ಅಭಿಪ್ರಾಯ / ಸಲಹೆಗಳು

Crime Report in  CEN Crime PS

ಪಿರ್ಯಾದಿದಾರರು ಐಸಿಐಸಿಐ ಕ್ರೆಡಿಟ್ ಕಾರ್ಡ್ ನ್ನು ಹೊಂದಿರುತ್ತಾರೆ.ದಿನಾಂಕ 10-09-2023 ರಂದು ಪಿರ್ಯಾದಿದಾರರ ದೂರವಾಣಿ ಸಂಖ್ಯೆ- ನೇದಕ್ಕೆ ಐಸಿಐಸಿಐ ಹೆಸರಿರುವ ಹಲವು OTP ಗಳ ಸಂದೇಶ ಬಂದಿರುತ್ತದೆ ಹಾಗೂ ಅಪರಿಚಿತ ದೂರವಾಣಿ ಸಂಖ್ಯೆ +911416898500 ನೇದರಿಂದ ಕರೆ ಬಂದಿರುತ್ತದೆ ಪಿರ್ಯಾದಿದಾರರು ಭಯದಿಂದ ಯಾವುದೇ ಕರೆ ಸ್ವೀಕರಿದೇ ಕೂಡಲೇ ತಮ್ಮ  ಮೊಬೈಲ್ ನಿಂದ ಐಸಿಐಸಿಐ ಆಪ್ ತರೆದು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿರುತ್ತಾರೆ ಅಷ್ಟೆ ಅಲ್ಲದೆ ಐಸಿಐಸಿಐ ಕ್ರೆಡಿಟ್ ಕಾರ್ಡ್ ನ ಕಸ್ಟಮರ್ ಕೇರ್ ನಂಬ್ರ 18001020123 ನೇದಕ್ಕೆ ಕರೆ ಮಾಡಿ ತಮ್ಮ  ಬಾಬ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡಿತ್ತಾರೆ ಅಷ್ಟೆ ಅಲ್ಲದೇ ಕಸ್ಟಮರ್ ಕೇರ್ ನವರು ಪಿರ್ಯಾದಿದಾರರ ಐಸಿಐಸಿಐ ಕ್ರೆಡಿಟ್ ಕಾರ್ಡ್ ನಂಬ್ರ ಬ್ಲಾಕ್ ಆಗಿರುವ ಬಗ್ಗೆ ಈ ಮೇಲ್ ಕಳುಹಿಸಿರುತ್ತಾರೆ. ಮರು ದಿನ ದಿನಾಂಕ 11-09-2023 ರಂದು ರಾತ್ರಿ ಪಿರ್ಯಾದಿದಾರರು ಐಸಿಐಸಿಐ ಆಪ್ ನ ಮೂಲಕ ಕ್ರೆಡಿಟ್ ಕಾರ್ಡ್ ನ ಸ್ಟೇಟಸ್ ನೋಡಿದಾಗ 1,60,401.56/-ರೂಗಳು ಔಟ್ ಸ್ಟಾಂಡಿಗ್ ಇರುವ ಬಗ್ಗೆ ತೋರಿಸುತ್ತಿರುವುದು ಕಂಡು ಬಂಡಿರುತ್ತದೆ, ಪಿರ್ಯಾದಿದಾರರು ಕೂಡಲೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ನ ಕಸ್ಟಮರ್ ಕೇರ್ ನಂಬ್ರ 18001020123 ನೇದಕ್ಕೆ ಕರೆ ಮಾಡಿ ವಿಚಾರಿಸಿದಾಗ ಸದ್ರಿಯವರು ಅನಧಿಕೃತ ಹಣ ವರ್ಗಾವಣೆ ಆದ ಬಗ್ಗೆ ದೂರು ಸ್ವೀಕರಿಸಿಕೊಂಡು ಸ್ವೀಕೃತಿ ನಂಬ್ರ ನೇದನ್ನು  ಮೌಖಿಕವಾಗಿ  ಪಿರ್ಯಾದಿದಾರರಿಗೆ ನೀಡಿರುತ್ತಾರೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಬಾಬ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ನೇದರಿಂದ ಅನಧಿಕೃತವಾಗಿ ಒಟ್ಟು 1,55,000/- ರೂಗಳನ್ನು ಆನ್ ಲೈನ್ ಮುಖಾಂತರ ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Panambur PS   

ದಿನಾಂಕ 01-10-2023 ರಾತ್ರಿ 09-30 ಗಂಟೆಗೆ ಫಿರ್ಯಾದಿ Mohammed Afreed ದಾರರು ಬೇಂಗ್ರೆಯಲ್ಲಿರುವ SSF  ಮದರಸ ಮುಂದೆ ಕಬೀರ ಎಂಬುವರನ್ನು ಮಾತನಾಡಿ ತನ್ನ ಬಾಬ್ತು ಸ್ಕೂಟರನಲ್ಲಿ ಮನೆಯ ಕಡೆಗೆ ಹೋಗುತ್ತಿರುವಾಗ ಫಾರೂಕ ಎಂಬುವನು ಫಿರ್ಯಾದಿದಾರನ್ನು ತಡೆದು ನಿಲ್ಲಿಸಿ ಬೇವರ್ಸಿ, ರಂಡೇ ಮಗ ನೀನು ಬಾರಿ ಪೊಲೀಸ್ ರಿಗೆ ಮಾಹಿತಿ ನೀಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ನಂತರ ಪಾರೂಕ್ ತನ್ನ ಕೀಸೆಯಲ್ಲಿದ್ದ ಚಾಕುವಿನಿಂದ ಫಿರ್ಯಾದಿದಾರರನ್ನು ಬೆನ್ನಿಗೆ, ಎಡ ಹಳ್ಳಿಗೆ, ಹಾಗೂ ಬೆನ್ನಿನ ಬಲ ಬದಿಗೆ ತೀವ್ರವಾಗಿ ಹಲ್ಲೆ ಮಾಡಿದಾಗ ತೀವ್ರ ರಕ್ತ ಬರುತ್ತಿದ್ದು ನಂತರ ಫಾರೂಕನು ಫಿರ್ಯಾದಿದಾರರಿಗೆ ನಿನ್ನನ್ನು ಜೀವ ಸಹಿತ ಬದುಕಲು ಬಿಡುವುದಿಲ್ಲ ವೆಂದು ಜೀವ ಬೇದರಿಕೆ ಹಾಕಿದ್ದು,  ಚಾಕುವಿನೊಂದಿಗೆ ಅಲ್ಲಿಂದ ಹೋಗಿರುತ್ತಾನೆ. ಆಗ  ಅಲ್ಲಿಯೇ ಇದ್ದ ಆಸೀಪ್, ಅಮ್ರಾಜ್ ಮತ್ತು ಇರ್ಫಾನ್ ರವರುಗಳು ಫಿರ್ಯಾದಿದಾರರನ್ನು ನೋಡಿ ಗಾಯಗೊಂಡ ಫಿರ್ಯಾದಿದಾರರನ್ನು ಬೇಂಗ್ರೆಯಿಂದ ಬೋಟನಲ್ಲಿ ಕರೆದುಕೊಂಡು ಹೈಲ್ಯಾಂಡ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ. ಫಿರ್ಯಾದಿದಾರರು ಬೆಂಗ್ರೆಯಲ್ಲಿ ನಡೆಯುವ ಅನಧಿಕೃತ ಮಾಹಿತಿಯನ್ನು ನಿಡುತ್ತಾನೆ ಎಂಬ ದ್ವೇಷದಿಂದ ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿ.

Traffic South Police Station              

ದಿನಾಂಕ: 01-10-2023 ರಂದು ಪಿರ್ಯಾದಿ Priya Ullala ದಾರರು ಮನೆಯಲ್ಲಿರುವಾಗ ಅವರ ಚಿಕ್ಕಮ್ಮ ಕರೆ ಮಾಡಿ ಪಿರ್ಯಾದಿದಾರರ ಅಣ್ಣನಾದ ಜೀವನ್ ರವರಿಗೆ 2 ನೇ ಕೊಲ್ಯ ಬಳಿ ಅಪಘಾತವಾಗಿ ಚಿಕಿತ್ಸೆಗಾಗಿ ನೇತಾಜಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಯೆನೊಪೋಯ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ತಿಳಿಸಿದಾಗ ಪಿರ್ಯಾದಿದಾರರು ಆಸ್ಪತ್ರೆಗೆ ತೆರಳಿ ಚಂದ್ರ ಎಂಬುವರಲ್ಲಿ ಅಪಘಾತದ ಬಗ್ಗೆ ವಿಚಾರಿಸಿದ್ದು ದಿನಾಂಕ: 01-10-2023 ರಂದು ಪಿರ್ಯಾದಿದಾರರ ಅಣ್ಣನಾದ ಜೀವನ್ ರವರು ಅವರ ಬಾಬ್ತು ಬೈಕ್ ನಂಬ್ರ KA-19-ET-8195 ನೇದರಲ್ಲಿ ಅಡ್ಕದಿಂದ ಉಳ್ಳಾಲಕ್ಕೆ ಹೋಗಲು N.H 66 ನೇದರಲ್ಲಿ 2 ನೇ ಕೊಲ್ಯ ಬಳಿ ಬಲಕ್ಕೆ ತಿರುವು ಪಡೆಯುತ್ತಿರುವ ಸಮಯ ರಾತ್ರಿ ಸುಮಾರು 20.30 ಗಂಟೆಗೆ ಪಂಪವೆಲ್ ಕಡೆಯಿಂದ ತಲಪಾಡಿ ಕಡೆಗೆ  KL-57-V-1000 ನೇ ನಂಬ್ರದ ಕಾರನ್ನು ಅದರ ಚಾಲಕ ಮೊಹಮ್ಮದ್ ಆನಾಸ್ಸ ಕೆ  ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜೀವನ್ ಅವರು ಬೈಕ್ ನ ಮುಂಭಾಗದ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಜೀವನ್ ರವರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು ಜೀವನ್ ಅವರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯ ಮತ್ತು ಎರಡು ಕಾಲಿನ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು ಕೂಡಲೇ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಗಾಯಾಳುವನ್ನು ಉಪಚರಿಸಿ, ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಯೆನೊಪೋಯ  ಆಸ್ಪತ್ರೆ ದೇರಳಕಟ್ಟೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಅಲ್ಲಿಯ ವೈಧ್ಯರು ಗಾಯಾಳು ಜೀವನ್ ರವರನ್ನು ಪರೀಕ್ಷಿಸಿ ಅವರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯ ಮತ್ತು ಎರಡು ಕಾಲುಗಳಿಗೆ ಮಣಿಗಂಟಿಗೆ ಗುದ್ದಿದ ಗಾಯವಾಗಿದೆ ಎಂದು ತಿಳಿಸಿರುತ್ತಾರೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಗೆ  ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ತಿವ್ರ ನಿಗಾಘಟಕದಲ್ಲಿ  ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Traffic South Police Station      

ದಿನಾಂಕ 02/10/2023 ರಂದು ಬೆಳಿಗ್ಗೆ ಸುಮಾರು 09.30 ಗಂಟೆಗೆ ಪಿರ್ಯಾದಿದಾರರಾದ ಜಾಯ್ಸನ್ ಪ್ರಕಾಶ್ ಮಿರಾಂದ ಮನೆಯಲ್ಲಿದ್ದಂತೆ, ಅವರ ತಂದೆ ಜೋಸೆಫ್ ಜೆರಾಲ್ಡ್ ಮಿರಾಂದ ಎಂಬವರಿಗೆ ಅರ್ಕುಳ ದ್ವಾರದ ಬಳಿ ರಾ. ಹೆದ್ದಾರಿ 73 ರಲ್ಲಿ ರಸ್ತೆ ಅಪಘಾತದಲ್ಲಿ  ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕರೆ ಮಾಡಿ ತಿಳಿಸಿದ  ಮೇರೆಗೆ ಫಿರ್ಯಾದಿದಾರರು ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿದ್ದ ಅರ್ಕುಳದ ಗ್ರೇಶನ್ ಡಿಸೋಜಾ ಎಂಬವರಲ್ಲಿ ವಿಚಾರಿಸಲಾಗಿ ಫಿರ್ಯಾದಿದಾರರ ತಂದೆಯಾದ ಜೋಸೆಫ್ ಜೆರಾಲ್ಡ್ ಮಿರಾಂದ (68 ವರ್ಷ) ಎಂಬವರು ಮೇರ ಮಜಲು ಕಡೆಯಿಂದ ಮೋಟಾರ್ ಸೈಕಲ್ ನಂಬ್ರ KA-01-EQ-3601ನೇ ದನ್ನು ಸವಾರಿ ಮಾಡಿಕೊಂಡು ಬಂದು ಅರ್ಕುಳ ದ್ವಾರದ ಬಳಿ ಎಡಗಡೆಗೆ ತಿರುಗಿಸಿ ಫರಂಗಿಪೇಟೆ ಕಡೆಗೆ ರಾ.ಹೆದ್ದಾರಿ 73 ರಲ್ಲಿ ಮುಂದೆ ಹೋಗುತ್ತಿದ್ದಂತೆ, ಸಮಯ ಸುಮಾರು 09.15 ಗಂಟೆಗೆ ಮಂಗಳೂರು ಕಡೆಯಿಂದ ಬಿಳಿ ಬಣ್ಣದ ಓಮಿನಿ ಕಾರೊಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜೋಸೆಫ್ ಜೆರಾಲ್ಡ್ ಮಿರಾಂದ ರವರ ಮೋಟಾರ್ ಸೈಕಲಿನ ಬಲ ಬದಿಯ ಹ್ಯಾಂಡಲ್ ಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಹೋಗಿದ್ದು, ಪರಿಣಾಮ ಜೋಸೆಫ್ ಜೆರಾಲ್ಡ್ ಮಿರಾಂದರ ವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಬಲ ಕೆನ್ನೆಗೆ ತರಚಿದ ಹಾಗೂ ಹಣೆಯ ಬಲಭಾಗದಲ್ಲಿ, ಎಡಕಾಲಿನ ಪಾದದ ಗಂಟಿಗೆ, ಬಲಕಾಲಿನ ಮೊಣಗಂಟಿಗೆ, ಎಡ ಕೈ ತೋರು ಬೆರಳಿಗೆ ಹಾಗೂ ಸೊಂಟದ ಬಲಭಾಗ ತರಚಿದ ರಕ್ತ ಗಾಯ, ಹಾಗೂ ತಲೆಗೆ ಹಾಗೂ ಎದೆಯ ಒಳಭಾಗಕ್ಕೆ ಗುದ್ದಿದ ಗಾಯವಾಗಿ ಎರಡು ಕಿವಿಯಲ್ಲಿ ರಕ್ತ  ಬಂದು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದವರನ್ನು ಗ್ರೇಶನ್ ಡಿಸೋಜಾ ಹಾಗೂ ಇತರರು ಉಪಚರಿಸಿ ತುಂಬೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಚಿಕಿತ್ಸೆಯಲ್ಲಿದ್ದ ಜೋಸೆಫ್ ಜೆರಾಲ್ಡ್ ಮಿರಾಂದರವರು ಬೆಳಿಗ್ಗೆ 10.36 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

Kankanady Town PS                

ಪಿರ್ಯಾದು Ganga ದಾರರಾದ ಗಂಗಾ ರವರ ಮಗಳು ಎಲ್ಲಮ್ಮ(18 ವರ್ಷ 7 ತಿಂಗಳು)  ರವರು ಮಂಗಳೂರು ನಗರದ ದಂಡಕೇರಿ ಯೆಯ್ಯಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ 3 ಮಂದಿ ಹೆಣ್ಣು ಮಕ್ಕಳೊಂದಿಗೆ ಸುಮಾರು 1 ವರ್ಷದಿಂದ ವಾಸಮಾಡಿಕೊಂಡಿರುತ್ತಾರೆ. ದಿನಾಂಕ 30-09-2023 ರಂದು ಪಿರ್ಯಾದಿದಾರರ ಮೊದಲನೇ ಮಗಳಾದ ಎಲ್ಲಮ್ಮ ಎಂಬವಳು ಬೆಳಗ್ಗೆ 9.00 ಗಂಟೆ ಸುಮಾರಿಗೆ ಯೆಯ್ಯಾಡಿ  ದಂಡಕೇರಿಯಲ್ಲಿರುವ ಲಾಂಗ್ ಉಡ್ ಪ್ಲಾಟ್ ಗೆ ಮನೆ ಕೆಲಸಕ್ಕೆ ಹೋದವಳು ಮದ್ಯಾಹ್ನ ಊಟಕ್ಕೆ ಮನೆಗೆ ಬಂದು ಪುನಃ ಕೆಲಸಕ್ಕೆಂದು ಲಾಂಗ್ ಉಡ್ ಪ್ಲಾಟ್ ಗೆ  ಹೋದವಳು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಸದ್ರಿ ಆಕೆಯು ಮನೆ ಕೆಲಸಕ್ಕೆ ಹೋದ ಮನೆಗೆ ವಿಚಾರಿಸಿದಾಗ ಆಕೆಯು ಸುಮಾರು 3:30ಗಂಟೆಗೆ ಮನೆಗೆ ಹೋಗುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾಧಿದಾರರು ಮಗಳ ಫೋನ್ ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ನಂತರ ನಾವು ನಮ್ಮ ಸಂಬಂದಿಕರಲ್ಲಿ ಹಾಗೂ ಅಕ್ಕ ಪಕ್ಕದ ಮನೆಯವರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೇ ಇದ್ದು ನೀಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 02-10-2023 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080