ಅಭಿಪ್ರಾಯ / ಸಲಹೆಗಳು

Crime report in Mangalore East PS

 ಫಿರ್ಯಾದಿ CHANDRAVATHI ದಾರರಾದ ಗಂಡನಾದ ಬಸಪ್ಪ ತೇಜ್ ಪ್ರಾಯ 36 ವರ್ಷ ರವರು ಮಂಗಳೂರಿನ ವರಶ್ರೀ ಅಪಾರ್ಟ್ ಮೆಂಟ್ ಕದ್ರಿ ಕಂಬಳದಲ್ಲಿ  ಕಳೆದ 01 ವರ್ಷದಿಂದ  ವಾಚ್ ಮೆನ ಆಗಿ ಕೆಲಸ ಮಾಡಿಕೊಂಡಿದವರು.ದಿನಾಂಕ: 01-07-2023 ರಂದು ಹಗಲು ವಾಚ್ ಮೆನ ಕೆಲಸ ಮುಗಿಸಿ ರಾತ್ರಿ 12-30 ಗಂಟೆಗೆ ಅಪಾರ್ಟಮೆಂಟ್ ನಿಂದ ಹೊರಗೆ ಹೋಗಿದ್ದು ನಂತರ ವಾಟ್ಸಾಪ್ ವೈಸ್ ಮೇಸೆಜ್ ನಲ್ಲಿ  "ನನ್ನನು ಹುಡುಕುವ ಪ್ರಯತ್ನ ಮಾಡಬೇಡಿ" ಎಂದು ಹೇಳಿ ಕಳುಹಿಸಿರುತ್ತಾರೆ. ಈ ತನಕ ಊರಿಗೆ ಹೊಗದೇ ಮರಳಿ ಅಪಾರ್ಟ್ ಮೆಂಟ್ ಗೂ  ಬಾರಧೇ ಇದ್ದುದ್ದರಿಂದ ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರಿಗೆ ವಿಚಾರಿಸಿ ಈ ದಿನ ವಿಳಂಬವಾಗಿ ದೂರು ನೀಡಿರುವುದಾಗಿದೆ. ಆದ್ದರಿಂದ ಕಾಣೆಯಾದ ಬಸಪ್ಪ ತೇಜ್ ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

ಕಾಣೆಯಾದ ಬಸಪ್ಪ ತೇಜ್  ರವರ ಚಹರೆ:

ಹೆಸರು: ಬಸಪ್ಪ ತೇಜ್ 36 ವರ್ಷ, ಎತ್ತರ 5’ 0”,

ಚಹರೆ: ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ, ಸಪೂರ ಶರೀರ

ಧರಿಸಿರುವ ಬಟ್ಟೆ: ಕಪ್ಪು ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಶರ್ಟ್ ಧರಿಸಿರುತ್ತಾರೆ.

ಮಾತನಾಡುವ ಭಾಷೆ: ಕನ್ನಡ,ಹಿಂದಿ ಭಾಷೆ ಮಾತನಾಡುತ್ತಾರೆ. 

 

CEN Crime PS

ದಿನಾಂಕ: 26/02/2023 ರಂದು ಫಿರ್ಯಾದಿದಾರರಿಗೆ nihari_kaaa ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಹಾಯ್ ಎಂದು ಸಂದೇಶ ಬಂದಿದ್ದು ಫಿರ್ಯಾದಿದಾರರು ಆಕೆಯಲ್ಲಿ ತನ್ನ ಪರಿಚಯ ಇದೆಯ ಎಂದು ಕೇಳಿದ್ದು ಅದಕ್ಕೆ ಸದ್ರಿ ವ್ಯಕ್ತಿಯು ಪಿರ್ಯಾದಿದಾರರನ್ನು ಕಾವೂರು ನಲ್ಲಿ ಕಪ್ಪು ಬಣ್ಣದ ಸ್ಕೂಟರ್ ನಲ್ಲಿ ನೋಡಿರುವುದಾಗಿಯೂ ಹಾಗೂ ತನ್ನ ಹೆಸರು ನಿಹಾರಿಕಾ ಎಂದು ತಾನು ದಿಯಾ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತಿದ್ದು ದೇರೆಬೈಲು ಬ್ರಿಗೇಡ್ ಪಿನಾಕಲ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವುದಾಗಿ ತಿಳಿಸಿರುವುದಾಗಿದೆ. ನಂತರ ಫಿರ್ಯಾದಿದಾರರು  ಆಕೆಯಲ್ಲಿ ಇನ್ಸ್ಟಾಗ್ರಾಂ ಮೂಲಕ ಸಂದೇಶ ಕಳುಹಿಸಿ ಸಂಪರ್ಕದಲ್ಲಿದ್ದು ತನ್ನ ಬಗ್ಗೆ ಕೂಡಾ ಪರಿಚಯಿಸಿಕೊಂಡಿರುತ್ತಾರೆ. ನಂತರ ಅದೇ ದಿನ ಆಕೆಯು ತಾನು ಕೇಕ್ ಖರೀದಿಸುವ ಬಗ್ಗೆ ತೆರಳಿರುವುದಾಗಿಯೂ ಅಲ್ಲಿ ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಪಾವತಿಸಲು ಪ್ರಯತ್ನಿಸಿದಲ್ಲಿ ಹಣ ಪಾವತಿಸಲು ಅಸಾಧ್ಯವಾಗಿರುವುದರಿಂದ ತನ್ನ ತಂದೆಯ ಹೆಸರು ಸಶಾನ್ ಟಿ ಶೆಟ್ಟಿ ಎಂಬುದಾಗಿಯೂ  ಅವರ ಬ್ಯಾಂಕ್ ಗೆ ರೂ 3,800/- ವರ್ಗಾಯಿಸುವಂತೆ ಫಿರ್ಯಾದಿದಾರರಿಗೆ ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿಕೊಟ್ಟಿರುತ್ತಾರೆ. ಅದರಂತೆ ಫಿರ್ಯಾದಿದಾರರು ಸದ್ರಿ ಕ್ಯೂಆರ್ ಕೋಡ್ ಸ್ಕಾನ್ ಮಾಡಿ ತಮ್ಮ ಕೊಟಾಕ್ ಮಹೀಂದ್ರಾ ಬ್ಯಾಂಕ್ ಖಾತೆ ಸಂಖ್ಯೆ: ನೇಯದರಿಂದ ಗೂಗಲ್ ಪೇ ಮೂಲಕ ಸಶಾನ್ ಟಿ ಎಂಬವರ ಖಾತೆಗೆ ಪಾವತಿ ಮಾಡಿರುತ್ತಾರೆ. ನಂತರ ದಿನಾಂಕ: 27/02/2023 ರಂದು ಸದ್ರಿ ನಿಹಾರಿಕಾಳು ಫಿರ್ಯಾದಿದಾರರಿಗೆ ಇನ್ಸ್ಟಾಗ್ರಾಂ ಮೂಲಕ ಸಂದೇಶ ಕಳುಹಿಸಿ ತನ್ನ ತಮ್ಮ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಹಾಗೂ ಎಂ.ಆರ್.ಐ ಸ್ಕ್ಯಾನ್ ಮಾಡಿಸುವ ಬಗ್ಗೆ ರೂ 28,000/- ತಾನು ಪಾವತಿಸಿರುವುದಾಗಿ ತಿಳಿಸಿ ಹಣದ ಅವಶ್ಯಕತೆ ಇರುವುದಾಗಿ ತಿಳಿಸಿದ್ದು ಅದರಂತೆ ಫಿರ್ಯಾದಿದಾರರು ಹಂತ ಹಂತವಾಗಿ ರೂ 5,800/- ಗಳನ್ನು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಗೂಗಲ್ ಪೇ ಮೂಲಕ ಪಾವತಿ ಮಾಡಿರುತ್ತಾರೆ. ಅದೇ ರೀತಿ ದಿನಾಂಕ: 28/02/2023 ರಂದು ಇನ್ಸ್ಟಾಗ್ರಾಂ ಮೂಲಕ ಸಂದೇಶ ಕಳುಹಿಸಿ ಆಸ್ಪತ್ರೆ ಖರ್ಚಿನ ಬಗ್ಗೆ ಇನ್ನೂ ಹೆಚ್ಚಿನ ಹಣ ಬೇಕೆಂದು ಪಿರ್ಯಾದಿದಾರರಿಗೆ ತಿಳಿಸಿದಂತೆ ರೂ 5,000/- ಗಳನ್ನು ಆಕೆಯು ಈ ಹಿಂದೆ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಪಾವತಿಸಿರುವುದಾಗಿದೆ. ನಂತರ ಕೂಡಾ ನಿಹಾರಿಕಾಳು ಹಲವು ಸಮಸ್ಯೆಗಳನ್ನು  ಹೇಳಿ ಹಣದ ಅವಶ್ಯಕತೆ ಇರುವುದಾಗಿ ತಿಳಿಸಿದ್ದು ಅದರಂತೆ ಫಿರ್ಯಾದಿದಾರರು ದಿನಾಂಕ: 02/03/2023 ರಿಂದ 14/03/2023 ರ ಮಧ್ಯಾವಧಿಯಲ್ಲಿ ಕೊಟಾಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ ಹಾಗೂ ತಮ್ಮ ಎಸ್.ಬಿ.ಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಂಬ್ರ:  ನಿಂದ ಹಂತ ಹಂತವಾಗಿ ಒಟ್ಟು 84,100/- ಗಳನ್ನು ವರ್ಗಾಯಿಸಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಹುಡುಗಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿ ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ನಂಬಿಸಿ ದಿನಾಂಕ: 26/02/2023 ರಿಂದ 14/03/2023 ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಒಟ್ಟು ರೂ 98,700/- ಗಳನ್ನು ಆನ್ ಲೈನ್ ಮೂಲಕ ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

Traffic South Police Station

ಫಿರ್ಯಾದಿ PRAMOD ANJEER KERWADIKAR ದಾರರು ದಿನಾಂಕ: 03-07-2023 ರಂದು ಪತ್ನಿ ಪ್ರಗತಿ ಪ್ರಮೋದ್ ಕೇರವಡಿಕರ, ಮಗ ಪ್ರಣವ್ ಪ್ರಮೋದ್ ಕೇರವಡಿಕರ ಮತ್ತು ಭಾವನ ಮಗಳು ಅಕ್ಷತಾ ಸಿ ನಾಯ್ಕ ರವರೊಂದಿಗೆ ಮಗನ ಚಿಕಿತ್ಸೆ ಬಗ್ಗೆ ಕಾರವಾರದಿಂದ ಮಂಗಳೂರಿಗೆ ರೈಲ್ ನಲ್ಲಿ ಬಂದು ಕಂಕನಾಡಿ ಜಂಕ್ಷನ್ ರೈಲ್ವೆಸ್ಟೇಷನ್ ನಿಂದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಜೋಕಿಮ್ ಡಿ’ಸೋಜಾ ರವರ ಆಟೋರಿಕ್ಷಾ ನಂ. KA-19-AB-6230 ನೇದರಲ್ಲಿ ಪ್ರಯಾಣಿಸಿಕೊಂಡು ಬರುತ್ತಾ ಸಮಯ ಸುಮಾರು ಬೆಳಗ್ಗೆ 7-30 ಗಂಟೆಗೆ ಪಂಪ್ ವೆಲ್ ಪ್ಲೈಓವರ್ ರಸ್ತೆಯ ಅಂಡರ್ ಪಾಸ್ ಬಳಿ ರಸ್ತೆಯಲ್ಲಿ ತಲುಪುತ್ತಿದ್ದಂತೆ ನಂತೂರು ಕಡೆಯಿಂದ ಬರುತ್ತಿದ್ದ ಆಟೋರಿಕ್ಷಾ ನಂ. KA-19-AA-5764 ನೇದನ್ನು ಅದರ ಚಾಲಕ ಗುಣಕರ ಎಂಬಾತನು ದುಡುಕುತನ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಬಲಭಾಗದ ಹಿಂಬದಿಗೆ  ಡಿಕ್ಕಿಹೊಡೆದ ಪರಿಣಾಮ ಆಟೋರಿಕ್ಷಾ ರಸ್ತೆಗೆ ಮಗುಚಿ ಬಿದ್ದು ಫಿರ್ಯಾದಿದಾರರ ಎಡಕೈಗೆ ಮೂಳೆಮುರಿತದ ಗಾಯ, ಎಡಕಾಲಿನ ಮಣಿಗಂಟಿಗೆ ಮತ್ತು ಪಾದಕ್ಕೆ ರಕ್ತಗಾಯ, ಫಿರ್ಯಾದಿದಾರರ ಪತ್ನಿಯ ತಲೆಯ ಎಡಬದಿಗೆ  ಮತ್ತು ಎದೆಯ ಎಡಬದಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಅವರಿಬ್ಬರು ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ. ಫಿರ್ಯಾದಿದಾರರ ಮಗ ಮತ್ತು ಅಕ್ಷತಾ ಸಿ ನಾಯ್ಕ  ಮತ್ತು ರಿಕ್ಷಾ ಚಾಲಕನಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ.  ಅಪಘಾತ ಪಡಿಸಿದ KA-19-AA-5764 ನೇದರ ರಿಕ್ಷಾ ಚಾಲಕ ಫಿರ್ಯಾದಿದಾರರ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು, ಚಿಕಿತ್ಸೆ ವೆಚ್ಚ ಜಾಸ್ತಿಯಾಗಿರುವುದರಿಂದ ಭರಿಸಲು ನಿರಾಕರಿಸುತ್ತಿರುವುದರಿಂದ ದೂರು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.

Kankanady Town PS  

ಪಿರ್ಯಾದಿ Reshma ದಾರರು ಮುಗ್ರೋಡಿ, ಶಕ್ತಿನಗರ, ಮಂಗಳೂರು ಎಂಬಲ್ಲಿ ಸಂಸಾರದೊಂದಿಗೆ ವಾಸ ಮಾಡಿಕೊಂಡಿದ್ದು ಟೈಲರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರಿಗೆ ಮೊದಲನೇ ಮದುವೆಯಾಗಿ ವಿವಾಹ ವಿಚ್ಚೇದನ ಆಗಿದ್ದು, ಎರಡು ಮಕ್ಕಳನ್ನು ಹೊಂದಿರುತ್ತಾರೆ. ಶಿವರಾಮ ಗೌಡ ಪಿ (34) ರವರನ್ನು ಎರಡನೇ ಮದುವೆಯಾಗಿದ್ದು, ಅವರು ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 01-07-2023 ರಂದು ಎಂದಿನಂತೆ ಆಟೋ ರಿಕ್ಷಾ ಚಾಲಕ ಕೆಲಸವನ್ನು ಮಾಡಿಕೊಂಡು ಸಂಜೆ 6:45 ಗಂಟೆಗೆ ಮನೆಗೆ ಬಂದಿದ್ದು, ಪಿರ್ಯಾದುದಾರರಲ್ಲಿ ಏನು ಮಾತನಾಡದೇ ಹೊರಗೆ ಹೋಗಿರುವುದರಿಂದ ಅವರ ಮೊಬೈಲ್ ಗೆ ಸುಮಾರು ಸಂಜೆ 6.50 ಗಂಟೆಗೆ ಕರೆ ಮಾಡಿದ್ದು ಕರೆಯನ್ನು ಸ್ವೀಕರಿಸಿ ಮಾತನಾಡಿದ್ದು, ನಂತರ ಸುಮಾರು ಸಮಯ ಮನೆಗೆ ಬರದೇ ಇರುವುದರಿಂದ ಸಂಜೆ ಸುಮಾರು 7:30 ಗಂಟೆಯಿಂದ ನಿರಂತರ ಫೋನ್ ಮಾಡಿದ್ದು, ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಪಿರ್ಯಾದುದಾರರು ಅವರ ಸಂಬಂಧಿಕರಲ್ಲಿ ಮತ್ತು ಗಂಡನ ಸ್ನೇಹಿತರಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಿಸಿದ್ದಲ್ಲಿ ಪತ್ತೆಯಾಗಿರುವುದಿಲ್ಲ. ಆದರಿಂದ ನಾಪತ್ತೆಯಾಗಿರುವ ಪಿರ್ಯಾದಿದಾರರ ಗಂಡ ಶಿವರಾಜ್ ಗೌಡ.ಪಿ ರವರನ್ನು ಪತ್ತೆಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

Moodabidre PS  

 ಪಿರ್ಯಾದಿ Prashanthದಾರರ ತಂದೆ ಕೂಕ್ರ ಪ್ರಾಯ: 53 ವರ್ಷ ಎಂಬುವರು ಸುಮಾರು 1 ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ನಿಟ್ಟೆ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ದಿನಾಂಕ 28-6-2023 ರಂದು ಪಿರ್ಯಾದಿದಾರರು ಬೆಳಿಗ್ಗೆ ಕೆಲಸಕ್ಕೆಂದು ಹೋಗಿದ್ದು, ಮನೆಯಲ್ಲಿ ಪಿರ್ಯಾದಿದಾರರ ತಂದೆ ಮತ್ತು ತಾಯಿ ಇದ್ದು, ಪಿರ್ಯಾದಿದಾರರ ತಂದೆ ಸಾಯಂಕಾಲ 5.00 ಗಂಟೆಗೆ ಕಾರ್ಕಳಕ್ಕೆ ಹೋಗಿಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಇದುವರೆಗೂ ವಾಪಸ್ ಮನೆಗೆ ಬಂರಿದುವುದಿಲ್ಲ. ಪಿರ್ಯಾದಿದಾರರ ಮನೆಯವರೆಲ್ಲ ಸೇರಿ ಕಾಣೆಯಾದವರನ್ನು ಹುಡುಕಾಡಿದ್ದು ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080