ಅಭಿಪ್ರಾಯ / ಸಲಹೆಗಳು

Crime Report in CEN Crime PS

ದಿನಾಂಕ 29-08-2023 ರಂದು ಪಿರ್ಯಾದಿದಾರರು ಮನೆಯಲ್ಲಿದ್ದ ಸಮಯ ಸುಮಾರು 11.00 ಗಂಟೆಗೆ ಫೇಸ್ ಬುಕ್ ನ್ನು ನೋಡುತ್ತಿರುವಾಗ  ಫೇಸ್ ಬುಕ್ ನಲ್ಲಿ ವೈಷ್ಣೋದೇವಿ ಮಂದಿರದ ಕಾಯಿನ್ ಇದ್ದಲ್ಲಿ ಅದಕ್ಕೆ ಉತ್ತಮ ಬೆಲೆಯನ್ನು ನೀಡುವುದಾಗಿ  add ಒಂದು ಬಂದಿದ್ದು ಪಿರ್ಯಾದಿದಾರರಲ್ಲಿ ಕೆಲವು ವೈಷ್ನೋದೇವಿಯ  ಕಾಯಿನ್ ಗಳು ಇದ್ದುದರಿಂದ ಪಿರ್ಯಾದಿದಾರರು  ಸದ್ರಿ add ನಲ್ಲಿ ನಮೂದಿಸಿರುವ 7801068172 ನೇ ನಂಬ್ರಕ್ಕೆ ಕರೆ ಮಾಡಿದಾಗ ಆರೋಪಿತರಾದ ಮೋಹಿತ್ ಅಗರ್ ವಾಲ್ (7801068172) ಹಾಗೂ ಮನೋಜ್ ಕುಮಾರ್ (8185951280) ಎಂಬವರುಗಳು ಸದ್ರಿ ಕಾಯಿನ್ ಗಳಿಗೆ 24,56,000/- ಹಣವನ್ನು ನೀಡುತ್ತೇನೆ ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು ರೂ. 27700/- ನ್ನು ಅವರ ಖಾತೆಗಳಾದ ICICI BANK A/C NO. 334601503899 IFSC: ICIC0003346 ಹಾಗೂ  ICICI BANK A/C NO. 641501509309 IFSC: ICIC0006415 ನೇದಕ್ಕೆ ವರ್ಗಾಯಿಸಿಕೊಂಡಿರುತ್ತಾರೆ. ಹೀಗೆ ಪಿಯಾದಿದಾರರಲ್ಲಿರುವ ವೈಷ್ಣೋದೇವಿಯ ಕಾಯಿನ್ ಗೆ 24,56,000/- ಬೆಲೆಯನ್ನು ನೀಡುವುದಾಗಿ ನಂಬಿಸಿ ಪಿರ್ಯಾದಿದಾರರಿಂದ  ಹಂತ ಹಂತವಾಗಿ ಒಟ್ಟು ರೂ. 27700/- ನ್ನು ತನ್ನ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿದ ಮೋಹಿತ್ ಅಗರ್ ವಾಲ್ (7801068172) ಹಾಗೂ ಮನೋಜ್ ಕುಮಾರ್ (8185951280) ನೇರವರ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

Urva PS

ದಿನಾಂಕ 01-9-2023 ರಂದು ರಾತ್ರಿ 11-15 ವೇಳೆಗೆ  ಬಿಜೈ ಕಾಪಿಕಾಡ್ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಅನುಮಾನಸ್ಪದವಾಗಿ ನಿಂತುಕೊಂಡಿದ್ದವನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಆತನು ತಾನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಪ್ಪೊಪಿಕೊಂಡಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ತನ್ನ  ಹೆಸರು ಅಲೀನ್ ಸಜೀವ, ಪ್ರಾಯ 20 ವರ್ಷ,  ವಾಸ: ಸಜೀವ ಭವನ, ಮನಿಹಾರ್, ಪುನಲೂರು, ಕೊಲ್ಲಂ,  ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದುಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಲ್ಲಿ  ಆತನು ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢಪಟ್ಟಿರುವುದರಿಂದ ಾತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 

2) ದಿನಾಂಕ 01-9-2023 ರಂದು ರಾತ್ರಿ 11-30 ವೇಳೆಗೆ  ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಗುಂಡಿ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಅನುಮಾನಸ್ಪದವಾಗಿ ನಿಂತುಕೊಂಡಿದ್ದವನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಆತನು ತಾನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಪ್ಪೊಪಿಕೊಂಡಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು  ಧನುಷ್ , ಪ್ರಾಯ  28 ವರ್ಷ,  ವಾಸ: ಚೌಟ ಕಂಪೌಂಡ್, ಶ್ರೀ ಗೋಪಾಲ ಕೃಷ್ಣ ಭಜನಾ ಮಂದಿರದ ಬಳಿ, ವಿದ್ಯಾನಗರ, ಕುಳಾಯಿ , ಮಂಗಳೂರು  ಎಂಬುದಾಗಿ ತಿಳಿಸಿದ್ದು. ತಿಳಿಸಿದ್ದುಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಲ್ಲಿ  ಆತನು ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢಪಟ್ಟಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Traffic South Police Station          

ಪಿರ್ಯಾದಿ Mohammed Shakib ದಾರರು ದಿನಾಂಕ: 01/09/2023 ರಂದು ತನ್ನ ಬಾಬ್ತು KA-19-EB-6635 ನೇ ನಂಬ್ರದ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಇಬ್ರಾಹಿಂ ಸಾಝ್ ರವರನ್ನು ಸಹ ಸಹವಾರನನ್ನಾಗಿ ಕುಳ್ಳಿರಿಸಿಕೊಂಡು ಅಸೈಗೋಳಿ ಕಡೆಯಿಂದ ದೇರಳಕಟ್ಟೆ ಕಡೆಗೆ ಹೊರಟು ನಾಟೇಕಲ್ ಆಟೋ ನಿಲ್ದಾಣ ದಾಟಿ ಎಮ್. ಕೆ. ರಿಂಗ್ ವರ್ಕ್ ಸೈಟ್ ಎದುರಿನ ಸಾರ್ವಜನಿಕ ರಸ್ತೆಯನ್ನು ತಲುಪುತ್ತಿದ್ದಂತೆ ಸಮಯ ಸುಮಾರು ರಾತ್ರಿ 08.00 ಗಂಟೆಗೆ ದೇರಳಕಟ್ಟೆ ಕಡೆಯಿಂದ ವಿರುದ್ದ ದಿಕ್ಕಿನಲ್ಲಿ KA-19-EJ-7482 ನೇ ನಂಬ್ರದ ಮೋಟಾರು ಸೈಕಲನ್ನು ಸವಾರ ಅಬ್ದುಲ್ಲ ನೌಶಾದ್ ಎಂಬಾತನು ಮಹಮ್ಮದ್ ಅಪ್ರೀದ್ ಎಂಬವರನ್ನು ಸಹ ಸಹವಾರರನನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ  ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಎಡಭಾಗದ ಹ್ಯಾಂಡಲ್ ಗೆ  ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಸದ್ರಿ ಅಪಘಾತದಿಂದ ಸಹಸವಾರ ಇಬ್ರಾಹಿಂ ಸಾಝ್  ಎಂಬುವವರ ಮೂಗಿಗೆ ಮೂಳೆಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ತುಟಿಗೆ ಮತ್ತು ಹಲ್ಲುಗಳಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಮೋಟಾರ್ ಸೈಕಲ್ ನ ಸಹಸವಾರ ಮಹಮ್ಮದ್ ಅಪ್ರೀದ್ ನ್ ಹಣೆಯ ಮೇಲ್ಭಾಗದಲ್ಲಿ ಚರ್ಮ ಹರಿದ ರಕ್ತಗಾಯವಾಗಿದ್ದು, ಬಲಕಾಲಿನ ಕೋಲುಕಾಲಿಗೆ ಮತ್ತು ತಲೆಗೆ ಗುದ್ದಿದ ಪೆಟ್ಟಾಗಿರುತ್ತದೆ. ಬಳಿಕ ಚಿಕಿತ್ಸೆಯ ಬಗ್ಗೆ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು ಗಾಯಾಳು ಇಬ್ರಾಹಿಂ ಸಾಝ್  ರವರನ್ನು ಒಳರೋಗಿಯನ್ನಾಗಿ ಹಾಗೂ ಗಾಯಾಳುಗಳಾದ ಪಿರ್ಯಾದಿದಾರರು ಮತ್ತು ಮಹಮ್ಮದ್ ಅಪ್ರೀದ್ ರವರನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬಿತ್ಯಾದಿ.

 

           

ಇತ್ತೀಚಿನ ನವೀಕರಣ​ : 02-09-2023 04:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080