Feedback / Suggestions

Crime Reports:  CEN Crime PS Mangaluru City       

ಪಿರ್ಯಾದಿ ದಿನಾಂಕ 26-04-2023 ರಂದು ಪಿರ್ಯಾದಿದಾರರು ವೈಸೂರಿಗೆ ತೆರಳಲು IRCTC ಯಲ್ಲಿ ಟಿಕೆಟ್ ಬುಕ್ ಮಾಡಿದ್ದು ಕಾರಣಾಂತರಗಳಿಂದ ಅದನ್ನು ದಿನಾಂಕ 03-05-2023 ರಂದು ಮಧ್ಯಾಹ್ನ 15-00 ಗಂಟೆಗೆ ಪಿಯ್ಯಾದಿದಾರರು ಟಿಕೆಟನ್ನು ರದ್ದು ಪಡಿಸಲು  ಸಲುವಾಗಿ ಪಿಯ್ಯಾದಿದಾರರ ಮೊಬೈಲ್ನಿಂದ   IRCTC ವೆಬ್ ಸೈಟ್ ನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ  ಯಾರೋ ಅಪರಿಚಿತ ವ್ಯಕ್ತಿ 6290545713 ನೇ ನಂಬ್ರ ನಿಂದ  ಪಿರ್ಯಾದಿದಾರರಿಗೆ ಕರೆ ಮಾಡಿ ಪಿರ್ಯಾದಿದಾರರು  ವಿಚಾರ ತಿಳಿಸಿದಾಗ ಪಿರ್ಯಾದಿದಾರರಲ್ಲಿ ಅವರು  ಹಣವನ್ನು ಹಿಂಪಡೆಯಲು ಗೂಗಲ್ ಪ್ಲೇ ಸ್ಟೋರ್ನಿಂದ ANY DESK ಆಪ್ನ್ನು  ಇನ್ಸ್ಟಾಲ್ ಮಾಡುವರೇ ತಿಳಿಸಿರುತ್ತಾರೆ. ಅದನ್ನು ನಂಬಿದ ಪಿರ್ಯಾದಿದಾರರು ಸದ್ರಿ ಆಪ್ನ್ನು ಡೌನ್ಲೋಡ್ ಮಾಡಿರುತ್ತಾರೆ. ತದ ನಂತರ  ಕರೆ ಸ್ವೀಕರಿಸಿದ ವ್ಯಕ್ತಿಯು ಪಿರ್ಯಾದಿದಾರರಲ್ಲಿ ಅವರ ಮೊಬೈಲ್ಗೆ ಬಂದಂತಹ ಲಿಂಕ್ ಒತ್ತುವರೇ ತಿಳಿಸಿದ್ದು, ಪಿರ್ಯಾದಿದಾರರು ಅವರು ಕಳುಹಿಸಿದ ಲಿಂಕ್ನ್ನು ಒತ್ತಿದ ಬಳಿಕ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ. 1,24,839/- ಹಣವು ಪಿರ್ಯಾದಿದಾರರ ಖಾತೆಯಿಂದ ಆರೋಪಿಯು ತನ್ನ ಖಾತೆಗೆ ವರ್ಗಾಯಿಸಿಕೊಂಡು ಪಿರ್ಯಾದಿದಾರರಿಗೆ ಮೋಸ ಮಾಡಿರುತ್ತಾರೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿದೆ.

CEN Crime PS Mangaluru City

ಪಿರ್ಯಾದಿ ದಿನಾಂಕ-02-05-2023 ರಂದು ಬೆಳಿಗ್ಗೆ 9.30 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿಯ 9630124938 ನಂಬ್ರದಿಂದ  ಪಿರ್ಯಾದಿದಾರರ ಮೊಬೈಲ್ ನಂಬ್ರ-ನೇದ್ದರ ವಾಟ್ಸಪ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ.ನಂತರ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಟೆಲಿಗ್ರಾಮ್ ಆಪ್ ನ https://t.me/Dam462 ಲಿಂಕ್ ಅನ್ನು ಕಳಿಹಿಸಿರುತ್ತಾರೆ,ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ DAILY TASK ಎಂಬುದಾಗಿ ಅದರಲ್ಲಿ  PREPAID TASK  ಕಳುಹಿಸಿ ಆ ವ್ಯಕ್ತಿಯು  ಆತನ ಬ್ಯಾಂಕ್ ವಿವರ ಕಳುಹಿಸಿ ಹಣ ಜಮಾ ಮಾಡುವಂತೆ ತಿಳಿಸಿರುತ್ತಾರೆ , ಅದರಂತೆ ಪಿರ್ಯಾದಿದಾರರು ಮೊದಲು ಮೊಬೈಲ್ ಬ್ಯಾಂಕಿಂಗ್ ಮೂಲಕ 15,000/- ಹಣವನ್ನು ವರ್ಗಾಯಿಸಿರುತ್ತಾರೆ,ನಂತರ ಆರೋಪಿಯು ಪಿರ್ಯಾದಿದಾರರಲ್ಲಿ ಟಾಸ್ಕ್ ಬಗ್ಗೆ ಹಣವನ್ನು ತೊಡಗಿಸಿದ್ದಲ್ಲಿ ದ್ವಿಗುಣ ಮಾಡುವುದಾಗಿ ತಿಳಿಸಿ 3 ಟಾಸ್ಕ್ ಮಾಡಲು ತಿಳಿಸಿದ್ದು ಬಳಿಕ ಪಿರ್ಯಾದಿದಾರರು ಆರೋಪಿಯ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ  ರೂಪಾಯಿ-7,41,536/- ಹಣವನ್ನು  ವರ್ಗಾಯಿಸಿದ್ದು ಆರೋಪಿಯು ಪಾರ್ಟ್ ಟೈಂ ಜಾಬ್ ಎಂದು ನಂಬಿಸಿ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Mangalore East Traffic PS

ಪಿರ್ಯಾದಿ ಶ್ರೀಮತಿ ತಾಜುನ್ನೀಸಾ (ಪ್ರಾಯ 49 ವರ್ಷ) ರವರು ದಿನಾಂಕ 02-05-2023 ರಂದು ತನ್ನ ಗಂಡ ಅಬ್ದುಲ್ ಖಾದರ್ ಶೇಖ್ ಇಕ್ಬಾಲ್ ರವರೊಂದಿಗೆ ಟೈಲರಿಂಗ್ ವೃತ್ತಿಗೆ ಬೇಕಾದ ಸಾಮಾನುಗಳನ್ನು ತರಲು ಸ್ಟೇಟ್ ಬ್ಯಾಂಕ್ ಗೆ ಹೋಗಿ ಸಾಮಾನುಗಳನ್ನು ಖರೀದಿಸಿ ವಾಪಾಸ್ ಮನೆಯ ಕಡೆಗೆ ಹೊರಟು  KA-19-EM-4519 ನೊಂದಣಿ ನಂಬ್ರದ ಸ್ಕೂಟರಿನಲ್ಲಿ ಅಬ್ದುಲ್ ಖಾದರ್ ಶೇಖ್ ಇಕ್ಬಾಲ್ ರವರು ಸವಾರರಾಗಿ ಪಿರ್ಯಾದಿದಾರರು ಹಿಂಬದಿ ಸಹ ಸವಾರೆಯಾಗಿ ಕುಳಿತುಕೊಂಡು ಹಂಪನಕಟ್ಟೆಯಿಂದ ಎಸ್.ಎಲ್. ಮಥಾಯಸ್ ಮಾರ್ಗವಾಗಿ ಬರುತ್ತಾ ಮಧ್ಯಾಹ್ನ ಸಮಯ ಸುಮಾರು 1.30 ಗಂಟೆಗೆ ಕಾಫ್ರಿಗುಡ್ಡೆ ರಸ್ತೆಯಲ್ಲಿ ZEPHYR ಎಂಬ ಹೆಸರಿನ ಮನೆಯ ಎದುರುಗಡೆ ಇರುವ ರಸ್ತೆಯ ಉಬ್ಬು ಬಳಿ ಬಂದು ತಲುಪುತ್ತಿದ್ದಂತೆ ಪಿರ್ಯಾದಿದಾರರ ಗಂಡ ಅಬ್ದುಲ್ ಖಾದರ್ ಶೇಖ್ ಇಕ್ಬಾಲ್ ರವರು ಸ್ಕೂಟರನ್ನು ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ರಸ್ತೆಯ ಉಬ್ಬು ಮೇಲೆ ಹಾರಿಸಿಕೊಂಡು ಹೋದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು,  ಸೊಂಟದ ಬಲ ಭಾಗಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಬಲ ಕೈ ಮೊಣಗಂಟಿನ ಬಳಿ ತರಚಿದ ಗಾಯಗೊಂಡು. ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ. ಪಿರ್ಯಾದಿದಾರರು ಮೊದಲು ತನಗಾದ ಗಾಯ ಸಾಮಾನ್ಯದೆಂದು ಭಾವಿಸಿದ್ದು, ನಂತರ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಪಿರ್ಯಾದಿದಾರರ ಗಂಡ ಅಬ್ದುಲ್ ಖಾದರ್ ಶೇಖ್ ಇಕ್ಬಾಲ್ ರವರ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.       

Traffic North Police Station

ಪಿರ್ಯಾದಿ Kiran Kumar M ಸ್ನೇಹಿತನಾದ ಚೇತನ್ ರವರು ದಿನಾಂಕ 04-05-2023 ರಂದು KA-14-ER-1194 ನಂಬ್ರದ ಸ್ಕೂಟರಿನಲ್ಲಿ NITK ಕಡೆಯಿಂದ ಮುಕ್ಕ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ, ರಾತ್ರಿ ಸಮಯ ಸುಮಾರು 01:00 ಗಂಟೆಗೆ ರೆಡ್ ರಾಕ್ ಕ್ರಾಸ್  ಹತ್ತಿರ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಅವರ ಸ್ಕೂಟರಿನ ಹಿಂದುಗಡೆಯಿಂದ ನಂಬ್ರ ತಿಳಿಯದ ವಾಹನವೊಂದನ್ನು ಅದರ ಚಾಲಕ ವೇಗವಾಗಿ ಚಲಾಯಿಸಿಕೊಂಡು ಬಂದು ಚೇತನ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಚೇತನ್ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಜಾರಿಕೊಂಡು ಹೋಗಿ, ಅವರ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು, ಬಲಕಣ್ಣಿನ ಹುಬ್ಬಿಗೆ ಗುದ್ದಿದ ಗಾಯ, ಎಡ ಮೊಣಕೈ, ಬಲ ಕೋಲುಕೈ, ಬಲ ತೊಡೆ ಹಾಗೂ ಬೆನ್ನಿಗೆ ತರಚಿದ ಗಾಯಗಳಾಗಿ ಮಾತನಾಡದ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಚೇತನ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಅಪರಿಚಿತ ವಾಹನದ ಚಾಲಕನು ವಾನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Traffic North Police Station

ಪಿರ್ಯಾದಿ Vishvanatha Poojary  ಸಹೋದರ ಶೇಖರ ಪೂಜಾರಿ ಯವರು ನಿನ್ನೆ ದಿನಾಂಕ 03-05-2023 ರಂದು ಮನೆಗೆ ಸಾಮಾನು ಖರೀದಿಸುವ ಸಲುವಾಗಿ ಹೋಗಿದ್ದವರು ರಾತ್ರಿ ಸಮಯ ಸುಮಾರು 8:30 ಗಂಟೆಗೆ ಕಿನ್ನಿಗೋಳಿಯ ಮೂರುಕಾವೇರಿ ಲಲಿತ್ ಬಾರ್ ಬಳಿ ಕಿನ್ನಿಗೋಳಿ ಮೂಡಬಿದ್ರೆ ಡಾಮಾರು ರಸ್ತೆಯನ್ನು ದಾಟುತ್ತಿರುವಾಗ ಮೂಡಬಿದ್ರೆ ಕಡೆಯಿಂದ KA-04-EA-3288 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರನಾದ ಸುರೇಶ್ ಎಂಬಾತನು ಬಿನಯ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶೇಖರ ಪೂಜಾರಿ ಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಶೇಖರ ಪೂಜಾರಿ ಯವರು ಡಾಮಾರು ರಸ್ತೆಯಿಂದ ಮಣ್ಣು ರಸ್ತೆಗೆ ಎಸೆಯಲ್ಪಟ್ಟು ಅವರ ತಲೆಗೆ ಗುದ್ದಿದ ರೀತಿಯ ಒಳಗಾಯ ಆಗಿದ್ದು, ಮೋಟಾರು ಸೈಕಲ್ ಸವಾರ ಸುರೇಶ್ ಹಾಗೂ ಸಹಸವಾರ ಬಿನಯ್ ರವರಿಗೂ ಕೂಡಾ ಸಣ್ಣ ಪುಟ್ಟ ಗಾಯಗಳಾಗಿದ್ದು, ಮೂರೂ ಜನ ಗಾಯಾಳುಗಳು ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶೇಖರ ಪೂಜಾರಿ ಯವರು ಈ ದಿನ ದಿನಾಂಕ 04-05-2023 ರಂದು ಬೆಳಿಗ್ಗೆ 06:30 ಗಂಟೆಗೆ ಮಾತನಾಡದ ಸ್ಥಿತಿಯಲ್ಲಿದ್ದು, ಯಾವುದೇ ಚಲನೆಯು ಕೂಡಾ ಕಂಡುಬಾರದ ಕಾರಣ ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಒಳರೋಗಿಯಾಗಿ ದಾಖಲಿಸಿದ್ದು ಗಾಯಾಳು ಶೇಖರ ಪೂಜಾರಿ ಯವರನ್ನು  ಪರಿಶೀಲಿಸಿದ ವೈದ್ಯರು ತಲೆಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಒಳಗಾಯ ಆಗಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

                                          

CEN Crime PS Mangaluru City              

ದಿನಾಂಕ 02-05-2023 ರಂದು ಪಿರ್ಯಾದಿದಾರರ ಮೊಬೈಲ್ ನಂಬ್ರ:  ನೇದಕ್ಕೆ ಮೊಬೈಲ್ ನಂಬ್ರ: +917752-036087 ನೇದರಿಂದ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ ಕೆವೈಸಿ ಅಪ್ ಡೇಟ್ ಮಾಡಬೇಕೆಂದು ಎಂಬುದಾಗಿ ಸಂದೇಶ  ಬಂದಿರುತ್ತದೆ. ನಂತರ ದಿನಾಂಕ 03-05-2023 ಪಿರ್ಯಾದಿದಾರರಿಗೆ ಮೊಬೈಲ್ ನಂಬ್ರಗೆ ಅದೇ ರೀತಿ ಇನ್ನೋಂದು  ಮೊಬೈಲ್ +919002344077 ನಂಬ್ರನಿಂದ ವಾಟ್ಸಾಫ್ ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿಯು ನಾನು ಕೆನರಾ ಬ್ಯಾಂಕ ಕೆವೈಸಿ ಅಪ್ ಡೇಟ್ ಮಾಡುವ ಅಧಿಕಾರಿ ಎಂದು ತಿಳಿಸಿ ನಂತರ ಫಿರ್ಯಾದಿದಾರರ ಕೆನರಾ ಬ್ಯಾಂಕ್  ಕಸ್ಟಮರ್ ಐಡಿ ನೀಡುವಂತೆ ತಿಳಿಸಿದ್ದು ಅದರಂತೆ ಕಸ್ಟಮರ್ ಐಡಿ ಆ ವ್ಯಕ್ತಿಗೆ ತಿಳಿಸಿದ್ದು ನಂತರ ವ್ಯಕ್ತಿಯು ಫಿರ್ಯಾದಿದಾರರಿಗೆ ನಿಮ್ಮ ಕೆನರಾ ಬ್ಯಾಂಕ್ ನಲ್ಲಿ ಎರಡು ಕಸ್ಟಮರ್ ಐಡಿ ನೊಂದಣೆ ಆಗಿರುವು ಕಂಡು ಬರುವುದಾಗಿ ತಿಳಿಸಿ ಅದನ್ನು ಒಂದೇ ಕಸ್ಟಮರ್ ಐಡಿಯನ್ನಾಗಿ ಪರಿವರ್ತಿಸಬೇಕು ಎಂಬುದಾಗಿ ತಿಳಿಸಿ ನಂತರ ಆ ವ್ಯಕ್ತಿಯು ಫಿರ್ಯಾದಿದಾರರಿಗೆ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ಶೇರ್ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆ ಒಟಿಪಿ ಯನ್ನು ಆ ವ್ಯಕ್ತಿಗೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಒಟಿಪಿ ನೀಡಿದ ಕೂಡಲೇ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ:  ನೇದರಿಂದ ರೂಪಾಯಿ 94,500/- ಹಣವನ್ನು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಯನ್ನು ಪಡೆದುಕೊಂಡು  ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Kavoor PS

 ದಿನಾಂಕ: 03/05/2023 ರಂದು ಪಿರ್ಯಾದಿ RAGHU NAYAK ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಧ್ಯಾಹ್ನ 15.00 ಗಂಟೆಗೆ ದೇರೆಬೈಲ್ ಗ್ರಾಮದ ಬಿ.ಎಂ.ಎಸ್ ಹೋಟೆಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದಾನೆ, ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಜಾಗಕ್ಕೆ ತಲುಪಿದಾಗ ಅಪಾದಿತನು ಪೊಲೀಸ್ ವಾಹನವನ್ನು ಕಂಡು ಓಡಲು ಪ್ರಯತ್ನಿಸಿದವನನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಚಾರಿಸಿದಲ್ಲಿ ಅನೀಶ್ ರೆಹಮಾನ್ (ಪ್ರಾಯ 31) ಎಂಬುದಾಗಿ ತಿಳಿಸಿದ್ದು, ಆತನನ್ನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ್ದಾನೆಯೇ? ಎಂದು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು, ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರು ಆತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ.

Traffic North Police Station          

ಪಿರ್ಯಾದಿ Abdul Jabbar ಅಕ್ಕನ ಮಗ ಸಿದ್ದೀಕ್ ಸಮೀರ್ (36 ವರ್ಷ) ಎಂಬುವರು ದಿನಾಂಕ: 03-05-2023 ರಂದು KA-20-W-7792 ನಂಬ್ರದ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಕುಂದಾಪುರದಿಂದ ಮಂಗಳೂರಿನ ಕಾವೂರು ಕಡೆಗೆ ಬರುತ್ತಾ ಅಪರಾಹ್ನ ಮದ್ಯಾಹ್ನ 1:20 ಗಂಟೆಗೆ ಮೂಲ್ಕಿ ಬಪ್ಪನಾಡು ಬಳಿಯ ಪೊಲೀಸ್ ಚೆಕ್ ಪೊಸ್ಟ್ ಬಳಿ ತಲುಪುತ್ತಿದ್ದಂತೆ ಅವರ ಹಿಂದುಗಡೆಯಿಂದ GA-08-R-7264 ನಂಬ್ರದ ಕಾರನ್ನು ಅದರ ಚಾಲಕ ಇಕ್ಬಾಲ್ ಸಾಹೇಬ್ ಎಂಬುವರು ವೇಗವಾಗಿ ಚಲಾಯಿಸಿಕೊಂಡು ಬಂದು ಸಿದ್ದೀಕ್ ಸಮೀರ್ ರವರ ಮೋಟಾರ್ ಸೈಕಲನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರಿನ ಎಡಭಾಗ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ, ಮೂಗಿಗೆ ಮತ್ತು ಎಡಭುಜಕ್ಕೆ ಗಂಭೀರ ಸ್ವರೂಪದ ಗಾಯಗೊಂಡು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

Traffic South Police Station

ಪಿರ್ಯಾದಿ ಸಪರ್ ಮಹಮ್ಮದ್ ಆಶ್ರಫ್ (31 ವರ್ಷ) ರವರು  ಈ ದಿನ ದಿನಾಂಕ: 03-05-2023 ರಂದು ಅವರು ಮೋಟಾರ್ ಸೈಕಲ್ ನಂಬ್ರ:KA-19-EQ-8606 ನೇದರಲ್ಲಿ ಮಂಜನಾಡಿ ಕಡೆಯಿಂದ ಉಳ್ಳಾಲದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 9-00 ಗಂಟೆಗೆ ಚೆಂಬುಗುಡ್ಡೆ ಕೊರಗಜ್ಜ ದೇವಸ್ಥಾನದಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಗೈ ಭುಜಕ್ಕೆ ಮೂಳೆ ಮುರಿತದ ರಕ್ತಗಾಯ,ಬಲಗಾಲಿನ ಹಿಮ್ಮಡಿಗೆ ರಕ್ತಗಾಯ,ಎರಡು ಕೈಗಳಿಗೆ ತರಚಿದ ಗಾಯ ಮತ್ತು ತಲೆಯ ಹಿಂಬದಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಪಿರ್ಯಾದಿದಾರರು ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಅವರ ಮನೆಯವರೊಂದಿಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore South PS  

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಮನೋಹರ್ ಪ್ರಸಾದ್ ಪಿ. ದಿನಾಂಕ 03-05-2023 ರಂದು ಠಾಣಾ ಸಿಬ್ಬಂದಿಯವರ ಜೊತೆಯಲ್ಲಿ ಠಾಣಾ ವ್ಯಾಪ್ತಿ ರೌಂಡ್ಸ್  ಸಮಯ ಸಮಯ 18-00 ಗಂಟೆಗೆ ಸ್ಟೇಟ್ ಬ್ಯಾಂಕ್, ಪರಿಸರದಲ್ಲಿರುವಾಗ್ಗೆ ಬಾತ್ಮೀದಾರರೊಬ್ಬರು ಕರೆ ಮಾಡಿ ದಕ್ಷಿಣ ದಕ್ಕೆ ಪರಿಸರದಲ್ಲಿ ಒಂದು ಸಿಲ್ವರ್ ಬಣ್ಣದ ಕೆಎಲ್-35-  422 ಎಂಬುದಾಗಿ ನೋಂದಣಿ ಸಂಖ್ಯೆ ಇರುವ ಕಾರಿನಲ್ಲಿ  ನಾಲ್ಕು ಜನ ಯುವಕರು ಸಂಶಯಾಸ್ಪದ ರೀತಿಯಲ್ಲಿ ಇದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ತೆರಳಿ ದಕ್ಕೆ ಪರಿಸರದಲ್ಲಿ ಪರಿಶೀಲಿಸಿ ನೋಡಿದಾಗ ಮಾಹಿತಿಯಲ್ಲಿ ದೊರೆತಂತೆ ಸ್ವಿಲ್ವರ್ ಬಣ್ಣದ ಕಾರ್ ಇರುವುದನ್ನು ದೂರದಿಂದ ನೋಡಿ ದೃಡಪಡಿಸಿ ಅದರ ಬಳಿಗೆ ತೆರಳಿ ನಮ್ಮ ಜೀಪನ್ನು ಕಾರಿಗೆ ಅಡ್ಡ ಇಟ್ಟು ತಡೆದು ನಿಲ್ಲಿಸಿ ಕೂಡಲೇ ಅವರನ್ನು ಸುತ್ತುವರಿದು ಅವರಲ್ಲಿ ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದಾಗ ಅವರುಗಳ ಪೈಕಿ ಕಾರಿನ ಚಾಲಕ ಮಲಯಾಳಂ ಬಾಷೆಯಲ್ಲಿ ಮಾತನಾಡುತ್ತಾ ಸದ್ರಿ ಕಾರ್ ತನ್ನ ಸ್ನೇಹಿತನ ಕಾರು ಆಗಿರುವುದಾಗಿಯೂ, ದಾಖಲೆ ಪತ್ರ ತಂದಿಲ್ಲ ಎಂಬುದಾಗಿ ತಡವರಿಸುತ್ತಾ ತಿಳಿಸಿರುತ್ತಾನೆ. ಕಾರಿನ ನೊಂದಣಿ ಸಂಖ್ಯೆಯ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ. ಅವರ ಮೇಲೆ ಸಂಶಯಗೊಂಡು ಅವರುಗಳು ದಕ್ಕೆ ಪರಿಸರಲ್ಲಿ ತಿರುಗಾಡುತ್ತಿರುವ ಬಗ್ಗೆ ವಿಚಾರಿಸಿದಾಗ ತಾವು ಸುತ್ತಾಡಲು ಬಂದಿರುವುದಾಗಿ ಸಂಶಯಾಸ್ಪದ ಉತ್ತರ ನೀಡಿರುತ್ತಾರೆ. ಅವರ ಹೆಸರು ವಿಳಾಸ ಕೇಳಿದಾಗ ಅವರುಗಳ ಪೈಕಿ ಕಾರಿನ ಚಾಲನಾ ಸೀಟ್ ನಲ್ಲಿ ಕುಳಿತ್ತಿದ್ದ ವ್ಯಕ್ತಿ ತನ್ನ ಹೆಸರು ರಿಯಾಜ್ ಸಿ. ಆರ್. ಪ್ರಾಯ 23 ವರ್ಷ, ತಂದೆ-ರಶೀದ್ ಸಿ. ಎ. ವಾಸ-ಅಲುವಾ, ಅಥನಿ ಅಂಚೆ, ಕಲ್ಲತಿರ್ ಮುರಿ ಗ್ರಾಮ, ಎರ್ನಾಕುಲಂ ಜಿಲ್ಲೆ. ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದು ಆತನ ಪಕ್ಕದ ಸೀಟ್ ನಲ್ಲಿ ಕುಳಿತ ವ್ಯಕ್ತಿಯ ಹೆಸರು ವಿಳಾಸ ಕೆಳಲಾಗಿ ಆತನು ತನ್ನ ಹೆಸರು ತಸ್ಸೀನ್ ಟಿ. ಎಚ್. @ ತಸ್ಸೀರ್, ಪ್ರಾಯ 25 ವರ್ಷ, ತಂದೆ-ಜಾಫರ್, ವಾಸ-ತಕ್ದಾರ್ ಹೌಸ್ ಅಧಿಪಿಲಿಕವಮ್ ಗ್ರಾಮ, ಮತ್ತು ಅಂಚೆ,  ಎರ್ನಾಕುಲಂ ಜಿಲ್ಲೆ, ಕೇರಳ ರಾಜ್ಯ ಎಂಬುದಾಗಿ ತಿಳಿಸಿರುತ್ತಾನೆ. ಕಾರಿನ ಹಿಂಬದಿ ಕುಳಿತ್ತಿದ್ದ ವರ ಪೈಕಿ ಓರ್ವ ತನ್ನ ಹೆಸರು ಎಂ. ಕೆ. ಕ್ರಿಸ್ಟೋಪರ್, ಪ್ರಾಯ 30 ವರ್ಷ, ತಂದೆ-ಸಿಸಾಯಿ ದಿಕ್‍ನಿಕ್, ವಾಸ-ತಾಯದಿಮ್ ಪರಂಬು, ನಡಕಾವು, ಕೋಯಿಕೋಡ್, ಕೇರಳ ಹಾಗೂ ಇನ್ನೋರ್ವ ತನ್ನ ಹೆಸರು ಅಜೀತ್, ಕೆ. ಪ್ರಾಯ 22 ವರ್ಷ, ತಂದೆ-ಸುನೀಲ್ ಕುಮಾರ್, ವಾಸ-ಕಿಜಾಕಾಯಿಲ್ ಹೌಸ್, ಎರ್ನಾಡ್ ಗ್ರಾಮ, ಕೊಂಡಾಟಿ ಅಂಚೆ, ಮಲಪುರಂ, ಕೇರಳ ರಾಜ್ಯ. ಎಂಬುದಾಗಿ ತಿಳಿಸಿರುತ್ತಾನೆ. ಅವರು ಚಲಾಯಿಸುತ್ತಿದ್ದ ಕಾರಿಗೆ ಯಾವುದೇ ದಾಖಲೆ ಪತ್ರ ಹಾಜರುಪಡಿಸದೇ ಇದ್ದು ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗ ಅವರುಗಳು ಜೊತೆಯಾಗಿ ಸೇರಿ ಕೇರಳದಲ್ಲಿ ಸದ್ರಿ ಕಾರನ್ನು ಒಂದು ವಾರದ ಹಿಂದೆ ಕಳವು ಮಾಡಿರುವ ಕಾರು ಆಗಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಕಾರಿನ ಹಿಂಭಾಗ ಮತ್ತು ಮುಂಭಾಗ KL-35-422 ಎಂಬುದಾಗಿ ನಂಬರ್ ಪ್ಲೇಟ್ ಇದ್ದು ಇದರ ಚೆಸಿಸ್ ನಂಬ್ರ MAJBXXMRTB6UB9274, ಆಗಿದ್ದು ಇದು ಸಿಲ್ವರ್ ಬಣ್ಣದ ಕಾರು ಆಗಿರುತ್ತದೆ. ಅಂದಾಜು ಮೌಲ್ಯ 1,00,000/-ರೂಪಾಯಿ ಆಗಬಹುದು. ಸದ್ರಿಯವರಲ್ಲಿರುವ ಸೊತ್ತು ಕಳವಿಗೆ ಸಂಬಂಧಪಟ್ಟ ಸೊತ್ತುಗಳು ಆಗಿರುತ್ತದೆ ಎಂಬಿತ್ಯಾದಿಯಾಗಿದೆ.      

                             

 

 

 

 

Last Updated: 21-08-2023 12:48 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080