ಅಭಿಪ್ರಾಯ / ಸಲಹೆಗಳು

Mulki PS

ದಿನಾಂಕ:02-04-2023 ರಂದು 16:15 ಗಂಟೆಗೆ ಬಪ್ಪನಾಡು ಗ್ರಾಮದ ಕೊಳಚಿಕಂಬ್ಲ ನದಿ ದಡದಲ್ಲಿ ನಾಗರಾಜ ಎಂಬಾತನು ಗಾಂಜಾವನ್ನು ಹೊಗೆಬತ್ತಿಯೊಂದಿಗೆ ಸೇದುತ್ತಿರುವವನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಎ.ಜೆ ಆಸ್ಪತ್ರೆಗೆ  ಕಳುಹಿಸಿ ಕೊಡಲಾಗಿದ್ದು ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ಈ ದಿನ ದಿನಾಂಕ: 03-04-2023  ರಂದು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

Mangalore East PS

ಪಿರ್ಯಾದಿ ಜಾರ್ಜ್ ಮಾರ್ಟೀಸ್ ರಸ್ತೆಯಲ್ಲಿ  ಮನೆಯನ್ನು ಹೊಂದಿದ್ದು, ಅದರಲ್ಲಿರುವ ಒಂದನೇಯ ಮಹಡಿಯ  ಮನೆಯಲ್ಲಿ ಶಿಶಿರ ಎಂಬುವವರು 5 ತಿಂಗಳಿನಿಂದ ಬಾಡಿಗೆಗೆ ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ: 02-04-2023 ರಂದು ಸಂಜೆ ಬಾಡಿಗೆಗೆ ವಾಸವಿರುವ ಶಿಶಿರ್  ಎಂಬುವವನ ವಶದಲ್ಲಿ ಒಂದು ಪಿಸ್ತೂಲ್ ಇರುವುದಾಗಿ ಮಾಹಿತಿ ಬಂದಂತೆ . ಸ್ಪಷ್ಟಪಡಿಸುವ ಸಲುವಾಗಿ ದಿನಾಂಕ: 03-04-2023 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯ ಸಮಯಕ್ಕೆ  ಪಿರ್ಯಾದಿದಾರರು ಮನೆಯ ಮುಂದೆ ಹೊಸತಾಗಿ ಕಟ್ಟುತ್ತಿರುವ ಕಟ್ಟಡದಲ್ಲಿ ನಿಂತು ಗಮನಿಸುತ್ತಿರುವಾಗ ಶಿಶಿರ್ ನು ಮನೆಯ ಬಾಗಿಲಿನ ಬಳಿ ಬಂದು ನಿಂತು ಬಾಗಿಲನ್ನು ತೆಗೆಯುವ ಮುಂಚೆ ಆತನ ಸೊಂಟಕ್ಕೆ ಕೈ ಹಾಕಿ ಪಿಸ್ತೂಲ್ ನ್ನು ತೆಗೆದಿದ್ದನ್ನು ನೋಡಿ ಅದೊಂದು ಅಕ್ರಮ ಪಿಸ್ತೂಲ್ ಆಗಿರಬಹುದೆಂದು  ತಿಳಿದು ಠಾಣೆಗೆ ಬಂದು ಲಿಖಿತ ದೂರನ್ನು ನೀಡಿರುವುದಾಗಿದೆ.

Traffic South Police Station     

ಪಿರ್ಯಾದಿದಾರರಾದ ಮೊಹಮ್ಮದ್ ದಿಲ್ ಶಾದ್ (23 ವರ್ಷ) ರವರು ದಿನಾಂಕ:02-04-2023 ರಂದು ಅವರ ಸಂಬಂದಿಯಾದ ಆಯೂಬ್ ಮತ್ತು ಸನ್ನು ಮಿಯಾನ್ ಹಾಗೂ ಸ್ನೇಹಿತ ಬಿಜೈಕುಮಾರ್ ಸಿಂಗ್ ರವರೊಂದಿಗೆ ನೀರುಮಾರ್ಗ ಕಡೆಯಿಂದ ಮನೆಯಾದ ರಂಗಪದವು ಕಡೆಗೆ ಇಳಿಜಾರು ತಿರುವು ಡಾಮಾರು ರಸ್ತೆಯ ಬದಿಯಲ್ಲಿ  ಪಿರ್ಯಾದಿದಾರರು ಆಯೂಬ್,ಸನ್ನಿ ಮಿಯಾನ್ ಹಾಗೂ ಬಿಜೈ ಕುಮಾರ್ ಸಿಂಗ್ ರವರು ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 8-30 ಗಂಟೆಗೆ ನೀರುಮಾರ್ಗದ ಸ್ವಲ್ಪ ಮುಂದೆ ಇಳಿಜಾರು ತಿರುವು ಡಾಮಾರು ರಸ್ತೆಯಲ್ಲಿ ತಲುಪಿದಾಗ ಅವರ ಹಿಂದಿನಿಂದ ಅಂದರೆ ನೀರುಮಾರ್ಗದ ಕಡೆಯಿಂದ ರಂಗಪದವು ಕಡೆಗೆ ಹೋಗುತ್ತಿದ್ದ ಸ್ಕೂಟರ್ ನಂಬ್ರ: KA-19-HA-7989 ನೇದನ್ನು ಅದರ ಸವಾರ ಭರತ್ ರಾಜ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಸನ್ನು ಮಿಯಾನ್ ರವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಸನ್ನು ಮಿಯಾನ್ ಹಾಗೂ ಡಿಕ್ಕಿ ಪಡಿಸಿದ ಸ್ಕೂಟರ್ ಸವಾರ ರಸ್ತೆಗೆ ಬಿದ್ದು  ಸನ್ನು ಮಿಯಾನ್ ರವರ ತಲೆಯ ಎಡಬದಿಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಗಾಯ ಹಾಗೂ ಮುಖಕ್ಕೆ,ಕೈ ಕಾಲುಗಳಿಗೆ ಗುದ್ದಿದ ಗಾಯವಾಗಿದ್ದು ಡಿಕ್ಕಿ ಪಡಿಸಿದ ಸ್ಕೂಟರ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಸ್ನೇಹಿತರು ಸೇರಿ ಆಂಬ್ಯುಲೇನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದಲ್ಲಿ ಸನ್ನು ಮಿಯಾನ್ ರವರನ್ನು ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Traffic North Police Station                   

ಪಿರ್ಯಾದಿದಾರರು ದಿನಾಂಕ 01-04-2023 ರಂದು ವಿದ್ಯಾನಗರ ಮಸೀದಿಗೆ ನಡೆದುಕೊಂಡು ಹೋಗುವಾಗ ಸಂಜೆ ಸಮಯ ಸುಮಾರು  7:00 ಗಂಟೆಗೆ ಮಸೀದಿ ಕಡೆಯಿಂದ KA-21-U-9846 ನಂಬ್ರದ ಸ್ಕೂಟರನ್ನು ಅದರ ಸವಾರನಾದ ಬಿಲಾಲ್ ಜೀನ್ ಎಂಬಾತನು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕುಳ ವಿದ್ಯಾನಗರ ಮಸೀದಿ ರಸ್ತೆ ಬಳಿ ತರಲುಪುತ್ತಿದ್ದಂತೆ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಅಲ್ಲೆ ಪಕ್ಕದ ಆಳ ಜಾಗಕ್ಕೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈಯ ಕೋಲು ಕೈಗೆ ಮೂಳೆ ಮುರಿತದ ಹಾಗೂ ತರಚಿದ ರಕ್ತ ಗಾಯವಾಗಿದ್ದು,ಸೊಂಟದ ಎಡಭಾಗಕ್ಕೆ ಗುದ್ದಿದ ಹಾಗೂ ಶರೀರದ ಅಲ್ಲಲ್ಲಿ ತರಚಿದ ರೀತಿಯ ಗಾಯ ಆಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore South PS       

ದಿನಾಂಕ 01-04-2023 ರಂದು ಬೆಳಿಗ್ಗೆ 05-30 ಗಂಟೆಗೆ ಪಿರ್ಯಾದುದಾರರು ಮನೆಯಿಂದ ಹೊರಟು ಮಂಗಳೂರು ನಗರದ ದಕ್ಷಿಣ ದಕ್ಕೆಗೆ ಬೆಳಿಗ್ಗೆ ಸಮಯ 06-00 ಗಂಟೆಗೆ ದಕ್ಕೆಗೆ ತಲುಪಿ ದಕ್ಕೆಯಲ್ಲಿ ಮೀನುಗಳನ್ನು ಖರೀದಿಸುತ್ತಾ ಯಾಂತ್ರಿಕೃತ ಮೀನುಗಾರಿಕಾ ಸಹಕಾರ ಸಂಘದ ಬಳಿ ತಲುಪಿದಾಗ ಓರ್ವ ವ್ಯಕ್ತಿ ಪಿರ್ಯಾದುದಾರರ ಕೈಯಲ್ಲಿದ್ದ ಪ್ಲಾಸ್ಟೀಕ್ ಬ್ಯಾಗ್ ನ್ನು ಬಲತ್ಕಾರವಾಗಿ ಎಳೆದನು. ಪಿರ್ಯಾದುದಾರರು ಗಟ್ಟಿಯಾಗಿ ಹಿಡಿದುಕೊಂಡು ಹಿಂದಿರುಗಿದಾಗ ಆತನು ಪಿರ್ಯಾದುದಾರರ ಕೈಯಲ್ಲಿದ್ದ ಪ್ಲಾಸ್ಟೀಕ್ ಬ್ಯಾಗ್ ನ್ನು ಬಲತ್ಕಾರವಾಗಿ ಕಿತ್ತುಕೊಂಡು ಓಡಿ ಹೋದನು. ಸದ್ರಿ ಪ್ಲಾಸ್ಟೀಕ್ ಬ್ಯಾಗ್ ನೊಳಗಡೆ ಕಂದು ಬಣ್ಣದ ಪರ್ಸ್ ಇದ್ದು ಅದರಲ್ಲಿ ಮೀನು ಖರೀದಿಸಲು ತಂದ ನಗದು ಹಣ ರೂಪಾಯಿ 1,50,000/- ಇತ್ತು. ಅಲ್ಲದೇ ಪರ್ಸ್ ನೊಳಗಡೆ ಪಾಸ್ ಪೋರ್ಟ್ ಸೈಜ್ ನ ಕಲ್ಲರ್ ಪೋಟೊ, ಮತ್ತು ಒಂದು ಸಣ್ಣ ಪೋನ್ ನಂಬ್ರ ಬರೆದ ನೋಟ್ ಬುಕ್ ಕೂಡ ಇತ್ತು. ಆತನು ಪಿರ್ಯಾದುದಾರರ ಕೈಯಿಂದ ಬಲತ್ಕಾರವಾಗಿ ನಗದು ಹಣವಿದ್ದ ಬ್ಯಾಗ್ ಎಳೆದುಕೊಂಡು ಹೋಗುವಾಗ ಬೆಳಿಗ್ಗೆ ಸಮಯ ಸುಮಾರು 06-45 ಗಂಟೆಯಿಂದ 06-50 ಗಂಟೆಯಾಗಿರಬಹುದು. ಘಟನೆ ಸಮಯ ಆತನನ್ನು ಪಿರ್ಯಾದುದಾರರು ಸರಿಯಾಗಿ ನೋಡಿದ್ದು ಆತನು ಸುಮಾರು 30 ವರ್ಷ ಪ್ರಾಯದವನಾಗಿದ್ದು ಗಡ್ಡ ಬಿಟ್ಟಿರುತ್ತಾನೆ. ಆತನು ಕೆಂಪು ಬಣ್ಣದ ಟೀ-ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ ಎಂಬಿತ್ಯಾದಿಯಾಗಿದೆ.

        

Moodabidre PS

 ಪಿರ್ಯಾದಿದಾರರು ಪೈಯರ್ & ಸೇಪ್ಟಿ  ಟ್ರೈನರ್ ಅಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರು ಯಾವುದಾದರೂ ಉದ್ಯೋಗಕ್ಕೆ ಹೊರ ದೇಶಕ್ಕೆ ಹೋಗುವರೆ ಅಲೋಚಿಸಿದ್ದು, ಹಾಗೆ ಕಳೆದ ಜನವರಿ ತಿಂಗಳಲ್ಲಿ ಹೊರ ದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಪಿರ್ಯಾದುದಾರರ ಗೆಳೆಯ ತಮ್ಮ  ನೆರೆಯ ವಾಸಿ ರಾಘವೆಂದ್ರ ಎಂಬವರಲ್ಲಿ ಮಾತನಾಡುವ ವೇಳೆ ಅವರು ತಾನು 15 ದಿನಗಳ ಹಿಂದೆ ಹೊರ ದೇಶದಿಂದ ಬಂದಿರುವುದಾಗಿ. ಮುಂದಕ್ಕೆ ತಾನು ಬೇರೆ ದೇಶವಾದ ಯುರೋಪ್ ರಾಷ್ಟ್ರಕ್ಕೆ ಹೋಗುತ್ತಿದ್ದು, ಈ ಬಗ್ಗೆ ತನಗೆ ಸುದೀರ್ ರಾವ್ ಎಂಬವರು ವೀಸಾ ಮಾಡಿಸಿ ಎಲ್ಲಾ ವ್ಯವಸ್ಥೆ ಮಾಡಿ ಕೊಡುವುದಾಗಿ ತಿಳಿಸಿದಲ್ಲದೆ ನೀವು ಕೂಡ ಹೊರ ದೇಶಕ್ಕೆ ಹೋಗುವುದಾದರೆ ಅವರನ್ನು ಸಂಪರ್ಕಿಸ ಬಹುದಾಗಿ ಹೇಳಿ ಪಿರ್ಯಾದುದಾರರಿಗೆ ಸುದೀರ್ ರವರ 7204451380 ನಂಬ್ರವನ್ನು ನೀಡಿದರು. ಹಾಗೆ ಪಿರ್ಯಾದುದಾರರು ಅವರನ್ನು ಸಂಪರ್ಕಿಸಿದಾಗ ಸುದೀರ್ ರವರು ತನ್ನಲ್ಲಿ ಕೂಡಲೆ ನೀವು ರೂ: 1,25,000/- ವನ್ನು ತನ್ನ ಖಾತೆಗೆ ಜಮೆ ಮಾಡಿ ಮೆಡಿಕಲ್ ಮಾಡುವಂತೆ ತಿಳಿಸಿದ್ದು, ದಿನಾಂಕ: 25-01-2023 ರಂದು ಸುದೀರ್ ರವರು ಮೂಡಬಿದಿರೆ ನಿಶ್ಮಿತ ಸರ್ಕಲ್ ಬಳಿ ಸಿಕ್ಕಿ ಪಿರ್ಯಾದಿದಾರರ ಪಾಸ್‌ಪೋರ್ಟ್, ತನ್ನ ದಾಖಲಾತಿಗಳನ್ನು ಪಡೆದುಕೊಂಡಿರುತ್ತಾರೆ. ಅದೇ ದಿನ ಪಿರ್ಯಾದುದಾರರು ಅವರ ಕರ್ನಾಟಕ ಬ್ಯಾಂಕ್ ಮಾರತಹಳ್ಳಿ ಬ್ರಾಂಚ್ ಖಾತೆ ನಂ: 1302500102118501 ನೇದಕ್ಕೆ ತನ್ನ ಬ್ಯಾಂಕ್ ಅಫ್ ಇಂಡಿಯ ಮಂಗಳೂರು ಬ್ರಾಂಚ್ ನ ಖಾತೆ ನಂ:  ನೇದರಿಂದ ರೂ 60,000/- ವರ್ಗಾವಣೆ, ಪಿರ್ಯಾದಿದಾರರು ಮೂಡುಬಿದಿರೆ ಕರ್ನಾಟಕ ಬ್ಯಾಂಕ್ ATM ಯಂತ್ರದ ಮುಖಾಂತರ ರೂ:32,900/- ಹಾಗೂ ತನ್ನ ಆಕ್ಸಿಸ್ ಬ್ಯಾಂಕ್ ಮಂಗಳೂರು ಬ್ರಾಂಚ್ ನ ಖಾತೆ ನಂ:  ನೇದರಿಂದ ರೂ 30,000/- ವರ್ಗಾವಣೆ, ಹೀಗೆ ಒಟ್ಟು ರೂ: 1,22,900/- ಯನ್ನು ಜಮೆ ಮಾಡಿರುತ್ತಾರೆ. ನಂತರ ತಾನು ಸುದೀರ್ ರಾವ್ ಹೇಳಿದಂತೆ ದಿನಾಂಕ: 26-01-2023 ರಂದು ಬೆಂಗಳೂರಿಗೆ ಹೋಗಿ H S R ಲೇ ಔಟ್ ನಲ್ಲಿರುವ ಗ್ರೀನ್ ವೀವ್ ಮೆಡಿಕಲ್ ಸೆಂಟರ್ ನಲ್ಲಿ ತನ್ನ ಮೆಡಿಕಲ್ ಮಾಡಿಸಿರುತ್ತಾರೆ. ನಂತರ ತನ್ನ ಮೆಡಿಕಲ್ ರಿಪೋರ್ಟನ್ನು ಸುದೀರ್ ರಾವ್ ತನ್ನಲ್ಲಿ manoharsecltd@gmail.com ಎಡ್ರಾಸ್ ನ್ನು ನೀಡಿ ಅದಕ್ಕೆ ಮೇಲ್ ಮಾಡುವಂತೆ ತಿಳಿಸಿದ್ದರು. ಅಂತೆಯೆ ಪಿರ್ಯಾದುದಾರರು ಮೇಲ್ ಮಾಡಿದ್ದು. ಉಳಿದ ಹಣ ಹಂತ ಹಂತವಾಗಿ ನೀಡುವಂತೆ ತಿಳಿಸಿದ್ದು ಅದರಂತೆ ಪಿರ್ಯಾದುದಾರರು ಆಕ್ಸಿಸ್ ಬ್ಯಾಂಕ್ ನಿಂದ ದಿನಾಂಕ: 14-02-2023 ರಂದು ರೂ 68,000/- ದಿನಾಂಕ: 4-03-2023 ರಂದು ರೂ : 35,000/- ದಿನಾಂಕ:20-3-2023 ರಂದು ರೂ 10,400/- ಹಣವನ್ನು ಮಾರ್ತಹಳ್ಳಿ ಕರ್ನಾಟಕ ಬ್ಬ್ಯಾಂಕ್ ಖಾತೆ ನಂ: 1302500102118501 ನೇದಕ್ಕೆ ವಾವತಿಸಿರುತ್ತಾರೆ. ಸುಧೀರನು ಪಿರ್ಯಾದುದಾರರಿಂದ ಒಟ್ಟು 2,36,300 ರೂ ಹಣ ಪಡೆದಿರುತ್ತಾನೆ. ಅದೇ ದಿನ ಸುದೀರ್ ರಾವ್ ಹೇಳಿದಂತೆ ಪಿರ್ಯಾದುದಾರರು ತನ್ನ ಸ್ನೇಹಿತ ರಾಘವೇಂದ್ರ, ಮತ್ತು ಶಂಕರ್ ರವರುಗಳು ಮುಂಬೈಗೆ ತೆರಳಿ ವೀಸಾ ಕ್ಕೆ ಕಾಯುತ್ತಿದ್ದು, ಸಂಜೆ ಸುಮಾರು 5.೦೦ ಗಂಟೆಯ ಬಳಿಕ ಸುದೀರ್ ರಾವ್ ರವರ ಮೊಬೈಲ್ ಪಿರ್ಯಾದುದಾರರ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ನಂತರ 2 ದಿನಗಳ ಕಾಲ ತಾವು ಮುಂಬೈಯಲ್ಲಿ ಇದ್ದು, ದಿನಾಂಕ: 22-3-2023 ರಂದು ಸುದೀರನು ಪಿರ್ಯಾದುದಾರರಿಗೆ ತಮ್ಮ ವೀಸಾ ಕ್ಯಾನ್ಸಲ್ ಆಗಿದೆ. ನಿಮ್ಮ ಪಾಸ್ ಪೋರ್ಟ್ ನ್ನು ಕಳುಹಿಸಿ ಕೊಡುತ್ತೇನೆ ಎಂದು ವಾಯ್ಸ್ ಮೇಸೆಜ್ ಕಳುಹಿಸಿರುತ್ತಾರೆ. ತಮಗೆ ಸುದೀರನ ಪರಿಚಯ ಆಲಂಗಾರಿನ ಸುನಿತಾ ಮತ್ತು ಸೌಜನ್ ರವರಿಂದ ಆಗಿರುವುದಾಗಿದೆ. ಸುದೀರನು ಪಿರ್ಯಾದುದಾರರಿಗೆ ಅಲ್ಲದೆ ಶಂಕರ್ ರವರಿಗೆ ಇದೇ ರೀತಿ ರೂ 1,91,300/-, ರಾಘವೇಂದ್ರ ರವರರಿಗೆ 2,35,200/- ಅಲ್ಲದೆ ಅಲಂಗಾರಿನ ಸುನೀತಾರವರಿಗೆ ರೂ 1,70,000/- ಮತ್ತು ಸೌಜನ್ ರವರಿಗೆ ರೂ 1,20,000/- ಮತ್ತು ಪ್ರಾಂಕ್ ಮ್ಯಾಕ್ಟನ್ ರೋಡ್ರಿಗಸ್ ರವರಿಗೆ ರೂ 2,00,000/- ಮತ್ತು ಅರ್ವಿನ್ ರಾಯ್ ಡಿ” ಸೋಜ ರವರಿಗೆ ರೂ 2,00,000/- ಹಾಗೂ ಇತರ ಹಲವಾರು ಜನರಿಗೆ ವೀಸಾ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವೀಸಾ ಕೊಡಿಸದೆ ವಂಚನೆ ಮಾಡಿರುತ್ತಾರೆ. ಆದುದರಿಂದ ಪಿರ್ಯಾದುದಾರಿಗೆ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಸುದೀರ್ ರಾವ್ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-08-2023 12:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080