ಅಭಿಪ್ರಾಯ / ಸಲಹೆಗಳು

Crime Report in Traffic North Police Station  

ದಿನಾಂಕ 04-09-2023 ರಂದು ಪಿರ್ಯಾದಿ Smt Rukmini ದಾರರು ಕೆಲಸಕ್ಕೆ ಹೋಗುವರೇ ಮನೆಯಿಂದ ಬಸ್ಸಿನಲ್ಲಿ ಹೊರಟು ಸುರತ್ಕಲಿನಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ಅವರು ಕೆಲಸ ಮಾಡುವ ನಿಧಿ ಹೋಮ್ಸ್ ಕಡೆಗೆ ಬರುತ್ತಾ ಚರ್ಚಿನ ಬಳಿ ಚರ್ಚಿನ ಕಡೆಯಿಂದ ವುಡ್ ಲ್ಯಾಂಡ್ಸ್ ಹೋಟೆಲ್ ಕಡೆಗೆ ರಸ್ತೆ ದಾಟುತ್ತಿದಾಗ ಬೆಳಿಗ್ಗೆ ಸಮಯ ಸುಮಾರು 9:30 ಗಂಟೆಗೆ KA-19-EM-8146 ನಂಬ್ರದ ಸ್ಕೂಟರ್ ನ್ನು ಅದರ ಸವಾರ ಮಾರ್ಕ್ ಡಿಸೋಜಾ ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟ್ಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಅವರಿಗೆ ಎಡ ಹಣೆಯ ಬಳಿ ರಕ್ತಗಾಯ ಮತ್ತು ಎಡ ಭುಜದ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು, ನಂತರ ಗಾಯಗೊಂಡವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಸ್ಕೂಟರ್ ಸವಾರನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುರತ್ಕಲಿನ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ    

Traffic South Police Station          

ಫಿರ್ಯಾದಿ VAISHAKH A ದಾರರು ದಿನಾಂಕ: 28-08-2023 ರಂದು ಪಂಪ್ ವೆಲ್ ನಿಂದ ಬಸ್ ಒಂದರಲ್ಲಿ ಹೊರಟು ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ಎದುರಿನ ಬಸ್ ತಂಗುದಾಣದಲ್ಲಿ ಬಸ್ಸಿನಿಂದ ಇಳಿದು ಬಗಂಬಿಲ ರಸ್ತೆಯಾಗಿ ಪಿರ್ಯಾದಿದಾರರು ಮನೆ ಕಡೆಗೆ ಹೊರಟು ಉಸ್ತದ್ ಹೋಟೆಲ್ ಬಳಿಯ ಜೋಡು  ಎಲೆಕ್ಟ್ರೀಕಲ್ ಕಂಬದ ಎದುರಿನ  ಸಾರ್ವಜನಿಕ  ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು  ಸಂಜೆ 5.45 ಗಂಟೆಗೆ ಪಿರ್ಯಾದಿದಾರರ ಎದುರಿನಿಂದ  ಅಂದರೆ ಬಗಂಬಿಲದಿಂದ ಯೆನಪೋಯ ಆಸ್ಪತ್ರೆಯ ಎದುರಿನ ಮುಖ್ಯ ರಸ್ತೆಯ ಕಡೆಗೆ KA-19-MM-3874 ನೇ ನಂಬ್ರದ  ಕಾರಿನ ಚಾಲಕ ರಾಜೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಒಮ್ಮೇಲೆ  ರಸ್ತೆಯ ತೀರ ಬಲಬಾಗಕ್ಕೆ ಚಲಾಯಿಸಿಕೊಂಡು ಬಂದು ಇದನ್ನು  ನೋಡಿದ  ಪಿರ್ಯಾದಿದಾರರು ಭಯಗೊಂಡು ಒಮ್ಮೆಲೆ ಬಲಕ್ಕೆ ತಿರುಗಿದರ ಪರಿಣಾಮ  ಪಿರ್ಯಾದಿದಾರರ ಸೊಂಟದ ಎಡಭಾಗಕ್ಕೆ ಡಿಕ್ಕಿ ಪಡಿಸಿರುತ್ತಾರೆ. ಇದರ  ಪರಿಣಾಮ ಪಿರ್ಯಾದಿದಾರರು  ರಸ್ತೆಯ ಬದಿಗೆ ಬಿದ್ದಿದ್ದು, ಪಿರ್ಯಾದಿದಾರರನ್ನು ಅಪಘಾತ ಪಡಿಸಿದ  ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಯೆನಾಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಸೊಂಟಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾಧಿ.

Mangalore North PS                    

ಪಿರ್ಯಾದಿ HAMEED NAZEER AHMED ದಾರರು  ಮಂಗಳೂರಿನ ಕಂಡತ್ ಪಳ್ಳಿಯಲ್ಲಿರುವ ಇಂಡೋ ಆರ್ಯ ಟ್ರಾನ್ಸ್ ಪೋರ್ಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ : 09-08-2023 ರಂದು ರಾತ್ರಿ 09-30 ಗಂಟೆಗೆ ತನ್ನ ಬಾಬ್ತು ಯಮಹಾ F Z ಮೋಟಾರ್ ಸೈಕಲ್ ನಂಬ್ರ KA -19EX- 8676  ನೇದನ್ನು ಸಂಜೆ ಕೆಲಸ ಮುಗಿದ ನಂತರ ಉತ್ತರ ದಕ್ಕೆಯ ಫೇರಿ ಆಫೀಸ್ ನ ಬಳಿ ಇಟ್ಟು ಬೋಟ್ ಮುಖಾಂತರ ಬೇಂಗ್ರೆ ಮನೆಗೆ ಹೋಗಿರುವುದಾಗಿದೆ. ಮರುದಿನ ದಿನಾಂಕ:10-08-2023 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಿದಾಗ ಫೇರಿ ಆಫೀಸ್ ನ ಬಳಿ ನಿಲ್ಲಿಸಿದ ಮೋಟಾರ್ ಸೈಕಲ್ ಇಲ್ಲದೇ ಇದ್ದು,ನಂತರ ಪಿರ್ಯಾದಿದಾರರು ಬೇಂಗ್ರೆ ಕಸಬ,ಬಂದರು ಕಡೆಗಳಲ್ಲಿ ಹುಡುಕಾಡಿದರೂ ಕಳುವಾಗಿದ್ದ  ಮೋಟಾರ್ ಸೈಕಲ್ ಸಿಗದೇ ಇದ್ದು ದೂರು ನೀಡಿರುವುದಾಗಿದೆ.ಕಳುವಾಗಿದ್ದ ಮೋಟಾರ್ ಸೈಕಲ್ ಅಂದಾಜು ಮೌಲ್ಯ ರೂ 40,000 ಆಗಬಹುದು ಎಂಬಿತ್ಯಾದಿಯಾಗಿದೆ.

Bajpe PS     

ರೇವಣ ಸಿದ್ದಪ್ಪ  ಪಿಎಸ್ಐ ಬಜಪೆ ಪೊಲೀಸ್ ಠಾಣೆ ರವರು ದಿನಾಂಕ 03.09.2023  ರಂದು 18.00 ಗಂಟೆ ಸಮಯಕ್ಕೆ ಬಜಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಸಿಬ್ಬಂದಿ ನೀಡಿದ ಮಾಹಿತಿಯಲ್ಲಿ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ Ace Food Factory ಹಿಂಬದಿಯ ಗುಡ್ಡೆಯಲ್ಲಿ ಸುಮಾರು 8-10 ಜನ ಪರವಾಣಿಗೆ ಇಲ್ಲದೆ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಉಲಾಯಿ-ಪಿದಾಯಿ ಎಂಬ ಜೂಜಾಟ ಆಡುತ್ತಿರುವ  ಬಗ್ಗೆ ಮಾಹಿತಿ ಇದ್ದು  ಸದ್ರಿ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದಲ್ಲಿ ಸುಮಾರು 8-10 ಜನ ನೆಲದ ಮೇಲೆ ಚಾಪೆಯನ್ನು ಹಾಸಿ ಅದರ ಸುತ್ತ ವೃತ್ತಕಾರದಲ್ಲಿ ಕುಳಿತುಕೊಂಡು ಅವರ ಪೈಕಿ ಒಬ್ಬಾತ ಕೈಯಲ್ಲಿ ಇಸ್ಪೀಟ್ ಎಲೆಗಳನ್ನು ಹಿಡಿದು ಒಂದೊಂದಾಗಿ ಕೆಳಗೆ ಹಾಕುತ್ತಾ ಜೂಜಾಟ ಆಡುತ್ತಿರುವುದು ಕಂಡು ಬಂದಿದ್ದು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು ಜೂಜಾಟ ಆಡುವುದು ಕರ್ನಾಟಕ ಪೊಲೀಸ್ ಕಾಯ್ದೆ ರಂತೆ ಅಸಂಜ್ಞೇಯ ಅಪರಾಧವಾಗಿದ್ದು ಪ್ರಕರಣದ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ

Mangalore South PS                          

ದಿನಾಂಕ 03-09-2023 ರಂದು ಮಂಗಳೂರು ನಗರದ ವೆಲೆನ್ಸಿಯಾ ಸ್ಮಶಾನದ ಬಳಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಮೊಹಮ್ಮದ್ ಇರ್ಪಾನ್, ಪ್ರಾಯ 20 ವರ್ಷ,  ವಿಳಾಸ : ಫಾತಿಮಾ ವಿಲ್ಲಾ, ಬಂದಿಯೋಡು ಗ್ರಾಮ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಎಂಬಾತನನ್ನು 16-40 ವಶಕ್ಕೆ ಪಡೆದುಕೊಂಡು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ತಪಾಸಣೆಗಾಗಿ ಮಂಗಳೂರು ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಪರೀಕ್ಷೆಗೊಳಪಡಿಸಿದಾಗ, ಮಾದಕ ವಸ್ತು ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 04-09-2023 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080