ಅಭಿಪ್ರಾಯ / ಸಲಹೆಗಳು

Bajpe PS 

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Ashok John Mantero ದಿನಾಂಕ 02.01.2024 ರಂದು 18.15 ಗಂಟೆಗೆ ತಮ್ಮ ಸಂಬಂಧಿಕರಾದ ಜೋರ್ಜ್ ಡಿಸೋಜ ರವರೊಂದಿಗೆ ಕೈಕಂಬದಿಂದ ತನ್ನ ಊರಾದ ಅಡ್ಡೂರಿಗೆ ಹೋಗಲು KA701489 ನೇ ನಂಬ್ರದ ನವದುರ್ಗ ಎಂಬ ಹೆಸರಿನ ಬಸ್ಸಿನಲ್ಲಿ ಕೂತಿದ್ದು ನಂತರ ಸದ್ರಿ ಬಸ್ಸು ಸಮಯ 18.30 ಗಂಟೆಯ ಸಮಯಕ್ಕೆ  ಮಂಗಳೂರು ತಾಲೂಕು ತೆಂಕುಳಿಪಾಡಿ ಗ್ರಾಮದ ಪೊಳಲಿ ದ್ವಾರದ ಹತ್ತಿರ ಬರುತಿದ್ದಂತೆ ಅದರ ಚಾಲಕನಾದ ಅಶೋಕ ನು ತಾನು ಚಾಲಾಯಿಸುತಿದ್ದ  ಬಸ್ಸನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಏಕಾಏಕಿ ಬಲಗಡೆ ತಿರುಗಿಸಿದ ಕಾರಣ ಬಸ್ಸು ರಸ್ತೆಯಲ್ಲಿ ಮಗುಚಿ ಬಿದ್ದಿದ್ದು ಆ ಸಮಯ ಬಸ್ಸಿನಲ್ಲಿ ಸುಮಾರು 25 ರಿಂದ 30 ಜನ ಪ್ರಯಾಣಿಕರಿದ್ದು ಪಿರ್ಯಾದಿದಾರರ ಹತ್ತಿರ ಕೂತಿದ್ದ ಜೋರ್ಜ್ ಡಿಸೋಜ ರವರ ಹಲ್ಲುಗಳಿಗೆ ಗಾಯವಾಗಿದ್ದು ಬಲಕಾಲಿನ ಮೊಣಗಂಟಿಗೆ ಹಾಗೂ ಬೆರಳುಗಳಿಗೆ ಮತ್ತು ಭುಜಕ್ಕೆ ಗುದ್ದಿದ  ಗಾಯವಾಗಿದ್ದು, ಹಾಗೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಕೂಡ ಗಾಯವಾಗಿರುತ್ತದೆ ಅಲ್ಲದೆ  ಪಿರ್ಯಾದಿದಾರರಿಗೂ ಕೂಡ ಕೆಲವು ಕಡೆ ಸಣ್ಣಪ್ರಮಾಣದ ಗುದ್ದಿದ ನೋವುಂಟಾಗಿರುತ್ತದೆ  ನಂತರ ಅಲ್ಲಿ ಸೇರಿದ ಸಾರ್ವಜನಿಕರು,ಬಸ್ಸಿನ ನಿರ್ವಾಹಕ ಹಾಗೂ ಚಾಲಕ ಗಾಯಾಳು  ಜಾರ್ಜ್ ಡಿಸೋಜ ಮತ್ತು ಇತರೆ ಗಾಯಾಳುಗಳನ್ನು ಉಪಚರಿಸಿರುತ್ತಾರೆ, ಪಿರ್ಯಾದಿದಾರರು ಜಾರ್ಜ್ ಡಿಸೋಜ ರವರನ್ನು ಅಂಬುಲೆನ್ಸ್ ಮೂಲಕ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

Mangalore South PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 03-01-2024 ರಂದು ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ  ಹೆಚ್ ಸಿ 312 ಹನುಮರೆಡ್ಡಿ ಮೈನಳ್ಳಿ ಮತ್ತು ಪಿಸಿ 581 ಆಂಜನೇಯ ಕೆ.ಎಸ್ ರವರು ಖಾಸಗಿ ಮೋಟಾರ್ ಸೈಕಲ್ ನಲ್ಲಿ ಠಾಣಾ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್, ಬದ್ರಿಯಾ ಮಸೀದಿ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿ ಬೆಳಗ್ಗೆ 09-45 ಗಂಟೆಗೆ ರೋಸಾರಿಯೋ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮಂಗಳೂರು ನಗರದ ದಕ್ಷಿಣ ದಕ್ಕೆಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಪಡಿಸುತ್ತಿರುವುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದಂತೆ, ಕೂಡಲೇ ಅವರು ಸದ್ರಿ ಸ್ಥಳಕ್ಕೆ ತೆರಳಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದ, Mohammed Afredi Age 26 Yrs, S/o: Moideen, R/o: Yuvaka Mandala Bak Side, Pym Club, Near Safi Clinic, Baja Pakkaladka, Mangalore ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,  ಮಂಗಳೂರು ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ-27 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ

 

Mangalore East Traffic PS

ಪಿರ್ಯಾದಿದಾರರಾದ ಮೊಹಮ್ಮದ್ ಆಫ್ರೀದ್ ರವರು ದಿನಾಂಕ 31/12/2023 ರಂದು ಬೆಳಿಗ್ಗೆ ತಮ್ಮ ಕುಟುಂಬದ ಅಹಮ್ಮದ್, ಕು/ ಸನಾ ಫಾತೀಮಾ ಹಾಗೂ ಕು/ ಫಾತೀಮಾ ಶಬ್ನಂ ನಬೀಸಾ @ ಚಬ್ಬು ರವರೊಂದಿಗೆ ಝಾಯಿದ್ ಎಂಬುವರು ಚಲಾಯಿಸಿಕೊಂಡಿದ್ದ ಆಟೋರಿಕ್ಷಾ ನೊಂದಣಿ ಸಂಖ್ಯೆ: KA-19-AC-9615 ನೇಯದರಲ್ಲಿ ಪ್ರಯಾಣಿಸಿಕೊಂಡು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ನಿಂದ ಕಂಕನಾಡಿ ವೆಲೆನ್ಸಿಯಾ ಉಜ್ಜೋಡಿ ಮಾರ್ಗವಾಗಿ ತಮ್ಮ ಮನೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 8-45 ಗಂಟೆಗೆ ವೆಲೆನ್ಸಿಯಾ ಚರ್ಚ್ ಸ್ಮಶಾನದ ಕೊನೆಯ ತುದಿ ಬಳಿ ತಲುಪುತ್ತಿದ್ದಂತೆ ಉಜ್ಜೋಡಿ ಕಡೆಯಿಂದ ವೆಲೆನ್ಸಿಯಾ ಕಡೆಗೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಆಟೋರಿಕ್ಷಾ ನೊಂದಣಿ ಸಂಖ್ಯೆ: KA-19-AC-5156 ನೇಯದನ್ನು ಅದರ ಚಾಲಕ ಪ್ರವೀಣ್ ಎಂಬಾತನು ರಸ್ತೆಯ ಗುಂಡಿಯೊಂದರ ರಿಪೇರಿಗಾಗಿ ಅಡ್ಡಲಾಗಿ ಇಟ್ಟಿರುವ ಬ್ಯಾರೀಕೇಡ್ ಗಳನ್ನು ಗಮನಿಸಿಯೂ ಕೂಡ ತನ್ನ ವಾಹನವನ್ನು ನಿಧಾನಗೊಳಿಸದೇ ಬ್ಯಾರಿಕೇಡ್ ಗೆ ರಿಕ್ಷಾ ಢಿಕ್ಕಿಯಾಗುವುದನ್ನು ತಪ್ಪಿಸುವ ಆತುರದಲ್ಲಿ ಅಜಾಗರೂಕತೆಯಿಂದ ಒಮ್ಮೇಲೆ ರಸ್ತೆಯ ಬಲ ಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸಿಕೊಂಡಿದ್ದ ಆಟೋರಿಕ್ಷಾಗೆ ಢಿಕ್ಕಿ ಪಡಿಸಿದ ಪರಿಣಾಮ ಆಟೋ ರಿಕ್ಷಾ ಜಕಂಗೊಂಡು ಪ್ರಯಾಣಿಕರು ಗಾಯಗೊಂಡಿದ್ದು ಈ ಪೈಕಿ ಕು/ ಸನಾ ಫಾತೀಮಾ ಹಾಗೂ ಕು/ ಫಾತೀಮಾ ಶಬ್ನಂ ನಬೀಸಾ @ ಚಬ್ಬು, ರವರಿಗೆ ಮೂಳೆ ಮುರಿತದ ಗಾಯಗಳಾಗಿರುತ್ತವೆ ಎಂಬಿತ್ಯಾದಿ.

 

 

Mangalore North PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೆಂದರೆ, ಈ ದಿನ ದಿನಾಂಕ: 03-01-2024 ರಂದು ಮಾದಕ ದ್ಯವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team  ತಂಡದ ಅಧಿಕಾರಿ ಪ್ರದೀಪ್ ಟಿ.ಆರ್  ಮತ್ತು ಸಿಬ್ಬಂದಿ ರವರೊಂದಿಗೆ ರೌಂಡ್ಸ್ ಕರ್ತವ್ಯ ದಲ್ಲಿರುವ ಸಮಯ ಸುಮಾರು 13.30 ಗಂಟೆಗೆ ಬಾವುಟಗುಡ್ಡೆ ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ಕಂಡು ವಿಚಾರಿಸಿದಾಗ ನಾಲಿಗೆ ತೊದಲುತ್ತಾ ತನ್ನ ಹೆಸರು ಗೌತಮ್ ಸಿದ್ದಾರ್ಥ, ಖಾಯಂ ವಿಳಾಸ- ನಂ 43, ಮನಿಯಮ್ ಮಾರುತಕುಟ್ಟಿ, ಸ್ಟ್ರೀಟ್, ಕೆಕೆ ಪುದುರ್, ಕೋಯಂಬತ್ತೂರ್ ಉತ್ತರ, ಕೋಯಂಬತ್ತೂರು, ತಮಿಳುನಾಡು, ಹಾಗೂ ಪ್ರಸ್ತುತ ವಾಸ-1507, ಬಿ ಬ್ಲಾಕ್, ನಾರ್ತನ್ ಸ್ಕೈ ಸಿಟಿ, ಉಜ್ಜೋಡಿ, ಮಂಗಳೂರು  ಎಂಬುದಾಗಿ ತಿಳಿಸಿದ್ದು ಅನುಮಾನಗೊಂಡ ಪಿರ್ಯಾದಿದಾರರು ಆತನಲ್ಲಿ ಮುಂದುವರೆದು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಸದ್ರಿ ಅವರ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಗೌತಮ್ ಸಿದ್ದಾರ್ಥ ಎಂಬಾತನು, Tetrahydracannabinoid (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುತ್ತಾರೆ. ನಂತರ ಠಾಣೆಗೆ ಕರೆತಂದು ಗೌತಮ್ ಸಿದ್ದಾರ್ಥ ನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಂಬಿತ್ಯಾದಿ ನೀಡಿದ ದೂರಿನ ಸಾರಾಂಶ

 

 

 

Traffic South Police

ಪಿರ್ಯಾದಿದಾರರಾದ ಬಿ ಶಾಮಸುಂದರ ರಾವ್ [72] ರವರು ದಿನಾಂಕ 03-01-2024 ರಂದು ಬೆಳಿಗ್ಗೆ ವಾಕಿಂಗ್ ಮಾಡುತ್ತ ಬೆಳಿಗ್ಗೆ 6.30 ಗಂಟೆ ಸಮಯಕ್ಕೆ ಪದವಿನಂಗಡಿ ವಿಕಾಸ್ ಕಾಲೇಜ್ ಬಳಿಯಿಂದ ಮನೆಯ ಕಡೆಗೆ ತೆರಳಲು  ರಸ್ತೆ ದಾಟಿ  ಡಿವೈಡರ್ ಬಳಿ ನಿಂತು  ರಸ್ತೆ ದಾಟಲು ರಸ್ತೆಗೆ ಇಳಿದಾಗ ಮಂಗಳೂರು ಕಡೆಯಿಂದ KA19MM4054 ನೇ ಕಾರಿನ ಚಾಲಕಿ ವಿದ್ಯಾಕಾಮತ್ ರವರು ತನ್ನ ಕಾರನ್ನು  ದುಡುಕತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರುರಸ್ತೆಗೆ ಬಿದ್ದು, ಅವರ ಬಲ ಹಣೆಗೆ, ತಲೆಯ ಮೆಲ್ಬಾಗಕ್ಕೆ ಗಾಯ, ಬಲಕಾಲಿಗೆ ಮೂಳೆ ಮುರಿತದ ಗಾಯ ಸೊಂಟದ ಎಡಬದಿಯಲ್ಲಿ ಗುದ್ದಿದ ಗಾಯ ಬಲಕೈ ಮತ್ತು ಎಡ ಗೈಯಲ್ಲಿ ತರಚಿದ ಗಾಯ ಉಂಟಾಗಿದ್ದು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ

 

Traffic South Police

ಪಿರ್ಯಾದಿ Shivaprakash ರರ ಮಗ ಆದಿತ್ಯ ತೇಜ್ ರವರು ದಿನಾಂಕ 02-01-2024 ರಂದು ಅಗತ್ಯ ವಸ್ತುಗಳನ್ನು ಖರೀದಿಸಲು   KA-19-EG-6123 ನೇ ಯಮಹಾ ಸ್ಕೂಟರ್ನಲ್ಲಿ ಮನೆಯಿಂದ ಪಡೀಲ್ ಗೆ ತೆರಳಿದ್ದು, ಸಮಯ ಸುಮಾರು 09.00 ಗಂಟೆಗೆ ಪಡೀಲ್ ದ್ವಾರಕನಾಥ ಹೊಟೇಲ್ ಮುಂಭಾಗದ ರಸ್ತೆ ವಿಭಾಕದಲ್ಲಿ ನಿಧಾನವಾಗಿ  ಚಲಾಯಿಸಿ ಮುಂದಕ್ಕೆ ಹೋದಾಗ ಪಂಪುವೆಲ್ ಕಡೆಯಿಂದ ಪಡೀಲ್ ಕಡೆಗೆ ಬಂದ KA-19-HN-7855 ನೇ  ಹಿಮಾಲಯನ್ ಬೈಕಿನ ಸವಾರ ಅಮನ್ ಜೆ ರಾವ್ ಎಂಬಾತನು  ಮೋಟಾರು ಸೈಕಲನ್ನು ದುಡುಕತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು  ಬಂದು ಆದಿತ್ಯ ತೇಜ್ ನ ಮೊಟಾರು ಸೈಕಲಿಗೆ  ಡಿಕ್ಕಿಪಡಿಸಿದ ಪರಿಣಾಮ, ಆದಿತ್ಯ ತೇಜ್ ರಸ್ತೆಗೆ ಎಸೆಯಲ್ಪಟ್ಟು  ಆತನ ಎಡ ಕಾಲಿಗೆ ಮೂಳೆ ಮುರಿತದ ಗಾಯ, ಬೆನ್ನು ಮತ್ತು ಭುಜದಲ್ಲಿ ತರಚಿದ ಗಾಯವಾಗಿದ್ದು, ಅಪಘಾತ ಪಡಿಸಿದ KA-19-HN-7855 ನೇ ಹಿಮಾಲಯನ್ ಬೈಕಿನ ಸವಾರ ಅಮನ್ ಜೆ ರಾವ್ ರವರ ಕೈಗೆ ಹಾಗೂ ಅದರ ಸಹ ಸವಾರನಾಗಿದ್ದ ಸಾಹಿಲ್ ಸುರೇಶ್ ರವರಿಗೂ ತಲೆಗೆ ಪೆಟ್ಟು ಬಿದ್ದು ರಕ್ತ ಗಾಯವಾಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 04-01-2024 09:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080