ಅಭಿಪ್ರಾಯ / ಸಲಹೆಗಳು

Traffic North Police Station                                                

ಪಿರ್ಯಾದಿ Vinod Kumar  ನಿನ್ನೆ ದಿನ ದಿನಾಂಕ 02-03-2023 ರಂದು ತನ್ನ ವೈಯಕ್ತಿಕ ಕೆಲಸದ ಸಲುವಾಗಿ ಕೂಳೂರಿನಿಂದ ಕೊಟ್ಟಾರ ಚೌಕಿ ಕಡೆಗೆ ಸಾರ್ವಜನಿಕ ಸರ್ವಿಸ್ ರಸ್ತೆಯಲ್ಲಿ ತನ್ನ ಬಾಬ್ತು ಸ್ಕೂಟರನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ರಾತ್ರಿ ಸಮಯ ಸುಮಾರು 09:30 ಗಂಟೆಗೆ ಪಿರ್ಯಾದಿದಾರರ ಸ್ಕೂಟರಿನ ಮುಂದುಗಡೆ ಸುಮಾರು 20 ಮೀಟರ್ ಅಂತರದಲ್ಲಿ KA-19-HD-5980 ನಂಬ್ರದ ಸ್ಕೂಟರನ್ನು ಅದರ ಸವಾರನಾದ ವಿಕಾಸ್ ಕುಮಾರ್ ಎಂಬಾತನು ದುಡುಕುತನ ಮತ್ತು  ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಪ್ಲೈ ಓವರ್ ಮುಕ್ತಾಯವಾಗುವ ಸ್ಥಳದ ಬಳಿ ಸರ್ವಿಸ್ ರಸ್ತೆಯ ತೀರಾ ಬಲಬದಿಗಿರುವ ಕಾಂಕ್ರೀಟ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ಚರಂಡಿಗೆ ಬಿದ್ದ ಪರಿಣಾಮ ವಿಕಾಸ್ ಕುಮಾರನ ತಲೆಯ ಹಿಂಬಾಗದ ಬಲಬದಿಯಲ್ಲಿ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಮೇಲ್ಭಾಗದ ತುಟಿಯಲ್ಲಿ ರಕ್ತಗಾಯವಾಗಿ ಪ್ರಜ್ನಾಹೀನ ಸ್ಥಿತಿಯಲ್ಲಿದ್ದು ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore North PS                 

ಪಿರ್ಯಾದಿದಾರರು ದಿನಾಂಕ 01.03.2023 ರಂದು ತಮ್ಮ ತಂದೆಯಾದ ಮಧುಕರ್ ಉಳ್ಳಾಲ ರವರನ್ನು ಜ್ಯೋತಿ ಡಯಾಲಿಷಿಷ್ ಪಾಲಿ ಕ್ಲಿನಿಕ್ ಆಸ್ಪತ್ರೆಗೆ ಔಷದೋಪಚಾರಕ್ಕೆಂದು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಬಿಟ್ಟು ಪಿರ್ಯಾದಿದಾರರು ಮರಳಿ ಕೆಲಸಕ್ಕೆ ತೆರಳಿರುತ್ತಾರೆ, ಪಿರ್ಯಾದಿದಾರರು ಸಂಜೆ ಸುಮಾರು 05:20 ಗಂಟೆಗೆ ಪೋನ್ ಮುಖಾಂತರ ವಿಚಾರಿಸಿದ್ದು,ಅಲ್ಲಿ ವೈದ್ಯರು ಬರಲಿಲ್ಲವೆಂದು ತಿಳಿಸಿದ್ದು ನಂತರ 07.00 ಗಂಟೆಗೆ ಪೋನ್ ಮಾಡಿದಾಗ ಅವರ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ನಂತರ ಪಿರ್ಯಾದಿದಾರರು ಕೂಡಲೇ ಸುತ್ತ ಮುತ್ತಲಿನ ಪರಿಸರದಲ್ಲಿ ಹುಡುಕಾಡಿದಲ್ಲಿ ಮತ್ತು ತಮ್ಮ ಸಂಬಂಧಿಕರ ಮನೆಗೆ ಮೊಬೈಲ್ ಕರೆ ಮಾಡಿ  ಕೇಳಲಾಗಿ ಅವರು ಇಲ್ಲಿ ಬರಲಿಲ್ಲವೆಂದು ತಿಳಿಸಿರುತ್ತಾರೆ.ಅವರನ್ನು ಇಲ್ಲಿಯವರೆಗೂ ಹುಡುಕಾಡಿ ಪತ್ತೆಯಾಗಿರುವುದಿಲ್ಲವಾಗಿ ಪಿರ್ಯಾದಿದಾರರು ತಡವಾಗಿ ದೂರು ನೀಡುತ್ತಿದ್ದು ,ಕಾಣೆಯಾದ ಪಿರ್ಯಾದಿದಾರರ  ತಂದೆಯವರಾದ ಮಧುಕರ್ ಉಳ್ಳಾಲ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ ದೂರಿನ ಸಾರಾಂಶ.

ಕಾಣೆಯಾದ ಮಧುಕರ್ ಉಳ್ಳಾಲರವರ ಚಹರೆ ವಿವರಗಳು             

 ಹೆಸರುಃ ಮಧುಕರ್ ಉಳ್ಳಾಲ ,ಪ್ರಾಯಃ62ವರ್ಷ ,ತಂದೆ:ಅನಂತ

ವಿದ್ಯಾಭ್ಯಾಸ:ಐಟಿಐ

ಎತ್ತರಃ5.7ಇಂಚು,ಸಾಧಾರಣ ಶರೀರ ,ದುಂಡು ಮುಖ

ಭಾಷೆಃಹಿಂದಿ ಮಲೆಯಾಲಂ, ತುಳು ,ಕನ್ನಡ ,ಹಿಂದಿ ಮಾತನಾಡುತ್ತಾರೆ.

ಮೆರೂನ್ ಬಣ್ಣದ ಪೋಲೊ ಟಿ ಶರ್ಟ್ ,ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ.

Mangalore North PS                 

 ದಿನಾಂಕ: 02.03.2023 ರಂದು ಸಮಯ ರಾತ್ರಿ 20.00 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ಲೋಬಲ್ ರೆಸಿಡೆನ್ಸಿ  ರಾವ್ ಆಂಡ್ ರಾವ್ ಸರ್ಕಲ್ ಬಳಿ  ಮೊಹಮ್ಮದ್ ಶಾಕೀರ್ (26)  ವಿಳಾಸ:39 ಬಜಾಲ್ ಪಡ್ಪು ಎಸ್ ಎಸ್ ಎಸ್ ಮಂಜೀಲ್ ಜಲ್ಲಿಗುಡ್ಡೆ ಪೋಸ್ಟ್ ಮಂಗಳೂರು ಎಂಬಾತನು ಅಮಲಿನಲ್ಲಿದ್ದು ಗಾಂಜಾ ಸೇವನೆ ಮಾಡಿರುವುದಾಗಿ  ಒಪ್ಪಿಕೊಂಡಿರುತ್ತಾನೆ. ಸದ್ರಿಯವನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕನಾದಲ್ಲಿರುವ ಎ.ಜೆ ಆಸ್ಪತ್ರೆಗೆ ಕಳುಹಿಸಿ ವೈದ್ಯರ ಮುಂದೆ ಹಾಜರುಪಡಿಸಿದ್ದಲ್ಲಿ ವೈದ್ಯರು  ಪರೀಕ್ಷಿಸಿ ಮೊಹಮ್ಮದ್ ಶಾಕೀರ್ ಎಂಬಾತನು Amphetamine, Methamphetamine ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ವರದಿ ನೀಡಿದಂತೆ ಆರೋಪಿ ವಿರುದ್ದ  ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

Ullal PS

ದಿನಾಂಕ. 02-3-2023 ರಂದು 18-15 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕು ಕೋಟೆಕಾರು ಗ್ರಾಮದ ಮಾಡೂರು ಸಂತ ಅಲೋಶಿಯಸ್ ಕಾಲೇಜಿನ ಬಳಿ ಮಾಡೂರು ಕಡೆಯಿಂದ ಬೀರಿ ಕಡೆಗೆ ಕೆಎ-21-ಇಎಕ್ಸ್-3512 ನೇ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರು ಸೈಕಲಿನ ಹ್ಯಾಂಡಲಿಗೆ ಸಿಕ್ಕಿಸಿಕೊಂಡಿರುವ ಪ್ಲಾಸ್ಟಿಕ್ ಕಟ್ಟಿನಲ್ಲಿ ತುಂಬಿಸಿದ್ದ ಸುಮಾರು 120 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಆರೋಪಿಗಳಾದ ಸಾದತ್ ಆಲಿ ಮತ್ತು ಉಬೈದುಲ್ಲಾ @ ಉಬ್ಬಿ ಎಂಬವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪ್ರಕರಣದ ಫಿರ್ಯಾದಿದಾರರಾದ ಮಂಜುಳಾ.ಎಲ್. ಪಿಎಸ್ಐ ಉಳ್ಳಾಲ ಠಾಣೆ ರವರು ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಆರೋಪಿಗಳ ಪೈಕಿ ಸಾದತ್ ಆಲಿ ಎಂಬಾತನು ಸುಮಾರು 3 ತಿಂಗಳ ಹಿಂದೆ ಕೇರಳದ ಮಂಜೇಶ್ವರದ ಕೋಳಿಯೂರು ಎಂಬಲ್ಲಿಂದ ಕೆಎಲ್-14-ಪಿ-6817 ನೇ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರು ಸೈಕಲನ್ನು  ಕಳ್ಳತನ ಮಾಡಿ ಅದರ ನೈಜ್ಯ ನಂಬರ್ ಪ್ಲೇಟಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆಎ-21-ಇಎಕ್ಸ್-3512 ಎಂದು ಸುಳ್ಳು ನಂಬ್ರ ನಮೂದಿಸಿ ಈ ಮೋಟಾರು ಸೈಕಲನ್ನು ಇವರ ಸ್ವಂತಕ್ಕೆ ಬಳಸಿಕೊಂಡು ಇದೇ ಮೋಟಾರು ಸೈಕಲಿನಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮ ಸಾಗಾಟ ಮಾಡಿರುವುದಾಗಿದೆ. 120 ಗ್ರಾಂ ತೂಕದ ಮಾದಕ ವಸ್ತು ಗಾಂಜಾದ ಅಂದಾಜು ಮೌಲ್ಯ ರೂ.4,800/- ಮತ್ತು ಬಜಾಜ್ ಪಲ್ಸರ್ ಮೋಟಾರು ಸೈಕಲ್ ನ ಅಂದಾಜು ಮೌಲ್ಯ ರೂ.30,000/- ಆಗಬಹುದು. ಆರೋಪಿಗಳ ವಿರುದ್ಧ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

 

ಇತ್ತೀಚಿನ ನವೀಕರಣ​ : 03-03-2023 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080