ಅಭಿಪ್ರಾಯ / ಸಲಹೆಗಳು

 

 Crime Report in Mangalore East PS     

ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸ್ ಸಹಾಯಕ ಉಪ ನಿರೀಕ್ಷಕರಾದ ಚಂದ್ರಶೇಖರ  ರವರು ದಿನಾಂಕ: 01-08-2023 ರಂದು ರಾತ್ರಿ  ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 02-08-2023 ರಂದು  ಬೆಳಗ್ಗಿನ ಜಾವ ಸುಮಾರು 2.45 ಗಂಟೆ ವೇಳೆಗೆ ಮಂಗಳೂರು ನಗರದ  ಕುಲಶೇಖರ ಎಂಬಲ್ಲಿರುವ ಕಿರಣ್ ಎಂಟರ್ ಪ್ರೈಸಸ್ ಎಂಬ ಕಟ್ಟಡದ ಬಳಿ  ತನ್ನ  ಇರುವಿಕೆಯನ್ನು ಮರೆಮಾಚಿ ಸಂಶಯಾಸ್ಪದ ರೀತಿಯಲ್ಲಿರುವವನನ್ನು  ಹಿಡಿದು ವಿಚಾರಿಸಿದಾಗ ಆತನ ಹೆಸರು ದೀಪಕ್ ಪ್ರಾಯ 27 ವರ್ಷ ವಾಸ: ಕುಡುಪು ಸ್ಟೋರ್ ಹಿಂದುಗಡೆ, ಶಿವನಗರ, ಮೂಡುಶೆಡ್ಡೆ, ಮಂಗಳೂರು. ಎಂದು ತಿಳಿಸಿದ್ದು, ಈತನು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವನು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವನ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

    

CEN Crime PS

ದಿನಾಂಕ;22-07-2023 ರಂದು ಪಿರ್ಯಾದಿದಾರರು ಮನೆಯಲ್ಲಿದ್ದ ಸಮಯ ಮಧ್ಯಾಹ್ನ ಸುಮಾರು 14.00 ಗಂಟೆಗೆ ಪಿರ್ಯಾದಿದಾರರ ವಾಟ್ಸಪ್  ನಂಬ್ರ  ನೇದಕ್ಕೆ +447570688086 ನೇದರಿಂದ ತನ್ನನ್ನು  ಡಾ! ಫ್ರಾಕ್ಲಿನ್ ಪ್ಯಾಟ್ರಿಕ್  ಎಂದು ಪರಿಚಯಿಸಿಕೊಂಡ ವ್ಯಕ್ತಿಯು ತಾನು U.K  ಯಲ್ಲಿ ವೈದ್ಯನಾಗಿರುವುದಾಗಿ ತಿಳಿಸಿರುತ್ತಾರೆ ನಂತರದ ದಿನಗಳಲ್ಲಿ  ಸದ್ರಿ ವ್ಯಕ್ತಿಯು ತನ್ನ ಮಗಳ ಬರ್ತಡೇ ಇದ್ದು ಸದ್ರಿ ಹುಟ್ಟುಹಬ್ಬದ ಪ್ರಯುಕ್ತ ಪಿರ್ಯಾದಿದಾರರಿಗೆ ವಿದೇಶಿ ಕರೆನ್ಸಿ,ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ತಿಳಿಸಿದ್ದು  ನಂತರ  ದಿನಾಂಕ 24-07-2023 ರಂದು  6909241208 ನೇ ನಂಬ್ರದಿಂದ ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಕರೆ ಮಾಡಿ ನಿಮಗೆ ಪಾರ್ಸೆಲ್ ಬಂದಿದ್ದು ಅದು ಈಗ ದಿಲ್ಲಿ ತಲುಪಿದ್ದು ಅದರ  ಪ್ರೋಸೆಸಿಂಗ್ ಶುಲ್ಕ ಪಾವತಿಸಬೇಕೆಂದು ತಿಳಿಸಿದ ಮೇರೆಗೆ ಪಿರ್ಯಾದಿದಾರರು  ತನ್ನ ಬ್ಯಾಂಕ್ ಆಫ್ ಬರೋಡ ಮೂಡಬಿದ್ರೆ ಶಾಖೆ ಖಾತೆ ನಂಬ್ರ- ನೇದರಿಂದ 40,000/- ರೂಗಳನ್ನು ಗೂಗಲ್ ಪೇ ನಂಬ್ರ-6909241208 ನೇದಕ್ಕೆ ಪಾವತಿರುತ್ತಾರೆ.  ನಂತರದ ದಿನಗಳಲ್ಲಿ ಸದ್ರಿ ವ್ಯಕ್ತಿಯು 6909241208ನೇ ನಂಬ್ರದಿಂದ ಕರೆ ಮಾಡಿ ಪಿರ್ಯಾದಿದಾರರಲ್ಲಿ ವಿವಿಧ ಕಾರಣಗಳನ್ನು ತಿಳಿಸಿ  ದಿನಾಂಕ 31-07-2023 ರವರೆಗೆ ಪಿರ್ಯಾದಿದಾರರ  ಬ್ಯಾಂಕ್ ಖಾತೆ ದರಿಂದ ಹಂತ ಹಂತವಾಗಿ ಒಟ್ಟು ರೂ. 5,90,000/- ನ್ನು ತನ್ನ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿರುತ್ತಾನೆ.  ಈ ರೀತಿಯಾಗಿ ತನಗೆ  ಯಾರೋ ಅಪರಿಚಿತ ವ್ಯಕ್ತಿ ವಾಟ್ಸಪ್ ಮೂಲಕ ವೈದ್ಯನಾಗಿ ಪರಿಚಯಿಸಿಕೊಂಡು ನಂತರ ವಿದೇಶಿ ಕರೆನ್ಸಿ ಮತ್ತು ಚಿನ್ನಾಭರಣ ಉಡುಗೊರೆ ನೀಡುವುದಾಗಿ ಆಮಿಷವೊಡ್ಡಿ ತನ್ನ ಖಾತೆಯಿಂದ ಅನಧಿಕೃತವಾಗಿ ಹಣವನ್ನು ವರ್ಗಾಯಿಸಿಕೊಂಡಿರುತ್ತಾರೆ  ಎಂಬಿತ್ಯಾದಿ.

Urva PS

ಪಿರ್ಯಾದಿದಾರರು ದಿನಾಂಕ: 09-07-2023 ರಂದು ರಾತ್ರಿ  ಸುಮಾರು 11-15 ಗಂಟೆಗೆ  ವ್ಯವಹಾರ ನಿಮಿತ್ತ  ತನ್ನ ಸ್ವಿಪ್ಟ್ ಕಾರಿನಲ್ಲಿ  ಹೊರಗಡೆ ಹೋಗಿದ್ದು,  ರಾತ್ರಿ  ಸಮಯ ಸುಮಾರು 11-30 ಗಂಟೆಗೆ  ಕೆ.ಪಿ.ಟಿ ಜಂಕ್ಷನ್ ನಿಂದ  ರಾಷ್ಟಿಯ ಹೆದ್ದಾರಿ 66 ರಲ್ಲಿ ಸ್ವಲ್ಪ ಮುಂದುಗಡೆ ರಸ್ತೆ ಬದಿಯಲ್ಲಿ ಒಬ್ಬಳು ಯುವತಿಯು ಪಿರ್ಯಾದಿದಾರರ ವಾಹನವನ್ನು ನಿಲ್ಲಿಸಲು ಸೂಚಿಸಿದಂತೆ  ಪಿರ್ಯಾಧಿದಾರರು ಕಾರನ್ನು ರಸ್ತೆ  ಬದಿಯಲ್ಲಿ ನಿಲ್ಲಿಸಿ  ಆಕೆಯ ಬಳಿ ಹೋದಾಗ ಪೊದೆಯಲ್ಲಿ ಅವಿತು ಕುಳಿತ ಇತರ 3 ಜನ ಮಂಗಳ ಮುಖಿಯರು ಸೇರಿ ಪಿರ್ಯಾಧಿದಾರರಿಗೆ ಚಾಕು ತೋರಿಸಿ ಬೆದರಿಸಿ ಪಿರ್ಯಾಧಿದಾರರ ಕಿಸೆಯಲ್ಲಿದ್ದ ಅಂದಾಜು 4500/- ರೂ ನಗದು ಹಣವನ್ನು ಮತ್ತು ಕಾರಿ ಮುಂದಿನ ಡ್ಯಾಸ್ ಬೊರ್ಡ್ ನಲ್ಲಿದ್ದ  ವ್ಯವಹಾರದ ಸುಮಾರು 1,75,000/- ರೂ ನಗದು ಹಣವನ್ನು ಸುಲಿಗೆ ಮಾಡಿ ವಿಚಾರವನ್ನು ಯಾರಿಗಾದರೂ ತಿಳಿಸಿದಲ್ಲಿ ಮಾನ ಹಾನಿ ಮಾಡುವುದಾಗಿ ಬೆದರಿಸಿ ಸಮೀಪದಲ್ಲಿ ನಿಲ್ಲಿಸಿದ ಬಿಳಿ ಬಣ್ಣದ ಕಾರಿನಲ್ಲಿ ಕೊಟ್ಟಾರ ಕಡೆಗೆ ಪರಾರಿಯಾಗಿದ್ದು, ಪಿರ್ಯಾಧಿದಾರರನ್ನು ಸುಲಿಗೆ ಮಾಡಿದ ಮಂಗಳಮುಖಿಯರ ವೇಷದಲ್ಲಿದ್ದವರು ಪರಸ್ಪರ ಮಾತನಾಡುತ್ತಿರುವಾಗ ಅವರ ಹೆಸರು ರಾಷಿ, ಅನಿ, ನೀತು ಮತ್ತು ಸೂಜಿ ಎಂದು ಉಲ್ಲೇಖಿಸಿರುವುದಾಗಿ ನೀಡಿದ ದೂರಿನ ಸಾರಾಂಶ ಆಗಿರುತ್ತದೆ.

                                                  

ಇತ್ತೀಚಿನ ನವೀಕರಣ​ : 21-08-2023 02:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080