Traffic South Police Station
ಪಿರ್ಯಾದಿ ಪುರುಷೋತ್ತಮ್ [61 ವರ್ಷ] ರವರು ದಿನಾಂಕ 03-03-2023 ರಂದು ರಾತ್ರಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜನ ಕಾರ್ಯಕ್ರಮಕ್ಕೆ ಹೋಗುವರೇ ತೊಕ್ಕೊಟ್ಟು ಓವರ್ ಬ್ರಿಡ್ಜ್ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಎದುರು ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹಾದು ಹೋಗಿರುವ ರಾ.ಹೆ-66 ರ ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 10-30 ಗಂಟೆಗೆ ಅದೇ ರಸ್ತೆಯಲ್ಲಿ ಮೋಟಾರ್ ಸೈಕಲ್ ನಂಬ್ರ KL-14-AC-7573 ನೇದನ್ನು ಅದರ ಸವಾರ ಜಂಶೀದ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪುರುಷೋತ್ತಮ್ ರವರ ಕಾಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಅವರ ಎಡಗಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಕೈಗೆ ಗುದ್ದಿದ ಗಾಯವಾಗಿದ್ದು ನಂತರ ಅಲ್ಲಿ ಸೇರಿದ ಜನರು ಹಾಗೂ ಮೋಟಾರ್ ಸೈಕಲ್ ಸವಾರ ಜಂಶೀದ್ ಪಿರ್ಯಾದಿದಾರರನ್ನು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಅತ್ತಾವರ ಕೆ.ಎಂ.ಸಿ.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.
Surathkal PS
ದಿನಾಂಕ 04-03-2023 ರಂದು ಪಿರ್ಯಾದಿದಾರರು Dr.Rakshitha D ತನ್ನ ಬಾಬ್ತು ಕಾರು KA-04-MU-6795ನೇ Hundai I20 ಕಾರನ್ನು ಸುರತ್ಕಲ್ ಕಡೆಯಿಂದ ಮುಕ್ಕ ಕಡೆಗೆ ಚಲಾಯಿಸಿಕೊಂಡು ಬೆಳಿಗ್ಗೆ 10:40 ಗಂಟೆ ಸುಮಾರಿಗೆ ಹೊಟೇಲ್ ಸೂರಜ್ ಇಂಟರ್ ನ್ಯಾಷನಲ್ ಬಳಿ ಅತ್ತ ರಚನಾ ಹೊಟೇಲ್ ಕಡೆಗೆ ತಿರುಗಿಸುತ್ತಿರುವಾಗ ಮುಕ್ಕ ಕಡೆಯಿಂದ KA-01-AF-0925 ನೇ ಟ್ರಕ್ ಲಾರಿಯ ಚಾಲಕನು ತನ್ನ ಟ್ರಕ್ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವಜೀವಕ್ಕೆ ಹಾನಿ ಮಾಡುವ ರೀತಿ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆಸಿ ರಸ್ತೆ ಬದಿಯಲ್ಲಿದ್ದ 02 ವಿದ್ಯುತ್ ಕಂಬಗಳಿಗೆ ಮತ್ತು ಹೋಟೇಲ್ ಸೂರಜ್ ಇಂಟರ್ ನ್ಯಾಷನಲ್ ನ ಕಂಪೌಂಡು ಗೋಡೆಗಳಿಗೆ ಡಿಕ್ಕಿ ಹೊಡೆಸಿದ ಪರಿಣಾಮ 02 ವಿದ್ಯುತ್ ಕಂಬಗಳು ಮತ್ತು ಸೂರಜ್ ಹೊಟೇಲ್ ನ ಕಂಪೌಂಡ್ ಗೋಡೆ ಹಾಗೂ ಪಿರ್ಯಾದಿದಾರರ ಕಾರು ಜಖಂಗೊಂಡು ನಷ್ಟ ಉಂಟುಮಾಡಿರುತ್ತಾರೆ, ಕಾರಿನಲ್ಲಿದ್ದ ಪಿರ್ಯಾದಿದಾರರ ತಾಯಿಗೆ ಗಾಯವಾಗಿರುತ್ತದೆ ಎಂಬಿತ್ಯಾದಿ.
Ullal PS
ದಿನಾಂಕ. 03-03-2023 ರಂದು ರಾತ್ರಿ 10-15 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕಿನ ಉಳ್ಳಾಲ ಗ್ರಾಮದ ಕೋಟೆಪುರ ಹಳೇ ಕಾರ್ಖಾನೆಯ ಬಳಿ ಫಿರ್ಯಾದಿ ಯು.ಕೆ.ಇಸ್ಮಾಯಿಲ್ ರವರ ಮಗ ಯು.ಕೆ.ಸದಗತ್ತುಲ್ಲ ರವರು ತನ್ನ ಮನೆಯ ಬಳಿ ಇರುವ ತನ್ನ ಸಹೋದರಿ ಅಬಿದಳ ಮನೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಅಲ್ಲಿ ಹೊಂಚು ಹಾಕಿ ಕುಳಿತುಕೊಂಡಿದ್ದ ಆರೋಪಿ ಕಬೀರ್ @ ಚದ್ದಿಯು ತನ್ನ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ಹಾಗೂ ರಾಝಿಕ್ನು ಕೈಯಲ್ಲಿ ರಾಡ್ ಹಿಡಿದುಕೊಂಡು ಸದಗತ್ತುಲ್ಲನನ್ನು ಕೊಲೆ ಮಾಡುವ ಉದ್ದೇಶದಿಂದ ಆತನನ್ನು ಮುಂದೆ ಹೋಗದಂತೆ ಸುತ್ತುವರಿದು ತಡೆದು ನಿಲ್ಲಿಸಿ ಸದಗತ್ತುಲ್ಲನನ್ನು ಉದ್ದೇಶಿಸಿ ಬೇವಾರ್ಸಿ ನಾಯಿಯ ಮಗನೆ, ನೀನು ಕೋಟೆಪುರದಲ್ಲಿ ದೊಡ್ಡ ಜನನ, ನಿನ್ನನ್ನು ಕಡಿದು ಕೊಲ್ಲುವೆವು ಎಂದು ಬೈದು ಬೆದರಿಕೆ ಹಾಕಿ ಕಬೀರ್ @ ಚದ್ದಿಯು ತನ್ನ ಕೈಯಲ್ಲಿದ್ದ ಚೂರಿಯಿಂದ ಸದಗತ್ತುಲ್ಲನ ಬಲ ಅಳ್ಳೆಗೆ ತಿವಿದು ರಕ್ತಗಾಯಗೊಳಿಸಿ ನಾಯಿಯ ಮಗನೆ ನೀನು ಸತ್ತು ಹೋಗು ಎಂದು ಬೆದರಿಕೆ ಹಾಕಿ ಮತ್ತೊಮ್ಮೆ ಚೂರಿಯಿಂದ ತಿವಿದಿದ್ದು, ನಂತರ ರಾಝಿಕ್ ನು ತನ್ನ ಕೈಯಲ್ಲಿದ್ದ ರಾಡ್ನಿಂದ ಸದಗತ್ತುಲ್ಲನ ತಲೆಗೆ ಹೊಡೆದು ಗಾಯಗೊಳಿಸಿದಾಗ ಸದಗತ್ತುಲ್ಲನು ತನ್ನ ಎಡಕೈಯನ್ನು ಅಡ್ಡ ತಂದಾಗ ಆತನ ಎಡಕೈಗೆ ಕಬೀರ್ @ ಚದ್ದಿಯು ಚೂರಿಯಿಂದ ಚುಚ್ಚಿ ಗಾಯಗೊಳಿಸಿದನು. ಆಗ ಸದಗತ್ತುಲ್ಲನು ಜೋರಾಗಿ ಕೂಗಿಕೊಂಡು ನನ್ನನ್ನು ಬಚಾವು ಮಾಡಿ, ಬಚಾವು ಮಾಡಿ ಎಂದು ಕೂಗುತ್ತಿದ್ದಾಗ ಫಿರ್ಯಾದಿದಾರರಿಗೆ ಮತ್ತು ಅವರ ಮನೆಯವರಿಗೆ ಅವರ ಬಳಿಗೆ ಹೋಗಲು ಹೆದರಿಕೆಯಾಗಿ ಅವರು ಕೂಡಾ ಜೋರಾಗಿ ಕೂಗಿ ನನ್ನ ಮಗನನ್ನು ಬಚಾವು ಮಾಡಿ ಯಾರಾದರೂ ಬನ್ನಿ ಎಂದು ಬೊಬ್ಬೆ ಹಾಕಿದಾಗ ಆ ಪರಿಸರದವರು ಬಂದಾಗ ಫಿರ್ಯಾದಿದಾರರು ಮತ್ತು ಮನೆಯವರು ಒಟ್ಟು ಸೇರಿಕೊಂಡು ಸದಗತ್ತುಲ್ಲನನ್ನು ರಕ್ಷಣೆ ಮಾಡಲು ಹತ್ತಿರ ಹೋದಾಗ ಕಬೀರ್ @ ಚದ್ದಿ, ರಾಝಿಕ್ ರವರು ಸದಗತ್ತುಲ್ಲನನ್ನು ಉದ್ದೇಶಿಸಿ ನಾಯಿಯ ಮಗನೆ, ಈಗ ನೀನು ಬಚಾವು ಆದೆ, ಇನ್ನೊಂದು ದಿನ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ನಾವು ಎಂದು ಬೆದರಿಸಿಕೊಂಡು ಅಲ್ಲಿಯೇ ಇದ್ದ ಮೂರು ಜನರು ಕಬೀರ್ @ ಚದ್ದಿ, ರಾಝಿಕ್ ರವರ ಜೊತೆ ಸೇರಿಕೊಂಡು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಗಾಯಾಳು ಸದಗತ್ತುಲ್ಲನನ್ನು ಫಿರ್ಯಾದಿ ಮತ್ತು ಇತರರು ಸೇರಿಕೊಂಡು ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿಕೊಂಡಂತೆ ಆತನನ್ನು ಸದರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ ಸಾರಾಂಶ.
Kankanady Town PS
ಪಿರ್ಯಾದಿ Mahammad Haneef ದಿನಾಂಕ 27.02.2023 ರಂದು ರಾತ್ರಿ ಸುಮಾರು 9:00 ಗಂಟೆ ಸಮಯಕ್ಕೆ ತಮ್ಮ ಬಾಬ್ತು KA-19-HA-0963 ನೇ ನಂಬ್ರದ ಬಜಾಜ್ ಪಲ್ಸರ್ ಎನ್.ಎಸ್ ಮೋಟಾರ್ ಸೈಕಲ್ಲಿನಲ್ಲಿ ಎಂದಿನಂತೆ ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಿ ಕೆಲಸ ಮುಗಿದ ಬಳಿಕ ರಾತ್ರಿ ಸುಮಾರು 9:00 ಗಂಟೆ ಸಮಯಕ್ಕೆ ವಾಪಾಸ್ಸು ನಾಗೂರಿಗೆ ಬಂದು ಭಾರತ್ ಸುಪರ್ ಬಝಾರ್ ಎದುರು ಬೈಕನ್ನು ಪಾರ್ಕ್ ಮಾಡಿ ಪ್ಲ್ಯಾಟಿಗೆ ಹೋಗಿದ್ದು, ಮರುದಿನ ದಿನಾಂಕ 28-02-2023 ರಂದು ಬೆಳಗ್ಗೆ 09:00 ಗಂಟೆ ಸುಮಾರಿಗೆ ಪಾರ್ಕಿಂಗ್ ಮಾಡಿದ ಸ್ಥಳಕ್ಕೆ ಬಂದಾಗ ಪಾರ್ಕ್ ಮಾಡಿದ್ದ ಸ್ಥಳದಲ್ಲಿ ಮೋಟಾರ್ ಸೈಕಲ್ ಸ್ಥಳದಲ್ಲಿ ಕಾಣಿಸದೇ ಇದ್ದು, ಪಾರ್ಕ್ ಮಾಡಿದ ಸ್ಥಳದ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ: 27.02.2023 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 28-02-2023 ರ ಬೆಳಗ್ಗೆ 9:00 ಗಂಟೆಯ ಮದ್ಯಾವಧಿಯಲ್ಲಿ ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್ ಸೈಕಲ್ ಬಗ್ಗೆ ಮಂಗಳೂರು ನಗರದ ಎಲ್ಲಾ ಕಡೆ ಹುಡುಕಾಡಿದಲ್ಲಿ ಇದುವರೆಗೂ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಕಳ್ಳತನವಾದ ಪಲ್ಸರ್ ಮೋಟಾರ್ ಸೈಕಲ್ಲಿನ ಅಂದಾಜು ಮೌಲ್ಯ ರೂ 80,000/- ಆಗಬಹುದು. ಎಂಬಿತ್ಯಾದಿ.
Kavoor PS
ಪಿರ್ಯಾದಿದಾರರು ಹಾಗೂ ತಮ್ಮ ಹೆಂಡತಿ ಯೊಂದಿಗೆ ದಿನಾಂಕ 19/02/2023 ರಂದು ರಾತ್ರಿ 10.00 ಗಂಟೆಗೆ ಮೇರಿಹಿಲ್ ನಲ್ಲಿರುವ ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಮೈಸೂರಿಗೆ ಹೋಗಿದ್ದು, ನಂತರ ದಿನಾಂಕ 03/03/2023 ರಂದು ಸಂಜೆ 6.30 ಗಂಟೆಗೆ ಪಿರ್ಯಾದಿದಾರರು ಹಾಗೂ ತಮ್ಮ ಹೆಂಡತಿ ಯೊಂದಿಗೆ ಮನೆಗೆ ಬಂದಾಗ ಮನೆಯ ಮುಂಬಾಗಿಲಿನ ಬೀಗವನ್ನು ಯಾವದೋ ಬಲವಾದ ಆಯುಧ ದಿಂದ ಮುರಿದಂತೆ ಇದ್ದು, ಮುಂಬಾಗಿಲನ್ನು ತೆರೆದು ಒಳಗೆ ಬಂದು ನೋಡಲಾಗಿ ಹಾಲ್ ನ ದಕ್ಷಿಣ ಪೂರ್ವಕ್ಕೆ ಇರುವ ಬೆಡ್ ರೂಮ್ ನ ಡೋರ್ ಲಾಕ್ ನ್ನು ಒಡೆದು ಬೇಡ್ ರೂಮಿನ ವಾರ್ಡ ರೂಫ್ ನ್ನು ತೆಗೆದು ಅದರಲ್ಲಿದ್ದ ಬಟ್ಟೆ ಹಾಗೂ ಇತರು ಸ್ವತ್ತುಗಳನ್ನು ಚಲ್ಲಾಪಿಲ್ಲಿಯಾಗಿ ಮಾಡಿ ವಾರ್ಡ ರೂಫ್ ನ ಸಣ್ಣ ಡ್ರಾವರ್ ನಲ್ಲಿದ್ದ ಸುಮಾರು 1) 3 ಗ್ರಾಂ ತೂಕದ ಚಿನ್ನದ ಪೆಂಡೆಂಟ್-1 ( ಹೂವಿನ ಡಿಸೈನ್ ಇರುವ )ಇದರ ಅಂದಾಜು ಮೌಲ್ಯ ರೂ 22.000/- ಆಗಬಹುದು. 2) 2 ಗ್ರಾಂ ತೂಕದ ಗೋಲ್ಡ್ ಕ್ವಾಯಿನ್-2 ಇದರ ಅಂದಾಜು ಮೌಲ್ಯ ರೂ 8.000/- ಆಗಬಹುದು. 3) 4 ಗ್ರಾಂ ತೂಕದ ಕಿವಿಯ ರಿಂಗ-2 ಜೊತೆ ಇದರ ಅಂದಾಜು ಮೌಲ್ಯ ರೂ 16.000/- ಆಗಬಹುದು. ಮತ್ತು ರೂ 4.000/- ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಕಳ್ಳತನವನ್ನು ಪಿರ್ಯಾದಿದಾರರು ಯಾರು ಮನೆಯಲ್ಲಿ ಇಲ್ಲದ ಸಮಯ ದಿನಾಂಕ 19/02/2023 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 03/03/2023 ರಂದು ಸಂಜೆ 6-30 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಈ ಮೇಲಿನ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವುದಾಗಿದೆ ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 50.000/- ಆಗಬಹುದು.
Bajpe PS
ಫಿರ್ಯಾದಿ Sumalatha ಎಂದಿನಂತೆ ದಿನಾಂಕಃ03-03-2023 ರಂದು ಬೆಳಿಗ್ಗೆ 8-00 ಗಂಟೆಗೆ ಸುಂಕದಕಟ್ಟೆಯ ಬಳಿ ಇರುವ ಹಮೀದ್ ಎಂಬವರ ಮನೆಯಲ್ಲಿ ಮನೆ ಕೆಲಸಕ್ಕೆಂದು ಹೋಗಿ ಅಲ್ಲಿ ಕೆಲಸವನ್ನು ಮುಗಿಸಿಕೊಂಡು ಕೈಕಂಬ-ಬಜಪೆ ರಸ್ತೆಯಲ್ಲಿ ಸಾಗರ ಚಿಕನ್ ಶಾಪ್ ಬಳಿ ಸುಮಾರು 12-15 ಗಂಟೆಗೆ ಮನೆ ಕಡೆ ನಡೆದುಕೊಂಡು ಬರುತ್ತಿರುವಾಗ ಫಿರ್ಯಾದಿದಾರರ ಹಿಂದಿನಿಂದ ಕೆಎ 19 ಎಬಿ 6897 ನೇ ಕಾರಿನ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಫಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ನೆಲಕ್ಕೆ ಬಿದ್ದಿದ್ದು ಆಗ ಕಾರಿನ ಚಾಲಕ ಹಾಗೂ ಅಲ್ಲಿ ಸೇರಿದ್ದ ಜನರು ಫಿರ್ಯಾದಿದಾರರನ್ನು ಬಜಪೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಅಂಬ್ಯಲೆನ್ಸ್ ನಲ್ಲಿ ಕಳುಹಿಸಿಕೊಟ್ಟಿದ್ದು ಅಲ್ಲಿ ಪರೀಕ್ಷಿಸದ ವೈದ್ಯರು ಒಳರೋಗಿಯಾಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಅಪಘಾತದಿಂದ ಫಿರ್ಯಾದಿದಾರರ ತಲೆಗೆ ಹಾಗೂ ಬಲಕಾಲಿಗೆ ರಕ್ತಗಾಯ ಮತ್ತು ಮುಖದ ಬಳಿ ತರಚಿದ ಗಾಯವಾಗಿರುತ್ತೆ ಎಂಬಿತ್ಯಾದಿ
Konaje PS
ದಿನಾಂಕ 03-03-2023 ರಂದು ಪಿರ್ಯಾದಿ Nagaraj S ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 17:00 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳ ಕಟ್ಟೆ ಬಸ್ ನಿಲ್ದಾಣದ ಬಳಿ ಮೈದಾನದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿಯನ್ನು ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.
Mangalore East Traffic PS
ಪಿರ್ಯಾದಿ ಟಿಂಕು ಪ್ರಾಯ-26 ವರ್ಷ ಎಂಬವರು ದಿನಾಂಕ: 02-03-2023 ರಂದು 16:30 ಗಂಟೆಗೆ ನಂತೂರು ತಾರೇತೋಟ ಎಂಬಲ್ಲಿ ಸೈಟ್ ಒಂದರಲ್ಲಿ ವುಡ್ ಪಾಲಿಶ್ ಕೆಲಸ ಮುಗಿಸಿ ಗೋಲು ಸೊನ್ಕರ್ ಮತ್ತು ಓಂಪ್ರಕಾಶ್ ಸಹಾನಿಯವರ ಜೊತೆ ನಂತೂರು ಕಡೆಯಿಂದ ಪಂಪ್ ವೆಲ್ ಕಡೆಗೆ ಹಾದು ಹೋಗಿರುವ ರಾ.ಹೆ 66 ರಲ್ಲಿ ಮುಂದಿನಿಂದ ಗೋಲು ಸೊನ್ಕರ್, ಆತನ ಹಿಂದೆ ಪಿರ್ಯಾದಿದಾರರು ಹಿಂದುಗಡೆಯಿಂದ ಓಂಪ್ರಕಾಶ್ ರವರು ರಸ್ತೆಯ ತೀರಾ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಎ.ಆರ್ ಎಂಟರ್ ಪ್ರೈಸಸ್ ಎದುರುಗಡೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ನಂತೂರು ಕಡೆಯಿಂದ ಪಂಪ್ ವೆಲ್ ಕಡೆಗೆ ಸಾಗಿರುವ ರಾ.ಹೆ 66 ರಸ್ತೆಯಲ್ಲಿ KL-14-AB-1862 ನೇ ನೊಂದಣಿ ನಂಬ್ರದ ಸ್ಕೂಟರ್ ಸವಾರ ಸೂರಜ್ ಎಂಬಾತನು ತನ್ನ ಸ್ಕೂಟರನ್ನು ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸವಾರನ ಹತೋಟಿ ತಪ್ಪಿ ಸ್ಕೂಟರ್ ಸ್ಕಿಡ್ ಆಗಿ ಜಾರುತ್ತಾ ಬಂದು ಡಿಕ್ಕಿಯಾದ ಪರಿಣಾಮ ಓಂಪ್ರಕಾಶ್ ಸಹಾನಿಗೆ ಬಲಕಾಲಿಗೆ ಪೆಟ್ಟಾಗಿದ್ದು, ಗೋಲು ಸೊನ್ಕರ್ ಗೆ ತಲೆಗೆ ರಕ್ತಗಾಯ ಮತ್ತು ಬಲಕಾಲಿಗೆ ತರಚಿದ ರಕ್ತಗಾಯವಾಗಿದ್ದು, ಪಿರ್ಯಾದಿದಾರರಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಬಲಕಾಲಿನ ಮೊಣಗಂಟಿಗೆ ಊದಿದ ಗಾಯ ಮತ್ತು ಹಣೆಯ ಬಲಭಾಗದಲ್ಲಿ ಗುದ್ದಿದ ರಕ್ತಕಂದಿದ ಗಾಯವಾಗಿದ್ದು, ಸ್ಕೂಟರ್ ಸವಾರ ಸೂರಜ್ ನು ಕೂಡಾ ರಸ್ತೆಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದು, ಅಲ್ಲಿ ಸೇರಿದ ಸಾರ್ವಜನಿಕರು ಗಾಯಾಳುಗಳನ್ನು ಅಟೋರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ ಓಂಪ್ರಕಾಶ್ ಸಹಾನಿ ಮತ್ತು ಗೋಲು ಸೋನ್ಕರ್ ರವರಿಗೆ ಹೊರರೋಗಿಯನ್ನಾಗಿ ಚಿಕಿತ್ಸೆಯನ್ನು ನೀಡಿದ್ದು, ಪಿರ್ಯಾದಿದಾರರಿಗೆ ಒಳರೋಗಿಯನ್ನಾಗಿ ಚಿಕಿತ್ಸೆಯನ್ನು ನೀಡಿರುವುದಾಗಿದೆ. ಈ ಅಪಘಾತಕ್ಕೆ KL-14-AB-1862 ನೇ ಸ್ಕೂಟರ್ ಸವಾರ ಸೂರಜ್ ರವರ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.
Mangalore Rural PS
ಫಿರ್ಯಾದಿ Monappa Poojary ರ ಮಗ ಕರುಣಾಕರ (48 ವರ್ಷ) ಎಂಬವನು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಅವಿವಾಹಿತನಾಗಿರುತ್ತಾನೆ. ಆತನು ವಿಪರೀತ ಶರಾಬು ಕುಡಿಯುತ್ತಿದ್ದು, ಇದರಿಂದಾಗಿ ಅನಾರೋಗ್ಯದಿಂದಿದ್ದು, ಇತ್ತೀಚೆಗೆ ಕೆಲಸವಿಲ್ಲದೇ ಶರಾಬು ಕುಡಿಯಲು ಹಣವಿಲ್ಲದೇ ಸ್ವಲ್ಪ ಮಟ್ಟಿಗೆ ಖಿನ್ನತೆಯಲ್ಲಿದ್ದನು. ದಿನಾಂಕ: 28-02-2023 ರಂದು ರಾತ್ರಿ ಕರುಣಾಕರನು ಸರಿಯಾಗಿ ನಿದ್ದೆ ಮಾಡದೇ ಒಬ್ಬನೇ ಮಾತನಾಡುತ್ತಿದ್ದು, ಪಿರ್ಯಾದಿದಾರರು ಮಲಗುವಂತೆ ತಿಳಿಸಿದರೂ ಕುಳಿತುಕೊಂಡೇ ಇದ್ದನು. ನಂತರ ಪಿರ್ಯಾದಿದಾರರು ಬೆಳಿಗ್ಗೆ ಮುಂಜಾನೆ 03.30 ಗಂಟೆಗೆ ಎದ್ದು ನೋಡಿದಾಗ ಕರುಣಾಕರನು ಮನೆಯಲ್ಲಿ ಎಲ್ಲಿಯೂ ಕಾಣದೇ ಇದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕರುಣಾಕರನು ಮಾನಸಿಕ ಖಿನ್ನತೆಯಿಂದ ಯಾರಿಗೂ ಹೇಳದೆ ಮನೆಯಿಂದ ಹೋದವನು ಈ ವರೆಗೂ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದು, ಕಾಣೆಯಾದ ಕರುಣಾಕರನನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ