ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police

 ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 03-04-2024 ರಂದು ಪಿರ್ಯಾದಿ Sathish ಇವರ   ಪರಿಚಯದ ಶ್ರೀಮತಿ ಲಕ್ಷ್ಮೀ (69) ಎಂಬವರು ಪಣಂಬೂರು ಕಡೆಯಿಂದ ಬಸ್ಸಿನಲ್ಲಿ ಬಂದವರು ಬಸ್ಸಿನಿಂದ ಇಳಿದು ಹೊಸಬೆಟ್ಟು ಜಂಕ್ಷನ್ ನಿಂದ ಸುರತ್ಕಲ್ ಕಡೆಗೆ ಹಾದು ಹೋಗಿರುವ ರಸ್ತೆಯನ್ನು ದಾಟಿ ಬಳಿಕ ಮದ್ಯದ ಡಿವೈಡರ್ ಹತ್ತಿ ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಿಂದ ಹೊಸಬೆಟ್ಟು ಕಡೆಗೆ ಹಾದು ಹೋಗಿರುವ ರಸ್ತೆಯನ್ನು ದಾಟುತ್ತಾ ರಸ್ತೆಯ ಮಧ್ಯ ಭಾಗದಿಂದ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಸಂಜೆ ಸುಮಾರು 19:05 ಗಂಟೆಗೆ ಸುರತ್ಕಲ್ ಕಡೆಯಿಂದ ಕಪ್ಪು ಬಣ್ಣದ Apachi ಮಾದರಿಯ ಮೋಟಾರ್ ಸೈಕಲ್ ನಂಬ್ರ KA-21-EA-5838 ನೇಯದನ್ನು ಅದರ ಸವಾರ ಪ್ರಸನ್ನ ಕಾರಂತ್ ಎಂಬವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಲಕ್ಷ್ಮೀರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಲಕ್ಷ್ಮಿರವರು ರಸ್ತೆಗೆ ಎಸೆಯಲ್ಪಟ್ಟು ಅವರ ಬಲ ಕಣ್ಣಿನ ಬಳಿ ತರಚಿದ ಮತ್ತು ಹಣೆಗೆ ಗುದ್ದಿದ ಗಾಯವಾಗಿದ್ದು ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಹೊರಬಂದಿದ್ದು ಅವರು ಮಾತನಾಡುತ್ತಿರಲಿಲ್ಲ ಅಲ್ಲದೇ ಅವರ ಎಡ ಕಾಲಿನ ಮೂಳೆ ಮುರಿತವಾದಂತೆ ಕಂಡು ಬರುತ್ತಿದ್ದು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಲಕ್ಷ್ಮಿರವರನ್ನು ಪರೀಕ್ಷಿಸಿ ಆಸ್ಪತ್ರೆಗೆ ಕರೆತರುವ ದಾರಿ ಮದ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ

 

Bajpe PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಕೆ. ಯುವರಾಜ್ ಆಚಾರ್ಯ ಎಂಬವರಿಗೆ 2 ಮನೆಗಳಿದ್ದು, ಪ್ರಸ್ತುತ D NO 8/138/44 ಮಂಜುಗಿರಿ ಶ್ರೀನಿವಾಸ ಮಲ್ಯ ಬಡಾವಣೆ, ಶಕ್ತಿ ನಗರ ರಸ್ತೆ, ಕುಲಶೇಖರ ಅಂಚೆ, ಮಂಗಳೂರು ಎಂಬಲ್ಲಿ ವಾಸವಾಗಿದ್ದು, ವಾರದ ರಜಾದಿನಗಳಲ್ಲಿ ಕೃಷಿ ಭೂಮಿ ಇರುವ ಮನೆಯಾದ 1-288 ಮತ್ತು 1-289 ತಿಪ್ಲಬೆಟ್ಟು, ಉರ್ಕಿ ಕಿರಿಯ ಪ್ರಾಥಮಿಕ ಶಾಲೆ ಎದುರು, ಬಡಗ ಎಡಪದವು ಅಂಚೆ, ಮಂಗಳೂರು ತಾಲೂಕು ಎಂಬಲ್ಲಿಗೆ ಬಂದು ಹೋಗುತ್ತಿದ್ದರು. ಪಿರ್ಯಾದಿದಾರರು ಕಳೆದ 15 ದಿನಗಳಲ್ಲಿ ಕೃಷಿಭೂಮಿ ಇರುವ ಮನೆಗೆ ಭೇಟಿ ನೀಡಿರುವುದಿಲ್ಲ. ಪಿರ್ಯಾದಿದಾರರು ದಿನಾಂಕ 01.04.2024 ರಂದು ಬೆಳಿಗ್ಗೆ ಕೃಷಿ ಸ್ಥಳದ ಮನೆಗೆ ಭೇಟಿ ಕೊಟ್ಟಾಗ ಅಲ್ಲಿರುವ ಎರಡು ಮನೆಗಳ ಬೀಗಗಳನ್ನು ಒಡೆದು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿರುತ್ತದೆ. 1) ಎಲೆಕ್ಟ್ರಿಕಲ್ ಸಿಲ್ಲಿಂಗ್ ಪ್ಯಾನುಗಳು-10, 2) Mescom (KEB) ಮೀಟರ್ ಗಳು - 2, 3)ಬೋರ್ ವೆಲ್ ಪಂಪಿನ ಮೇನ್ ಸ್ವಿಚ್-01, 4) ಬೋರ್ ವೆಲ್ ಪಂಪಿನ ಸ್ಟಾಟರ್ -1, 5) ಬೋರ್ ವೆಲ್ ಪಂಪಿನ U.G ಕೇಬಲ್ – 400 ಮೀಟರ್, 6) ಬಾಟ್ ರೂಮ್ ಗಳ ಫೈಬರ್ ಡೋರ್ -11, 7) ಮನೆಯ ಮೇನ್ ಸ್ವಿಚ್ (D.P) -1, 8) ಸರ್ವಿಸ್ ವೈರ್ – 10 ಮೀಟರ್, 9) 1 ¼ PVC ಪೈಪ್ (20 Ft) – 20 ಮೀಟರ್, 10) ಕಿಟಕಿಗಳ ಮರದ ಫ್ರೇಮ್ ಗ್ಲಾಸ್ ಸಹಿತ – 02, 11) ಮನೆಯ ಕೋಪರ್ ವೈರ್ 1/18 – 12, 3/20 -6, 12) ಎಲೆಕ್ಟ್ರಿಕ್ ಸ್ವಿಚ್ ಗಳು -120, 13) Fan Regulater – 10. ಈ ಎಲ್ಲಾ ಸೊತ್ತುಗಳು ಕಳ್ಳತನವಾಗಿದ್ದು, ಕಳುವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,40,000/- ರೂಪಾಯಿಗಳು ಆಗಬಹುದು. ಕಳ್ಳತನ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

Ullal PS

ಸಾರಾಂಶವೇನೆಂದರೆ ದಿನಾಂಕ: 03-04-2024 ರಂದು ಪಿರ್ಯಾದಿದಾರರಾದ ಶೀತಲ್ ಅಲಗೂರು PSI ಹಾಗೂ ಸಿಬ್ಬಂದಿರವರೊಂದಿಗೆ ಉಳ್ಳಾಲ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ   ಪೆರ್ಮಾನ್ನೂರು ಗ್ರಾಮದ ಸೈಂಟ್ ಸೆಬಾಸ್ಟಿಯನ್ ಚರ್ಚ ಬಳಿಯ  ಸಾರ್ವಜನಿಕ  ಸ್ಥಳಕ್ಕೆ ತಲುಪಿದಾಗ ಇಸ್ಮಾಯಿಲ್ ಸುಹೈಲ್ ಪ್ರಾಯ: 28 ವರ್ಷ, ತಂದೆ: ಅಝೀಜ, ವಾಸ: ಡೋರ್ ನಂಬ್ರ #2-7/15 ಕೋಡಿ ಮಸೀದಿ ಬಳಿ ಕೋಡಿ ಉಳ್ಳಾಲ ಗ್ರಾಮ ಉಳ್ಳಾಲ ತಾಲ್ಲೂಕು  ನಿಷೇದಿತ ಮಾದಕ ವಸ್ತು ಸೇವನೆ ಮಾಡಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದವನನ್ನು ಕಂಡು ಮುಂದಿನ ಕ್ರಮದ ಬಗ್ಗೆ , ದೇರಳಕಟ್ಟೆ ಕಣಚೂರು ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿದಲ್ಲಿ  ಇಸ್ಮಾಯಿಲ್ ಸುಹೈಲ್ ನು ಮಾದಕ ವಸ್ತು ‘TETRAHYDROCANNOBINOL(THC)’ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿರುವುದರಿಂದ ಇಸ್ಮಾಯಿಲ್ ಸುಹೈಲ್ ನ ವಿರುದ್ಧ ಪ್ರಕರಣ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 05-04-2024 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080