ಅಭಿಪ್ರಾಯ / ಸಲಹೆಗಳು

Crime Report in  CEN Crime PS

ಪಿರ್ಯಾದಿದಾರರು ಪಾರ್ಟ್ ಟೈಮ್ ಜಾಬ್ ಮಾಡುವ ಉದ್ದೇಶದಿಂದ ದಿನಾಂಕ 27-09-2023 ರಂದು ಬೆಳಗ್ಗೆ 10:50 ಗಂಟೆಗೆ ಇನ್ಸ್ಟಾಗ್ರಾಂ ನಲ್ಲಿ ಪಾರ್ಟ್ ಟೈಮ್ ಜಾಬ್ ಎಂಬ ಲಿಂಕ್ ನ್ನು ಒತ್ತಿದ್ದು, 8091025242 ನಂಬರ್ ಗೆ ವಾಟ್ಸಾಪ್ ಮುಖಾಂತರ ಸಂಪರ್ಕಿಸುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಪಿರ್ಯಾದಿದಾರರ ವಾಟ್ಸಾಪ್ ನಂಬ್ರ  ನೇದರಿಂದ ಮೇಸೆಜ್ ಮಾಡಿದಾಗ ನಂತರ ಇನ್ಸ್ಟಾಗ್ರಾಂ ಮುಖಾಂತರ https://tme/amritanw19 ಈ ಲಿಂಕ್ ಗೆ ಲಾಗಿನ್ ಆಗಿದ್ದು, ಪಿರ್ಯಾದಿದಾರರನ್ನು ಗ್ರೂಪ್ ಗೆ ಸೇರಿಸಿಕೊಂಡಿರುತ್ತಾರೆ. ಸದ್ರಿ ಗ್ರೂಪ್ ನಲ್ಲಿ ಮೊದಲ ಟಾಸ್ಕ್ ಗೆ 13,000/- ಪಾವತಿಸುವಂತೆ ತಿಳಿಸಿದಾಗ, ಪಿರ್ಯಾದಿದಾರರ ಐಸಿಐಸಿಐ ಬ್ಯಾಂಕ್ ಖಾತೆಯಿಂದ  ಅವರು ತಿಳಿಸಿದ ಕೆನರಾ ಬ್ಯಾಂಕ್ ಅಕೌಂಟ್ ನಂಬ್ರ 110144363275 ನೇದಕ್ಕೆ ಹಣ ವರ್ಗಾಯಿಸಿರುತ್ತಾರೆ. ಸದ್ರಿ ಹಣವನ್ನು ಹಿಂಪಡೆಯಲು ಇನ್ನು ಹೆಚ್ಚಿನ ಹಣವನ್ನು ಪಾವತಿಸುವಂತೆ ತಿಳಿಸಿದ್ದು, ಅವರು ತಿಳಿಸಿದ ಅಪರಿಚಿತ ಬ್ಯಾಂಕ್ ಖಾತೆಗಳಾದ  Indusind Bank A/c 100208656181, ICICI Bank a/c 025405001450, ICICI Bank a/c 00405016784, Punjab National Bank a/c 4905000100043002, ನೇದಕ್ಕೆ ಹಂತಹಂತವಾಗಿ 3,68,000/- ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Barke PS

ದಿನಾಂಕ 02-10-2023 ರಂದು ಮಧ್ಯಾಹ್ನ 15-30 ಗಂಟೆಗೆ ಮಂಗಳೂರು ನಗರದ ದುರ್ಗಾ ಮಹಲ್ ಜಂಕ್ಷನ್ ಬಳಿ ಯುವಕನೊಬ್ಬನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ಸದ್ರಿ ಯುವಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವಿನಾಶ್ ಹೆಚ್ ಪ್ರಾಯ: 26 ವರ್ಷ ವಾಸ: # 1-24, ಹೂವಿನ ಕೊಪ್ಪಲು ಸುಬ್ಬುಗುಳಿ ತಾಜುಲ್ ಉಲ್ಮಾ ಜುಮ್ಮಾ ಮಸೀದಿ ಹತ್ತಿರ ಕುರ್ನಾಡು ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ಸದ್ರಿ ಯುವಕನಲ್ಲಿ ಮಾದಕವಸ್ತು ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ, ಗಾಂಜಾ ಸೇವನೆ ಮಾಡಿರುವುದಾಗಿ ಆತನು ಒಪ್ಪಿಕೊಂಡಿರುತ್ತಾನೆ. ಆತನನ್ನು ಎ.ಜೆ.ಆಸ್ಪತ್ರೆಯ ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು “Methamphetamine”  “Tetrahydracannabinoid (Marijuana) POSITIVE”  ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ.

Moodabidre PS

ದಿನಾಂಕ 02-10-2023 ರಂದು 15.00 ಗಂಟೆಗೆ ಮೂಡಬಿದ್ರೆ ತಾಲೂಕು ಪ್ರಾಂತ್ಯ ಗ್ರಾಮದ ಮಹಾವೇರ ಕಾಲೇಜು ಬಳಿ ಇರುವ ಮಾರಿಗುಡಿ ಮೈದಾನದಲ್ಲಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿ ಇಮ್ತಿಯಾಜ್ ಪ್ರಾಯ: 42 ವರ್ಷ,   ವಾಸ: ಮಾರಿಗುಡಿ ಬಳಿ, ಮಹಾವೀರ ಕಾಲೇಜು ಹತ್ತಿರ, ಪ್ರಾಂತ್ಯ ಗ್ರಾಮ, ಮೂಡಬದ್ರೆ ತಾಲೂಕು ಎಂಬಾತನನ್ನು 15.30 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದಲ್ಲಿ ಆತನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು  ಮಂಗಳೂರಿನ ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ದೃಢಪಟ್ಟಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

Mangalore East PS                                   

ದಿನಾಂಕ: 02-10-2023 ರಂದು ರಂದು 18:00 ಗಂಟೆ ವೇಳೆಗೆ ಮಂಗಳೂರು ನಗರದ ಬಿಜೈ ಮೋರ್ ಬಳಿಯಲ್ಲಿ ಓರ್ವ ವ್ಯಕ್ತಿ ರಸ್ತೆಯಲ್ಲಿ ತೂರಾಡುತ್ತಿದ್ದು ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದಿದ್ದು ಆತನನ್ನು ವಶಕ್ಕೆ ತೆಗೆದು ಕೊಂಡು ವಿಚಾರಿಸಲಾಗಿ ಆತನ ಹೆಸರು ರೋಶನ್ ಪ್ರಾಯ 18 ವರ್ಷ, ವಾಸ: ಭಾರತಿ ಕಂಪೌಂಡ್, ಮಂಗಳೂರು ಎಂಬುದಾಗಿ ತಿಳಿಸಿದ್ದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬಾಯಿಯಿಂದ ಮಾದಕ ವಸ್ತು ಸೇದಿದ ವಾಸನೆ ಬರುತ್ತಿದ್ದರಿಂದ, ಈತನನ್ನು ವಶಕ್ಕೆ ಪಡೆದು ಮಂಗಳೂರಿನ ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ದೃಢಪಟ್ಟಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 03-10-2023 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080