ಅಭಿಪ್ರಾಯ / ಸಲಹೆಗಳು

Mangalore East Traffic PS

ಪಿರ್ಯಾದಿ ಮೊಹಮ್ಮದ ಹಾಷೀಮ್, ಪ್ರಾಯ: 17 ವರ್ಷ ಎಂಬುವರು ದಿನಾಂಕ 01/05/2023 ರಂದು ತನ್ನ ತಂದೆ ಹುಸೈನರ್ ರವರೊಂದಿಗೆ ಅವರ ಮಾಲಿಕತ್ವದ ಬಾಬ್ತು ನೊಂದಣಿ ಸಂಖ್ಯೆ KA-21-U-5438ನೇ ದ್ವಿಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತುಕೊಂಡು ತೊಕ್ಕೊಟ್ಟು ಕಡೆಯಿಂದ ಹೊರಟು ಮೀನು ಖರೀದಿಗಾಗಿ ಮಂಗಳಾದೇವಿ ರಸ್ತೆ ಮೂಲಕ ಬಂದರು ಕಡೆಗೆ ಹೋಗುತ್ತಾ ಮಧ್ಯಾಹ್ನ ಸಮಯ ಸುಮಾರು 3:30 ಗಂಟೆಗೆ ಎಮ್ಮೆಕೆರೆ ಕ್ರಾಸ್ ಬಳಿ ತಲುಪುತ್ತಿದ್ದಂತೆ KA-19-MC-4167 ನೇ ನಂಬ್ರದ ಕಾರನ್ನು ಅದರ ಚಾಲಕ ಪಾಂಡೇಶ್ವರ ಕಡೆಯಿಂದ ಚಲಾಯಿಸಿಕೊಂಡು ಬಂದು ಎಮ್ಮೆಕೆರೆ ಕ್ರಾಸ್ ಬಳಿ ತೆರೆದ ಡಿವೈಡರ್ ಮೂಲಕ ಬೋಳಾರ ಕಡೆಗೆ ಹೋಗಲು ಯಾವುದೇ ಸೂಚನೆ ನೀಡದೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಕಾರನ್ನು ಒಮ್ಮೆಲೆ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರ ತಂದೆ ಸವಾರಿ ಮಾಡಿಕೊಂಡಿದ್ದ ಮೊಟಾರು ಸೈಕಲ್ ಮುಂಭಾಗಕ್ಕೆ ಢಿಕ್ಕಿ ಪಡಿಸಿ ಕಾರನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಂದೆ ಮೊಟಾರು ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ತಂದೆಗೆ ತಲೆಯ ಬಲಭಾಗಕ್ಕೆ ಚರ್ಮ ಹರಿದ ರಕ್ತ ಗಾಯ ಹಾಗೂ ಗುದ್ದಿದ ರೀತಿಯ ಗಾಯ, ಬಲಗೈ ಕೋಲು ಕೈಗೆ ಚರ್ಮ ಹರಿದ ಗಾಯ, ಎಡಗೈ ರಟ್ಟೆಗೆ ತರಚಿದ ಗಾಯ ಹಾಗೂ ಎಡಗೈಯ ಹೆಬ್ಬರಳಿಗೆ ಮೂಳೆ ಬಿರುಕು ಬಿಟ್ಟಂತಹ ಗಂಭೀರ ಸ್ವರೂಪದ ಗಾಯವಾಗಿದ್ದು, ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬಿತ್ಯಾದಿ.

 Traffic North Police Station

ಪಿರ್ಯಾದಿ Anwar Hussain ದಿನಾಂಕ 02-05-2023 ರಂದು ತನ್ನ ಬಾಬ್ತು KA-19-HA-4256 ನಂಬ್ರದ ಸ್ಕೂಟರಿನಲ್ಲಿ ಅವರ ತಂಗಿ ಶಹನಾಜಾ(34 ವರ್ಷ) ಮತ್ತು ತಂಗಿಯ ಮಗಳು ಫಿದಾ ಫಾತಿಮಾ(08 ವರ್ಷ) ರವರವನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಕಾವೂರು- ಕುಂಟಿಕಾನ ರಸ್ತೆಯಲ್ಲಿ AJ ಆಸ್ಪತ್ರೆಕಡೆಗೆ ತೆರಳುತ್ತಾ ಸಮಯ ಸುಮಾರು ರಾತ್ರಿ 9:30 ಗಂಟೆಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ, ಕುಂಟಿಕಾನ ಕಡೆಯಿಂದ KL-60-U-3214 ನಂಬ್ರದ ಕಾರನ್ನು ಅದರ ಚಾಲಕನಾದ ಪ್ರವೀಣ್ ಎಂಬಾತನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಎದುರುಗಡೆಯಿಂದ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ  ತಂಗಿ ಶಹನಾಜ್ ಮತ್ತು ಅವರ ಮಗಳು ಫಿದಾ ಫಾತಿಮಾರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕಾಲಿನ ತೊಡೆಗೆ ಹಾಗೂ ಪಾದಕ್ಕೆ ಮೂಳೆ ಮುರಿತದ ಗಾಯ, ಶಹನಾಜ್ ರವರ ಬಲಕಾಲಿನ ತೊಡೆಯ ಮೂಳೆ ಮುರಿತದ ಗಾಯ ಹಾಗೂ ಫಿದಾ ಫಾತಿಮಾರವರ ಹೊಟ್ಟೆಗೆ ಗುದ್ದಿದ ರೀತಿಯ ಒಳಗಾಯವಾಗಿದ್ದು, ಗಾಯಾಳುಗಳು AJ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಅಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

                                   

Mangalore East Traffic PS              

ಪಿರ್ಯಾದಿ ಶ್ರೀ ಧರ್ ಕುಲಾಲ್, ಪ್ರಾಯ: 37 ವರ್ಷ ಎಂಬುವರು ನಿನ್ನೆ ದಿನ ದಿನಾಂಕ 01/05/2023 ರಂದು ರಾತ್ರಿ ತಮ್ಮ ಆಟೋ ರಿಕ್ಷಾ ನೊಂದಣಿ ಸಂಖ್ಯೆ: KA19AD6540 ನೇಯದನ್ನು ಚಲಾಯಿಸಿಕೊಂಡು ಬೆಂದೂರ್ವೆಲ್ ಕಡೆಯಿಂದ ಸೇಂಟ್ ಆಗ್ನೇಸ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಆಗ್ನೇಸ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ರಾತ್ರಿ ಸುಮಾರು 8-15 ಗಂಟೆಗೆ ಹೈ ಸ್ಪಿರಿಟ್ ಲಿಕ್ಕರ್ ಶಾಪ್ ಎದುರು ತಲುಪುತ್ತಿದ್ದಂತೆ ಅವರ ಹಿಂಭಾಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಕಾರು ನೊಂದಣಿ ಸಂಖ್ಯೆ: KA-19-MK-9877 ನೇಯದನ್ನು ಅದರ ಚಾಲಕ ಲೋಕೇಶ್ ಎಂಬುವರು ನಿಯಂತ್ರಿಸದೇ ದುಡುಕುತನ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಢಿಕ್ಕಿಪಡಿಸಿದ ಪರಿಣಾಮ  ಆಟೋ ರಿಕ್ಷಾ ಮುಂದಕ್ಕೆ ನುಗ್ಗಿದಂತಾಗಿ ತನ್ನ ಮುಂಭಾಗದಲ್ಲಿ ಹಂಝಾ ಜೆ ಎಂಬುವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-EX-0217 ನೇಯದಕ್ಕೆ ಢಿಕ್ಕಿಯಾಗಿದ್ದರಿಂದ ಹಂಝಾ ಜೆ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಅವರ ಎಡ ಕಾಲಿನ ಮೊಣಕಾಲು ಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು ತೇಜಸ್ವಿನಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಹಂಝ ರವರ ಎಡ ಮೊಣಕಾಲು ಗಂಟಿನಲ್ಲಿ ಮೂಳೆ ಬಿರುಕು ಬಿಟ್ಟ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ, ಆದುದರಿಂದ ಈ ರಸ್ತೆ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

CEN Crime PS Mangaluru City                                                       

ಪಿರ್ಯಾದಿ ದಿನಾಂಕ 22-04-2023 ರಂದು ಆನ್ ಲೈನ್ ನಲ್ಲಿ ರುವಾಗ ಫೇಸ್ ಬುಕ್ ನಲ್ಲಿ  ಸೌಂಡ ಸ್ಪೀಕರ ಜಾಹಿರಾತು ನೋಡಿ ಅದನ್ನು ಆರ್ಡರ್ ಮಾಡಿರುತ್ತಾರೆ ನಂತರ ದಿನಾಂಕ 29-04-2023 ರಂದು ಯಾರೋ ಅಪರಿಚಿತ ವ್ಯಕ್ತಿಯು 7029263985 ನೇದರ ನಂಬ್ರನಿಂದ ಪಿರ್ಯಾದಿದಾರರ ನೇದಕ್ಕೆ ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿಯು Blue Dart ಕೋರಿಯರ್ ನಿಂದ ಮಾತನಾಡುತ್ತಿರುವುದಾಗಿ ತಿಳಸಿ ನೀವು ಸೌಂಡ ಸ್ಪೀಕರನ್ನು  ಆರ್ಡರ್ ಮಾಡಿದ್ದು ಅದರ ಕೋರಿಯರ್ ಜಾರ್ಜ ರೂ.5/- ಆಗುವುದಾಗಿ ಆ ಹಣವನ್ನು ಪಾವತಿಸುವಂತೆ  ತಿಳಿಸಿ ಆ ವ್ಯಕ್ತಿಯು  ಪಿರ್ಯಾದಿದಾರರ ಮೊಬೈಲ್ ಗೆ ಲಿಂಕ್ ಕಳುಹಿಸಿ ಸದ್ರಿ ಲಿಂಕ್ ನ್ನು 9717465555 ಈ ನಂಬ್ರಗೆ ಕಳಿಸುವಂತೆ ತಿಳಿಸಿರುತ್ತಾನೆ ಅದರಂತೆ ಪಿರ್ಯಾದಿದಾರರು ಸದ್ರಿ ಲಿಂಕ್ ನ್ನು ಆ ನಂಬ್ರಗೆ ಕಳುಹಿಸಿರುತ್ತಾರೆ.ಅದಾದ ಬಳಿಕ ಮೊಬೈಲ್ ಗೆ OTP ಬಂದಿರುತ್ತದೆ. ಆ OTP ಅಪರಿಚಿತ ವ್ಯಕ್ತಿಗೆ ತಿಳಿಸಿರುತ್ತಾರೆ. ಕೂಡಲೇ ರೂ.5/- ಹಣ ಕಡಿತಗೊಂಡಿರುತ್ತದೆ.ಬಳಿಕ ದಿನಾಂಕ 01-05-2023 ಮತ್ತೆ ಪಿರ್ಯಾದಿದಾರರ ಖಾತೆ ನಂಬ್ರ  ನೇದರಿಂದ ರೂ. 99,999/- ಹಣ ವರ್ಗಾವಣೆಯಾದ ಬಗ್ಗೆ ಸಂದೇಶ ಬಂದಿರುತ್ತದೆ ಈ ರೀತಿಯಾಗಿ  ಯಾರೋ ಅಪರಿಚಿತ ವ್ಯಕ್ತಿಯು ಪಿರ್ಯಾದಾರರಿಂದ OTP ಪಡೆದುಕೊಂಡು ಒಟ್ಟು ರೂ.1,00,004/- ಹಣವನ್ನು ವರ್ಗಾವಣೆಮಾಡಿಕೊಂಡು ಮೋಸಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ 

Mangalore East PS

ಪಿರ್ಯಾದಿ ಅಶೋಕ್ ಕುಮಾರ್ ರೈ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿಯಾಗಿದ್ದು, ಆಪಾಧಿತರಾದ  ಶಿವಶಂಕರ್ ಶೆಟ್ಟಿ ಮತ್ತು ವಿ.ಜೆ. ಅಜಯ್ ಅಂಚನ್ ರವರು ಮಾನಹಾನಿಕರ ವರದಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿ 25 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, ಸದರಿ ಹಣವನ್ನು ನೀಡದೆ ಇರುವ ಕಾರಣಕ್ಕೆ ಮಾನಹಾನಿಕರ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿ ಬೇಡಿಕೆ ಈಡೇರಿಸದಿದ್ದಲ್ಲಿ ಇನ್ನಷ್ಟು ವಿಡಿಯೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದು, ದಿನಾಂಕ: 28-04-2023 ರಂದು ಆರೋಪಿ ವಿ.ಜೆ. ಅಜಯ್ ಅಂಚನ್ ರವರ ಮಾಲಕತ್ವದಲ್ಲಿ ಇರುವ ಕುಡ್ಲ ರಾಂಪೇಜ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಸದರಿ ವಿಡಿಯೋದಲ್ಲಿ 2ನೇ ಆರೋಪಿ ವಿ.ಜೆ. ಅಜಯ್ ಅಂಚನ್ ಒಂದನೇ ಅರೋಪಿ ಶಿವಶಂಕರ್ ಶೆಟ್ಟಿರವರನ್ನು ಸಂದರ್ಶಿಸುವ ರೀತಿಯಲ್ಲಿ ತೋರಿಸಿ ಜನರಿಗೆ ಮೋಸಮಾಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡುತ್ತಾ ಪ್ರಸಾರ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ

 

Konaje PS       

ಪಿರ್ಯಾದಿ VISHNU KAMATH ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಮಂಗಳೂರು ಇದರ  ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುತ್ತಾರೆ.  ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕು ಹರೇಕಳ  ಗ್ರಾಮದ ಹರೇಕಳ ಎಂಬಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯು ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಮಂಜೂರುಗೊಂಡಿದ್ದು, ಕಾಮಗಾರಿ ನಡೆದು,  ಕಾಮಗಾರಿಯು ದಿನಾಂಕ: 31.03.2023 ರಂದು ಪೂರ್ಣಗೊಂಡಿರುತ್ತದೆ. ದಿನಾಂಕ: 29.03.2023 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ರಿ ಆಳವಡಿಸಿರುವ  ಗೇಟುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿರುವುದಿಲ್ಲ. ಅದರೆ ದಿನಾಂಕ: 04.04.2023 ರಂದು  ಬೆಳಿಗ್ಗೆ 07-45 ಗಂಟೆಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI)   ಸಂಘಟನೆ ಹಾಗೂ  ಸಾರ್ವಜನಿಕರು ಇಲಾಖಾ ವತಿಯಿಂದ ಯಾವುದೇ ಅನುಮತಿ ಪಡೆಯದೇ ಸಮಾನ ಉದ್ದೇಶದಿಂದ ಆಕ್ರಮಕೂಟ ಸೇರಿ  ಮಂಗಳೂರು ತಾಲೂಕು ಹರೇಕಳ ಗ್ರಾಮದ ಹರೇಕಳ ಎಂಬಲ್ಲಿ  ಸೇತುವೆಗೆ ಆಳವಡಿಸಲಾಗಿರುವ ತಾತ್ಕಾಲಿಕ ಗೇಟುಗಳನ್ನು  ಆಕ್ರಮವಾಗಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿರುತ್ತಾರೆ.  ಆದರೂ ಸಹ ಗುತ್ತಿಗೆದಾರರು ಗೇಟುಗಳನ್ನು ಹಾಕಿ ವಾಹನ ಸಂಚಾರವನ್ನು ನಿಯಂತ್ರಣದಲ್ಲಿರಿಸಲಾಗಿರುತ್ತದೆ. ತದನಂತರ ಅದೇ ದಿನ  ರಾತ್ರಿ 9-15 ಗಂಟೆ ಸಮಯಕ್ಕೆ ಹಾಕಿದ್ದ ತಾತ್ಕಾಲಿಕ ಗೇಟುಗಳನ್ನು ಸಂಪೂರ್ಣವಾಗಿ ಯಾವುದೇ ಅನುಮತಿಯಿಲ್ಲದೇ ಆಕ್ರಮವಾಗಿ  ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿರುತ್ತಾರೆ.  ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI)   ಸಂಘಟನೆ ಹಾಗೂ ಸಾರ್ವಜನಿಕರು  ಸಮಾನ ಉದ್ದೇಶದಿಂದ ಆಕ್ರಮಕೂಟ ಸೇರಿ  ಸೇತುವೆಗೆ ಆಳವಡಿಸಿರುವ ತಾತ್ಕಲಿಕ ಗೇಟುಗಳನ್ನು ಆಕ್ರಮವಾಗಿ  ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿರುವ  ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

 

 

ಇತ್ತೀಚಿನ ನವೀಕರಣ​ : 21-08-2023 12:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080