ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic South Police Station                        

ಪಿರ್ಯಾದಿ AMARANATHA ಇವರ ತಾಯಿ ಸುಂದರಿ ಮತ್ತು ಮಕ್ಕಳಾದ ತನ್ವಿ ಹಾಗೂ ಶಾನ್ವಿ ರವರು ಜೊತೆಯಲ್ಲಿ ದಿನಾಂಕ:04-03-2024 ರಂದುತನ್ನ ಬಾಬ್ತು KA-19-MC-5066 ನೇ ಕಾರಿನಲ್ಲಿ  ದೇರಳಕಟ್ಟೆ ಬಗಂಬಿಲದಿಂದ ಮಂಗಳೂರು ಕಡೆಗೆ ಹೊರಟಿದ್ದು  ಕುತ್ತಾರ ಮದನಿ ನಗರ ತಲುಪುತ್ತಿದ್ದಂತೆ  ಬೆಳಿಗ್ಗೆ ಸುಮಾರು 8.00 ಗಂಟೆಗೆ ಕಾರಿನ ಹಿಂದಿನಿಂದ ನಿಟ್ಟೆ ಕಾಲೆಜಿಗೆ ಸಂಬಂಧಿಸಿದ KA-19-AD-7775 ನೇ ಬಸ್ಸಿನ ಚಾಲಕ ಗುರುಪ್ರಸಾದ್ ಕೆ ರವರು ತನ್ನ ಬಸ್ಸನ್ನು ಒಮ್ಮೆಲೇ ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರು ಅವರ ಮುಂದೆ ಚಲಿಸುತ್ತಿದ್ದ KA-02-MT-5784 ನೇ ಕಾರಿಗೆ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದ ಪರಿಣಾಮ  ಪಿರ್ಯಾದಿದಾರರ ತಾಯಿ ಸುಂದರಿ ಯವರಿಗೆ ತಲೆಗೆ ಗುದ್ದಿದ ಗಾಯ ಮತ್ತು ಪಿರ್ಯಾದಿದಾರರ ಮಗಳು ತನ್ವಿಗೆ ಬಲಗೈಗೆ ಗುದ್ದಿದ ಗಾಯವಾಗಿರುತ್ತದೆ ಪಿರ್ಯಾಧಿದಾರರಿಗೆ ಹಾಗೂ ಇನ್ನೊರ್ವ ಮಗಳಾದ ಶಾನ್ವಿಗೆ ಯಾವುದೇ ಗಾಯಗಳಾಗಿರುವುದಿಲ್ಲ. KA-02-MT-5784 ನೇ ಕಾರಿನ ಚಾಲಕನ ಹೆಸರು  ಆನಂದ ಮೊಯಿಲಿ ಆಗಿರುತ್ತದೆ. ಗಾಯಾಳುಗಳು ಕೆ.ಎಸ್.ಹೆಗ್ಡೆ ಆಸ್ಪತ್ರೆಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

Traffic North Police Station                         

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Likhit Dinesh Kunderಇವರು ದಿನಾಂಕ 03.03.2024 ರಂದು ಬೆಳಿಗ್ಗೆ ತನ್ನ ತಾಯಿಯ ಬಾಬ್ತು ಕಾರು ನಂಬ್ರ KA-20ME-5811 ರಲ್ಲಿ ತನ್ನ ಮಾವ ಅನುರಾದ್ ಮತ್ತು ಸಹೋದರಿ ಅಥಿತಿರವರನ್ನು ಕುಳ್ಳಿರಿಸಿಕೊಂಡು ಕಾರನ್ನು ನಾನು ಚಲಾಯಿಸಿಕೊಂಡು ಮುಲ್ಕಿಯಿಂದ ಪುನರೂರು ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 11:30 ಗಂಟೆಗೆ ಸೀಮಂತೂರು ದ್ವಾರದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಪೂನರೂರು ಕಡೆಯಿಂದ ಕಾರು ನಂಬ್ರ KA-19ML-6572 ನೇಯದನ್ನು ಅದರ ಚಾಲಕ ತೇಜಸ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕೈಯ ನಡುವಿನ ಬೆರಳಿಗೆ ರಕ್ತ ಗಾಯ, ಬಲ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಎಡ ಕೆನ್ನಗೆ ತರಚಿದಗಾಯವಾಗಿದ್ದು, ಕಾರಿನಲ್ಲಿದ್ದ ಅಥಿತಿ (16 ವರ್ಷ) ಈಕೆಯ ಹಣೆಯ ಬಲಬದಿಗೆ ಗುದ್ದಿದ ಗಾಯವಾಗಿದ್ದು ಮಾವ ಅನುರಾದ್ ರವರಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ.  ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

 Kankanady Town PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 04-02-2024 ರಂದು  ಮಂಗಳೂರು ನಗರದ ಜಪ್ಪಿನಮೊಗರುನಲ್ಲಿರುವ ದ್ವಾರದ ಬಳಿ ಮಾದಕ   ವಸ್ತು ಗಾಂಜಾವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪಿ, ಚೇತನ್ ಕುಮಾರ್ , ಪ್ರಾಯ: 24 ವರ್ಷ  ಎಂಬಾತನನ್ನು, ಮುಂದಿನ ಕ್ರಮದ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆರೋಪಿಯು ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ-27 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ  ದಾಖಲಿಸಿಕೊಂಡಿರುವುದಾಗಿದೆ

 

Moodabidre PS         

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 03-03-2024 ರಂದು ಪಿರ್ಯಾದಿದಾರರಾದ ಪ್ರದೀಪ್ ರವರು ತನ್ನ ಮಿತ್ರನಾದ ಸಂಜಿತ್ ಎಂಬಾತನ ಜೊತೆ KA 19 HD 0252 ನಂಬ್ರದ ಸ್ಕೂಟರಿನಲ್ಲಿ ಆತನು ಸವಾರನಾಗಿ ಪಿರ್ಯಾದಿದಾರರು ಸಹ ಸವಾರರಾಗಿ ಮೂಡಬಿದ್ರೆಯ ಕಡಲಕೆರೆ ಕಡೆಯಿಂದ ಕಾನ ಮಸೀದಿ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಹೋಗುತ್ತಾ ಸಂಜೆ ಸುಮಾರು 5:55 ಗಂಟೆ ಸಮಯಕ್ಕೆ ಕಾನ ಬಳಿಯ ಬಾಬು ಕಂಪೌಂಡು ಮುಂಭಾಗ ತಲುಪಿದಾಗ ಮುಂಡ್ರೊಟ್ಟು ಕಡೆಯಿಂದ ಕಡಲಕೆರೆಯ ಕಡೆಗೆ KA 19 P 8011 ನಂಬ್ರದ ಕಾರನ್ನು ಅದರ ಚಾಲಕ ಮಹೇಶ್ ಎಂಬಾತನು ಅತೀ ವೇಗ ಹಾಗು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಂಜಿತ್ ರವರು ಸ್ಕೂಟರ್ ಸಮೆತ ಡಾಮಾರು ರಸ್ತೆಗೆ ಎಸೆಯಲ್ಪಟ್ಟು, ಪಿರ್ಯಾದಿದಾರರ ಎಡ ಕಾಲಿಗೆ ಗುದ್ದಿದ ಸಾಮಾನ್ಯ ಸ್ವರೂಪದ ಗಾಯವಾಗಿ, ಸಂಜಿತ್ ರವರ ಎಡ ಕೈಗೆ ಮೂಳೆ ಮುರಿತದ ಗಾಯ ಮತ್ತು ಹೊಟ್ಟೆಗೆ ಗುದ್ದಿದ ಗಂಭೀರ ರೀತಿಯ ಗಾಯವಾಗಿದ್ದು ಚಿಕಿತ್ಸಯೆ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 04-03-2024 10:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080