ಅಭಿಪ್ರಾಯ / ಸಲಹೆಗಳು

 

 Crime Report in Mangalore East Traffic PS  

ಪಿರ್ಯಾದಿದಾರರಾದ ಶೇಖ್ ಮೊಹಮ್ಮದ್ ಅಜ್ಮಲ್ ಎಂಬುವರು ದಿನಾಂಕ 02-08-2023 ರಂದು ರಾತ್ರಿ ತನ್ನ ತಮ್ಮನ ಸ್ಕೂಟರ್ ನೊಂದಣಿ ಸಂಖ್ಯೆ: KA-19-HL-4881 ನೇಯದನ್ನು ಬಾವುಟಗುಡ್ಡೆ ಕಡೆಯಿಂದ ಬಲ್ಮಠ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು 9.25 ಗಂಟೆಗೆ ಅಂಬೇಡ್ಕರ್ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಸ್ಕೂಟರನ್ನು ನಿಧಾನಗೊಳಿಸಿ ಬಲ್ಮಠ ಕಡೆಗೆ ಹೋಗುತ್ತಿದ್ದ ವಾಹನಗಳ ಜೊತೆ ಪಿರ್ಯಾದಿದಾರರು ಕೂಡ ಹೋಗುತ್ತಿದ್ದಾಗ ಬಂಟ್ಸ್ ಹಾಸ್ಟೇಲ್ ಕಡೆಯಿಂದ ಕಾರು ನೊಂದಣಿ ಸಂಖ್ಯೆ: KA-19-MH-4949 ನೇಯದನ್ನು ಅದರ ಚಾಲಕನು ಹಂಪನಕಟ್ಟೆ ಕಡೆಗೆ ಹೋಗಲು ತನ್ನ ಎಡಭಾಗದಲ್ಲಿದ್ದ ಕಾರೊಂದನ್ನು ಬಲಭಾಗದಿಂದ ಓವರ್ ಟೇಕ್ ಮಾಡುತ್ತಾ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಎಡಭಾಗಕ್ಕೆ ಢಿಕ್ಕಿ ಪಡಿಸಿದ್ದು, ಈ ಢಿಕ್ಕಿಯ ರಭಸಕ್ಕೆ ಪಿರ್ಯಾದಿದಾರರು ಸ್ಕೂಟರ್ ಸಮೇತ ಬಲಕ್ಕೆ ವಾಲಿ ರಸ್ತೆಗೆ ಬಿದ್ದಿದ್ದು ಸಾರ್ವಜನಿಕರು ಉಪಚರಿಸಿ ಕೆ.ಎಂ.ಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಎಡ ಕೋಲುಕಾಲಿನಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿರುತ್ತಾರೆ,  ಎಂಬಿತ್ಯಾದಿ.

Surathkal PS

ಪಿರ್ಯಾದಿದಾರರಾದ ಶ್ರೀ ರೋಹಿತ್ ರವರು ಸುರತ್ಕಲ್ ಇಡ್ಯಾ ಗ್ರಾಮದ ವಿದ್ಯಾದಾಯನಿ ಇಂಗ್ಲೀಷ್ ಮೀಡಿಯಂ ಶಾಲೆಯ ಎದುರುಗಡೆ ರಾಜಶ್ರೀ ಕಟ್ಟಡದಲ್ಲಿ ಇರುವ ದಿ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ಸದ್ರಿಯವರಿಗೆ ದಿನಾಂಕ: 04-08-2023 ರಂದು ಬೆಳಿಗ್ಗೆ 02:13 ಗಂಟೆಗೆ ಸಿಸಿಟಿವಿ ಸೆಂಟ್ರಲ್ ಟೀಂ ನಿಂದ ದೂರುವಾಣಿ ಕರೆ ಬಂದ ಮೇರೆಗೆ ಪಿರ್ಯಾದಿದಾರರು ಸದ್ರಿ ಬ್ಯಾಂಕಿನ ಎಟಿಎಮ್ ಬಳಿಗೆ ಬಂದು ನೋಡಲಾಗಿ ಎಟಿಎಂ ನ ಮುಂಭಾಗದ ಗಾಜನ್ನು ಒಡೆದು ಎಟಿಎಂ ಮೆಷಿನ್ ನ್ನು ಕಳವು ಮಾಡಲು ಪ್ರಯತ್ನಿಸಿ ಕೆಳ ಮಹಡಿಗೆ ಬಿಳಿಸಿ ಹೋಗಿರುವುದು ಕಂಡು ಬಂದಿದ್ದು, ಈ ಕೃತ್ಯವನ್ನು ಯಾರೋ ಕಳ್ಳರು ದಿನಾಂಕ 04-08-2023 ರಂದು ಬೆಳಿಗ್ಗೆ 02:00 ಗಂಟೆಯಿಂದ ಬೆಳಿಗ್ಗೆ 02:13 ಗಂಟೆಯ ಒಳಗೆ ಜೆಸಿಬಿಯನ್ನು ಬಳಸಿ ಎಟಿಎಂನ ಮುಂಭಾಗದ ಗ್ಲಾಸ್ ನ್ನು ಒಡೆದು ಎಟಿಎಂ ಮೆಷಿನ್ ನ್ನು ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿ.

 

Kankanady Town PS                                     

ಪಿರ್ಯಾದಿದಾರರಾದ ಶ್ರೀ ಮುನೀರ್ ಮೊಯಿದ್ದೀನ್ ರವರು ಮಂಗಳೂರಿನ ಜಪ್ಪಿನಮೊಗರು ನಲ್ಲಿರುವ ಮಾಸುನ್ ಟೈಲ್ಸ್ ಆಂಡ್ ಗ್ರಾನೈಟ್ ಶಾಫ್ ನ್ನು ನಡೆಸಿಕೊಂಡು ಬರುತ್ತಿದ್ದು, ದಿನಾಂಕ: 02-08-2023 ರಂದು ಶಾಪ್ ನ್ನು ಮುಚ್ಚಿಕೊಂಡು ಹೋಗಿದ್ದು, ಮರು ದಿನ ಬೆಳಿಗ್ಗೆ 9-00 ಗಂಟೆಗೆ ಶಾಫ್ ನಲ್ಲಿ ಕೆಲಸ ಮಾಡುವ ಆಕಾಶ್ ರವರು ಶಾಫ್ ನ್ನು ತೆರೆದು ನೋಡಿದಾಗ ಶಾಪ್ ನ ಡ್ರಾವರ್ ನಲ್ಲಿದ್ದ ವಸ್ತುಗಳು ಚೆಲ್ಲಾ-ಪಿಲ್ಲಿಯಾಗಿದ್ದು, ಈ ಬಗ್ಗೆ ಪಿರ್ಯಾದಿದಾರರಿಗೆ ತಿಳಿಸಿದ್ದು, ಪಿರ್ಯಾದಿದಾರರು  ಬಂದು ಪರಿಶೀಲಿಸಿದಾಗ ಶಾಪ್ ನ ಕ್ಯಾಶ್ ಡ್ರವಾರ್ ರಿಗೆ ಯಾವುದೋ ಆಯುಧ ಉಪಯೋಗಿಸಿ, ಅದರಲ್ಲಿದ್ದ ರೂ. 9,400/- ಹಣವನ್ನು ಹಾಗೂ ಪಿರ್ಯಾದಿದಾರರು ಕುಳಿತುಕೊಳ್ಳುವ ಚೇಂಬರ್ ನಲ್ಲಿದ್ದ ಡ್ರಾವರ್ ನ್ನು ಕ್ಯಾಶ್ ಡ್ರವಾರ್ ರಿಗೆ ಯಾವುದೋ ಆಯುಧ ಉಪಯೋಗಿಸಿ ಅದರಲ್ಲಿದ್ದ ರೂ. 3,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಎಂಬಿತ್ಯಾದಿ.

          

 

 

Moodabidre PS

ಪಿರ್ಯಾಿದಿದಾರೆ ಡಾ. ಅಮರಶ್ರೀ ರವರ ತಂದೆ ದಿ. ಅಮರನಾಥ ಶೆಟ್ಟಿ ರವರು ಮಾರ್ಪಾಡಿ ಗ್ರಾಮ ಸರ್ವೆ ನಂಬ್ರ 116/21 A2 ರಲ್ಲಿ 65.5 ಸೆಂಟ್ಸ್ ಜಾಗವನ್ನು ಹೊಂದಿದ್ದು ಅದು ವಾಣಿಜ್ಯ ಉಪಯೋಗಕ್ಕೆ ಪರಿವರ್ತನೆ ಗೊಂಡು ಮೂಡಬಿದ್ರೆ ಪುರಸಭೆಯಲ್ಲಿ ನಂಬ್ರ 4/82 ರಂತೆ ದಾಖಲಾಗಿದ್ದು ಸದ್ರಿ ಜಾಗದಲ್ಲಿ ಅಮರಶ್ರೀ ಸಿನೆಮಾ ಟಾಕೀಸ್ ಕಟ್ಟಡವಿದ್ದು ಸದ್ರಿ ಸ್ಥಿರ ಆಸ್ತಿಯು ಶ್ರೀ ಅಮರನಾಥ ಶೆಟ್ಟಿಯವರ ಕಾಲಾನಂತರ ಅವರ ಮಗಳಾದ ಪಿರ್ಯಾದಿ ಡಾ. ಅಮರಶ್ರೀ ಮತ್ತು ಆಕೆಯ ತಾಯಿ ಜಯಶ್ರೀ ಅಮರನಾಥ ಶೆಟ್ಟಿ ಯವರ ಹೆಸರಲ್ಲಿದ್ದು ಸದ್ರಿ ಸ್ಥಿರಾಸ್ತಿಯ ಆಡಳಿತ ಹಾಗೂ ಉಸ್ತುವಾರಿಯನ್ನು ಶ್ರೀ ಅಮರನಾಥ ಶೆಟ್ಟಿಯವರು ಜೀವಂತವಿರುವ ಸಮಯ 2016 ರಿಂದ 2022 ರ ತನಕ ಲೀಸ್ ಮೂಲಕ ಮೂಡಬಿದ್ರೆ ವಾಸಿ ಜೆರಾಲ್ಡ್ ಡಿಕುನ್ಹಾ ಎಂಬುವರಿಗೆ ನೀಡಿದ್ದು ಅದರಂತೆ ಆರೋಪಿಯು 2022 ರಲ್ಲಿ ಸದ್ರಿ ಸ್ಥಿರಾಸ್ತಿಯನ್ನು ಈಗಿನ ಮಾಲಕರಾದ ಡಾ. ಅಮರಶ್ರೀ ಮತ್ತು ಜಯಶ್ರೀ ಅಮರನಾಥ ಶೆಟ್ಟಿ ಯವರಿಗೆ ಬಿಟ್ಟುಕೊಡಬೇಕಾಗಿದ್ದರೂ ಸಹ ಬಿಟ್ಟುಕೊಡದೆ ಸತಾಯಿಸುತ್ತಿದ್ದುದರಿಂದ ಈ ಬಗ್ಗೆ ಪರಿಶೀಲಿಸಿದಾಗ ಸದ್ರಿ ಆರೋಪಿಯು ಆತನ ಜೊತೆಗಿರುವ ರಾಘವೇಂದ್ರ ನಾಯಕ್ ಮತ್ತು ನಿರಂಜನ್ ಕೋಟ್ಯಾನ್ ಎಂಬುವರನ್ನು ಸೇರಿಸಿಕೊಂಡು ಒಳಸಂಚು ನಡೆಸಿ ಪಿರ್ಯಾದಿದಾರರ ತಂದೆಯವರ ಸಹಿಯನ್ನು ನಕಲು ಮಾಡಿ 2017 ರಿಂದ 2023 ರ ವರೆಗಿನ ಲೀಸ್ ಡೀಡ್ ತಯಾರಿಸಿಕೊಂಡಿದ್ದು ತನ್ನ ಗಮನಕ್ಕೆ ಬಂದಿರುವುದಾಗಿಯೂ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿಯೂ ವಿನಂತಿ ಎಂಬಿತ್ಯಾದಿ

         

 

ಇತ್ತೀಚಿನ ನವೀಕರಣ​ : 21-08-2023 02:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080