ಅಭಿಪ್ರಾಯ / ಸಲಹೆಗಳು

Crime Reported in : Traffic South Police Station       

ದಿನಾಂಕ 01-02-2023 ರಂದು ಪಿರ್ಯಾದಿದಾರರು CHANCHALAKSHI  ಅವರ ಮನೆಗೆ  ಹೋಗಲು ಮಾಸ್ತಿಕಟ್ಟೆಕಡೆಯಿಂದ ತೊಕ್ಕೊಟ್ಟು ಕಡೆಗೆ  ಹಾದು ಹೋಗುವ  ರಸ್ತೆಯನ್ನು  ದಾಟಿ  ನಂತರ  ತೊಕ್ಕೊಟ್ಟು  ಕಡೆಯಿಂದ  ಮಾಸ್ತಿಕಟ್ಟೆ  ಕಡೆಗೆ  ಹಾದು ಹೋಗುವ  ರಸ್ತೆಯನ್ನು  ದಾಟುತ್ತಿರುವ ಸಮಯ ಸುಮಾರು  ಸಂಜೆ  06:45 ಗಂಟೆಗೆ  ತೊಕ್ಕೊಟ್ಟು  ಕಡೆಯಿಂದ  ಆಟೊರಿಕ್ಷಾ ನಂಬ್ರ KA-19-AD-2688  ನೇದನ್ನು  ಅದರ  ಚಾಲಕ  ಹುಸೈನ್  ಪಯಾಜ್  ಎಂಬಾತನು ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರಿಗೆ  ಡಿಕ್ಕಿ ಪಡಿಸಿದನು ಈ ಅಪಘಾತದಿಂದ  ಪಿರ್ಯಾದಿದಾರರು ಡಾಮಾರು  ರಸ್ತೆಗೆ  ಬಿದ್ದು  ಅವರ   ಎಡಕೈ  ಮೊಣಗಂಟಿಗೆ  ರಕ್ತ ಗಾಯ , ಮೂಗಿಗೆ  ಗುದ್ದಿದ ರಕ್ತ ಗಾಯ ಹಾಗೂ ಹಣೆಗೆ ರಕ್ತ ಗಾಯ ಆಗಿರುತ್ತದೆ. ಕೂಡಲೇ ಅವರನ್ನು  ಅಲ್ಲಿ ಸೇರಿದ ಜನರು  ಚಿಕಿತ್ಸೆ ಬಗ್ಗೆ  ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ . ಅಪಘಾತ  ಪಡಿಸಿದ  ಆಟೋರಿಕ್ಷ ಚಾಲಕ  ಚಿಕಿತ್ಸೆ ವೆಚ್ಚ  ಭರಿಸುವುದಾಗಿ ತಿಳಿಸಿದ್ದು  ನಂತರ ಚಿಕಿತ್ಸೆ ವೆಚ್ಚ   ಭರಿಸಲು  ನಿರಾಕರಿಸಿರುತ್ತಾರೆ ಆದ್ದರಿಂದ  ಈ ದೂರು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.

Crime Reported in : Bajpe PS

ಪಿರ್ಯಾದಿದಾರರ Mahammed Iliyas ಸಣ್ಣ ಮಗಳು  ಕುಃ ಸಬಾ ಪರ್ವಿನ್ (24 ವರ್ಷ) ಎಂಬವರು  ದಿನಾಂಕ:30-01-2023 ರಂದು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ  ಮಡಿ ಕಂಪೌಂಡ, ನೂಇಲಾಯಿ ಮಂಜಿಲ್  ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದು  ಬೆಳಿಗ್ಗೆ ಸುಮಾರು 08.00 ಗಂಟೆಗೆ  ನೋಡಿದಾಗ  ಮನೆಯಲ್ಲಿ ಇಲ್ಲದೇ ಇದ್ದು ಈ ಬಗ್ಗೆ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ.  ಬೆಳಿಗ್ಗೆ ಸುಮಾರು 09.00 ಗಂಟೆಗೆ ನನ್ನ ದೊಡ್ಡ ಮಗಳು ಸಲ್ಮಾ ಪರ್ವೀನ್ ರವರಿಗೆ 77******21 ನೇದರಿಂದ  ಪೋನ್ ಕರೆ ಮಾಡಿ  ತಾನು ಬೆಂಗಳೂರಿಗೆ  ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿರುತ್ತಾಳೆ. ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂಬಿತ್ಯಾದಿ.  

ಕಾಣೆಯಾದವರ ವಿವರಃ

ಹೆಸರು- ಕು.ಸಬಾ ಪರ್ವಿನ್ (24 ವರ್ಷ)

ತಂದೆ: ಮಹಮ್ಮದ್ ಇಲಿಯಾಸ್

ಎತ್ತರ: 5 ಅಡಿ 2 ಇಂಚು, ಗೋಧಿ ಮೈಬಣ್ಣ, ಸಾಧರಣ ಶರೀರ,

ಕಪ್ಪು ತಲೆ ಕೂದಲು.

ಧರಿಸಿರುವ ಬಟ್ಟೆ: ಕಪ್ಪು ಬಣ್ಣದ ಚೂಡಿದಾರ್, ಗುಲಾಬಿ ಬಣ್ಣದ ಶಾಲು ಧರಿಸಿರುತ್ತಾರೆ.

ಭಾಷೆ: ಇಂಗ್ಲೀಷ್, ಕನ್ನಡ,  ಹಿಂದಿ, ಉರ್ದು ಭಾಷೆ ತಿಳಿದಿದೆ.

Crime Reported in : Mangalore East Traffic PS

ಪಿರ್ಯಾದಿದಾರರಾದ ಶ್ರೀಮತಿ ಹೇಮಲತ (40ವರ್ಷ) ರವರು ದಿನಾಂಕ 02-02-2023 ರಂದು ಮಧ್ಯಾಹ್ನ 12.15 ಗಂಟೆಗೆ ಯೆಯ್ಯಾಡಿಯಲ್ಲಿರುವ SBI ಬ್ಯಾಂಕಿಗೆ ಹೋಗಲು ತನ್ನ ಬಾಬ್ತು  KA-19-EK-6337 ನೊಂದಣಿ ನಂಬ್ರದ ಸ್ಕೂಟರ್ ನಲ್ಲಿ ಸವಾರಳಾಗಿ  ಮನೆಯಿಂದ ಹೊರಟು ಬಿಷಪ್ ಕಂಪೌಂಡ್ ರಸ್ತೆಯಲ್ಲಿ ಹೋಗುತ್ತಿರುವಾಗ ಒಳ ರಸ್ತೆಯಿಂದ KA-19-MD-6135  ನೊಂದಣಿ ನಂಬ್ರದ ಕಾರನ್ನು ಅದರ ಚಾಲಕ ಪೂರ್ಣಚಂದ್ರ ಎಂಬುವರು ಒಮ್ಮೇಲೆ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಎಡಬದಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ರಭಸಕ್ಕೆ ಪಿರ್ಯಾದಿದಾರರು ಸ್ಕೂಟರ್ ಸಮೇತ ಎಡಕ್ಕೆ ಮಗುಚಿ ರಸ್ತೆಗೆ ಬಿದ್ದು, ಎಡಕೈ ಮೊಣಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಮತ್ತು ಎಡಕೈ ಬೆರಳುಗಳಿಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಸಾಗಿಸಲ್ಪಟ್ಟು ಎಡಕೈ ಮೊಣಕೈಗೆ  ಉಂಟಾದ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಕ್ಕೆ ಶಸ್ತ್ರ ಚಿಕಿತ್ಸೆಗೊಳಗಾಗಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತಪಡಿಸಿದ ಕಾರು ಚಾಲಕ ಪರಿಚಯಸ್ಥರಾಗಿದ್ದರಿಂದ ಕೇಸು ದಾಖಲಿಸುವುದು ಬೇಡವೆಂದು ಪಿರ್ಯಾದಿದಾರರು ನಿರ್ಧರಿಸಿದ್ದು, ಬಳಿಕ ವೈದ್ಯರು  ಚಿಕಿತ್ಸಾ ವೆಚ್ಚವು ಅಧಿಕವಾಗುವುದಾಗಿ ತಿಳಿಸಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ. ಈ ಅಪಘಾತಕ್ಕೆ KA-19-MD-6135 ನೊಂದಣಿ ನಂಬ್ರದ ಕಾರಿನ ಚಾಲಕ ಪೂರ್ಣಚಂದ್ರ ಎಂಬುವರ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in : Mangalore North PS  

ಪಿರ್ಯಾದಿದಾರರು KESHAVA ACHARYA  ಮಂಗಳೂರು ಬಲ್ಮಠ ರಸ್ತೆಯಲ್ಲಿ ಮಂಗಳೂರು ಜ್ಯುವೆಲ್ಲರ್ಸ್ ಎಂಬ ಹೆಸರಿನ ಚಿನ್ನಾಭರಣದ ಅಂಗಡಿಯನ್ನು ಹೊಂದಿದ್ದು ಈ ಅಂಗಡಿಯಲ್ಲಿ ರಾಘವೇಂದ್ರ ಆಚಾರ್ಯ ಎಂಬಾತನು ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ, ದಿನಾಂಕ 03-02-2023 ರಂದು ಪಿರ್ಯಾದಿದಾರರು ಊಟಕ್ಕೆ ಹೋಗಿ ಮದ್ಯಾಹ್ನ ಸುಮಾರು 3-45 ಗಂಟೆಗೆ  ಕಾರಿನಲ್ಲಿ ಅಂಗಡಿಗೆ ಬಂದಿದ್ದು ಅಂಗಡಿಯ ಎದುರು ಬೈಕೊಂದು ಅಡ್ಡವಿದ್ದುದರಿಂದ ಪಿರ್ಯಾದಿದಾರರು ಸೇಲ್ಸ್ ಮ್ಯಾನ್ ರಾಘವೇಂದ್ರ ಆಚಾರ್ಯನಿಗೆ ಫೋನ್ ಮಾಡಿದಾಗ ಆತನು ಪಿರ್ಯಾದಿದಾರರಲ್ಲಿ ನನಗೆ ಚೂರಿ ಹಾಕಿದ್ದಾರೆ, ಚೂರಿ ಹಾಕಿದ್ದಾರೆ, ಬಚಾವ್ ಮಾಡಿ  ಎಂದು ಹೇಳಿದ್ದು ಪಿರ್ಯಾದಿದಾರರು ಕೂಡಲೇ ಕಾರನ್ನು ನಿಲ್ಲಿಸಿ ಅಂಗಡಿಯೊಳಗಡೆ ಬಂದಾಗ ಪಿರ್ಯಾದಿದಾರರ ಕೆಲಸದ ರಾಘವೇಂದ್ರ ಆಚಾರ್ಯ ನು ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದು, ಪಿರ್ಯಾದಿಯು ಕೂಡಲೇ ಪಕ್ಕದ ಒಬ್ಬಾತ ಹಾಗೂ ಇನ್ನೊಬ್ಬಾತನ ಸಹಾಯ ಪಡೆದು ರಕ್ತದ ಮಡುವಿನಲ್ಲಿದ್ದ ರಾಘವೇಂದ್ರ ಆಚಾರ್ಯನನ್ನು ರಿಕ್ಷಾವೊಂದರಲ್ಲಿ ಹಾಕಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡುಹೋದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಸುಮಾರು 4-48 ಗಂಟೆಗೆ ಮೃತಪಟ್ಟಿರುತ್ತಾನೆ ಎಂದು ವೈದ್ಯರು ತಿಳಿಸಿರುತ್ತಾರೆಂದು, ಪಿರ್ಯಾದಿಯು ವಾಪಾಸ್ಸು ಅಂಗಡಿಗೆ ಬಂದು ನೋಡಲಾಗಿ ಅಂಗಡಿ ಪೂರ್ತಿ ರಕ್ತ ಹರಡಿಕೊಂಡಿದ್ದು ಅಂಗಡಿ ಶೋಕೇಸಿನಲ್ಲಿದ್ದ ಸುಮಾರು 12 ಗ್ರಾಂ ತೂಕದ  ಅಂದಾಜು ಮೌಲ್ಯ ರೂ. 60,000/- ದ ಚಿನ್ನಾಭರಣಗಳು ಇಲ್ಲದೇ ಇದ್ದು ಪಿರ್ಯಾದಿಯು ಮದ್ಯಾಹ್ನ ಊಟಕ್ಕೆ ಹೋದ ವೇಳೆ ಪಿರ್ಯಾದಿಯ ಅಂಗಡಿಗೆ ಬಂದ ಯಾರೋ ಅಪರಿಚಿತ ಅಂಗಡಿಯ ಶೋಕೇಸಿನಲ್ಲಿದ್ದ ಬಂಗಾರದ ಚೈನ್ ಗಳನ್ನು ಲೂಟಿ ಮಾಡಲು ಬಂದವನನ್ನು ಕೆಲಸದ ರಾಘವೇಂದ್ರ ಆಚಾರ್ಯನು ತಡೆಯಲು ಹೋಗಿರುವ ಸಾಧ್ಯತೆ ಇದ್ದು, ಆ ಸಮಯ ಅಪರಿಚಿತ ಯುವಕನು ತನ್ನ ಬಳಿಯಿದ್ದ ಯಾವುದೋ ಹರಿತವಾದ ಆಯುಧದಿಂದ ರಾಘವೇಂದ್ರ ಆಚಾರ್ಯನ ಕುತ್ತಿಗೆಯ ಭಾಗಕ್ಕೆ ಬಲವಾಗಿ ಚುಚ್ಚಿದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ, ರಾಘವೇಂದ್ರ ಆಚಾರ್ಯನನ್ನು ಕೊಲೆ ಮಾಡಿದ ಮತ್ತು ಅಂಗಡಿಯಲ್ಲಿದ್ದ ಬಂಗಾರದ ಚೈನ್ ಗಳನ್ನು ಲೂಟಿ ಮಾಡಿದ ಅಪರಿಚಿತ ಯುವಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ.

Crime Reported in : Traffic North Police Station       

ಪಿರ್ಯಾದಿದಾರರು RITHESHA  ದಿನಾಂಕ 03/02/2023 ರಂದು ಪ್ರತಿ ಶುಕ್ರವಾರದಂತೆ ಈ ದಿನವೂ ಕೂಡಾ ತನ್ನ ಬಾಬ್ತು KA-20-EL-2736 ನಂಬ್ರದ ಸ್ಕೂಟರಿನಲ್ಲಿ ಮನೆಯಿಂದ 05.00 ಗಂಟೆಗೆ ಹೊರಟು ಸೂರಿಂಜೆ ರಸ್ತೆಯ ಮೂಲಕ ಕಟೀಲು ದೇವಸ್ಥಾನದ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 05.30 ಗಂಟೆಗೆ ಸೂರಿಂಜೆ ಮಸೀದಿ ಬಳಿ ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆಯಲ್ಲಿರುವ ಜಲ್ಲಿ ಹಾಕಿರುವ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ KA-19-ES-7461 ನಂಬ್ರದ ಸ್ಕೂಟರನ್ನು ಅದರ ಸವಾರನಾದ ಹರಿಪ್ರಸಾದ್ ಎಂಬಾತನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರಿನ ಹತೋಟಿ ತಪ್ಪಿ ಸ್ಕೂಟರ್ ಎದುರು ಚಲಿಸಿ ರಸ್ತೆಯ ಎಡಬದಿಯಲ್ಲಿರುವ ಚರಂಡಿಗೆ ಸಂಬಂದಿಸಿದ ಸಿಮೆಂಟ್ ದಂಡೆಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಪಕ್ಕದ ಚರಂಡಿಗೆ ಬಿದ್ದು ಪಿರ್ಯಾದಿದಾರರ ಎಡ ಕೈ ಭುಜಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ಬಲಕಾಲಿನ ಕೋಲು ಕಾಲು ಮತ್ತು ಮೊಣಗಂಟಿನ ಬಳಿ ತರಚಿದ ರೀತಿಯ ಗಾಯ, ಹೊಟ್ಟೆಗೆ ಗುದ್ದಿದ ರೀತಿಯ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in : Moodabidre PS

ದಿನಾಂಕ: 03-02-2023 ರಂದು ಪಿರ್ಯಾದಿದಾರರ Mohammed Mateen  ಬಾವ ಫಯಾಜ್ ಅಹಮ್ಮದ್ ಎಂಬವರು ಮಧ್ಯಾಹ್ನ ನೌಶಾದ್ ಇಬ್ರಾಹಿಂ ರವರೊಂದಿಗೆ ಪ್ರಾರ್ಥನೆ ಸಲುವಾಗಿ ಕೋಟೆಬಾಗಿಲು ಕಿಲ್ಲಾ ಸುನ್ನಿ ಜಾಮೀಯ ಮಸೀದಿಗೆ ಹೋಗುತ್ತಿರುವಾಗ ಆರೋಪಿ ಮೊಹಮ್ಮದ್ ಆರಿಸ್ ಎಂಬಾತನು ಟಿಪ್ಪರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ಆಗ ಪಿರ್ಯಾದಿದಾರರ ಬಾವ ಫಯಾಜ್ ಅಹಮ್ಮದ್ ರವರು ಆತನಿಗೆ ನಿಧಾನವಾಗಿ ಹೋಗು ರಸ್ತೆಯಲ್ಲಿ ದೂಳು ತುಂಬಾ ಇದೇ, ಮಸೀದಿಗೆ ಬರುವವರು, ಶಾಲಾ ಮಕ್ಕಳು ಹೋಗುತ್ತಿರುತ್ತಾರೆ ಎಂಬ ವಿಚಾರವನ್ನು ತಿಳಿಸಿದ್ದು, ಆಗ ಆತನು ಇದು ನಿನ್ನ ರಸ್ತೆಯಲ್ಲ, ಪ್ರಾರ್ಥನೆ ಮುಗಿಸಿ ಬಂದ ನಂತರ ನಿನ್ನನ್ನು ಕೊಲ್ಲುತ್ತೇನೆ, ನಿನ್ನನ್ನು ಕೊಂದರೆ ಏನು ಆಗುವುದಿಲ್ಲ, ನಾನು ಜೈಲಿಗೆ ಹೋಗಲು ರೆಡಿ ಇದ್ದೇನೆ ಎಂಬುದಾಗಿ ಗದರಿಸಿದ್ದು, ನಂತರ ಪಿರ್ಯಾದಿದಾರರ ಬಾವ ಪ್ರಾರ್ಥನೆ ಮುಗಿಸಿ ಹೋಗುವ ಸಮಯ ಆರೋಪಿಯು ಪುನಃ ಗದರಿಸಿದ್ದು, ಆಗ ಪಿರ್ಯಾದಿದಾರರ ಬಾವ ಆತನಲ್ಲಿ ಏಕೆ ಜೋರು ಮಾಡುತ್ತಿಯ ಎಂಬುದಾಗಿ ಕೇಳಲು ಹೋದಾಗ ಆತನು ಟಿಪ್ಪರ್ ನ ಒಳಗೆ ಹೋಗಿ ರಾಡ್ ನ್ನು ತೆಗೆದು ಬೀಸಿ ಪಿರ್ಯಾದಿದಾರರ ಬಾವನವರ ತಲೆಗೆ ಹೊಡೆದಿದ್ದು ಅವರು ಅಲ್ಲಿಯೇ ಬಿದ್ದ ಸಮಯ ಅವರ ಮೇಲೆ ಟಿಪ್ಪರನ್ನು ಹಾಯಿಸಿ ಕೊಂಡು ಹೋಗಿರುತ್ತಾನೆ. ತೀವ್ರ ಸ್ವರೂಪವಾಗಿ ಗಾಯಗೊಂಡ ಪಿರ್ಯಾದಿದಾರರ ಬಾವ ಫಯಾಜ್ ಅಹಮ್ಮದ್ ರವರನ್ನು ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ಕರೆತಂದು ನಂತರ ಆಳ್ವಾಸ್ ಆಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿ ವೈದ್ಯಾಧಿಕಾರಿಯವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿರುವ ಸಮಯ ಪಿರ್ಯಾದಿದಾರರ ಬಾವನಾದ ಫಯಾಜ್ ಅಹಮ್ಮದ್ ರವರು ಮೃತಪಟ್ಟಿರುತ್ತಾರೆ. ಈ ಘಟನೆ ನಡೆಯುವಾಗ ಮಧ್ಯಾಹ್ನ 1.55 ಗಂಟೆಯಾಗಿರುತ್ತದೆ ಹಾಗೂ ಟಿಪ್ಪರ್ ನಂ: KA-19-AB-5825 ಆಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 04-02-2023 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080