ಅಭಿಪ್ರಾಯ / ಸಲಹೆಗಳು

 

 Crime Report in Mangalore East Traffic PS  

ದಿನಾಂಕ 03-08-2023 ರಂದು ಪಿರ್ಯಾದಿದಾರರಾದ ದೀಕ್ಷಿತ್ ಶೆಟ್ಟಿ ರವರು  ತನ್ನ ಬಾಬ್ತು KA-21-H-6811 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನಲ್ಲಿ ಆಫೀಸ್ ಕೆಲಸ ನಿಮಿತ್ತ ಶಿವಬಾಗ ನಲ್ಲಿರುವ ಕದ್ರಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಹೋಗಿದ್ದು, ಕಾಂಪ್ಲೆಕ್ಸ್ ಎದುರುಗಡೆ ತನ್ನ ವಾಹನವನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಒಳಗಡೆ ಹೋಗಿದಾಗ, ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ಆಭರಣ ಜ್ಯೆವೆಲರ್ಸ್  ಬಳಿಯ ಜಂಕ್ಷನ್ ನಿಂದ ಮಲ್ಲಿಕಟ್ಟೆ ಕಡೆಗೆ ಇರುವ ಇಳಿಜಾರು ರಸ್ತೆಯಲ್ಲಿ KA-19-MK-5498 ನೇ ನಂಬ್ರದ ವ್ಯಾಗನರ್ ಕಾರನ್ನು ಅದರ ಚಾಲಕ ಓಮ್ಮೆಲೆ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ತನದಿಂದ ಅಡ್ಡಾ-ದಿಡ್ಡಿಯಾಗಿ  ಚಲಾಯಿಸಿ ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ಟೆಂಪೋ ನೋಂದಣಿ ಸಂಖ್ಯೆ -KA-19-AA-0982 ನೇ ದರ ಎಡ ಹಿಂಭಾಗಕ್ಕೆ ಢಿಕ್ಕಿ ಪಡಿಸಿದ್ದು, ಈ ಢಿಕ್ಕಿಯ ರಭಸಕ್ಕೆ ಟೆಂಪೋ ಬಲಕ್ಕೆ ಚಲಿಸಿ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಫಿರ್ಯಾದಿದಾರರ ಮೋಟಾರ್ ಸೈಕಲನ್ನು, ಅದರ ಪಕ್ಕದಲ್ಲಿ ನಿಲ್ಲಿಸಿದ KA-19-V-0058 ನೇ ನಂಬ್ರದ ಮೋಟಾರ್ ಸೈಕಲ್ ನ್ನು ಹಾಗೂ KA-19-MF-5407 ನೇ ನಂಬ್ರದ  ಓಮ್ನಿ ಕಾರಿಗೆ ಡಿಕ್ಕಿಯಾಗಿದ್ದು, ಈ ಡಿಕ್ಕಿಯ ರಭಸಕ್ಕೆ ರಸ್ತೆಯಲ್ಲಿ ಹೋಗುತ್ತಿದ್ದ ಪಾದಾಚಾರಿ ಕಮಲಾಕ್ಷಿ (16 ವರ್ಷ) ರವರಿಗೆ ಡಿಕ್ಕಿಪಡಿಸಿ ಮತ್ತು ಕಾರು ಅದೇ ವೇಗದಲ್ಲಿ ಮುಂದಕ್ಕೆ ಚಲಿಸಿ ಮಲ್ಲಿಕಟ್ಟೆ ಕಡೆಗೆ ಹೋಗುತ್ತಿದ್ದ KA-19-MD-5060 ನೇ ನೋದಣಿ ನಂಬ್ರದ ಸ್ವೀಫ್ಟ್ ಕಾರನ್ನು ಡಿಕ್ಕಿಯಾಗಿ ನಿಂತಿರುತ್ತೆದೆ, ಅಪಘಾತದಲ್ಲಿ ಗಾಯಗೊಂಡ ಕಮಲಾಕ್ಷಿ ರವರನ್ನು ಫಿರ್ಯಾದಿದಾರರು ಅಲ್ಲಿ ಸೇರಿದ ಸಾರ್ವಜನಿಕರೋಂದಿಗೆ ಗಾಯಾಳುವನ್ನು  ಉಪಚರಿಸಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ, ಈ ಅಪಘಾತ ಪಡಿಸಿದ KA-19-MK-5498 ನೆ ನಂಬ್ರದ ಕಾರು ಚಾಲಕ ಪೌಲ್ ಜೋಸೆಫ್ ರಸ್ಕಿನ್ಹಾ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೆಕಾಗಿ ಕೋರಿಕೆ.

Traffic South Police Station                           

ಫಿರ್ಯಾದಿದಾರರ ತಮ್ಮನಾದ ಮಧುರಾಜ್ (34 ವರ್ಷ) ರವರು ದಿನಾಂಕ: 02-08-2023 ರಂದು ಮಂಗಳೂರಿನ ಅಂಚೆ ಇಲಾಖೆಯಲ್ಲಿ ಕೆಲಸ ಮುಗಿಸಿಕೊಂಡು ತನ್ನ ಬಾಬ್ತು  KA-19-ET-8307ನೇ ನಂಬ್ರದ ಮೊಟಾರು ಸೈಕಲ್ ನಲ್ಲಿ ಮನೆಯಾದ ಸಂತೋಷ್ ನಗರ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋದ ಪರಿಣಾಮ ಸಮಯ ಸುಮಾರು 18-15 ಗಂಟೆಗೆ ನೇತ್ರಾವತಿ ಸೇತುವೆ ಬಳಿ ತಲುಪುತ್ತಿದ್ದಂತೆ ತನ್ನ ಮೊಟಾರು ಸೈಕಲ್ ನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಯ ಮೇಲೆ ಸ್ಕೂಟರ್ ಸಮೇತ ಬಿದ್ದು ಬಲಕೈಗೆ ಮತ್ತು ಮುಖಕ್ಕೆ ತರಚಿದ ಗಾಯವಾಗಿದ್ದು, ಸ್ಥಳಿಯರು ಯೆನಪೋಯ ಆಸ್ಪತ್ರೆಗೆ ದಾಖಲಿಸಿದ್ದು ಪ್ರಜ್ಞೆ ಬಾರದ ಕಾರಣ ಫಸ್ಟ್ ನ್ಯೂರೋ ಆಸ್ಪತ್ರೆಯ ಐಸಿಯು ನಲ್ಲಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

    

Bajpe PS                

ದಿನಾಂಕ 03.08.2023 ರಂದು ಬೆಳಗ್ಗೆ 10.00 ಗಂಟೆಗೆ  ಮೂಳೂರು ಗ್ರಾಮದ ಬಂಗ್ಲೆಗುಡ್ಡೆ ಸೈಟ್ ಎಂಬಲ್ಲಿಗೆ ಹಾದೂ ಹೋಗಿರುವ ರಸ್ತೆಯ ಬದಿಯಲ್ಲಿರುವ ಖಾಲಿ ಜಾಗದಲ್ಲಿ ನವಾಜ್ ಎಂಬಾತನು ಒಂದು ಕಪ್ಪು ಬಣ್ಣದ FZ ಬೈಕಿನ ಬಳಿ ನಿಂತುದ್ದು ಬೈಕಿನ ಹ್ಯಾಂಡಲ್ ಗೆ ನೀಲಿ ಬಣ್ಣದ ಪ್ಲಾಸ್ಟಿಕ್ ತೊಟ್ಟೆಯನ್ನು ನೇತಾಡಿಸಿ ಆತನ ಬಳಿ ಹೋಗುತ್ತಿದ್ದಂತೆ ನವಾಜ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನ ಹಿಡಿದು  ವಿಚಾರಿಸಿದಾಗ ಸದ್ರಿಯವನು “ತಾನು ಕೇರಳದ ಉಪ್ಪಳ ಕಡೆಯಿಂದ ಗುರುತುಪರಿಚಯವಿಲ್ಲ ವ್ಯಕ್ತಿಯಿಂದ ಕಡಿಮೆ ಬೆಲೆ ಮಾದಕ ವಸ್ತು ಗಾಂಜಾವನ್ನು ಖರಿದಿಸಿ ಅದನ್ನು ಈ ದಿನ ಬೈಕಿನಲ್ಲಿ ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ನಿಂತುಕೊಂಡಿದ್ದು ಎಂದು ತಿಳಿಸಿರುತ್ತಾನೆ. ವಿಳಾಸವನ್ನು ಕೇಳಿದಾಗ ಸದ್ರಿಯವನ ಹೆಸರು ‘ನವಾಜ್ (30), ವಾಸ: ನೀರಿನ ಟ್ಯಾಂಕ್ ಬಳಿ ಮಠದ ಗುಡ್ಡೆ ಹೌಸ್ ಮೂಳೂರು ಗ್ರಾಮ ಗುರುಪುರ ಮಂಗಳೂರು ತಾಲೂಕು’ ಎಂಬುದಾಗಿ ತಿಳಿಸಿದ್ದು ಬೈಕ್ ನ್ನು ಪರಿಶೀಲಿಸಿ ನೋಡಿದಾಗ KA19EJ8847 ನೇ ನಂಬ್ರದ ಕಪ್ಪು ಬಣ್ಣದ ಯಮಹಾ ಕಂಪನಿಯ FZ ಬೈಕ್ ಆಗಿರುತ್ತದೆ.ಇದರ ಬೆಲೆ 50000 ರೂ ಆಗಬಹುದು, ಬೈಕಿನ ಎಡಬದಿಯ ಹ್ಯಾಂಡಲ್ ಗೆ ನೇತಾಡುತಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ತೊಟ್ಟೆಯನ್ನು ಬಿಚ್ಚಿಸಿ ನೋಡಿದಾಗ ಅದರಲ್ಲಿ ಒಂದು ತರಹದ ಘಾಟು ವಾಸನೆ ಬರುವಂತಹ ಹೂವು, ಬೀಜ ,ಎಲೆ ಮತ್ತು ಕಾಂಡದಿಂದ ಕೂಡಿರುವ ಮಾದಕ ವಸ್ತು ಗಾಂಜಾ ಇರುವುದು ಕಂಡು ಬಂದಿದ್ದು  ತೂಕ ಮಾಡಿ ನೋಡಿದಾಗ 430 ಗ್ರಾಂ ತೂಕವಿದ್ದು ಇದರ ಅಂದಾಜು ಬೆಲೆ 8000/- ರೂ ಆಗಬಹುದು ಬಳಿಕ 17 ಪಾರದರ್ಶಕ ಚಿಕ್ಕ ಪ್ಲಾಸ್ಟಿಕ್ ತೊಟ್ಟೆಗಳು,ಸುಮಾರು 500/- ಬೆಲೆಯ ಸಿಲ್ವರ್ ಬಣ್ಣದ ಚಿಕ್ಕ ಬ್ಯಾಟರಿ ಚಾಲಿತ ತೂಕ ಮಾಪಕ,ಕಪ್ಪು ಬಣ್ಣದ ಸ್ಯಾಮ್ ಸಾಂಗ್ ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

                 

ಇತ್ತೀಚಿನ ನವೀಕರಣ​ : 21-08-2023 02:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080