ಅಭಿಪ್ರಾಯ / ಸಲಹೆಗಳು

Mangalore Rural PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ: 02-01-2024  ರಂದು ಪಿರ್ಯಾದಿದಾರರು ಶ್ರೀಮತಿ ಕಮಲ ಪಿ.ಎಸ್‌.ಐ.  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ನೀರುಮಾರ್ಗ ಗ್ರಾಮದ ಭಟ್ರಕೋಡಿ ಎಂಬಲ್ಲಿ ಅಮಲು ಪದಾರ್ಥ ಸೇವನೆ  ಮಾಡಿದಂತೆ ಕಂಡು ಬಂದ ಅನೀಶ್ ವಾಸ: -ಮಾರಿಗುಡಿ ದೇವಸ್ಥಾನದ ಹತ್ತಿರ ಮಾರಿಗುಡಿ, ಊರ್ವಾಸ್ಟೋರ್  ಮಂಗಳೂರು.  ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

 

 

Traffic North Police

ಈ ಪ್ರಕರಣದ ಸಾರಾಂಶವೇನಂದರೆ, ನಿನ್ನೆ ದಿನ ದಿನಾಂಕ 01-01-2024 ರಂದು ಪಿರ್ಯಾದಿ ಗಂಗಾಧರ  ಎಸ್‌ ಶೆಟ್ಟಿ ಬಾಬ್ತು KA-19-ET-0026 ನಂಬ್ರದ ಬೈಕಿನಲ್ಲಿ ಪಿರ್ಯಾದಿದಾರರ ಮಗ ಕೀರ್ತನ್ ಜಿ ಶೆಟ್ಟಿ ರವರ ಗೆಳಯ ಸುಜೀತ್ ರವರು ಬೈಕಿನ ಸವಾರನಾಗಿ, ಕೀರ್ತನ್ ಜಿ ಶೆಟ್ಟಿ ರವರನ್ನು ಹಿಂಬದಿ ಸಹ-ಸವಾರನಾಗಿ ಕುಳ್ಳಿರಿಸಿಕೊಂಡು ರಾತ್ರಿ ಹಳೆಯಂಗಡಿಯಲ್ಲಿ ಪಿಂಕಿ ಕ್ಯಾಟರಿಂಗ್ ಕೆಲಸ ಮುಗಿಸಿಕೊಂಡು ವಾಪಾಸ್ಸು ಬೈಕಿನಲ್ಲಿ ಇಬ್ಬರೂ ಮನೆಯ ಕಡೆಗೆ ಬರುತ್ತಿರುವಾಗ ರಾತ್ರಿ ಸಮಯ ಸುಮಾರು 11:45 ಗಂಟೆಗೆ ಹಳೆಯಂಗಡಿ ಜಂಕ್ಷನ್ ಹತ್ತಿರ ತಲುಪಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ NH-66 ನೇ ಡಾಮಾರು ರಸ್ತೆಯನ್ನು ತೆರೆದ ಡಿವೈಡರಿನಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬೈಕಿನಲ್ಲಿ ದಾಟುತ್ತಿರುವಾಗ ಮುಕ್ಕಾ ಕಡೆಯಿಂದ KA-20-MD-1687 ನಂಬ್ರದ ಸ್ಕಾರ್ಪಿಯೊ ವಾಹನವನ್ನು ಅದರ ಚಾಲಕ ಮಹಮ್ಮದ್ ಆಶಿಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸಮೇತ ಸವಾರ ಹಾಗೂ ಸಹಸವಾರ ಇಬ್ಬರೂ ರಸ್ತೆಗೆ ಬಿದ್ದು, ಬೈಕ್ ಸವಾರ ಸುಜೀತ್ ರವರಿಗೆ ಮತ್ತು  ಬೈಕಿನ ಸಹಸವಾರ ಕೀರ್ತನ್ ಶೆಟ್ಟಿ ರವರಿಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಅಲ್ಲದೇ ಸ್ಕಾರ್ಪಿಯೂ ವಾಹನದಲ್ಲಿದ್ದ ಮಹಮ್ಮದ್ ಆಯಾನ್ ರವರಿಗೆ ಮೊನಗಂಟಿಗೆ ತರಚಿದ ರೀತಿಯ ಗಾಯವಾಗಿರುತ್ತದೆ ಎಂಬಿತ್ಯಾದಿ

 

Kankanady Town PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೇಂದರೆ ಪಿರ್ಯಾದುದಾರರು ವೆಂಕಟೇಶ ದಾಸರ್ ಮೇರಿಹಿಲ್ ವಿವ್ಯ್ ಅಪಾರ್ಟ್ಮೆಂಟ್, ಮೇರಿಹಿಲ್, ಕೊಂಚಾಡಿ ಪೋಸ್ಟ್, ಪದವು ಗ್ರಾಮ, ಮಂಗಳೂರು ವಿಳಾಸದಲ್ಲಿ ತನ್ನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದು, ತನ್ನ ಹೆಂಡತಿ  ಪ್ರೇಮ ವೆಂಕಟೇಶ ದಾಸರ್ ಪ್ರಾಯ:24 ವರ್ಷ ಇದೇ ಅಪಾರ್ಟ್ಮೆಂಟ್ ನಲ್ಲಿ ಮನೆ ಕ್ಲೀನಿಂಗ  ಕೆಲಸ  ಮಾಡಿಕೊಂಡಿದ್ದವರು ಈ ದಿನ ದಿನಾಂಕ 02-01-2024 ರಂದು, ಬೆಳಿಗ್ಗೆ ಸುಮಾರು 06: 40 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೇ ಹೋದವರನ್ನು  ಸಿಸಿಟಿವಿ ಚೆಕ್ ಮಾಡಲಾಗಿ  ರಿಕ್ಷಾದಲ್ಲಿ ಹೋಗಿದ್ದು, ನಂತರ  KPT  ಹತ್ತಿರ  ಹೋಗಿ ರಿಕ್ಷಾ ಪಾರ್ಕ್  ಬಳಿ ವಿಚಾರಿಸಲಾಗಿ ರಿಕ್ಷಾ ನಂಬರ್ KA19-ED1940  ರಿಕ್ಷಾ ಡ್ರೈವರ್  ವಿಚಾರಿಸಿದಾಗ ತಾನೇ ಅವರನ್ನು KSRTC  ಮಂಗಳೂರು ಬಸ್ ನಿಲ್ದಾಣಕಕ್ಕ ಬಿಟ್ಟಿದ್ದಾಗಿ ತಿಳಿಸಿದ್ದು, ಅಲ್ಲಿಗೆ ಹೋಗಿ ಹುಡುಕಾಟ ನಡೆಸಲಾಗಿ ಪತ್ತೆಯಾಗದೇ ಇದ್ದು, ತನ್ನ ಹೆಂಡತಿಯ ಮೊಬೈಲ್ ನಂ 7338048617, 6366061329 ನೇದಕ್ಕೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿತ್ತು. ನಂತರ ಸಂಬಂಧಿಕರಲ್ಲಿ  ನೆರೆಕರೆಯವರಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ. ಆದುದ್ದರಿಂದ ನಾಪತ್ತೆಯಾದ ಪಿರ್ಯಾದುದಾರರ ಪತ್ನಿ ಪ್ರೇಮ ವೆಂಕಟೇಶ ದಾಸರ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 03-01-2024 02:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080