ಅಭಿಪ್ರಾಯ / ಸಲಹೆಗಳು

Crime Reported in Mulki PS

ದಿನಾಂಕ 03-06-2023 ರಂದು ಮಧ್ಯಾಹ್ನ 12-30 ಗಂಟೆಗೆ ಮುಲ್ಕಿ ತಾಲೂಕು ಹಳೆಯಂಗಡಿ ಗ್ರಾಮದ ಹಳೆಯಂಗಡಿ ಬಸ್ಸು ನಿಲ್ದಾಣದ ಸಾರ್ಜಜನಿಕ ಸ್ಥಳದಲ್ಲಿ ಆರೋಪಿ ಆನಂದ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿ.ಎಸ್.ಐ ಮುಲ್ಕಿ ಶ್ರೀ ಮಾರುತಿ ಪಿ ರವರು ತಮ್ಮ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ  ಸಂಗ್ರಹಿಸುತ್ತಿದ್ದ ನಗದು ಹಣ 665/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಾಳೆ 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಪೆನ್ನು 01 ಇವುಗಳನ್ನು ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದು ಸ್ವೀಕರಿಸಿ ಪ್ರಕರಣ ದಾಖಾಲಿಸಿರುವುದು ಎಂಬಿತ್ಯಾದಿ.

Traffic North Police Station          

ಪಿರ್ಯಾದಿ Rukiya Banu ದಿನಾಂಕ 03-06-2023 ರಂದು ತನ್ನ ಅಗತ್ಯ ಕೆಲಸಕ್ಕೆ ತೆರಳುವ ಸಲುವಾಗಿ ಕಾಟಿಪಳ್ಳ 5 ನೇ ಬ್ಲಾಕ್ ನಲ್ಲಿರುವ ರೂಬಿ ಟ್ರಾವೆಲ್ಸ್ ಕಛೇರಿಯಿಂದ KA-19-AD-8618 ನಂಬ್ರದ ALTO ಕಾರನ್ನು ಬಾಡಿಗೆಗೆ ಪಡೆದುಕೊಂಡು ತನ್ನ ಮಗಳಾದ AYESHA LEEN ಳನ್ನು ಸಹಪ್ರಯಾಣಿಕೆಯಾಗಿ ಕಾರಿನ ಎದುರಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ರಾ.ಹೆ-66 ರಲ್ಲಿ ಸುರತ್ಕಲ್-NITK ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ ಮುಕ್ಕ ರೆಡ್ ರಾಕ್ ಸಮೀಪ ತಲುಪುತ್ತಿದ್ದಂತೆ, ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂದಿನಿಂದ ಅಂದರೆ NITK  ಟೋಲ್ ಗೇಟ್ ಕಡೆಯಿಂದ KL-11-BF 5007 ನಂಬ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕನಾದ SAHL K S ಎಂಬಾತನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಬಲಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಕಾರಿನ ಹಿಂದಿನ ಬಲಭಾಗಕ್ಕೆ ಡಿಕ್ಕಿ ಪಡಿಸಿಕೊಂಡು ಮುಂದಕ್ಕೆ ತಳ್ಳಿಕೊಂಡು ಹೋಗಿದ್ದು ಈ ಅಪಘಾತದ ಪರಿಣಾಮ ಕಾರಿನ ಹಿಂದಿನ ಬಂಪರಿನ ಬಲಬದಿಯ ಕಾರ್ನರ್, ಬಲಬದಿಯ ಹಿಂದಿನ Quarter Panel, ಬಲಬದಿಯ ಎರಡೂ ಡೋರ್ ಗಳು, ಬಲಬದಿಯ ರನ್ನಿಂಗ್ ಬೋರ್ಡ್,ಬಲಬದಿಯ Side View Mirror,ಬಲಬದಿಯ ಇಂಡಿಕೇಟರ್ ಹಾಗೂ ಬಲಬದಿಯ ಎರಡೂ ಡೋರ್ ಗಳ ಮಧ್ಯದ Pillar ಜಖಂ ಗೊಂಡಿದ್ದು ಪಿರ್ಯಾದಿದಾರರಿಗೂ ಹಾಗೂ ಅವರ ಮಗಳಿಗೂ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ ಎಂಬಿತ್ಯಾದಿ.

 

Traffic South Police Station

ದಿನಾಂಕ  02-06-2023 ರಂದು  ಪಿರ್ಯಾದಿದಾರರಾದ ಅಬ್ದುಲ್ ಮತೀನ್ ಎಂಬುವರು   ಕಲ್ಲಾಪು ಯುನಿಟಿ ಹಾಲ್  ಬಳಿ  ಬುರ್ಖ ಅಂಗಡಿ ಬಳಿ  ನಿಂತುಕೊಂಡಿರುವಾಗ  ಪ್ರಾಯದ  ವ್ಯಕ್ತಿಯೊಬ್ಬ ಕೈಯಲ್ಲಿ  ಚೀಲ  ಹಿಡಿದು  ಮಂಗಳೂರು ಕಡೆಯಿಂದ ತಲಪಾಡಿ  ಕಡೆಗೆ ಹಾದು  ಹೋಗಿರುವ ರಾ. ಹೆ  66 ರಸ್ತೆಯನ್ನು  ಕಲ್ಲಾಪು  ಯನಿಟಿ ಹಾಲ್  ಕಡೆಯಿಂದ  ರಸ್ತೆಯ ಬಲ ಭಾಗದ ರಸ್ತೆ ಮಧ್ಯೆದ ಡಿವೈಡರ್  ಕಡೆಗೆ ದಾಟುತ್ತಿರುವಾಗ ಸಮಯ  ಸುಮಾರು  ರಾತ್ರಿ  07 : 30 ಗಂಟೆಗೆ  ಮಂಗಳೂರು  ಕಡೆಯಿಂದ  ಟೋಯಿಂಗ್  ವಾಹನ  ನಂಬ್ರ   KA-19-AD-9311  ನೇದನ್ನು  ಅದರ  ಚಾಲಕ  ಶಿವರಾಜ್ ಆಳ್ವ ಎಂಬಾತನು ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು  ಬಂದು  ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿ  ಹೊಡೆದ  ಪರಿಣಾಮ ಆ ವ್ಯಕ್ತಿ  ಡಾಮಾರು  ರಸ್ತೆಗೆ  ಬಿದ್ದು   ಅವರ  ತಲೆಗೆ ಗಂಭೀರ  ಗಾಯ ಹಾಗೂ ಕೈಕಾಲು ಗಳಿಗೆ ಗಾಯವಾಗಿದ್ದು ಆತನನ್ನು  ಅಲ್ಲಿ  ಸೇರಿದ  ಜನರು ಮತ್ತು ಅಪಘಾತ ಪಡಿಸಿದ  ಟೋಯಿಂಗ್  ವಾಹನ  ಚಾಲಕ ಆಟೋರಿಕ್ಷಾವೊಂದರಲ್ಲಿ  ಸಹರಾ ಆಸ್ಪತ್ರೆ ಕರೆದುಕೊಂಡು  ಹೋಗಿ  ಅಲ್ಲಿ  ಪ್ರಥಮ  ಚಿಕಿತ್ಸೆ  ಕೊಡಿಸಿ  ನಂತರ  ಹೆಚ್ಚಿನ  ಚಿಕಿತ್ಸೆ  ಬಗ್ಗೆ   ಮಂಗಳೂರು  ವೆನ್ಲಾಕ್  ಆಸ್ಪತ್ರೆಗೆ  ಕರೆದುಕೊಂಡು  ಹೋಗಿ  ದಾಖಲು  ಮಾಡಿರುತ್ತಾರೆ.ಅಲ್ಲಿ  ಚಿಕಿತ್ಸೆಯಲ್ಲಿದ್ದ  ಅಪರಿಚಿತ ವ್ಯಕ್ತಿ ಚಿಕಿತ್ಸೆ  ಫಲಕಾರಿಯಾಗದೇ ಸಮಯ  ಸುಮಾರು ರಾತ್ರಿ 10:45 ಗಂಟೆಗೆ  ಮೃತಪಟ್ಟಿರುತ್ತಾರೆ    ಎಂಬಿತ್ಯಾದಿ .

Kavoor PS

 ದಿನಾಂಕ: 03/06/2023 ರಂದು ಪಿರ್ಯಾದಿ REVANASIDDAPPA  ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಬೆಳಿಗ್ಗೆ 09.00 ಗಂಟೆಗೆ ಮೂಡುಶೆಡ್ಡೆ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದಾನೆ, ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಜಾಗಕ್ಕೆ ಬೆಳಿಗ್ಗೆ 09.30 ಗಂಟೆಗೆ ತಲುಪಿ ಪ್ರಜ್ಚಲ್ (24)ಎಂಬಾತನು ಮಾದಕ ವಸ್ತು  ಗಾಂಜಾ ಸೇವನೆ ಮಾಡಿ ಿಇರುವವನನ್ನು ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು, ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರು ಆತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಢಪತ್ರ ನೀಡಿರುತ್ತಾರೆ ಎಂಬಿತ್ಯಾದಿ.

Moodabidre PS

ದಿನಾಂಕ: 01-06-2023 ರಂದು ರಾತ್ರಿ 8.00 ಗಂಟೆಗೆ ಪಿರ್ಯಾದಿ Rathnakara Hegde Katte

 ತಮ್ಮ ಮೋಟಾರು ಸೈಕಲನ್ನು ಎಂದಿನಂತೆ ಮನೆಯ ಕಂಪೌಂಡ್ ನೊಳಗೆ ನಿಲ್ಲಿಸಿದ್ದು ಅದೇ ದಿನ ರಾತ್ರಿ ದಿನಾಂಕ: 02-06-2023 ರಂದು ರಾತ್ರಿ ಸುಮಾರು 2.25 ಗಂಟೆಗೆ  ಪಿರ್ಯಾದಿದಾರರಿಗೆ ಎಚ್ಚರವಾಗಿ ಹೊರಗೆ ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ಮೋಟಾರು ಸೈಕಲ್ ಇರುವುದಿಲ್ಲ. ಪಿರ್ಯಾದಿದಾರರು ಮರು ದಿನ ಬೆಳಿಗ್ಗೆ ಹಾಗೂ ಈ ದಿನದವರೆಗೆ ಆಸುಪಾಸಿನಲ್ಲಿ ಹಾಗೂ ಸ್ನೇಹಿತರು ಮತ್ತು ಬಂಧುಗಳಲ್ಲಿ ವಿಚಾರಿಸಿ ಹುಡುಕಾಡಿದ್ದು ಈವರೆಗೂ ಪತ್ತೆಯಾಗದೇ ಇದ್ದು, ಯಾರೋ ಕಳ್ಳರು ಪಿರ್ಯಾದಿದಾರರ ಮೋಟಾರು ಸೈಕಲನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಇದರ ಅಂದಾಜು ಮೌಲ್ಯ 75,000/- ರೂ ಆಗಬವುದು ಎಂಬಿತ್ಯಾದಿ. ಕಳುವಾದ ಮೋಟಾರು ಸೈಕಲ್ ವಿವರ ಈ ಕೆಳಗಿನಂತಿದೆ.

1.ಮೋಟಾರು ಸೈಕಲ್ ನಂಬ್ರ- KA-19-HJ-9785

 1. ಕಂಪೆನಿ- ಹೊಂಡಾ ಶೈನ್
 2. ಚಾರ್ಸಿ ನಂಬ್ರ- ME4JC85EANG010096
 3. ಎಂಜಿನ್ ನಂಬ್ರ- JC85EG2013355
 4. ಮಾದರಿ- 2022
 5. ಬಣ್ಣ- ಬೂದ ಬಣ್ಣ

Surathkal PS

ಪಿರ್ಯಾದಿ Smt Reshma Rajesh Poojary ಆರೋಪಿ ಉಮನಾಥ @ ಉಮನಾಥ ಭಂಡಾರಿಯವರ  ಬಾಬ್ತು ಇಡ್ಯಾ ಗ್ರಾಮದ ಸರ್ವೆ ನಂ 167/8A1BP1 ರಲ್ಲಿರುವ “ಸುಮಾ ಟರವ್ಸ್” ಎಂಬ ವಾಣಿಜ್ಯ ಹಾಗೂ ವಸತಿ ಸಂಕೀರ್ಣದ 2ನೇ ಮಹಡಿಯಲ್ಲಿರುವ ಕಟ್ಟಡ ನಂ 6-A/26, ಪ್ಲಾಟ ಕಟ್ಟಡವನ್ನು ದಿನಾಂಕ 07-08-2019 ರಿಂದ ದಿನಾಂಕ 31-08-2024 ರವರೆಗೆ ಒಟ್ಟು 5 ವರ್ಷಗಳ ಲೀಸ್ ಕರಾರನ್ನು ಮಾಡಿಕೊಂಡು ರೂ 10,00,000/- ಹಣವನ್ನು RTGS ಮುಖಾಂತರ ಹಾಗೂ ರೂ 2,00,000/- ಹಣವನ್ನು ನಗದಾಗಿ ಪಾವತಿಸಿ, ಸದ್ರಿ ಕಟ್ಟಡದಲ್ಲಿ LKG, UKG ಹಾಗೂ ನರ್ಸರಿ ಪ್ಲೆ ಸ್ಕೂಲ್ ನ್ನು ನಡೆಸುತ್ತಿರುವುದ್ದಾಗಿದೆ. ಆರೋಪಿಯು ಮೇಲ್ಕಾಣಿಸಿದ ಕಟ್ಟಡವನ್ನು ಯಾನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಳೂರು ಶಾಖೆಯಲ್ಲಿ ಅಡಮಾನವಿರಿಸಿ ಸಾಲ ಮಾಡಿರುವ ಬಗ್ಗೆ ಮುಚ್ಚಿಟ್ಟು ದುರ್ಲಾಭ ಮಾಡುವ ಉದ್ದೇಶದಿಂದ ಪಿರ್ಯಾದಿದಾರರಿಂದ  ಮೇಲ್ಕಾಣಿಸದ ಹಣವನ್ನು ಪಡೆದು ಮೇಲ್ಕಾಣಿಸಿದ ಬ್ಯಾಂಕ್ ಗೆ ಸಾಲ ಮರು ಪಾವತಿ ಮಾಡದೇ ಹರಾಜಿಗೆ ತಂದು ಪಿರ್ಯಾದಿದಾರರಿಗೆ ಮೋಸ, ವಂಚನೆ, ನಂಬಿಕೆ ದ್ರೋಹ ಮಾಡಿ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾಗಿರುತ್ತದೆ, ದಿನಾಂಕ 27-05-2023 ರಂದು ಪಿರ್ಯಾದಿದಾರರು ಹಣ ವಾಪಸು ಕೇಳಿದಕ್ಕೆ ಆರೋಪಿಯು ಅಶ್ಲೀಲ ಪದಗಳಿಂದ ಬೈದು, ಹಣ ವಾಪಸು ಕೇಳಿದರೆ ಜೀವ ಉಳಿಯಲಿಕ್ಕಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾಗಿ ಆರೋಪಿ ವಿರುದ್ಧ ಕ್ರಮ ಜರಗಿಸುವಂತೆ ಎಂಬಿತ್ಯಾದಿಯಾಗಿರುತ್ತದೆ.

Urva PS

ದಿನಾಂಕ: 02-06-2023 ರಂದು ಮದ್ಯಾಹ್ನ ಸಮಯ ಪ್ರಕರಣದ ಪಿರ್ಯಾದಿ ಉರ್ವಾ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಅನಿತ ಹೆಚ್ ಬಿ ರವರು  ಇಲಾಖಾ ಜೀಪ್ ನಂಬ್ರ KA-19-G-546 ನೇದರಲ್ಲಿ ತಮ್ಮ ಸಿಬ್ಬಂದಿಗಳ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿರುತ್ತಾ,  ಠಾಣಾ ವ್ಯಾಪ್ತಿಯ ಉರ್ವಾ ಸ್ಟೋರ್, ಅಂಬೇಡ್ಕರ್ ಭವನದ ಹತ್ತಿರವಿರುವ ರೇಡಿಯೋ ಪಾರ್ಕ್ ಬಳಿ  ಸಮಯ ಸುಮಾರು ಮದ್ಯಾಹ್ನ 01:00 ಗಂಟೆಗೆ ತಲುಪಿದಾಗ ಅಲ್ಲಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ಇಬ್ಬರು ಯುವಕರು ಸಿಗರೇಟ್ ಸೇದುತ್ತಿದ್ದು, ವಿಚಾರಿಸಿ ಹೆಸರು ವಿಳಾಸವನ್ನು ಕೇಳಿದಾಗ ತೊದಲುತ್ತಾ ಹೆಸರು ವಿಳಾಸವನ್ನು ಹೇಳಿದ್ದು, ಗಾಂಜ ಸೇವನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೂಲಂಕುಷ ವಿಚಾರಿಸಿದಾಗ “ ಇವರುಗಳು ಗಾಂಜ ಸೇವನೆ ಮಾಡಿರುವುದಾಗಿ” ತಪ್ಪೊಪ್ಪಿಕೊಂಡಿರುತ್ತಾರೆ. ಸ್ಥಳದಲ್ಲಿ ಇವರಿಬ್ಬರನ್ನು ವಶಕ್ಕೆ ಪಡೆದು ಇವರುಗಳು ಗಾಂಜ ಸೇವನೆ ಮಾಡಿರುವ ಬಗ್ಗೆ ದೃಢಪಡಿಸಲು ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ವೈದ್ಯರ ಮುಂದೆ ಹಾಜರು ಪಡಿಸಿ  ತಪಾಸಣೆಗೆ ಒಳಪಡಿಸಿದ ವೈದ್ಯರು ಇವರು ಗಾಂಜ ಸೇವನೆ ಮಾಡಿರುವುದಾಗಿ ದೃಢಪಡಿಸಿ ವರದಿ ನೀಡಿರುತ್ತಾರೆ  ಎಂಬಿತ್ಯಾದಿ.

Bajpe PS

ಪಿರ್ಯಾದಿ ಗುರಪ್ಪ ಕಾಂತಿ ಪಿಎಸ್ಐ ಬಜಪೆ ಪೊಲೀಸ್ ದಿನಾಂಕ 02-06-2023 ರಂದು ಇಲಾಖಾ ವಾಹನ ಸಂಖ್ಯೆ ಕೆಎ 19 ಜಿ 0636 ನೇದರಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಸಮಯ 12:00 ಗಂಟೆಗೆ ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಪೊರ್ಕೋಡಿ ದ್ವಾರದ ಸಮೀಪ ಬಂದಾಗ ಅಲ್ಲಿ ಒಬ್ಬ ವ್ಯಕ್ತಿಯು ಸಿಗರೇಟು ಸೇದುತ್ತಿದ್ದು ಹೆಸರು ಕೇಳಲಾಗಿ ತೇಜಾಕ್ಷ ಪೂಜಾರಿ 36 ವರ್ಷ ವಾಸ: ಪಲ್ಕಿ ಲಚ್ಚಿಲ್ ಹೌಸ್ ಬಾಜಾವು ಅಂಚೆ ಕುತ್ತೆತ್ತೂರು ಗ್ರಾಮ ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು ಆತನು ಏನೋ ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು ಆತನನ್ನು ವಿಚಾರಿಸಲಾಗಿ ನಾನು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ನಂತರ ಕೋರಿಕೆ ಪತ್ರದೊಂದಿಗೆ ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ

Bajpe PS

ಪಿರ್ಯಾದಿ ಗುರಪ್ಪ ಕಾಂತಿ ಪಿಎಸ್ಐ ಬಜಪೆ ಪೊಲೀಸ್ ಠಾಣೆ ಆದ ನಾನು ದಿನಾಂಕ 02-06-2023 ರಂದು ಇಲಾಖಾ ವಾಹನ ಸಂಖ್ಯೆ ಕೆಎ 19 ಜಿ 0636 ನೇದರಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಸಮಯ 12:00 ಗಂಟೆಗೆ ಮಂಗಳೂರು ತಾಲೂಕು ಕೆಂಜಾರು ಗ್ರಾಮದ  ತಂದೆಕೆರೆ ಸಮೀಪ ಸಾರ್ವಜನಿಕ ಪ್ರದೇಶದಲ್ಲಿ ಬಂದಾಗ ಅಲ್ಲಿ ಒಬ್ಬ ವ್ಯಕ್ತಿಯು ಸಿಗರೇಟು ಸೇದುತ್ತಿದ್ದು ʼಮುನೀರ್ ಭಾಷಾ 26 ವರ್ಷ ವಾಸ: ಅಂಬೇಡ್ಕರ್ ನಗರ ಪೇಜಾವರ ಅಂಚೆ ಕೆಂಜಾರು ಗ್ರಾಮ ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು ಆತನು ಏನೋ ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು ಆತನನ್ನು ವಿಚಾರಿಸಲಾಗಿ ನಾನು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ನಂತರ ಕೋರಿಕೆ ಪತ್ರದೊಂದಿಗೆ ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ

Traffic North Police Station

ಪಿರ್ಯಾದಿ S.A. Rasheed  ಈ ದಿನ ದಿನಾಂಕ 0206.2023 ರಂದು ತನ್ನ ಪತ್ನಿ ಶ್ರೀಮತಿ ಲತೀಫಾ ಮತ್ತು ಸಂಬಂಧಿಕರಾದ ಶ್ರೀಮತಿ ಆಯಿಷಾ, ಶ್ರೀಮತಿ ಸಲಿಕಾ, ಮತ್ತು ಸಲೀಕಾಳ ಹತ್ತು ತಿಂಗಳ ಮಗು ಮಾ||ಮಹಮ್ಮದ್ ಅನಸ್, ತಾಯಿ ಶ್ರೀಮತಿ ಅತೀಜಮ್ಮ ಮತ್ತು ಸಹೋದರ ಅಬ್ದುಲ್ ಹಕೀಂ ಎಂಬವರನ್ನು ಕಾರು ನಂಬ್ರ KA-19-MN-4472 ರಲ್ಲಿ ಸಹ ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಜೋಕಟ್ಟೆಯ ಸಂಬಂಧಿಕರ ಭೋಜನ ಕೂಟಕ್ಕೆ KIOCL ಜಂಕ್ಷನ್ ನಿಂದ ಜೋಕಟ್ಟೆ ಕಡೆಗೆ ಹೋಗುತ್ತಾ ಮದ್ಯಾಹ್ನ ಸಮಯ ಸುಮಾರು 2:15 ಗಂಟೆಗೆ ಜೋಕಟ್ಟೆ ಸಮೀಪದ ಮಾದಿಲ ಬ್ರಿಡ್ಜ್ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಎದುರಿನಿಂದ ಅಂದರೆ ಜೋಕಟ್ಟೆ ಕಡೆಯಿಂದ KA-02-AF-1024ನೇ ಟೂರಿಸ್ಟ್ ಕಾರನ್ನು ಅದರ ಚಾಲಕ ತಿಮ್ಮಪ್ಪ ಎಂಬವರು ತೀರಾ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿನ ಬಲಭಾಗಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರ ಎಡಕೈ ತೋಳಿಗೆ ಗುದ್ದಿದ ಗಾಯ, ಲತೀಫರವರ ಬಲಕೈ ಭುಜಕ್ಕೆ ಮತ್ತು ಬಲಕಾಲಿಗೆ, ಶ್ರೀಮತಿ ಆಯಿಷಾರವರ ಎಡಕಾಲಿನ ಕೋಲು ಭಾಗದಲ್ಲಿ ಮೂಳೆ ಮುರಿತದ ಗಾಯ, ಶ್ರೀಮತಿ ಸಲಿಕಾರವರ ಹಣೆಯ ಮಧ್ಯ ಭಾಗದಲ್ಲಿ, ನೆತ್ತಿಯಲ್ಲಿ ಮತ್ತು ಬಲಕಾಲಿಗೆ ಮಾಸ್ಟರ್ ಅನಸ್ ನಿಗೆ ಹಣೆಯ ಎಡಬದಿ ಮತ್ತು ಕೆನ್ನೆಯ ಎಡಬದಿ, ಶ್ರೀಮತಿ ಅತೀಜಮ್ಮರವರ ಹಣೆಯ ಎಡಬದಿ, ಅಬ್ದುಲ್ ಹಕೀಂರವರ ಎದೆಗೆ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು, ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Kavoor PS

ಪಿರ್ಯಾದಿ KISHORE POOJARY ಕಾವೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು,  ದಿನಾಂಕ 02-06-2023 ರಂದು ಪಿರ್ಯಾದಿದಾರರಿಗೆ ಸಂಜೆ 04.15 ಗಂಟೆ ಸಮಯ ಠಾಣಾ ವ್ಯಾಪ್ತಿಯ ಮರಕಡ ಗ್ರಾಮದ ಮರಕಡ ಗಣಪತಿ ಕಟ್ಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸುತ್ತಾ ಮಟ್ಕಾ ಚೀಟಿ ಬರೆಯುತ್ತಿರುವ ಮಾಹಿತಿ ಇದ್ದು, ಸದ್ರಿ ಸ್ಥಳಕ್ಕೆ ಪಿರ್ಯಾದಿದಾರರು ಸಮಯ ಸುಮಾರು ಸಂಜೆ 04.30 ಗಂಟೆಗೆ ತೆರಳಿ ಮಫ್ತಿಯಲ್ಲಿ ತೆರೆಮರೆಯಲ್ಲಿ ನಿಂತು ಪರಿಶೀಲನೆ ಮಾಡಿದ್ದು ಸದ್ರಿ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಚೀಟಿ ಬರೆಯುತ್ತಾ, ಅದೃಷ್ಟದಾಟಕ್ಕಾಗಿ ಹಣ ಸಂಗ್ರಹಿಸುತ್ತಿರುವುದು ಕಂಡು ಬಂದಿದ್ದು  ಈ ಬಗ್ಗೆ ಕಾನೂನು ಕ್ರಮ ಕೈಗೊಂಡಿರುವುದು  ಎಂಬಿತ್ಯಾದಿ.

Ullal PS

ದಿನಾಂಕ: 01-06-2023 ರಾತ್ರಿ 11.00 ಗಂಟೆಯ ಸುಮಾರಿಗೆ  ಅರ್ಜಿದಾರರಾದ ಶ್ರೀ ಅಬೂಬಕ್ಕರ್ ಸಿದ್ದೀಕ್ ಎಂಬವರಿಗೆ ಪರಿಚಯಸ್ಥರಾಗಿದ್ದ ಕೇರಳ ರಾಜ್ಯದ ಮಂಜೇಶ್ವರ ಪಾವೂರು ಗುಂಡಾಪು ಎಂಬಲ್ಲಿಯ ವಾಸಿ ಉಮ್ಮರ್ ನವಾಫ್ ಎಂಬಾತನು ಅರ್ಜಿದಾರರಿಗೆ ಒಂದು ನಂಬರ್ ನಿಂದ ಕರೆ ಮಾಡಿ ಅರ್ಜೆಂಟ್ ಕೋಟೆಕಾರ್ ಗ್ರೌಂಡಿಗೆ ಬಾ ಎಂದು ಕರೆದಾಗ ಅರ್ಜಿದಾರರು ನಡೆದುಕೊಂಡು ಅಜ್ಜಿನಡ್ಕ ಎಂಬಲ್ಲಿಗೆ ತಲುಪುವಾಗ ಉಮ್ಮರ್ ನವಾಫ್ ನು ಅವನ ಎಫ್ ಜೆಡ್ ಬೈಕಿನಲ್ಲಿ ಬಂದು ಅರ್ಜಿದಾರರನ್ನು ಕುಳ್ಳಿರಿಸಿಕೊಂಡು ಕೋಟೆಕಾರ್ ಗ್ರೌಂಡಿಗೆ ತಲುಪಿ ಅಲ್ಲಿ ಬೈಕ್ ನಿಲ್ಲಿಸಿ ಅರ್ಜಿದಾರರಿಗೆ ಬೈಕಿನ ಎಡೆಯಲ್ಲಿ ಇರಿಸಿದ್ದ ತಲವಾರನ್ನು ತೆಗೆದು ‘’ ಬೇವರ್ಸಿ ರಂಡೆ ಮಗ ನಿನ್ನ ಮನೆಯಲ್ಲಿ ನಾನು ಇರಬಾರದಾ, ನೀನು ಯಾರಿಗೆ ಹೆದರುವುದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ, ಎಂದು ತಲವಾರಿನಿಂದ ಅರ್ಜಿದಾರರ ಕುತ್ತಿಗೆಗೆ ಬೀಸಿದ್ದು ಅವರು ತಪ್ಪಿಸಿಕೊಂಡ ಕಾರಣ ಅದು ಅವರ ಬಲಭುಜಕ್ಕೆ ಏಟು ಬಿದ್ದು, ಹಾಗೂ ಬಲ ಹಣೆಗೆ ಹಾಗೂ ಎಡಕೈ ಮಣೆಗಂಟಿಗೆ , ಬಲಕೈ ಭುಜಕ್ಕೆ ಕಡಿದು ರಕ್ತ ಗಾಯವಾಗಿರುತ್ತದೆ. ನಂತರ ಉಮ್ಮರ್ ನವಾಫನೂ ಅರ್ಜಿದಾರರು ಬೊಬ್ಬೆ ಹಾಕಿದಾಗ ಜನ ಓಡಿಕೊಂಡು ಬರುವುದನ್ನು ಕಂಡು ನಿನ್ನ ಅಣ್ಣ ಉಮ್ಮರ್ ಫಾರೂಕ್ ನಿಗೂ ಇದೇ ಗತಿ ಎಂದು ಬೆದರಿಕೆ ಹಾಕಿ ಅಲ್ಲಿಂದ ಬೈಕಿನಲ್ಲಿ ತಲವಾರು ಹಾಗೂ ಅರ್ಜಿದಾರರ ಮೊಬೈಲ್ ಫೋನ್ ಹುಡಿಮಾಡಿ ಅಲ್ಲಿಂದ ಸುಮಾರು 11.30 ಗಂಟೆಗೆ ಓಡಿ ಹೋಗಿರುವುದಾಗಿದೆ. ನಂತರ ಬದ್ರುಲ್ ಮುನೀರ್ ಎಂಬವರು ಅರ್ಜಿದಾರರನ್ನು ಕಾರಿನಲ್ಲಿ ದೇರಳಕಟ್ಟೆಯ ಯೇನಪೋಯಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಅರ್ಜಿದಾರರು ಉಮ್ಮರ್ ನವಾಫನಿಗೆ ಮನೆಯಲ್ಲಿ ಇರಲು ಅವಕಾಶ ನೀಡದೇ ಇರುವ ಕಾರಣಕ್ಕೆ ಆತನು ಅರ್ಜಿದಾರರ ಮೇಲೆ ಹಾಗೂ ಅವರ ಅಣ್ಣ ಉಮ್ಮರ್ ಫಾರೂಕ್  ಮೇಲೆ ಕೋಪಗೊಂಡು ಅರ್ಜಿದಾರರನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದಲೇ ತಲವಾರಿನಿಂದ ಹಲ್ಲೆ ಮಾಡಿರುವುದಾಗಿದೆ ಆತನ ಬೈಕಿನ ನಂಬ್ರ ಹಾಗೂ ಫೋನ್ ಮಾಡಿದ ಮೊಬೈಲ್ ನಂಬ್ರ ಅರ್ಜಿದಾರರಿಗೆ ತಿಳಿದಿರುವುದಿಲ್ಲ ಎಂಬಿತ್ಯಾದಿಯಾಗಿ ಪ್ರಕರಣದ ಸಾರಾಂಶ.

 

 

 

 

 

ಇತ್ತೀಚಿನ ನವೀಕರಣ​ : 21-08-2023 01:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080