ಹೆಸರು ವಿಳಾಸ ಕೇಳಲಾಗಿ ತಕ್ಷಿತ್, ಪ್ರಾಯ 33 ವರ್ಷ,  ವಾಸ: ಸಂಖ್ಯೆ 2-66, ಪಿಲಿಕೂರು, ತಲಪಾಡಿ, ಮಂಗಳೂರು, ದ.ಕ ಜಿಲ್ಲೆ ಎಂಬುದಾಗಿ ತಿಳಿಸಿದ್ದು, ಆತನು ಬರೆಯುತ್ತಿದ್ದ ಚೀಟಿ, ಪೆನ್ನು  ಅಕ್ರಮವಾಗಿ ಮಟ್ಕಾ ದಂಧೆಯಿಂದ ಸಂಗ್ರಹಿಸಿದ ನಗದು 1200 ರೂ ಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿದೆ ಎಂಬಿತ್ಯಾದಿ.

Mangalore South PS

ದಿನಾಂಕ: 01-06-2023 ರಂದು 18-45 ಗಂಟೆಗೆ ಪ್ರಕರಣದ ಪಿರ್ಯಾದಿ Prakash Naik ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಹೆಚ್,ಸಿ  ಪ್ರಕಾಶ್ ರವರಿಗೆ ಮಂಗಳೂರು ನಗರದ ರಾವ್ ಅಂಡ್ ರಾವ್ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೇರಳ ಮೂಲದ ತೀರ್ಥೇಶ್ ಎಂಬುವರು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುವುದನ್ನು ಲಿಖಿತವಾಗಿ ಠಾಣೆಯಲ್ಲಿ ವರದಿ ಮಾಡಿದ್ದು, ಸದ್ರಿ ವರದಿಯನ್ನು 19-04 ಗಂಟೆಗೆ ಸ್ವೀಕರಿಸಿ, ಸದ್ರಿ ಸ್ಥಳಕ್ಕೆ ಧಾಳಿ ಮಾಡಿ, ತಕ್ಷೀರನ್ನು ಪತ್ತೆ ಮಾಡಿ ಕೃತ್ಯಕ್ಕೆ ಉಪಯೋಗಿಸುವ ಸೊತ್ತುಗಳನ್ನು ಸ್ವಾಧೀನಪಡಿಸಿ  ಆರೋಪಿಯನ್ನು ದಸ್ತಗಿರಿ ಮಾಡ, ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ, ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Ullal PS     

ದಿನಾಂಕ: 01.06.2023  ಸಂಜೆ 16.00 ಗಂಟೆ ಸಮಯಕ್ಕೆ  ಉಳ್ಳಾಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಮಂಜುಳಾ ಎಲ್ ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡಿಕೊಂಡಿದ್ದ ಸಮಯದಲ್ಲಿ ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಒಳಪೇಟೆಯ ಕ್ಲಿಕ್ ಹಾಲ್ ನ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟುಕೊಂಡು ಮಟ್ಕ ಜೂಜಾಟ ಆಡುತ್ತಿದ್ದಾರೆ ಎಂಬುದಾಗಿ ಗುಪ್ತ ಮಾಹಿತಿ ದೊರೆತ ಮೇರೆಗೆ ಉಪ ನಿರೀಕ್ಷಕರು ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಒಳಪೇಟೆ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸ್ವಲ್ಪ ದೂರದಲ್ಲಿ ವೀಕ್ಷಿಸಿಕೊಂಡಾಗ ಸ್ಥಳದಲ್ಲಿ ಮೂರು ಮಂದಿ ವ್ಯಕ್ತಿಗಳು ಇದ್ದು ಅವರ ಪೈಕಿ ಒಬ್ಬ ವ್ಯಕ್ತಿಯು ಕೈಯಲ್ಲಿ ಚೀಟಿ ಮತ್ತು ಪೆನ್ ಹಿಡಿದುಕೊಂಡಿದ್ದು, ಆತನ ಜೊತೆಗೆ ನಿಂತುಕೊಂಡಿದ್ದ ಇನ್ನಿಬ್ಬರು ಹಣವನ್ನು ನೀಡಿ ಚೀಟಿಯಲ್ಲಿ ಅಂಕಗಳನ್ನು ಬರೆಸಿ ಹೋಗುತ್ತೀರುವುದಾಗಿರುತ್ತದೆ. ಆದುದರಿಂದ ಮಹಮ್ಮದ್ ಹೆಚ್ ಎಂಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜೂಜಾಟ ಆಡುತ್ತಿರುವುದಾಗಿದೆ ಎಂಬಿತ್ಯಾದಿಯಾಗಿ ಪ್ರಕರಣದ ಸಾರಾಂಶ.

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080