ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

 

Mulki PS  

ದಿನಾಂಕ 02.02.2024 ರಂದು 18.30 ಗಂಟೆಯಿಂದ ದಿನಾಂಕ 03.02.2024 ರಂದು ಬೆಳಿಗ್ಗೆ 08.00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಿನ್ನಿಗೋಳಿಯಲ್ಲಿರುವ ಪಿರ್ಯಾದಿ JOCKIM JOHN SEQUERA ಇವರ ಬಾಬ್ತು ಡೋರ್ ನಂ 8-28 (6) ಅಂಗಡಿಯ ಶಟರ್ ಬಾಗಿಲಿನ ಬೀಗದ ಕೊಂಡಿಯನ್ನು ಯಾವುದೋ ಸಾಧನದಿಂದ ಬಲತ್ಕಾರವಾಗಿ ಮುರಿದು ಶಟರ್ ತೆರೆದು ಅಂಗಡಿಯೊಳಗೆ ಪ್ರವೇಶಿಸಿ ಹತ್ತು ಗೋಣಿಚೀಲಗಳಲ್ಲಿ ತಲಾ 65 ಕೆಜಿಯಂತೆ ತುಂಬಿಸಿಟ್ಟಿದ್ದ ಅಂದಾಜು 6.5 ಕ್ವಿಂಟಾಲ್ ಒಣ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಅಡಿಕೆಯ ಒಟ್ಟು ಅಂದಾಜು ಮೌಲ್ಯ ಸುಮಾರು 1.49 ಲಕ್ಷ ಆಗಬಹುದು ಎಂಬಿತ್ಯಾದಿ ಫಿರ್ಯಾದಿಯ ಸಾರಾಂಶ.

 

Mangalore East Traffic PS

ಪಿರ್ಯಾದಿ ABHISHEK SINGENAWAR ಇವರು  ದಿನಾಂಕ 03-02-2024 ರಂದು ಸಂಚಾರ ಪೂರ್ವ ಪೊಲೀಸ್ ಠಾಣಾ ಸರಹದ್ದಿನ ಕೆಪಿಟಿ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದಾಗ ಸಮಯ ಸುಮಾರು 11.15 ಗಂಟೆಗೆ ಕೆಪಿಟಿ ಕಡೆಯಿಂದ ಸರ್ಕ್ಯೂಟ್ ಹೌಸ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಂದಾರ ಹೊಟೇಲ್ ಎದುರು KA-19-AB-6173 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ಸಲೀಂ ಎಂಬಾತನು ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುವ ರೀತಿಯಲ್ಲಿ ನಿಲ್ಲಿಸಿರುವುದಾಗಿದೆ  ಎಂಬಿತ್ಯಾದಿ

 

Mangalore North PS

ಪ್ರಕರಣದ ಸಂಕ್ಷೀಪ್ತ ಸಾರಾಂಶವೆನೆಂದರೆ ಪಿರ್ಯಾದಿದಾರರಾದ ಅಖಿಲ್ ಅಡಪ ಎಂಬುವವರು ತನ್ನ ಬಾಬ್ತು ರಾಯಲ್ ಎನ್ ಪೀಲ್ಡ್ 350 ಸಿ.ಸಿ ಕ್ಲಾಸಿಕ್ ಬುಲೆಟ್ ಮೋಟಾರ್ ಸೈಕಲ್ ನೋಂದಣಿ  ನಂಬ್ರ KA-19 EX-5611 ನೇ ಗ್ರೇ ಬಣ್ಣದ ಮೋಟಾರ್ ಸೈಕಲ್ ವಾಹನವನ್ನು ಹೊಂದಿದ್ದು, ದಿನಾಂಕ 23/01/2024 ರಂದು ಮದ್ಯಾಹ್ನ 01.30 ಗಂಟೆಗೆ ಕೆಲಸದ ನಿಮಿತ್ತ ಮಂಗಳೂರಿನ ಮೈದಾನ 3 ನೇ ಅಡ್ಡ ರಸ್ತೆಯ ಟಿ.ಟಿ.ಆರ್ ಎಂಬ ಹೋಲ್ ಸೇಲ್ ಅಂಗಡಿಗೆ ತಮ್ಮ ಬಾಬ್ತು ಬುಲೆಟ್ ಮೋಟಾರ್ ಸೈಕಲ್ ನ್ನು ನವರತ್ನ ಕಾಂಪ್ಲೇಕ್ಸ್ ಅಂಗಡಿ ಎದುರಗಡೆ ಪಾರ್ಕ್ ಮಾಡಿ ತೆರಳಿ ಸಮಯ ಸುಮಾರು 02.20 ಗಂಟೆಗೆ  ಮೋಟಾರ್ ಸೈಕಲ್ ನಿಲ್ಲಿಸಿದ್ದ ಸ್ಥಳಕ್ಕೆ ಮರಳಿ ಬಂದು ನೋಡಿದಾಗ  ಸದ್ರಿ ಸ್ಥಳದಲ್ಲಿ ತಮ್ಮ ಬುಲೆಟ್ ಮೋಟಾರ್ ಸೈಕಲ್ ಇರದೇ ಇದ್ದು, ನಂತರ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಮೋಟಾರ್ ಸೈಕಲ್ ಸಿಗದೇ ಇದ್ದುದರಿಂದ ಪಿರ್ಯಾಧಿದಾರರ ಬಾಬ್ತು KA-19 EX-5611 ನೊಂದಣಿ ನಂಬ್ರದ  ರಾಯಲ್ ಎನ್ ಪೀಲ್ಡ್ 350 ಸಿ.ಸಿ ಕ್ಲಾಸಿಕ್ ಬುಲೆಟ್ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಈ ದೂರನ್ನು ಈ ದಿನ ತಡವಾಗಿ ನೀಡುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಳವಾದ  ಮೋಟಾರ್ ಸೈಕಲ್ ನ್ನು ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ .

ಕಳುವಾದ ಮೋಟಾರ್ ಸೈಕಲ್ ನ ವಿವರಗಳು ಈ ಕೆಳಗಿನಂತಿದೆ:

KA-19 EX-5611 ನೊಂದಣಿ ನಂಬ್ರದ  ರಾಯಲ್ ಎನ್ ಪೀಲ್ಡ್ 350 ಸಿ.ಸಿ ಕ್ಲಾಸಿಕ್ ಬುಲೆಟ್ ಮೋಟಾರ್

 ಸೈಕಲ್ ಮಾಡೆಲ್ 2018  ಗನ್ ಮೆಟಲ್ ಗ್ರೇ ಬಣ್ಣ,ಅಂದಾಜು ಮೌಲ್ಯ ರೂ. 95,000/-

ಇಂಜಿನ್ ನಂಬ್ರ: U3S5C1JA675799 ಚಾಸಿಸ್ ನಂಬ್ರ:ME3U3S5C1JA613568 ಆಗಿರುತ್ತದೆ.

 

Traffic North Police

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ Mohan  ಇವರು ನಾಲ್ಕು ದಿನಗಳ ಹಿಂದೆ ಅವರ ಕಂಪನಿಯ ಬಾಬ್ತು KA-21-B-3461 ನಂಬ್ರ ವಾಹನದಲ್ಲಿ ಉಡುಪಿ ಜಿಲ್ಲೆಗೆ ಲೈನ್ ಸೇಲ್ ಗೆ ಹೋದವರು  ಈ ದಿನ ದಿನಾಂಕ 03-02-2024 ರಂದು ವಾಪಾಸು ಸುಳ್ಯ ಕಡೆಗೆ ಬರುತ್ತಾ ಮದ್ಯಾಹ್ನ ಸಮಯ ಸುಮಾರು 1:50 ಗಂಟೆಗೆ ಕಾರ್ನಾಡು ಬೈಪಾಸ್ ಬಳಿ ತಲುಪಿದಾಗ ಪಿರ್ಯಾದಿದಾರರು ನೀರು ಕುಡಿಯುವರೇ ವಾಹನವನ್ನು ರಸ್ತೆಯ ಎಡಬದಿಗೆ ನಿಲ್ಲಿಸಿ ಪಾರ್ಕಿಂಗ್ ಆನ್ ಮಾಡಿ ವಾಹನದಲ್ಲಿ ಕುಳಿತು ನೀರು ಕುಡಿಯುತ್ತಿದ್ದ ಸಮಯ ಮುಲ್ಕಿ ಕಡೆಯಿಂದ ಹಳೆಯಂಗಡಿ ಕಡೆಗೆ KA-19-X-6343  ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಮಂಜುನಾಥ ಎಂಬುವರು,ಅನೀಲ ಭಾಗಣ್ಣ ವಾಲಿಕಾರ ಎಂಬುವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ನಿಲ್ಲಿಸಿದ ವಾಹನ ಹಿಂಭಾಗದ ಬಲಭಾಗಕ್ಕೆ ಡಿಕ್ಕಿಪಡಿಸಿ ರಸ್ತೆಗೆ ಬಿದ್ದಿದ್ದು, ಮೋಟಾರ್ ಸೈಕಲ್ ಸವಾರನಿಗೆ ತಲೆ ಹಿಂಬದಿ ಮತ್ತು ತಲೆಯ ಮೇಲೆ ರಕ್ತಗಾಯ, ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯವಾಗಿದ್ದು, ಮೋಟಾರ್ ಸೈಕಲ್ ಸಹಸವಾರನಿಗೆ ಎಡಕಾಲಿನ ಮೊಣಗಂಟಿಗೆ ಗುದ್ದಿದಗಾಯ, ತಲೆ ಹಿಂಬದಿ, ಮೂಗು, ಹಣೆ ಹತ್ತಿರ, ಎಡಕೈ ಭುಜದ ಹತ್ತಿರ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 05-02-2024 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080