ಅಭಿಪ್ರಾಯ / ಸಲಹೆಗಳು

Crime Report in  : Mangalore East Traffic PS                     

ಪಿರ್ಯಾದಿದಾರರಾದ ಯಜ್ಞೇಶ್ ಎಂ.ಎಸ್, ಪ್ರಾಯ: 24 ವರ್ಷ ಎಂಬುವರು ದಿನಾಂಕ 03/11/2023 ರಂದು ಬೆಳಗಿನ ಜಾವ ತಮ್ಮ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-21-ED-1431 ನೇಯದನ್ನು ಚಲಾಯಿಸಿಕೊಂಡು ಮಲ್ಲಿಕಟ್ಟೆ ಕಡೆಯಿಂದ ಪಿ.ವಿ.ಎಸ್ ಕಡೆಗೆ ಹೋಗುತ್ತಿರುವಾಗ ಸಮಯ 5-40(AM) ಗಂಟೆಗೆ ಬಂಟ್ಸ್ ಹಾಸ್ಟೇಲ್ ಜಂಕ್ಷನ್ ತಲುಪುತ್ತಿದ್ದಂತೆ ಪಿ.ವಿ.ಎಸ್ ಕಡೆಯಿಂದ ಅಂಬೇಡ್ಕರ್ ಜಂಕ್ಷನ್ ಕಡೆಗೆ ಹೋಗುವುದಕ್ಕಾಗಿ ಖಾಸಗಿ ಬಸ್ಸು ನೊಂದಣಿ ಸಂಖ್ಯೆ: KA-51-B-1068 ನೇಯದನ್ನು ಅದರ ಚಾಲಕ ಅಬ್ದುಲ್ ರಾವೂಫ್ ಎಂಬಾತನು ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಾ ಅಂಬೇಡ್ಕರ್ ಜಂಕ್ಷನ್ ಕಡೆಗೆ ಹೋಗುವ ಭರದಲ್ಲಿ ಒಮ್ಮೇಲೆ ಬಲಕ್ಕೆ ತಿರುಗಿಸಿದ್ದರಿಂದ ಬಸ್ಸಿನ ಬಲ ಮುಂಭಾಗದ ಬಂಪರ್ ಬೈಕಿಗೆ ಢಿಕ್ಕಿಯಾಗಿ ಬೈಕ್ ಸವಾರ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಬಲ ಕೆನ್ನೆಗೆ ಗುದ್ದಿದ ರೀತಿಯ ಗಾಯವಾಗಿ ಕೆನ್ನೆ ಊದಿಕೊಂಡಿದ್ದು, ಕೈ ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ, ಸಿ.ಟಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿಕೆ ಎಂಬಿತ್ಯಾದಿ.

Urva PS

ದಿನಾಂಕ 03-11-2023 ರಂದು ಬೆಳಿಗ್ಗೆ ಸಮಯ 02-25  ಗಂಟೆಗೆ ಯಾರೋ ಕಳ್ಳರು ಪಿರ್ಯಾದಿ GAULBERT ALPHONSO MICHAEL PAIS ದಾರರ ಮನೆ KOTTARA CROSS, BEJAI, Mangaluru Cityಯ ಹಿಂಬದಿ ಬಾಗಿಲನ್ನು  ಮನೆಯ ಅಂಗಳದಲ್ಲಿದ್ದ ಪಿಕ್ಕಸಿನ ಸಹಾಯದಿಂದ ಒಡೆದು, ಒಳಗೆ ಪ್ರವೇಶಿಸಿ, ಮನೆಯ ಬೆಡ್ ರೂಮಿನ ಬಾಗಿಲನ್ನು ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದಾಗ ಮನೆಯಲ್ಲಿ ಮಲಗಿದ್ದ ಪಿರ್ಯಾಧಿದಾರರ ಮನೆಯ ಕೆಲಸದವರು ನೋಡಿ ಬೊಬ್ಬೆ ಹೊಡೆದ ಪರಿಣಾಮ ಆರೋಪಿಗಳು ಅಲ್ಲಿಂದ ಪರಾರಿಯಾಗಿರುವುದಾಗಿ ಸಾರಾಂಶ ಆಗಿರುತ್ತದೆ.

Mangalore South PS

ಫಿರ್ಯಾದಿ MAHAMMAD HANIEF ದಾರರ  ದೊಡ್ಡ ಮಗ ಇಬ್ರಾಹಿಂ ಹಪೀಪ್ ಎಂಬಾತನು ತನ್ನ ಬಾಬ್ತು ಮೋಟಾರು  ಸೈಕಲ್  KL-14 Z-8595  ನೊಂದಣಿ ಸಂಖ್ಯೆಯ Suzuki Access  125 DISC (Alloy Wheel)   ದ್ಚಿಚಕ್ರ ವಾಹನವನ್ನು ಕೆಲಸದ ನಿಮಿತ್ಯ ಸದ್ರಿ ಸ್ಕೂಟರನ್ನು ಇಲ್ಲಿಯೇ ಬಿಟ್ಟು ದುಬೈ ಹೋಗಿರುವುದಾಗಿದೆ, ನನ್ನ ಚಿಕ್ಕ ಮಗನಾದ ಅಬೂಬಕ್ಕರ್ ಹಾತಿಪ್ ಎಂಬಾತನು ಸದ್ರಿ ಸ್ಕೂಟರನ್ನು ಪ್ರತಿ ದಿನ ಮಂಗಳೂರು ಶ್ರೀನಿವಾಸ ಕಾಲೇಜಗೆ ಚಲಾಯಿಸಿಕೊಂಡು  ಹೋಗುತ್ತಿರುವದಾಗಿದೆ, ದಿನಾಂಕ-28/10/2023 ರಂದು ಫಿರ್ಯಾದಿದಾರರ  ಚಿಕ್ಕ ಮಗ ಅಬೂಬಕ್ಕರ್ ಹಾತಿಪ್ ಕಾಲೇಜಗೆ ತೆರಳಿ ಸಂಜೆ ಸಮಯ ಸುಮಾರು 06-00 ಗಂಟೆಗೆ ತನ್ನ ಗೆಳೆಯರ ಜೊತೆಗೆ ಸುತ್ತಾಡಿಕೊಂಡು ಬರಲು  ಮಂಗಳೂರು ನಗರ ಪೋರಂ ಮಾಲ್ ಗೆ ತನ್ನ ಅಣ್ಣನ ಬಾಬ್ತು  KL-14 Z-8595 Suzuki Access  125 DISC (Alloy Wheel)  ಸ್ಕೂಟರನ್ನು ಚಲಾಯಿಸಿಕೊಂಡು ಬಂದು ಪೋರಂ ಮಾಲ್ ಹೊರಗಡೆ ದ್ವಿ ಚಕ್ರ ವಾಹನ  ಪಾರ್ಕಿಂಗ  ಸ್ಥಳದಲ್ಲಿ ಕೀಯೊಂದಿಗೆ ಸದ್ರಿ ಸ್ಟೂಟರನ್ನು ಪಾರ್ಕಿಂಗ ಮಾಡಿ ಪೋರಂ ಮಾಲ್ ಒಳಗೆ ತನ್ನ ಗೆಳೆಯರ ಜೊತೆ ಹೋಗಿದ್ದು, ಒಳಗಡೆ ಸುತ್ತಾಡಿ ವಾಪಸ್ಸು ಸಮಯ ಸುಮಾರು ರಾತ್ರಿ 09- 00 ಗಂಟೆಗೆ  ಬಂದು ನೋಡಿದಲ್ಲಿ ದ್ಚಿಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳದಲ್ಲಿ ಇರಲಿಲ್ಲ. ಗಾಬರಿಗೊಂಡು ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ದ್ಚಿಚಕ್ರ ವಾಹನ ಕಂಡುಬರಲಿಲ್ಲವಾಗಿ ಫಿರ್ಯಾದಿದಾರರಿಗೆ ಪೋನ ಕರೆ ಮಾಡಿ ತಿಳಿಸಿದ್ದು. ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ದಿನಾಂಕ 02-11-2023 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಬಂದು ಸದ್ರಿ ಸ್ಕೂಟರನ್ನು ಪತ್ತೆ ಮಾಡಿಕೊಡಬೇಕಾಗಿ ದೂರು ನೀಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ. 23-10-2023 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರಾದ ಗಣೇಶ ರವರ ತಮ್ಮ ಉದಯ (43) ಎಂಬವರು ತೊಕ್ಕೊಟು ಒಳಪೇಟೆ ಗಣೇಶ ಮಂದಿರದ ಬಳಿಯಲ್ಲಿರುವ ಚೇತನ್ರವರ ಗ್ಯಾರೇಜ್ನಲ್ಲಿ ನಡೆದ ಆಯುಧ ಪೂಜೆಗೆ ಬಂದು ಹೋದವನು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾಗಿರುವ ಉದಯನನ್ನು ಫಿರ್ಯಾದಿದಾರರು ಈ ತನಕ ಹುಡುಕಾಡಿದರೂ ಪತ್ತೆಯಾಗದೇ ಇದ್ದ ಕಾರಣ ಕಾಣೆಯಾದವರನ್ನು ಪತ್ತೆ ಮಾಡಿಕೊಡುವಂತೆ ಫಿರ್ಯಾದಿದಾರರು ದಿನಾಂಕ. 2-11-2023 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Ullal PS

ದಿನಾಂಕ. 02-11-2023 ರಂದು ರಾತ್ರಿ  07-30  ಗಂಟೆಯ ಸಮಯಕ್ಕೆ ಕಿನ್ಯಾ ಗ್ರಾಮದ ಮೀಂಪ್ರಿ ಅಂಗನವಾಡಿ ಕಟ್ಟಡದ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಒರ್ವನು ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಇದರಿಂದ  ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ  ಮೇರೆಗೆ ಉಳ್ಳಾಲ ಠಾಣಾ ಪಿಎಸ್ಐ ಬಿ ಪ್ರಾಣೇಶ ಕುಮಾರ ಸಿಬ್ಬಂದಿಯವರ ಜೊತೆಯಲ್ಲಿ  ಪ್ರಕರಣವನ್ನು ಪತ್ತೆ ಮಾಡಿ ಆರೋಪಿ ಮೊಹಮ್ಮದ್ ಆರೀಸ್  ಎಂಬಾತನನ್ನು ವಶಕ್ಕೆ ಪಡೆದು, ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿದಲ್ಲಿ ಮೊಹಮ್ಮದ್ ಆರೀಸ್ ನು Tetrahydrocannabinol & Amphetamines  ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ (ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್) ನೀಡಿರುವುದರಿಂದ ಮೊಹಮ್ಮದ್ ಆರೀಸ್ ನ ವಿರುದ್ಧ  ಮುಂದಿನ ಕ್ರಮ ಕೈಗೊಂಡಿರುವದಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 03-11-2023 04:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080