ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Rahul Raghavendra Nayak  ಇವರು ದಿನಾಂಕ 03-04-2024 ರಂದು ತನ್ನ ಸಹಪಾಠಿಯವರಾದ ಸಮರ್ಥ, ಮಲ್ಲಿಕಾರ್ಜುನ, ನಿದೀಶ್ ಎಂಬರೊಂದಿಗೆ ಕಾಜೇಜು ಮುಗಿಸಿಕೊಂಡು ಸಂಜೆ ಕಾಟಿಪಳ್ಳದಲ್ಲಿರುವ ಹಾಸ್ಟೇಲ್ ಗೆ ಹೋಗುವ ಸಲುವಾಗಿ ಕಾಲೇಜಿನ ಕ್ಯಾಂಟಿನ್ ಗೆ ಸೇರಿದ  ಟಾಟಾ ACE ಕಂಪನಿಯ KA-20-D-7578 ನಂಬ್ರದ ವಾಹನದಲ್ಲಿ ಚಾಲಕ ಪ್ರೇಮಕುಮಾರ ರವರ ಮುಂದಿನ ಸೀಟಿನ ಬದಿಯಲ್ಲಿ ಮಲ್ಲಿಕಾರ್ಜುನ ಕುಳ್ಳಿತುಕೊಂಡು ಪಿರ್ಯಾದಿದಾರರು ಮತ್ತು ಸಮರ್ಥ, ನಿದೀಶ್ ಹಿಂದುಗಡೆ ಬಾಡಿಯಲ್ಲಿಕುಳ್ಳಿತುಕೊಂಡು ಕಾಲೇಜು ಕ್ಯಾಂಪಸ್ ನಿಂದ ಕಾಟಿಪಳ್ಳ ಹಾಸ್ಟೇಲ್ ವಾಹನವನ್ನು ಪ್ರೇಮಕುಮಾರ್ ರವರು ಚಲಾಯಿಸುತ್ತಾ ಸುರತ್ಕಲ್ ಜಂಕ್ಷನಿನಲ್ಲಿ ನಿದೀಶ್ ನನ್ನು ಇಳಿಸಿ, ಅಲ್ಲಿಂದ ಮುಂದಕ್ಕೆ ಪಿರ್ಯಾದಿದಾರರು ಮತ್ತು ಸಮರ್ಥ ಹಿಂದುಗಡೆ ಬಾಡಿಯಲ್ಲಿ ಕುಳ್ಳಿತುಕೊಂಡು ಮುಂದಕ್ಕೆ ಹೋಗುತ್ತಾ ಸಮಯ ಸುಮಾರು ಸಂಜೆ 5 ಗಂಟೆಗೆ MRPL ನ ರೋಡ್ ವಿಶಾಲ ಮಾರ್ಟ್ ಬಳಿ ತಲುಪುತ್ತಿದ್ದಂತೆ ಹಿಂದುಗಡೆ ಪಿರ್ಯಾದಿದಾರರೊಂದಿಗೆ ಕುಳ್ಳಿತ್ತಿದ್ದ ಸಮರ್ಥ ಒಮ್ಮಲೇ ಆಯಾತಪ್ಪಿ ಟಾಟಾ ACE ಕ್ಯಾಂಟೀನ್ ಗಾಡಿಯ ಬಾಡಿಯಿಂದ ಹೊರಕ್ಕೆ ರಸ್ತೆಗೆ ಬಿದ್ದು, ಸಮರ್ಥ ರವರ ತಲೆಯ ಹಿಂಬದಿಗೆ ಗುದ್ದಿದಂತಹ ಗಂಭೀರ ಸ್ವರೂಪದ ಒಳನೋವಾಗಿ ಕಿವಿಯಲ್ಲಿ ರಕ್ತ ಬರುತ್ತಿದ್ದು, ನಂತರ ಚಿಕಿತ್ಸೆಯ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Vishwanatha ಇವರು  ದಿನಾಂಕ 03-04-2024 ರಂದು ಅಗತ್ಯ ಕೆಲಸದ ಮೇರೆಗೆ ಮನೆಯಿಂದ ಸುರತ್ಕಲ್ ಗೆ ಬಂದಿದ್ದು, ಸುರೇಶ್ ಎಲೆಕ್ಟ್ರಾನಿಕ್ಸ್ ಅಂಗಡಿಯ ಪಕ್ಕದಲ್ಲಿರುವ ಪಾತ್ರೆ ಅಂಗಡಿಗೆ ಹೋಗಿ ಅಲ್ಲಿಂದ ಮಂಗಳೂರು ಉಡುಪಿ ರಸ್ತೆಯನ್ನು ಪ್ಲೈಓವರ್ ಕಡೆಗೆ ದಾಟುತ್ತಿರುವಾಗ ಸಾಯಂಕಾಲ ಸಮಯ ಸುಮಾರು 6:10 ಗಂಟೆಗೆ ಮಂಗಳೂರು ಕಡೆಯಿಂದ ಮುಕ್ಕ ಕಡೆಗೆ KA-19-HA-0988 ನಂಬ್ರದ ಸ್ಕೂಟರ್ ನ್ನು ಅದರ ಸವಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಭುಜಕ್ಕೆ, ಬಲಕೋಲು ಕಾಲಿನ ಬಳಿ ಗುದ್ದಿದ ರೀತಿಯ ಗಾಯ ಮತ್ತು ತಲೆಯ ಹಿಂಭಾಗಕ್ಕೆ ಚರ್ಮ ತರಚಿದ ರೀತಿಯ ಗಾಯವಾಗಿರುತ್ತದೆ. ನಂತರ ಚಿಕಿತ್ಸೆಯ ಬಗ್ಗೆ ಸುರತ್ಕಲಿನ ಪದ್ಮಾವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಡಿಕ್ಕಿ ಪಡಿಸಿದ ಸ್ಕೂಟರ್ ಸವಾರ ಅಪಘಾತ ಸ್ಥಳದಲ್ಲಿ ಸ್ಕೂಟರನ್ನು ನಿಲ್ಲಿಸದೇ ಸ್ಕೂಟರ್ ಸಮೇತ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ

 

Urva PS

ದಿನಾಂಕ:04-04-2024 ರಂದು ಸಮಯ ಸುಮಾರು ಮದ್ಯಾಹ್ನ 2-00 ಗಂಟೆಗೆ ಕೊಟ್ಟಾರ ಚೌಕಿ ಪ್ಲೈ ಓವರ್ ಎದುರುನಲ್ಲಿರುವ  ಸುವರ್ಣ ಟ್ರೇಡರ್ಸ್ ಬಳಿಯಲ್ಲಿ ಪಿರ್ಯಾದಿ LOKESH KUMAR   ಇವರು ತನ್ನ KA19HQ3116 ನೇ ಹೋಂಡಾ ಶೈನ್ ದ್ವಿಚಕ್ರ ವಾಹನವನ್ನು ಕೀ ಸಮೇತ ಪಾರ್ಕ್ ಮಾಡಿದ್ದು,   ಸುಮಾರು 2-05 ಗಂಟೆಗೆ ವಾಪಾಸ್ಸು ಬಂದು ನೋಡಿದಾಗ ಮೋಟಾರು ಸೈಕಲ್ ಪಾರ್ಕ್ ಮಾಡಿದ ಜಾಗದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಕಳವು ಆಗಿರುವ  ಮೋಟಾರು  ಸೈಕಲ್  ನ  ಮೌಲ್ಯ  95000 /-  ಆಗಬಹುದು, ಆದ್ದರಿಂದ  ಕಳವು ಆಗಿರುವ  ಮೋಟಾರು  ಸೈಕಲ್  ನ್ನು  ಪತ್ತೆ ಮಾಡಿಕೊಡಬೇಕಾಗಿ  ನೀಡಿದ  ಪಿರ್ಯಾದಿಯ  ಸಾರಾಂಶವಾಗಿರುತ್ತದೆ.

 

Mangalore North PS

ಪಿರ್ಯಾದಿದಾರರಾದ ಕೃಷ್ಣ ಕಿಶೋರ್ ಎಂಬುವವರು ದಿನಾಂಕ 04/04/2024 ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತನ್ನ ತಮ್ಮ ಸುಕೇಶ್ ಎಂಬವರ ಹೆಸರಿನಲ್ಲಿರುವ ಹೀರೋ ಹೋಂಡಾ Splendor KL-14 B-8034  ನೇ ದ್ವಿಚಕ್ರ ವಾಹನವನ್ನು ದಿನಾಂಕ 21/03/2024 ರಂದು ಬೆಳಿಗ್ಗೆ 09-20 ಗಂಟೆಗೆ ಮಂಗಳೂರು ನಗರದ ಪಿ.ವಿ.ಎಸ್ ವೃತ್ತದ ಬಳಿ ಇರುವ ಕಾರ್ ಪಾರ್ಕಿಂಗ್ ಸ್ಥಳದ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಪಿರ್ಯಾದಿದಾರರು ಮಣಿಪಾಲ್ ಸಿಗ್ನ ಹೆಲ್ತ್ ಇನ್ಸೂರೆನ್ಸ್ ಕಂಪನಿಗೆ ತೆರಳಿದ್ದು ನಂತರ ಕೆಲಸ ಮುಗಿಸಿ ಸಂಜೆ 05-30 ಗಂಟೆಗೆ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದಾಗ ಸದ್ರಿ ಹೀರೋ ಹೋಂಡಾ Splendor KL-14 B-8034  ನೇ ಮೋಟಾರ್ ಸೈಕಲ್ ಇರದೇ ಕಾಣೆಯಾಗಿದ್ದು ಸದ್ರಿ ಮೋಟಾರ್ ಸೈಕಲನ್ನು ಈ ವರೆಗೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ದೃಢಪಟ್ಟಿರುವುದರಿಂದ ಈ ದೂರನ್ನು ಈ ದಿನ ತಡವಾಗಿ ನೀಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 06-04-2024 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080