ಅಭಿಪ್ರಾಯ / ಸಲಹೆಗಳು

Crime Report in  Panambur PS

ಪಿರ್ಯಾದಿ UMESH R ದಾರರು ಕಳೆದ 07 ತಿಂಗಳಿನಿಂದ ಚೌಗುಳೆ ಶಿಫ್ ಬಿಲ್ಡ್ ಡಿವಿಜನ್ ಸೆಕ್ಯೂರಿಟಿ  ಆಫೀಸರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಮಂಗಳೂರು ತಾಲೂಕು ಬೆಂಗ್ರೆ ಗ್ರಾಮದ ಚೌಗುಳೆ ಶಿಫ್ ಯಾರ್ಡ್ ನ ಫಲ್ಗುಣಿ ನದಿ ತೀರದ ಬಳಿ  ದಿನಾಂಕ: 04-10-2023 ರಂದು ಮದ್ಯ ರಾತ್ರಿ ಸುಮಾರು 12-10 ಗಂಟೆಗೆ ಕಂಪೆನಿಯ ಆವರಣ ಗೋಡೆಯ ಭದ್ರತೆಗೆ ಹಾಕಿದ್ದ ಸಾಮಾನ್ಯ ಮರಳನ್ನು ಸ್ಥಳೀಯರಾದ ಜಾಹೀದ್, ತಸ್ರೀಫ್ ಮತ್ತುಇತರರು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದು, ಇದನ್ನು  ರಾತ್ರಿ ಸೆಕ್ಯೂರಿಟಿಗೆ ನಿಯೋಜಿಸಲಾಗಿದ್ದ ಅಂಕುಶ್, ದೀಪಕ್ ಸಂಗಾ ಮತ್ತು ಯಾದವ್ ಪೌಲ್ ರವರು ನೋಡಿದಾಗ ಐದಾರು ಜನ ಹಾರೆಯಿಂದ ಪ್ಲಾಸ್ಟಿಕ್ ಚೀಲಗಳಿಗೆ ಮರಳನ್ನು ತುಂಬಿಸುತ್ತಿದ್ದರು. ಆಗ ಸೆಕ್ಯೂರಿಟಿಗಳು ಯಾರು ಎಂದು ಕೂಗಿಕೊಂಡು ಹತ್ತಿರಕ್ಕೆ ಹೋದಾಗ ಸೆಕ್ಯೂರಿಗಳ ಕಡೆಗೆ ಕಲ್ಲನ್ನು ಎಸೆದು ಕಂಪೌಂಡ್ ಭದ್ರತೆಗೆ ಹಾಕಿದ್ದ ಸುಮಾರು  150 ಚೀಲಕ್ಕೆ ತುಂಬಿಸಿದ ಮರಳು, ಹಾರೆ ಮತ್ತು ಸಾಗಿಸಲು ತಂದ ನಾಡದೋಣಿಯನ್ನು ಬಿಟ್ಟು ಓಡಿ ಹೋಗಿರುತ್ತಾರೆ. ಆದ್ದರಿಂದ ಮರಳನ್ನು ಕದಿಯಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Traffic South Police Station              

ಫಿರ್ಯಾದಿ CHANDRAPPA  B C ದಾರರು ನಿನ್ನೆ ದಿನ ದಿನಾಂಕ: 03-10-2023 ರಂದು ತನ್ನ ಬಾಬ್ತು KA-19-HD-1589 ನೇ ಸ್ಕೂಟರನ್ನು ಸವಾರಿ ಮಾಡಿಕೊಂಡು ಶಕ್ತಿನಗರದಿಂದ ರಾ.ಹೆ 169 ರಲ್ಲಿ ಮನೆಯ ಕಡೆಗೆ ಹೋಗುತ್ತಿದ್ದ ಸಮಯ ಸುಮಾರು 13-30 ಗಂಟೆಗೆ  ಕುಲಶೇಖರದ ಡೈರಿ ಕ್ರಾಸ್ ನಿಂದ ಸ್ವಲ್ಪ ಹಿಂದೆ ನೀರಡ್ಡೆ ಕಡೆಗೆ ಹೋಗುವರೆ ಸ್ಕೂಟರಿಗೆ ಇಂಡಿಕೇಟರ್ ಹಾಕಿ ಬಲಗಡೆಗೆ ತಿರುಗಿಸುತ್ತಿದ್ದಂತೆ ರಾ.ಹೆ. 169 ರಲ್ಲಿ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ  KA-70-J-4030 ನೇ ನಂಬ್ರದ ಬುಲ್ಲೆಟ್ ಮೊಟಾರ್ ಸೈಕಲನ್ನು ಅದರ ಸವಾರ ಉಮೇಶ್ ಎಂಬಾತನು ಕು|| ಅರ್ಪಿತಾ  ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿದಾರರು ಸ್ಕೂಟರ್ ಸಮೇತ ಹಾಗೂ ಡಿಕ್ಕಿ ಪಡಿಸಿದ ಮೊಟಾರು ಸೈಕಲ್ ಸವಾರ ಮತ್ತು ಸಹ-ಸವಾರ ಮೊಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ಬಾಯಿಗೆ, ಎರಡು ಕಾಲುಗಳ ಮಂಡಿಗೆ ರಕ್ತಗಾಯ, ಬಲ ಕೈ ಮಣಿಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಮೊಟಾರು ಸೈಕಲ್ ಸವಾರ ಉಮೇಶ್ ಎಂಬವರಿಗೆ ಬಲಕೈ ಗಂಟಿಗೆ, ಭುಜಕ್ಕೆ ಮತ್ತು ಬಲಗಾಲಿಗೆ ತರಚಿದ ಗಾಯ ಮತ್ತು ಸಹ ಸವಾರೆಯಾಗಿದ್ದ ಅರ್ಪಿತಾ ಳಿಗೆ ಬಲಕೈ, ಬಲ ಕಾಲಿಗೆ ತರಚಿದ ರಕ್ತಗಾಯ, ತಲೆಯ ಬಲಭಾಗಕ್ಕೆ ರಕ್ತಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಅವರನ್ನು ವಾಹನವೊಂದರಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಫಿರ್ಯಾದಿದಾರರನ್ನು ಅವರ ಸಹೋದ್ಯೋಗಿ  ಶ್ರೀಯುತ ಕುಮಾರ್ ಎಂಬವರು ಆಟೋರಿಕ್ಷಾವೊಂದರಲ್ಲಿ  ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು, ಫಿರ್ಯಾದಿದಾರರು ಮನೆಯವರಲ್ಲಿ ಮಾತುಕತೆ ನಡೆಸಿ ಈ ದಿನ ದಿನಾಂಕ: 04-10-2023 ರಂದು ತನ್ನ ಅಳಿಯ ಶ್ರೀಯುತ ದಿಲೀಪ್ ಮುಖಾಂತರ ಬರೆಯಿಸಿ ತಡವಾಗಿ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Bajpe PS

ಪಿರ್ಯಾದಿ Gurappa Kanti ದಾರರು ದಿನಾಂಕ 04.10.2023 ರಂದು ಸಮಯ 13.10 ಗಂಟೆಗೆ ಮಂಗಳೂರು ತಾಲೂಕು ಮರವೂರು ಗ್ರಾಮದ ಮುರ ಜಂಕ್ಷನ್ ಬಳಿ ರೌಂಡ್ಸ್ ನಲ್ಲಿರುವ ಸಮಯ ಅದ್ಯಾಪಾಡಿ ಕಡೆಯಿಂದ ಓಲ್ಡ್ ಏರ್ ಪೊರ್ಟ್ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ಬರುತಿದ್ದು ಸದ್ರಿ ಟಿಪ್ಪರ್ ಚಾಲಕನು ಪೊಲೀಸ್ ಜೀಪ್ ಕಂಡೋಡನೆ ಲಾರಿಯನ್ನು ದೂರದಲ್ಲಿ ನಿಲ್ಲಿಸಿ ಲಾರಿಯಿಂದ ಇಳಿದು ಓಡಿ ಹೋದನು  ಕೊಡಲೇ ಪಿರ್ಯಾದಿದಾರರು  ಸಿಬ್ಬಂದಿಯವರ ಜೊತೆ ಟಿಪ್ಪರ್ ಲಾರಿಯ ಬಳಿ ಹೋಗಿ ನೋಡಿದಾಗ ಇದು KA19AC3132 ನೇ ನಂಬ್ರದ ಟಿಪ್ಪರ್ ಲಾರಿಯಾಗಿದ್ದು ಇದರ ಬಾಡಿಯ ಮಟ್ಟ ಮರಳನ್ನು ತುಂಬಿಸಿದ್ದು ಕಂಡು ಬಂದಿದ್ದು ಸದ್ರಿ ಟಿಪ್ಪರ್ ಲಾರಿ ಚಾಲಕನು ಮರಳನ್ನು ಸಾಗಿಸಲು ಯಾವುದೇ ಪರವಾನಿಗೆ ಇಲ್ಲದೆ ಸರ್ಕಾರದ ಸೊತ್ತಾದ ಮರಳನ್ನು ಎಲ್ಲಿಂದಲೊ ಕಳವು ಮಾಡಿಕೊಂಡಿಕೊಂಡು ಬಂದಿದ್ದು ಸದರಿ ಲಾರಿಯನ್ನು ವಶಕ್ಕೆ ಪಡೆದು ಠಾಣೆಗೆ ಸ್ಥಳಾಂತರಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ  ಎಂಬಿತ್ಯಾದಿಯಾಗಿದೆ

Mangalore South PS                

ದಿನಾಂಕ 22-08-2023 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ 23-08-2023 ರಂದು ಮದ್ಯಾಹ್ನ 15-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಬಂದರು ವಿ. ಆರ್. ಎಲ್. ಆಫೀಸ್  ಬಳಿಯಲ್ಲಿ  ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿ ದಾರರು ಉಪಯೋಗಿಸುತ್ತಿದ್ದ ಅವರ ಸಂಬಂಧಿಕರಾದ ಜೇಮ್ಸ್ ಅರುಣ್ ಡಿಸೋಜಾ ರವರ  ಆರ್. ಸಿ. ಮಾಲಕತ್ವದ KA 19 EH 5280 ನೊಂದಣಿ ಸಂಖ್ಯೆಯ MD2A11CZ4DCL59609 ಚೆಸಿಸ್ ನಂಬ್ರದ, DHZCDL52568 ಇಂಜೀನ್ ನಂಬ್ರದ 03/2013 ನೇ ಮೋಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 30,000/- ಬೆಲೆ ಬಾಳುವ ಬಜಾಜ್ ಪಲ್ಸರ್  ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು

Mangalore Rural PS                                  

ಫಿರ್ಯಾದಿ Prabhakaran K P ದಾರರು ತಮ್ಮ ಹೆಂಡತಿ ನಿಹಾ ಪರ್ವಿನ್(34 ವರ್ಷ) ಮತ್ತು ಮಗ ನಿಹಾಲ್ ಎಂಬವರೊಂದಿಗೆ ವಾಮಂಜೂರು ಅಮೃತನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಫಿರ್ಯಾದಿದಾರರು ಕೆಲಸದ ನಿಮಿತ್ತ ಕೇರಳ ರಾಜ್ಯದ ಕಣ್ಣೂರು ಎಂಬಲ್ಲಿಗೆ ಹೋಗಿದ್ದಾಗ ದಿನಾಂಕ:01-10-2023 ರಂದು ಸಂಜೆ 7.10 ಗಂಟೆಗೆ ನಿಹಾ ಪರ್ವಿನ್ ರವರು ಪೋನ್ ಕರೆ ಮಾಡಿ ನಾನು ಮಂಗಳೂರಿನ ವಿಮಾನ ನಿಲ್ದಾಣದಲಿದ್ದು ಮುಂಬೈಗೆ ತನ್ನ ಪರಿಚಯದ ಹುಡುಗನೊಂದಿಗೆ ಹೋಗುತ್ತಿರುವುದಾಗಿ ಮಗನನ್ನು ಪದವಿನಂಗಡಿಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಬಿಟ್ಟಿರುವುದಾಗಿಯೂ, ಮಗನು ಬೇಕಾದಲ್ಲಿ ಅಲ್ಲಿಂದ ಕರೆದುಕೊಂಡು ಹೋಗುವಂತೆ ಹೇಳಿ ಪೋನ್ ಅನ್ನು ಸ್ವಿಚ್ ಆಫ್ ಮಾಡಿರುತ್ತಾಳೆ, ಫಿರ್ಯಾದಿದಾರರು ಕೂಡಲೇ ಪದವಿನಂಗಡಿಯಲ್ಲಿರುವ  ಹೆಂಡತಿಯ ತಾಯಿ ಮನೆಯಿಂದ ಮಗನನ್ನು ಕರೆದು ಕೊಂಡು ಮನೆಗೆ ಬಂದು ನೋಡಿದಾಗ ಹೆಂಡತಿ ಮನೆಯಲ್ಲಿರದೆ ಕಾಣೆಯಾಗಿದ್ದು ಫಿರ್ಯಾದಿದಾರರು ಎಲ್ಲಾಕಡೆ ಹುಡುಕಿದ್ದು ಹೆಂಡತಿ ಪತ್ತೆಯಾಗದೆ ಇರುವುದರಿಂದ ಈ ದಿನ ಬಂದು ದೂರು ನೀಡುತಿದ್ದು ಫಿರ್ಯಾದಿದಾರರ ಹೆಂಡತಿ ನಿಹಾ ಪರ್ವಿನ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 04-10-2023 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080