ಅಭಿಪ್ರಾಯ / ಸಲಹೆಗಳು

Crime report in Barke PS

ಪಿರ್ಯಾದಿ ಶ್ರೀಮತಿ ರಜನಿ ಶೆಟ್ಟಿಯವರು ಬೀದಿ ಶ್ವಾನ ರಕ್ಷಣೆ ಕೆಲಸವನ್ನು ಹಾಗೂ ಸಮಾಜ ಸೇವೆ ಕೆಲಸವನ್ನು ಮಾಡಿಕೊಂಡು ಬಳ್ಳಾಲ್ ಭಾಗ್ ನ ದೊಡ್ಡಹಿತ್ಲು ಎಂಬಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುತ್ತಾರೆ. ದಿನಾಂಕ: 03-07-2023 ರಂದು ಬೆಳಿಗ್ಗೆ ಸುಮಾರು 09-30 ಗಂಟೆಗೆ ಪಿರ್ಯಾದಿದಾರರು ಕಾರ್ಪೋರೇಷನ್ ನಳದ ನೀರಿನಿಂದ ನಾಯಿಗಳ ಬಟ್ಟೆ ತೊಳೆಯುತ್ತಿರುವಾಗ ನೆರೆಮನೆಯ ಮಂಜುಳಾ ಎಂಬುವರು ಏಕಾಏಕಿ ಪಿರ್ಯಾದಿದಾರರ ಬಳಿ ಬಂದು ಬಕೆಟ್ ನ್ನು ತೆಗೆದು ಬಿಸಾಡಿ ನಂತರ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಕೈಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿ ಸಣ್ಣ ಪ್ರಮಾಣದ ರಕ್ತಗಾಯಗೊಳಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

 

Mangalore West Traffic PS      

ತಾರೀಖು 02-07-2023 ರಂದು ಪಿರ್ಯಾದಿ ಪ್ರಭುದೇವ ಹಿರೇಮಠ ಎಂಬುವವರು ತನ್ನ ಸ್ನೇಹಿತ  ಶ್ರೀಧರ ಬಿ. ಎಂಬುವರ ಜೊತೆ ಬಾಡಿಗೆ ಮನೆಯೊಂದನ್ನು ನೋಡಲು ಚಿಲಿಂಬಿಯಲ್ಲಿ ಆಟೋರಿಕ್ಷಾ ನಂಬ್ರ KA-19-AD-6692ನೇ ನಂಬ್ರದ ಆಟೋರಿಕ್ಷಾದಲ್ಲಿ ಇಬ್ಬರೂ ಹತ್ತಿ ಉರ್ವಸ್ಟೋರ್ ಕಡೆಗೆ ರಿಕ್ಷಾದಲ್ಲಿ  ಪ್ರಯಾಣ ಮಾಡುತ್ತಿದ್ದ ಸಮಯ ಉರ್ವಸ್ಟೋರ್ ಸಂತೋಷ ಬಾರ್ ಎದುರುಗಡೆ ತಲುಪುತ್ತಿದ್ದಂತೆ ಪಾದಚಾರಿಯೊಬ್ಬರು ಏಕಾಏಕಿ ರಸ್ತೆ ದಾಟುತ್ತಿದ್ದ ಸಮಯ ಆಟೋರಿಕ್ಷಾ ಚಾಲಕನು ತನ್ನ ರಿಕ್ಷಾವನ್ನು ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿ ರಿಕ್ಷಾ ಒಳಗಿದ್ದ ರವರ ಪೈಕಿ ಶ್ರೀಧರ ಎಂಬುವವರು ರಿಕ್ಷಾ ಒಳಗಿಂದ ಎಸೆಯಲ್ಪಟ್ಟು  ರಸ್ತೆಯ ಮೇಲೆ ಬಿದ್ದು ತೀವ್ರತರದ ಗಾಯಗೊಂಡಿದ್ದು ಆ ಸಮಯ ಅಲ್ಲಿ ಸೇರಿದ ಸಾರ್ವಜನಿಕರು ಆಟೋ ರಿಕ್ಷಾ ವನ್ನು ಮೇಲಕ್ಕೇತ್ತಿ ಪಿರ್ಯಾದಿ ಹಾಗೂ ರಿಕ್ಷಾ ಚಾಲಕನನ್ನು ಎತ್ತಿ ಉಪಚರಿಸಿದ್ದಲ್ಲದೇ, ಗಾಯಗೊಂಡಿದ್ದ ಶ್ರೀದರ್ ರವರನ್ನು ಸಾರ್ವಜನಿಕರ  ಸಹಾಯದಿಂದ ಪಿರ್ಯಾದಿದಾರರು ಆ ಮಾರ್ಗದಲ್ಲಿ ಬಂದಂತಹ ರಿಕ್ಷಾ ವೊಂದರಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ 19:49 ಗಂಟೆಗೆ ಮೃತಪಟ್ಟಿರುವುದಾಗಿದೆ. ಅಲ್ಲದೇ ಇದೇ ಆಸ್ಪತ್ರೆಯಲ್ಲಿ ಪಾದಚಾರಿ ಮರಿಯಪ್ಪ ಪ್ರಾಯ:40 ವರ್ಷ ಎಂಬುವರು ಕೂಡಾ ದಾಖಲಾಗಿದ್ದು ಇವರಿಗೆ ಎಡಕೈ ಗೆ, ತಲೆಯ ಹಿಂಬಾಗಕ್ಕೆ,ಎಡಹಣೆಗೆ ಗುದ್ದಿದ ನಮೂನೆಯ ರಕ್ತ  ಗಾಯವಾಗಿರುತ್ತದೆ. ಈ ಅಪಘಾತ 19.30 ಗಂಟೆಗೆ ನಡೆದಿರುವುದಾಗಿದೆ. ಈ ಅಪಘಾತಕ್ಕೆ  ಅದರ ಚಾಲಕ ರವಿರಾಜ್ ರವರು ಆಟೋ ರಿಕ್ಷಾವನ್ನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನ ಹಾಗೂ ದುಡುಕುತನದಿಂದ ಚಲಾಯಿಸಿರುವುದೇ  ಈ ಅಪಘಾತಕ್ಕೆ ಕಾರಣ ಎಂಬಿತ್ಯಾದಿ

Mangalore East Traffic PS       

ಪಿರ್ಯಾದಿ ಮನೋಜ್ ಕುಮಾರ್ ರವರು ದಿನಾಂಕ: 01-07-2023 ರಂದು ಸಂಜೆ ತನ್ನ ಬಾಬ್ತು KA-19-EX-2479 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ಕುಂಟಿಕಾನ ಕಡೆಯಿಂದ ಕೆಪಿಟಿ ಕಡೆಗೆ ರಾ.ಹೆ 66 ನೇ ಸಾರ್ವಜನಿಕ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಕುಂಟಿಕಾನ ಗ್ಲೋಬಲ್ ಕೋರ್ಟ್ ಅಪಾರ್ಟ್ ಮೆಂಟ್ ನಿಂದ ಸುಮಾರು 300 ಮೀಟರ್ ತಲುಪುತ್ತಿದ್ದಂತೆ ಸಂಜೆ ಸಮಯ ಸುಮಾರು 18.00 ಗಂಟೆಗೆ ಪಿರ್ಯಾದಿದಾರರ ಹಿಂಬದಿಯಿಂದ ಬರುತ್ತಿದ್ದ KA-19-P-8923 ನಂಬ್ರದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಬೈಕಿಗೆ ಹಿಂದಿನಿಂದ ಢಿಕ್ಕಿಪಡಿಸಿದ್ದು, ಈ ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಸದ್ರಿ ಕಾರು ಪಿರ್ಯಾದಿದಾರರ ಹಾಗೂ ಬೈಕ್ ಮೇಲೆ ಹರಿದು ಪಿರ್ಯಾದಿದಾರರ ಬಲಕಾಲನ ಮೊಣಗಂಟಿಗೆ, ಮಣಿಗಂಟಿಗೆ ಮತ್ತು ಎಡಕಾಲಿನ ಮೊಣಗಂಟಿಗೆ, ಮಣಿಗಂಟಿಗೆ ಹಾಗೂ ದೇಹದ ಇತರ ಕಡೆಗಳಲ್ಲಿ ಸಾಧಾ ಹಾಗೂ ತೀವೃ ಸ್ವರೂಪದ ಗಾಯಗೊಂಡವರನ್ನು ಅಪಘಾತಪಡಿಸಿದ ಕಾರು ಚಾಲಕ ಸಾರ್ವಜನಿಕರೊಂದಿಗೆ ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ.  ಸದ್ರಿ ಅಪಘಾತಕ್ಕೆ ಕಾರಣವಾದ ಕಾರು ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Mangalore East Traffic PS

ಪಿರ್ಯಾದಿ ಸುನೀಲ್ ಪ್ರದೀಫ್ ಫೆರ್ನಾಂಡಿಸ್ ರವರು ನಿನ್ನೆ ದಿನ ದಿನಾಂಕ 01-07-2023 ರಂದು ತನ್ನ ಬಾಬ್ತು KA-19-MN-1768 ನಂಬ್ರದ ಕಾರಿನಲ್ಲಿ ತನ್ನ ಕುಟುಂಬಸ್ಥರೊಂದಿಗೆ ಕುಲಶೇಖರ ಕೋರ್ಡೆಲ್ ಹಾಲ್ ನಿಂದ ಮನೆಗೆ ಹೋಗುತ್ತಾ ಮೂಡಬಿದ್ರೆ ಕಡೆಗೆ ಹೋಗುವಾ ರಾಷ್ಟ್ರೀಯ ಹೆದ್ದಾರಿ 169 ನೇ ಸಾರ್ವಜನಿಕ ರಸ್ತೆಯಲ್ಲಿ ಕೈಕಂಬ ಮಾರ್ಕೇಟ್ ಬಳಿ ತಲುಪುವಾಗ ರಾತ್ರಿ ಸಮಯ ಸುಮಾರು 10.20 ಗಂಟೆಗೆ ಬಿಕರ್ನಕಟ್ಟೆ ಕಡೆಯಿಂದ ಕುಲಶೇಖರ ಕಡೆಗೆ ಹೋಗುತ್ತಿದ್ದ KA-19-P-6811   ನೇ ಕಾರನ್ನು ಅದರ ಚಾಲಕ  ಕಾರ್ಮೆಲ್ ಕಿರಣ್ ಡಿ ಸೋಜಾ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆ ಹೋಗುತ್ತಿದ್ದ ವಾಹನಗಳನ್ನು ಓವರ್ ಟೇಕ್ ಮಾಡಿ, ರಸ್ತೆಯ ತೀರ ಬಲ ಬದಿಗೆ ಬಂದು ಪಿರ್ಯಾದಿದಾರರ ಕಾರಿನ ಎದುರುಗಡೆಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಎದುರುಗಡೆ ಸಂಪೂರ್ಣ ಜಖಂಗೊಂಡಿದ್ದು, ಅಲ್ಲದೇ ಅಪಘಾತಪಡಿಸಿದ KA-19-P-6811 ನೇ ನಂಬ್ರದ ಕಾರಿನ ಎದುರುಭಾಗ ಕೂಡ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ಬಲಗಡೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಹಾಗೂ ಕಾರಿನ ರಿಪೇರಿಯ ಮೊತ್ತವು ಜಾಸ್ತಿಯಾಗಿರುವುದಾಗಿ ತಿಳಿಸಿದ್ದರಿಂದ ಅಪಘಾತಪಡಿಸಿದ ಕಾರು ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Panambur PS    

ದಿನಾಂಕ : 02-07-2023 ರಂದು  15-00 ಗಂಟೆಗೆ ಪಣಂಬೂರು ಸಮೀಪ ಟ್ರಕ್ ಯಾರ್ಡ್ ಬಳಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದ ಗಿರೀಶ್ ಪ್ರಾಯ 33 ವರ್ಷ,  ವಾಸ: ಮುಗ್ರೋಡಿ, ಸಂಜಯ ನಗರ, ಪದವು, ಶಕ್ತಿನಗರ, ಮಂಗಳೂರು ಎಂಬವನನ್ನು  ವಶಕ್ಕೆ ಪಡೆದುಕೊಂಡಿದ್ದು ನಂತರ ಸದ್ರಿಯವನನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಮಾದಕ ವಸ್ತುಗಳನ್ನು/ ದ್ರವ್ಯಗಳನ್ನು ಸೇವನೆ ಮಾಡಿರುವರೇ ಎಂಬುದರ ಬಗ್ಗೆ ಅಭಿಪ್ರಾಯ ವರದಿಯನ್ನು ನೀಡಲು ವೈದ್ಯಾಧಿಕಾರಿಗಳು ಎ.ಜೆ.ಆಸ್ಪತ್ರೆ  ಪರೀಕ್ಷಿಸಿ The Urine Sample Tested For The Presence of Tetrahydracannabinoid (Marijuana) is Positive ಎಂದು ವರದಿ ನೀಡಿರುತ್ತಾರೆ. ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

CEN Crime PS

ಪಿರ್ಯಾದಿ NO BROKER.COM APP ನಲ್ಲಿ ಮನೆ ಬಾಡಿಗೆ ಇದೆ ಎಂದು ADD ಹಾಕಿರುತ್ತಾರೆ ದಿನಾಂಕ 02-7-2023 ರಂದು 12-00 ಗಂಟೆಗೆ ಪಿರ್ಯಾದಿದಾರರ ಗಂಡನ ಮೊಬೈಲ್ ನಂಬ್ರ  ನೇದಕ್ಕೆ  ಮೊಬೈಲ್ ನಂಬ್ರ 7735161638 ನೇದಿಂದ ಕರೆ ಬಂದಿದ್ದು NSG COMMODO (NATIONALSECURITY GUARD) ಆಗಿ  ಕೆಲಸ ಮಾಡಿಕೊಂಡಿದ್ದು  ಮಂಗಳೂರು ಅಂತರಾಷ್ರ್ಟೀಯ ವಿಮಾನ ನಿಲ್ದಾಣ ಕ್ಕೆ ಟ್ರಾನ್ಸಫರ್ ಆಗಲು ಇರುವುದರಿಂದ  ಮನೆ ಬಾಡಿಗೆ ಬೇಕಾರುವಿರುದರಿಂದ ಪಿರ್ಯಾದಿದಾರರ ಗಂಡನಿಗೆ  ತಿಳಿಸಿ ಮನೆ ಬಾಡಿಗೆ ಗೆ ಅಡ್ವಾನ್ಸ್ ಹಾಕಲು  ID CARD, AADHAR CARD, PANCARD, ARMY CANTEEN CARD,  ಪಿರ್ಯಾದಿದಾರರ ಗಂಡನಿಗೆ  ನಕಲಿ ಕಾರ್ಡ್ ಗಳನ್ನು ಕಳುಹಿಸಿ  ಹೆಡ್ ಕ್ವಾಟ್ರಸ್ ನಿಂದ ಹಣ ಪಾವತಿಸಲು ಕರೆ ಮಾಡುತ್ತೇನೆ ಎಂದು ತಿಳಿಸಿ ನಂತರ ಹತ್ತು ನಿಮಿಷಗಳ ನಂತರ ಅಲ್ಲಿಂದ ಕರೆ ಮಾಡಿ ಖಾತೆಯನ್ನು ಚೆಕ್ ಮಾಡಲು ಐದು ರೂಪಾಯಿ ಪಾವತಿಸಲು ತನ್ನ ಖಾತೆ ನಂಬ್ರ 7876000100051016 IFSC PUNB0787600 ಕೊಟ್ಟಿರುತ್ತಾರೆ ನಂತರ ಪಿರ್ಯಾದಿದಾರರ ಗಂಡನ CANARA ಬ್ಯಾಂಕ್ A/C  ಗೆ ಐದು ರೂಪಾಯಿ ಜಮಾವಣೆ ಆಗಿದ್ದು ನಂತರ ಪಿರ್ಯಾದಿದಾರರಿಗೆ CREDIT ಆಗುವ ಬದಲು  DEBIT ಆಗಿರುತ್ತದೆ ಹೀಗೆ ಪಿರ್ಯಾದಿದಾರರ BANK OF BARODA A/C. 50,000/- AND CANARA BANK  20,000/- ಹೀಗೆ  ಒಟ್ಟು 70,000/- ರೂಗಳನ್ನು ವರ್ಗಾಯಿಸಿರುತ್ತಾರೆ, ಆನ್ ಲೈನ್ ಮೂಲಕ ಮೋಸದಿಂದ ಹಣ ವರ್ಗಾಯಿಸಿಕೊಂಡು ಪಿರ್ಯಾದಿದಾರಿಗೆ ವಂಚಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

Mangalore North PS

ದಿನಾಂಕ: 02.07.2023 ರಂದು ಅಜೀಜುದ್ದೀನ್ ರಸ್ತೆ ಪರಿಸರದ ಬಳಿ ಬೆಳಿಗ್ಗೆ ಸುಮಾರು 11.00 ಗಂಟೆಗೆ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದ ಮಹಮ್ಮದ್ ತೌಹಿದ್  (25) ವಾಸ: ಅನಿಕ್ ಪ್ಲಾಜಾ ಎದುರುಗಡೆ, ಸಿಟಿ ಪ್ರೆಸ್,6 ನೇ ಕ್ರಾಸ್ ರೋಡ್,ಬಂದರು,ಮಂಗಳೂರು.  ಎಂಬವನನ್ನು  ವಶಕ್ಕೆ  ಆತನ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಹಾಜರುಪಡಿಸಿದಲ್ಲಿ  ಎ.ಜೆ. ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಮಹಮ್ಮದ್ ತೌಹಿದ್  ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ 16.24 ಗಂಟೆಗೆ ವರದಿಯನ್ನು ನೀಡಿರುತ್ತಾರೆ.  ಆತನ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆ ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿ.

Traffic South Police Station

ಫಿರ್ಯಾದಿ ಸುನೀತ್ ಮರೋಳಿ ಎಂಬವರು ತಲಪಾಡಿಯಲ್ಲಿರುವ ಮರೋಳಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಮಾಲಿಕರಾಗಿದ್ದು, ಫಿರ್ಯಾದಿದಾರರು ದಿನಾಂಕ 02/07/2023 ರಂದು ಮಧ್ಯಾಹ್ನ 01.00 ಗಂಟೆಯ ಸುಮಾರಿಗೆ ತನ್ನ ಬಾಬ್ತು ಸ್ಕೂಟರ್ ನಲ್ಲಿ ಸವಾರಿ ಮಾಡಿಕೊಂಡು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಬರುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ನಲ್ಲಿ ಕೆ.ಸಿ.ರೋಡ್ ಕಡೆಯಿಂದ ತಲಪಾಡಿಯಲ್ಲಿರುವ ತನ್ನ ಮರೋಳಿ ಬಾರ್ ಬಳಿ ತಲುಪುತ್ತಿದ್ದಂತೆ,   ಮರೋಳಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಎದುರು ರಾ.ಹೆದ್ದಾರಿಯ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದ ಫ್ರಾನ್ಸಿಸ್ ಡಿಸೋಜಾ, ( ಪ್ರಾಯ 63 ವರ್ಷ ) ಎಂಬವರಿಗೆ ತಲಪಾಡಿ ಟೋಲ್ ಗೇಟ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ, KL-60-S-9565 ನೇ ನಂಬ್ರದ ಟೆಂಪೋ ಟ್ರಾವೆಲರ್ ಅಂಬುಲೆನ್ಸ್ ವಾಹನವನ್ನು ಅದರ ಚಾಲಕನಾದ ಪ್ರಿಯೇಶ್  ನು ಅತೀವೇಗ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫ್ರಾನ್ಸಿಸ್ ಡಿಸೋಜಾರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಅವರು ರಸ್ತೆಗೆ ಬಿದ್ದಿದ್ದು, ಅಂಬುಲೆನ್ಸ್ ವಾಹನದ  ಚಕ್ರ ಅವರ ದೇಹದ ಮೇಲೆ ಹಾದು ಹೋಗಿದ್ದು, ಫ್ರಾನ್ಸಿಸ್ ಡಿಸೋಜಾ ರವರಿಗೆ ಬಲ ಕೈ ತೋಳಿನಲ್ಲಿ, ಹಾಗೂ ಬಲ ಕಾಲಿನ ಸೊಂಟದ ಬಳಿ, ಕೋಲು ಕಾಲಿನಲ್ಲಿ ಹಾಗೂ ಅದೇ ಕಾಲಿನ ಪಾದದ ಮೇಲ್ಭಾಗದ ಗಂಟಿನಲ್ಲಿ ಮೂಳೆ ಮುರಿತವಾಗಿರುತ್ತದೆ. ಹಾಗೂ ಬಲ ಕೈ ಅಂಗೈಯ ಹಾಗೂ ಬೆನ್ನಿನಲ್ಲಿ ತರಚಿದ ಗಾಯವಾಗಿದ್ದು, ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು, ನಂತರ ಫಿರ್ಯಾದಿದಾರರು, ಅಂಬುಲೆನ್ಸ್ ವಾಹನದ ಚಾಲಕ ಹಾಗೂ  ಅಲ್ಲಿ ಸೇರಿದ ಜನರು , ತೀವೃ ಗಾಯಗೊಂಡ ಫ್ರಾನ್ಸಿಸ್ ಡಿಸೋಜಾರವರನ್ನು ಅಪಘಾತ ಪಡಿಸಿದ ಟೆಂಪೋ ಟ್ರಾವೆಲರ್ ಅಂಬುಲೆನ್ಸ್ನಲ್ಲಿಯೇ ಸದ್ರಿ ವಾಹನದ ಚಾಲಕನ ಜೊತೆಯಲ್ಲಿ ಚಿಕಿತ್ಸೆಯ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಅಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು, ನಂತರ ಫಿರ್ಯಾದುದಾರರು ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿರುವಾಗ, ಗಾಯಾಳುವನ್ನು ಪರೀಕ್ಷಿಸುತ್ತಿದ್ದ ವೈದ್ಯರು ಮಧ್ಯಾಹ್ನ 02.06 ಗಂಟೆಗೆ ಗಾಯಾಳು ಫ್ರಾನ್ಸಿಸ್ ಡಿಸೋಜಾರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

Mangalore East Traffic PS                                     

ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ ರವರು ದಿನಾಂಕ 02-07-2023 ರಂದು ರಾತ್ರಿ ತನ್ನ ಬಾಬ್ತು KA-19-MC-8145 ನಂಬ್ರದ ಬೊಲೆರೊ ವಾಹನದಲ್ಲಿ  ತನ್ನ ಕುಟುಂಬದವರೊಂದಿಗೆ ಮೇರಿಹಿಲ್ ಕಡೆಯಿಂದ ಯೆಯ್ಯಾಡಿ ಮಾರ್ಗವಾಗಿ ಬರುತ್ತಿರುವಾಗ ರಾತ್ರಿ ಸಮಯ ಸುಮಾರು 11.30 ಗಂಟೆಗೆ ಯೆಯ್ಯಾಡಿ ಜಂಕ್ಷನ್ ತಲುಪಿ ಬಾರೆಬೈಲು ಕಡೆಗೆ ಹೋಗಲು ಓಪನ್ ಡಿವೈಡರ್ ಮೂಲಕ ಬಲಕ್ಕೆ ತಿರುಗಿಸುತ್ತಾ ರಸ್ತೆ ದಾಟುತ್ತಿದ್ದಾಗ ಕೆಪಿಟಿ ಕಡೆಯಿಂದ ಕಾರು ನೊಂದಣಿ ಸಂಖ್ಯೆ: KA-19-MD-6860 ನೇಯದನ್ನು ಅದರ ಚಾಲಕ ಮೊಹಮ್ಮದ್ ಜಮೀರ್ ಎಂಬಾತನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ವಾಹನಕ್ಕೆ ಢಿಕ್ಕಿಪಡಿಸಿದ್ದು, ಈ ಢಿಕ್ಕಿಯ ಪರಿಣಾಮ ಬೊಲೆರೊ ವಾಹನದ ಎಡಭಾಗದ ಎರಡೂ ಡೋರ್ ಗಳು ಸಂಪೂರ್ಣ ನುಜ್ಜುಗುಜ್ಜಾಗಿ ಜಖಂಗೊಂಡಿದ್ದು, ಸದ್ರಿ ವಾಹನದಲ್ಲಿದ್ದ ರಮ್ಯಾ ಹಾಗೂ ಯಶಸ್ವಿನಿಯವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಹೆಂಡತಿ ರಮ್ಯ ರವರಿಗೆ ಮುಖದಲ್ಲಿ ಹಾಗೂ ಯಶಸ್ವಿನಿಯವರಿಗೆ ಭುಜದಲ್ಲಿ ಮೂಳೆ ಮುರಿತವುಂಟಾಗಿರುವುದಾಗಿ ತಿಳಿಸಿರುತ್ತಾರೆ ಆದುದರಿಂದ ಸದ್ರಿ ರಸ್ತೆ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

 

 

 

 

        

 

 

 

ಇತ್ತೀಚಿನ ನವೀಕರಣ​ : 21-08-2023 02:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080