ಅಭಿಪ್ರಾಯ / ಸಲಹೆಗಳು

Crime Report in : Mulki PS

ಪಿರ್ಯಾದಿದಾರರು ದಿನಾಂಕ: 01-12-2023 ರಂದು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ 19-00 ಗಂಟೆಗೆ ಮಾಹಿತಿಯಂತೆ ಪಾವಂಜೆ ಗ್ರಾಮದ ಪಾವಂಜೆ ಬ್ರಿಡ್ಜ್ ಮೇಲೆ   19-15 ಗಂಟೆಗೆ ದಾಳಿ ನಡೆಸಿ ಬೀಡಿಯೊಂದಿಗೆ ಗಾಂಜಾವನ್ನು ತುಂಬಿಸಿ ಸೇವನೆ ಮಾಡಿ ನಶೆಯಲ್ಲಿ ಸದ್ರಿ ರಸ್ತೆಯಲ್ಲಿ ನಡೆದಾಡುವ ಮತ್ತು ವಾಹನದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಜೋರಾಗಿ ಮಾತನಾಡುತ್ತಾ, ಕಿರುಚಾಡುತ್ತಿದ್ದ ಆಪಾದಿತ ರೋಜರ್ ಡಿ ಕೋಸ್ತಾ ಎಂಬಾತನನ್ನು ವಶಕ್ಕೆ ಪಡೆದು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುತ್ತಾನೆಯೇ ಎಂಬ ಬಗ್ಗೆ ಖಚಿತ ಪಡಿಸುವ ಸಲುವಾಗಿ ಆತನನ್ನು ಮಂಗಳೂರು ಎ.ಜೆ. ಆಸ್ಪತ್ರೆಯ ವೈದ್ಯಾಧಿಕಾರಿ ಯವರಲ್ಲಿ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತ ರೋಜರ್ ಡಿ ಕೋಸ್ತಾ ಎಂಬಾತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಕೀಯ ಧೃಢಪತ್ರವನ್ನು ಈ ದಿನ ದಿನಾಂಕ  02-12-2023 ರಂದು ನೀಡಿದ್ದಂತೆ ಆಪಾದಿತ ರೋಜರ್ ಡಿ ಕೋಸ್ತಾ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ.

Mulki PS

ಪಿರ್ಯಾದಿದಾರರು ದಿನಾಂಕ: 01-12-2023 ರಂದು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ 19-40 ಗಂಟೆಗೆ ಬೀಡಿಯೊಂದಿಗೆ ಗಾಂಜಾವನ್ನು ತುಂಬಿಸಿ ಸೇವನೆ ಮಾಡಿ ನಶೆಯಲ್ಲಿ ಹಳೆಯಂಗಡಿ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಹಾಗೂ ಅಲ್ಲಿನ ಆಸುಪಾಸಿ ನಲ್ಲಿರುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಜೋರಾಗಿ ಮಾತನಾಡುತ್ತಾ, ಕಿರುಚಾಡುತ್ತಿದ್ದ ಆಪಾದಿತ ಮಹಮ್ಮದ್ ಮಾರ್ಪಿಜ್ ಎಂಬಾತನನ್ನು ವಶಕ್ಕೆ ಪಡೆದು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುತ್ತಾನೆಯೇ ಎಂಬ ಬಗ್ಗೆ ಖಚಿತ ಪಡಿಸುವ ಸಲುವಾಗಿ ಆತನನ್ನು ಮಂಗಳೂರು ಎ.ಜೆ. ಆಸ್ಪತ್ರೆಯ ವೈದ್ಯಾಧಿಕಾರಿ ಯವರಲ್ಲಿ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತ ಮಹಮ್ಮದ್ ಮಾರ್ಪಿಜ್ ಎಂಬಾತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಕೀಯ ಧೃಢಪತ್ರವನ್ನು ಈ ದಿನ ದಿನಾಂಕ  02-12-2023 ರಂದು ನೀಡಿದ್ದಂತೆ ಆಪಾದಿತ ಮಹಮ್ಮದ್ ಮಾರ್ಪಿಜ್ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ.

Moodabidre PS

ಪೊಲೀಸ್ ನಿರೀಕ್ಷಕರು ಸಂದೇಶ್ ಪಿ.ಜಿ ದಿನಾಂಕ: 02.12.2023 ರಂದು 08.30 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆಯ ಮಾರ್ಪಾಡಿ ಗ್ರಾಮದ ಸ್ವರಾಜ್ ಮೈದಾನದ ಬಳಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ದೊರೆತ 08.40 ಗಂಟೆಗೆ ಸ್ವರಾಜ್ ಮೈದಾನದ ಬಳಿಗೆ ತಲುಪಿದಾಗ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಚೀಟಿಯಲ್ಲಿ ಬರೆಯುತ್ತಾ ಇದು ಬಾಂಬೆ ಕಲ್ಯಾಣಿ ಮಟ್ಕಾ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಅಲ್ಲಿಗೆ ಹೋದಾಗ ಸಾರ್ವಜನಿಕರು ಓಡಿ ಹೋಗಿದ್ದು, ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ನಾಗರಾಜ್ ಪ್ರಾಯ: 60 ವರ್ಷ, ವಾಸ: ಮಧ್ವನಗರ, ಕೊಡವೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಎಂಬುದಾಗಿ ತಿಳಿಸಿದ್ದು ಆತನನ್ನು ಪ್ರಶ್ನಿಸಲಾಗಿ ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿರುವುದಾಗಿಯೂ ಸೊನ್ನೆ ಸಂಖ್ಯೆಯಿಂದ 99 ಸಂಖ್ಯೆಯವರೆಗೆ ಯಾವುದಾದರೂ ಒಂದು ರೂಪಾಯಿ ಹಾಕಿದಲ್ಲಿ ಸದ್ರಿ ನಂಬ್ರ ಡ್ರಾ ಆದಲ್ಲಿ ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದು, ಆರೋಪಿತನ ವಶದಲ್ಲಿದ್ದ ನಗದು ಹಣ ರೂ: 2120/- ನಗದು ಮಟ್ಕಾ ನಂಬರ್ ಬರೆದ ಚೀಟಿ-01 ಹಾಗೂ ಮಟ್ಕಾ ಬರೆಯಲು ಉಪಯೋಗಿಸಿದ ಒಂದು ಪೆನ್ನನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಆರೋಪಿತನನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Moodabidre PS    

ಪೊಲೀಸ್ ಉಪ ನಿರೀಕ್ಷಕರು ಸಿದ್ದಪ್ಪ ನರನೂರ 02.12.2023 ರಂದು 09.00 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆಯ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ಬಳಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ದೊರೆತ ಮಾಹಿತಿಯಂತೆ 09.15 ಗಂಟೆಗೆ ಸ್ವರಾಜ್ ಮೈದಾನದ ಬಳಿಗೆ ತಲುಪಿದಾಗ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಚೀಟಿಯಲ್ಲಿ ಬರೆಯುತ್ತಾ ಇದು ಬಾಂಬೆ ಕಲ್ಯಾಣಿ ಮಟ್ಕಾ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಅಲ್ಲಿಗೆ ಹೋದಾಗ ಸಾರ್ವಜನಿಕರು ಓಡಿ ಹೋಗಿದ್ದು, ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಕಿಶನ್ ಪ್ರಾಯ 21 ವರ್ಷ, ವಾಸ: ಶ್ರೀ ಲಕ್ಷ್ಮಿ ನಿವಾಸ, ನಿಟ್ಟೂರು, ಪುತ್ತೂರು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬುದಾಗಿ ತಿಳಿಸಿದ್ದು ಆತನನ್ನು ಪ್ರಶ್ನಿಸಲಾಗಿ ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿರುವುದಾಗಿಯೂ ಸೊನ್ನೆ ಸಂಖ್ಯೆಯಿಂದ 99 ಸಂಖ್ಯೆಯವರೆಗೆ ಯಾವುದಾದರೂ ಒಂದು ರೂಪಾಯಿ ಹಾಕಿದಲ್ಲಿ ಸದ್ರಿ ನಂಬ್ರ ಡ್ರಾ ಆದಲ್ಲಿ ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದು, ಆತನಿಗೆ ತನ್ನ ತಪ್ಪನ್ನು ತಿಳಿಸಿ ಆರೋಪಿತನ ವಶದಲ್ಲಿದ್ದ ನಗದು ಹಣ ರೂ: 2660/- ನಗದು ಮಟ್ಕಾ ನಂಬರ್ ಬರೆದ ಚೀಟಿ-01 ಹಾಗೂ ಮಟ್ಕಾ ಬರೆಯಲು ಉಪಯೋಗಿಸಿದ ಒಂದು ಪೆನ್ನನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಆರೋಪಿತನನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 04-12-2023 11:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080