ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS

ಪ್ರಕರಣದ ಸಾರಾಂಶವೆನೆಂದರೇ ಪಿರ್ಯಾದಿದಾರರು Prabhakara Rao ಎಂಬುವ ಫೇಸ್ ಬುಕ್ ಖಾತೆಯನ್ನು  ಹೊಂದಿದ್ದು,  ದಿನಾಂಕ 11-01-2024 ರಂದು ಫೇಸ್  ಬುಕ್  ವೀಕ್ಷಿಸುತ್ತಿರುವ  ಸಂಧರ್ಭ ಶೇರು  ಮಾರುಕಟ್ಟೆಯ  ಬಗ್ಗೆ  ಒಂದು  ಜಾಹೀರಾತು ಕಾಣಿಸಿದ್ದು,  ಪಿರ್ಯಾದಿದಾರರು ಅದರಲ್ಲಿದ್ದ   ಸಬ್ಸ್ಕ್ರೈಬ್  ಆಯ್ಕೆ ಮೇಲೆ ಕ್ಲಿಕ್  ಮಾಡಿದಾಗ ಅದರಲ್ಲಿ  ಒಂದು  ಲಿಂಕ್ ಮುಖೇನ Angel bok,Angel bg ಎಂಬ ಎರಡು ಆಪ್  ಡೌನ್ ಲೋಡ್  ಆಗಿರುತ್ತದೆ. ನಂತರದಲ್ಲಿ ಪಿರ್ಯಾದಿದಾರರು  ತಮ್ಮ ವಿಳಾಸದ  ಪುರಾವೆಗಳನ್ನು  ಅದರಲ್ಲಿ  ಖಾತ್ರಿಪಡಿಸಿದ  ನಂತರ B8 BlackRock Investtor Alliance  ಎಂಬುವ ವಾಟ್ಸಾಪ್  ಗ್ರೂಪ್ ಗೆ  ಪಿರ್ಯಾದಿದಾರರ  ಮೊಬೈಲ್ ನಂ. ಸೇರಿಸಿದ್ದು  ಅದರಲ್ಲಿ ಸುಮಾರು.1,50,200 ಜನ  ಸದಸ್ಯರಿರುತ್ತಾರೆ.ದಿನಾಂಕ: 18-01-2024 ರಂದು ಮೊದಲಿಗೆ  STOCK PULL UP, BLOCK TRADE, IPO  ಇವುಗಳಲ್ಲಿ ರೂ.50,000/- ಹಣವನ್ನು   ಹೂಡಿಕೆ ಮಾಡುವಂತೆ B22 Angel Broking customer Care ಎಂಬ ವಾಟ್ಸಾಪ್  ಗ್ರೂಪ್ ನಲ್ಲಿ ಅದಕ್ಕೆ  ಸಂಬಂಧಪಟ್ಟ IDFC  ಬ್ಯಾಂಕ್ ಖಾತೆನಂಬ್ರ 10164446523 ನೇದ್ದಕ್ಕೆ  ಹಣ ವರ್ಗಾಯಿಸುವಂತೆ  ತಿಳಿಸಿದ್ದು ,   ಅದರಂತೆ  ಪಿರ್ಯಾದಿದಾರರು ತಮ್ಮ ಎಕ್ಸಿಸ್  ಬ್ಯಾಂಕ್  , ಸುರತ್ಕಲ್  ಶಾಖೆ ಬ್ಯಾಂಕ್  ಖಾತೆ ರಿಂದ ರೂ.50,000/-ಹಣವನ್ನು  ವರ್ಗಾಯಿಸಿರುತ್ತಾರೆ.   ನಂತರದಲ್ಲಿ   ALPEX SOLAR  ಶೇರ್ ಗಳನ್ನು ಖರೀದಿಸುವಂತೆ  ತಿಳಿಸಿದ್ದು  ಅದರಂತೆ  ಪಿರ್ಯಾದಿದಾರರು ತಮ್ಮ  ಬ್ಯಾಂಕ್  ಮುಖೇನ ಅವರು  ನೀಡಿದ  ಬ್ಯಾಂಕ್  ಖಾತೆಗೆ  ಹಣ  ಸಂದಾಯ ಮಾಡಿರುತ್ತಾರೆ. ಇದೇ ರೀತಿ  ಬೇರೆ  ಬೇರೆ   ಶೇರ್ ಗಳನ್ನು  ಖರೀದಿಸುವಂತೆ ತಿಳಿಸಿದಂತೆ  ಪಿರ್ಯಾದಿದಾರರು  ಹಂತ ಹಂತವಾಗಿ  ರೂ. 72,31,017/-ಹಣವನ್ನು  ಅವರು  ನೀಡಿದ  ಬ್ಯಾಂಕ್  ಖಾತೆಗೆ  ವರ್ಗಾಯಿಸಿರುತ್ತಾರೆ. ನಂತರದಲ್ಲಿ  ಪಿರ್ಯಾದಿದಾರರು ತಮ್ಮ  ಶೇರ್ ಗಳನ್ನು  ಮಾರಾಟ ಮಾಡುವುದಾಗಿ  ತಿಳಿಸಿದಾಗ  ಅದಕ್ಕಾಗಿ  ಶೇ.10 ರಷ್ಟು ಹಣ ಟ್ಯಾಕ್ಸ್  ಕಟ್ಟುವಂತೆ ಹೇಳಿದ್ದು  ಪಿರ್ಯಾದಿದಾರರಿಗೆ  ಇದು ಒಂದು  ಮೋಸದ  ಜಾಲವೆಂದು  ತಿಳಿದು ಬಂದಿರುತ್ತದೆ.  ಈ  ರೀತಿ ಹಣ ವರ್ಗಾಯಿಸಿಕೊಂಡು  ಮೋಸ ಮಾಡಿರುವುದು ಎಂಬಿತ್ಯಾದಿಯಾಗಿದೆ

 

CEN Crime PS Mangaluru City

ಈ ದಿನ ದಿನಾಂಕ 03-03-2024 ರಂದು ಸೆನ್ ಕ್ರೈಂ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ ಕು.ಜ್ಯೋತಿ ಇವರು ಮಧ್ಯಾಹ್ನ ಸಮಯ ಮಂಗಳೂರು ನಗರದ ಕುದ್ರೋಳಿ ಮಂಡಿ ಬಳಿ ಸೈಯದ್ ಅಶ್ರಫ್ (35) ತಂದೆ: ಸೈಯದ್ ಖಲೀಮ್  ವಾಸ: 18-2-16/113(5) ಆಯೀಶಾ ಅಪಾರ್ಟ್ಮೆಂಟ್ ಸ್ಟೇರಕ್ ಕ್ರಾಸ್ ರೋಡ್ ಫಳ್ನೀರ್ ಮಂಗಳೂರು ಎಂಬಾತನನ್ನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಮಂಗಳೂರು ನಗರದ ಕದ್ರೋಳಿ ಮಂಡಿ ಬಳಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸಿವುದರಿಂದ ಮುಂದಿನ ಕ್ರಮದ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ತಪಾಸನೆಗೆ ಒಳಪಡಿಸಿದಾಗ ವೈದ್ಯಾಧಿಕಾರಿಗಳು  ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದಾಗಿ ನೀಡಿದ ದೃಢಪತ್ರದಂತೆ ಆರೋಪಿ ಸೈಯದ್ ಅಶ್ರಫ್ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

CEN Crime PS Mangaluru City  

ಈ ಪ್ರಕರಣದ ಸಾರಾಂಶವೇನೆಂದರೆ ಈ ದಿನ ದಿನಾಂಕ 03-03-2024 ರಂದು ಸೆನ್ ಕ್ರೈಂ ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ. ಸತೀಶ್  ಕೆ.ಎಸ್. ರವರಿಗೆ ಬಂದ ಮಾಹಿತಿಯಂತೆ ಮಂಗಳೂರು ನಗರದ ಕರಾವಳಿ ಉತ್ಸವ ಮೈದಾನದ ಗೇಟಿನ ಬಳಿ ವಿಚಾರಿಸಲಾಗಿ  ಸೈಯದ್ ಅಶ್ರಫ್(35) ತಂದೆ: ಸೈಯದ್ ಖಲೀಮ್ ವಾಸ: ಡೋರ್ ನಂ.18-2-16/113(5) ಆಯಿಶಾ ಅಪಾರ್ಟ್ಮೆಂಟ್, ಸ್ಟರಕ್ ಕ್ರಾಸ್ ರೋಡ್,ಫಳ್ನೀರ್,ಮಂಗಳೂರು-575001 ಎಂಬುದಾಗಿ ತಿಳಿಸಿದ್ದು, ಆತನನ್ನು   ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಮಂಗಳೂರು ನಗರದ ಕರಾವಳಿ ಉತ್ಸವ ಮೈದಾನದ ಗೇಟಿನ ಬಳಿ ನಡೆದಾಡುವಂತಹ ಸಾರ್ವಜನಿಕರಿಗೆ  ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವವರನ್ನು ಮುಂಧಿನ ಕ್ರಮದ ಬಗ್ಗೆ ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರದೊಂದಿಗೆ ಠಾಣೆಗೆ ತಂದು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Mangalore North PS

ಈ ದಿನ ದಿನಾಂಕ: 03-02-2024 ರಂದು  ಸಮಯ ಮಧ್ಯಾಹ್ನ 15:00 ಗಂಟೆಗೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿ.ಎಸ್.ಐ ಮಂಗಳೂರು ಉತ್ತರ ಪೊಲೀಸ್ ಠಾಣೆ  ಇವರು ಸಿಬ್ಬಂದಿವರೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಮಧ್ಯಾಹ್ನ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾವುಟಗುಡ್ಡೆ  ಬಳಿ ತಲುಪಿದಾಗ Rayan V, Age: 21 Year, S/o: Rahiman V, R/oValancheri House, Pappinipara PO, Alumkunnaa Village, Ernad, Manjeri, Kerala ಹಾಗೂ ಇನ್ನೊಬ್ಬನ ಹೆಸರು: Abhinand  Roy  Age: 22 Year, Roy N A, R/o Nirichan House, Mottomal PO, Kannavaram, Kannur, Kerala ಹಾಗೂ ಇಬ್ಬರ ಪ್ರಸ್ತುತ ವಾಸ: Abbas Rented House,  Near Kavitha kitchen, Shivabhag 2nd Cross Road, Kadri, Mangalore  ಎಂಬ ಇಬ್ಬರು ಅಮಲು ಪದಾರ್ಥ ಸೇವಿಸಿದ ಕಂಡು ಬಂದಿದ್ದು ಅವರ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು,  ಎ ಜೆ ಆಸ್ಪತ್ರೆಯ ವೈದ್ಯರು ಆವರನ್ನು ಪರೀಕ್ಷಿಸಿದಲ್ಲಿ ರಯಾನ್ ವಿ ಮತ್ತು ಅಭಿನಂದ ರೊಯ್ ಎಂಬುವರು Amphetamine Methamphetamine, Tetrahydracannabinoid, (Marijuana)  ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ. ಈ ಸದ್ರಿ ವ್ಯಕ್ತಿಗಳು ಮಾದಕ ದ್ರವ್ಯ ವ್ಯಸನ ಮಾಡಿರುವುದು ದೃಢಪಟ್ಟಿರುವುದರಿಂದ ಸದ್ರಿ ವ್ಯಕ್ತಿಗಳ ಮೇಲೆ  ಕಲಂ:27(ಬಿ) ಎನ್ ಡಿ ಪಿ ಎಸ್ ಕಾಯ್ದೆಯನ್ವಯ ಸೂಕ್ತ  ಕಾನೂನು ರೀತ್ಯಾ ಕ್ರಮ ಕೈಗೋಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Mulki PS

ಈ ಪಕ್ರರಣದ ಸಾರಾಂಶವೆನೆಂದರೆ ದಿನಾಂಕ 03-03-2024 ರಂದು ಬೆಳಿಗ್ಗೆ 11-00 ಗಂಟೆಗೆ  ಮುಲ್ಕಿ ತಾಲೂಕು ಹಳೆಯಂಗಡಿ ಗ್ರಾಮದ ಹಳೆಯಂಗಡಿ ಇಂದಿರಾನಗರ ಬಸ್ಸು ನಿಲ್ದಾಣದ ಬಳಿಯಲ್ಲಿ   ಸಾರ್ಜಜನಿಕ ಸ್ಥಳದಲ್ಲಿ ಶಂಶುದ್ದೀನ್, 49 ವರ್ಷ, ತಂದೆ: ಅಬ್ದುಲ್ ರಹಿಮಾನ್,  ವಾಸ: ಮನೆ ನಂಬ್ರ 2-178, ಇಂದಿರಾನಗರ, ಹಳೆಯಂಗಡಿ ಅಂಚೆ ಮತ್ತು ಗ್ರಾಮ  ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ ಸಂಗ್ರಹಿಸುತ್ತಿದ್ದ ನಗದು ಹಣ 1550/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ  ಚೀಟಿ- 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಳೆಯ ಪೆನ್ನು 01 ಇವುಗಳನ್ನು ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುವುದಾಗಿ  ಎಂಬಿತ್ಯಾದಿ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 03-03-2024 ರಂದು ಪಿರ್ಯಾದಿದಾರರಾದ ರಾಘವೇಂದ್ರ ರವರು ತನ್ನ ಮಿತ್ರನಾದ ಚೇತನ್ ರವರೊಂದಿಗೆ ತನ್ನ ತಮ್ಮನ ಬಾಬ್ತು KA 19 MJ 4125 ನಂಬ್ರದ ಮಾರುತಿ ಓಮಿನಿ ಕಾರಿನಲ್ಲಿ ಚೇತನ್ ರವರು ಚಾಲಕರಾಗಿದ್ದುಕೊಂಡು ಅನ್ಯ ಕೆಲಸದ ನಿಮಿತ್ತ ಇರುವೈಲಿನಿಂದ ಮೂಡಬಿದ್ರೆ ಕಡೆಗೆ ಬರುತ್ತಾ ಬೆಳಿಗ್ಗೆ 9:50 ಗಂಟೆ ಸಮಯಕ್ಕೆ ಶೇಡಿಗುರಿ ಎಂಬಲ್ಲಿಗೆ ತಲುಪುತಿದ್ದಂತೆ ಮೂಡಬಿದ್ರೆ ಕಡೆಯಿಂದ ಇರುವೈಲು ಕಡೆಗೆ KA 19 MP 0073 ನಂಬ್ರದ ಕಾರನ್ನು ಅದರ ಚಾಲಕಿ ವಿನೋಲ ಡಿಸೋಜಾ ಎಂಬಾಕೆಯು ಅತೀ ವೇಗ ಹಾಗು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಪಡಿಸಿದ್ದು, ಈ ಅಪಘಾತದ ಪರಿಣಾಮ ಎರಡೂ ಕಾರುಗಳು ಜಖಂಗೊಂಡು ಪಿರ್ಯಾದಿದಾರರಿಗೆ ತಲೆಯ ಮೇಲ್ಬಾಗಕ್ಕೆ ಗುದ್ದಿದ ಸಾಮಾನ್ಯ ಸ್ವರೂಪದ ಗಾಯ ಹಾಗು ಕಾರನ್ನು ಚಲಾಯಿಸುತಿದ್ದ ಚೇತನ್ ರವರ ಎರಡೂ ಕಾಲುಗಳಿಗೂ ಗಂಭೀರ ರೀತಿಯ ಮೂಳೆ ಮುರಿತದ ಗಾಯ ಮತ್ತು ದೇಹದ ಇತರ ಕಡೆಗಳಿಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು, ಚೇತನ್ ರವರನ್ನು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಕರೆದು ತಂದು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

 

 

 

ಇತ್ತೀಚಿನ ನವೀಕರಣ​ : 03-03-2024 09:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080