ಅಭಿಪ್ರಾಯ / ಸಲಹೆಗಳು

Crime Report in  CEN Crime PS

ದಿನಾಂಕ 02-11-2023 ರಂದು ಬೆಳಗ್ಗೆ 10:00 ಗಂಟೆಗೆ ಸೈಬರ್ ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶೋಭಾ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಗ್ಗೆ 10:30 ಗಂಟೆಗೆ ಮಂಗಳೂರು ನಗರದ ಉರ್ವ ಗ್ರಾಂಡ್ ನ ಬಳಿ ಒರ್ವ ವ್ಯಕ್ತಿಯು ಅಮಲು ಪದಾರ್ಥ ಸೇವಿಸಿ ನಶೆಯಲ್ಲಿರುವುದಾಗಿ ಒಂದು ಮಾಹಿತಿ ಬಂದಿದ್ದು, ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳವಾದ ಉರ್ವ ಗ್ರಾಂಡ್ ನ ಬಳಿಗೆ  ಬೆಳಗ್ಗೆ 10:40 ಗಂಟೆಗೆ ತಲುಪಿದಾಗ ಓರ್ವ ವ್ಯಕ್ತಿಯು ಉರ್ವ ಗ್ರಾಂಡ್ ನ ಬಳಿ ನಿಂತುಕೊಂಡಿದ್ದು, ಆತನು ನಶೆಯಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡುಬಂದಿದ್ದು, ಆತನ ಬಳಿಗೆ  ಹೋಗಿ  ವಿಚಾರಿಸಲಾಗಿ ನಶೆಯ ಅಮಲಿನಲ್ಲಿ ಉತ್ತರಿಸುತ್ತಿದ್ದು ತನ್ನ ಹೆಸರು ರೋಷನ್ (28) ವಾಸ: #ಕ್ಯಾಟರಿಂಗ್ ಸಂಪತ್ ರವರ ಬಾಡಿಗೆ ಮನೆ ಚರ್ಚ್ ಗುಡ್ಡೆ ಉರ್ವ ಸ್ಟೋರ್ ಮಂಗಳೂರು ಎಂಬುದಾಗಿ ತಿಳಿಸಿ ಗಾಂಜಾವನ್ನು ಸೇದಿರುವುದಾಗಿ ತಿಳಿಸಿದನು. ಆಪಾದಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯಾಧಿಕಾರಿಯವರು ಆಪಾದಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢ ಪತ್ರವನ್ನು ನೀಡಿರುತ್ತಾರೆ. ಕಾನೂನು ಬಾಹಿರವಾದ ನಿಷೇಧಿತ ಮಾದಕ ವಸ್ತು ಸೇವನೆ ಮಾಡಿರುವ ಆಪಾದಿತ ರೋಷನ್ (28) ವಿರುದ್ದ ಎನ್.ಡಿ.ಪಿ.ಎಸ್. ಕಾಯಿದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬುತ್ಯಾದಿ 

Panambur PS

ದಿನಾಂಕ:02-11-2023 ರಂದು ಸಮಯ 10-00 ಗಂಟೆಗೆ ಕಸಬಾ ಬೆಂಗ್ರೆಯ ಕಿಲೇರಿಯಾ ಮಸೀದಿ ಹತ್ತಿರದ ಕಡಲ ಕಿನಾರೆಯ ಹತ್ತಿರ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದ ಶಬೀರ್ @ ಪರೋಟ ಶಬ್ಬಿ (24)  ವಾಸ: ಬೆಂಗತ್ತೋಡಿ ಹೌಸ್, ಕಾವಳಪಡೂರು ಗ್ರಾಮ, ಕಾವಳಕಟ್ಟೆ ಅಂಚೆ,  ಬಂಟ್ವಾಳ, ದಕ್ಷೀಣ ಕನ್ನಡ ಜಿಲ್ಲೆ ಎಂಬವನನ್ನು  ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಾಗ ವೈದ್ಯಾಧಿಕಾರಿಗಳು ಎ.ಜೆ.ಆಸ್ಪತ್ರೆ ಮಂಗಳೂರು ಇವರು  ಪರೀಕ್ಷಿಸಿ TETRAHYDRACANNABINOID (MARIJUANA) is Positive ಎಂದು ವರದಿ ನೀಡಿದ್ದು, ಸದ್ರಿ ಆಪಾದಿತನು ಅಮಲು ಪದಾರ್ಥ ಸೇವನೆ ಮಾಡಿರುವುದು ಧೃಡಪಟ್ಟಿರುತ್ತದೆ ಎಂಬಿತ್ಯಾದಿ.

Traffic North Police Station               

ದಿನಾಂಕ 01-11-2023 ರಂದು ಪಿರ್ಯಾದಿ Ikrar Imran Khan ದಾರರು ಕೊಲ್ನಾಡು ಕೈಗಾರಿಕ ಪ್ರದೇಶದಲ್ಲಿ ಕೂಲಿ ಕೆಲಸ ಮುಗಿಸಿ ಕೊಂಡು ಮನೆಯ ಕಡೆಗೆ ನಡೆದು ಕೊಂಡು ಹೋಗುವ ವೇಳೆ ಸಮಯ ರಾತ್ರಿ ಸುಮಾರು 20-00 ಗಂಟೆಗೆ ಕೆಂಚನಕೆರೆ -ಕಿನ್ನಿಗೋಳಿ ರಸ್ತೆಯಲ್ಲಿರುವ ಥ್ಯೂಬಾ ಟ್ರೇಡರ್ಸ್ ಬಳಿ ರಸ್ತೆಯನ್ನು ನಡೆದು ಕೊಂಡು ದಾಟುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಮುಲ್ಕಿ ಕಡೆಗೆ  KA19HG0587 ನಂಬರಿನ ಸ್ಕೂಟರನ್ನು ಅದರ ಸವಾರ ದುರ್ಗಾ ಪ್ರಸಾದ್ ರೈ ಎಂಬಾತನು ದುಡುಕತನ ಮತ್ತು ನಿರ್ಲಕ್ಷ್ಯ ತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಡಾಮರು ರಸ್ತೆಗೆ ಬಿದ್ದು  ಬಲ ಮೊಣ ಗಂಟಿನ ಕೆಳೆಗೆ ಮೂಳೆಮುರಿತದ ರೀತಿಯ ಒಳಗಾಯವಾಗಿರುತ್ತದೆ ಮತ್ತು  ಬಲ ಪಾದದ ಬಳಿ ಮೂಳೆಮುರಿತದ ರೀತಿಯ ಒಳಗಾಯವಾಗಿರುತ್ತದೆ,ತಲೆಯ ಹಿಂಬದಿ ತರಚಿದ ರೀತಿಯ ರಕ್ತಗಾಯವಾಗಿರುತ್ತದೆ ಪಿರ್ಯಾದಿದಾರರು ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore North PS

ದಿನಾಂಕ: 02.11.2023ರಂದು ಪಿರ್ಯಾದಿದಾರರಾದ ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪೈಜುನ್ನಿಸಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದ ಹೊರಟು ಠಾಣಾ ಸರಹದ್ದಿನ ಜೆ.ಎಂ.ರೋಡ್, ಅನ್ಸಾರಿ ರೋಡ್, ಅಜೀಜುದ್ದೀನ್ ರೋಡ್, ಬಜೀಲಕೇರಿ ಬಿ.ಬಿ ಅಲಾಬಿ ರಸ್ತೆ, ಹಳೆಯ ಸೆಂಟ್ರಲ್ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ಸಂಚರಿಸಿಕೊಂಡು  ದಿನಾಂಕ: 02.11.2023 ರಂದು ಬೆಳಗ್ಗಿನ ಜಾವ ಸುಮಾರು 04-45 ಗಂಟೆಗೆ ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯ ಸೌರಾಷ್ಟ್ರ ಬಟ್ಟೆ ಅಂಗಡಿಯ  ಬಳಿಗೆ ತಲುಪುತ್ತಿದ್ದಂತೆ  ಒರ್ವ ವ್ಯಕ್ತಿಯು  ಪೊಲೀಸ್ ವಾಹನವನ್ನು ಕಂಡು ಕತ್ತಲೆ ಕಡೆಗೆ ಸರಿದಿದ್ದು ಅತ್ತ ಕಡೆ ಟಾರ್ಚ್ ಲೈಟ್ ನ್ನು ಹಾಯಿಸಿದಾಗ ಓಡಲು ಪ್ರಯತ್ನಿಸುತ್ತಿದ್ದವನನ್ನು  ಹಿಡಿದು ವಿಚಾರಿಸಿದಾಗ ಸಂತೋಷ್  ವಯಸ್ಸು (38) ವಾಸ: ನಿಂಬಾಳ, ಇಂಡಿ ತಾಲೂಕು, ಬಿಜಾಪುರ ಜಿಲ್ಲೆ ಎಂದು  ನುಡಿದಿರುತ್ತಾನೆ.  ಇವನು ಈ ಅಪರಾತ್ರಿ ಸಮಯದಲ್ಲಿ ಸದ್ರಿ ಸ್ಥಳದಲ್ಲಿ ಕತ್ತಲೆಯಲ್ಲಿ ಅವಿತಿದ್ದು, ಈತನ ಚಲನವಲನದಿಂದ ಇವನು ಕನ್ನ ಕಳವು ಅಥವಾ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ, ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಬಾಗಿಲ ಬೀಗ ಮುರಿಯಲು ಹೊಂಚು ಹಾಕುತ್ತಿದ್ದಾನೆಂಬ ಬಲವಾದ ಸಂಶಯಬಂದಿದ್ದು, ಆರೋಪಿತನನ್ನು ಠಾಣೆಗೆ 05.15 ಗಂಟೆಗೆ ಕರೆದುಕೊಂಡು ಬಂದು ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ. 

Traffic South Police Station              

ಪಿರ್ಯಾದಿ SADANANDA ದಾರರು ಪದವಿನಂಗಡಿ ವಾಟಿಸ್ ಬಾರ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು,ದಿ.01-11-2023 ರಂದು ಪದವಿನಂಗಡಿ ಜಂಕ್ಷನ್ ನಿಂದ ರಾತ್ರಿ ಸುಮಾರು 8.00 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ,ಪದವಿನಂಗಡಿ ಯೂತ್ ಕ್ಲಬ್ (ರಿ) ಇದರ ಮುಂಭಾಗದಲ್ಲಿ, ವ್ಯಕ್ತಿಯೋರ್ವರು ಪದವಿನಂಗಡಿ - ಬೊಂದೆಲ್ ಏಕ ಮುಖ ರಸ್ತೆಯನ್ನು ದಾಟಿ ಮಧ್ಯದಲ್ಲಿದ್ದ ಡಿವೈಡರ್ ತಲುಪಿ ಸದ್ರಿ ಡಿವೈಡರ್ ನಿಂದ ಅತ್ತ ಬೊಂದೆಲ್ - ಪದವಿನಂಗಡಿ ಏಕ ಮುಖ ರಸ್ತೆಯ ಬದಿಯಲ್ಲಿರುವ ಯೂತ್ ಕ್ಲಬ್ ಕಡೆಗೆ ದಾಟುತ್ತಿದ್ದಾಗ,ಬೊಂದೆಲ್ ಚರ್ಚ್ ಕಡೆಯಿಂದ ಪದವಿನಂಗಡಿ ಜಂಕ್ಷನ್ ಕಡೆಗೆ  ಖಾಸಗಿ ಬಸ್ ರೂಟ್ ನಂಬ್ರ 19 ನೋಂದಣಿ ಸಂಖ್ಯೆ KA19D3833 ನೇದರ ಬಸ್ಸಿನ ಚಾಲಕನು ತನ್ನ ಬಸ್ಸನ್ನು ದುಡುಕುತನ ದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪರಿಚಿತ ಸುಮಾರು 40-45 ವರ್ಷ ವಯಸ್ಸಿನ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ಗುದ್ದಿದ ರಭಸಕ್ಕೆ ಸದ್ರಿ ವ್ಯಕ್ತಿಯು ಕಾಂಕ್ರಿಟ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ತರದ ಗಾಯಗಳೊಂದಿಗೆ,ಅಸ್ವಸ್ಥರಾಗಿ,ಪ್ರಜ್ಞಾಹೀನರಾದವರನ್ನು ಬಸ್ಸಿನ ಚಾಲಕರಾದ ತೇಜ ಕುಮಾರ್ ರವರು ಜಿಲ್ಲಾ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಿದ್ದು,ಚಿಕಿತ್ಸೆಯಲ್ಲಿದ್ದ ಅಪರಿಚಿತ ಗಂಡಸು ಚಿಕಿತ್ಸೆಗೆ ಸ್ಪಂದಿಸದೆ, ದಿನಾಂಕ:01-11-2023 ರಂದು ರಾತ್ರಿ 09.11 ಗಂಟೆಗೆ ಮೃತ ಪಟ್ಟಿರುತ್ತಾರೆ. ಖಾಸಗಿ ಬಸ್ ರೂಟ್ ನಂಬ್ರ 19 ನೋಂದಣಿ ಸಂಖ್ಯೆ KA19D3833 ನೇದರ ಚಾಲಕನು ತನ್ನ ಬಸ್ಸನ್ನು ದುಡುಕುತನ ದಿಂದ ಚಲಾಯಿಸಿ,ರಸ್ತೆಯನ್ನು ದಾಟುತ್ತಿದ್ದ, ಸುಮಾರು 40-45 ವರ್ಷ ವಯಸ್ಸಿನ ಅಪರಿಚಿತ ಗಂಡಸಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸದ್ರಿ ವ್ಯಕ್ತಿಗೆ ತೀವ್ರ ತರದ ಗುದ್ದಿದ ಮತ್ತು ರಕ್ತ ಗಾಯಗಳುಂಟಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿರುತ್ತಾರೆ,ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 02-11-2023 06:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080