ಅಭಿಪ್ರಾಯ / ಸಲಹೆಗಳು

Crime Report in  : Bajpe PS      

ಪಿರ್ಯಾದಿ MOHAMMAD IQBAL ದಾರರು ದಿನಾಂಕ : 03-11-2023 ರಂದು ರಾತ್ರಿ ಸಮಯ ಸುಮಾರು 08.20 ಗಂಟೆಗೆ ಕಾರು ನಂಬ್ರ KA -19 Z-7116 ನೇದರಲ್ಲಿ ಊಟ ಪಾರ್ಸೆಲ್ ತರವರೇ ಕೈಕಂಬದ ಕೊಯ್ಲಾ ಹೋಟೆಲ್  ಎದುರಿಗೆ ರಾ.ಹೇ-169 ನೇ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ ಹೋಟೆಲ್ ಗೆ ಹೋಗಿ ಪಾರ್ಸಲ್ ತೆಗೆದುಕೊಂಡು ವಾಪಾಸ್ಸು ಕಾರಿನ ಕಡೆಗೆ ನಡೆದುಕೊಂಡು ಬಂದು ಕಾರಿನ ಬಳಿ ನಿಂತುಕೊಂಡಿರುವಾಗ ಸಮಯ ಸುಮಾರು 08.40 ಗಂಟೆಗೆ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಮೋಟಾರ್ ಸೈಕಲ್ ನಂಬ್ರ MH-02 BU-1560 ನೇದನ್ನು ಅದರ ಸವಾರ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಅವರ ಎಡಕೈಯ ಮುಂಗೈನ ಮಣಿಕಟ್ಟಿಗೆ ಮೂಳೆ ಮುರಿತದ ಗಾಯವಾಗಿದ್ದು ಎರಡು ಕಾಲುಗಳಿಗೆ ಅಲ್ಲಲ್ಲಿ ತರಚಿದ ರೀತಿಯ ಗಾಯಗಳಾಗಿದ್ದು ಈ ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಪಿರ್ಯಾದಿದಾರರನ್ನು ಅವರ ಮಗ ನಿಹಾಲ್ ಹಾಗೂ ಅಲ್ಲಿ ಸೇರಿದ ಜನರು ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ SCS ಆಸ್ಪತ್ರೆಗೆ ಕರೆತಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Urva PS

ದಿನಾಂಕ 06-09-2023ರಿಂದ 30-09-2023ರ ನಡುವೆ ಪಿರ್ಯಾಧಿದಾರರ ಮನೆ SUMUKHA, BALEBAIL, KADRI B VILLAGE, BEJAI POST,, Mangaluru Cityಯಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ  ಆರೋಪಿ KAVYA(A1) ಯು ಮನೆಯ ಕಪಾಟಿನಲ್ಲಿ ಇದ್ದ ಪ್ರಕರಣದ ಪಿರ್ಯಾಧಿದಾರರ ತಾಯಿಯ ಅಂದಾಜು ಸುಮಾರು 02 ಲಕ್ಷ ಮೌಲ್ಯದ ಅಂದಾಜು 35 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಿಕೊಂಡು ತಾಯಿಯ ಅನಾರೋಗ್ಯದ ನೆಪಹೇಳಿ ಊರಿಗೆ Mandya ಹೋಗಿ ಬರುವುದಾಗಿ ತಿಳಿಸಿ ಹೋದವರು ಈ ವರೆಗೆ ವಾಪಸ್ ಬಾರದೇ ಪಿರ್ಯಾಧಿದಾರರ ಕರೆಗೆ ಸರಿಯಾಗಿ ಸ್ವಂದಿಸದೇ ಇರುವುದಾಗಿ ನೀಡಿದ ದೂರಿನ  ಸಾರಾಂಶವಾಗಿರುತ್ತದೆ.

Ullal PS

ಪಿರ್ಯಾದಿದಾರರ ಮಾವ ಚಿತ್ತರಂಜನ್ ಭಾಸ್ಕರ ಪೂಜಾರಿ(55)ರವರು ಅವಿವಾಹಿತರಾಗಿದ್ದು ಮುಂಬೈಯಲ್ಲಿ ಉದ್ಯೋಗದಲ್ಲಿದ್ದವರು ಕಳೆದ 3 ವರ್ಷಗಳಿಂದ ಕುಂಪಲ ಸರಳಾಯ ಕಾಲೋನಿಯ ಡೋ ನಂ 2-135/9 ರಲ್ಲಿ ವಾಸವಿರುವ  ತನ್ನ ತಂಗಿ ಆಶಾ ರವರ ಜೋತೆ ವಾಸವಾಗಿದ್ದವರು ಮಂಗಳೂರಿನ ಎಕ್ಕೂರಿನಲ್ಲಿರು ಫಿಶರೀಸ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದವರು ಅಮಲು ಪದಾರ್ಥ ಸೇವಿಸುವ ಅಭ್ಯಾಸವನ್ನು ಹೊಂದಿರುವ ಕಾರಣ ಇವರನ್ನು ಕೆಲಸದಿಂದ ದಿನಾಂಕ 7-09-2023 ರಂದು ಕೆಲಸದಿಂದ ವಜಾ ಮಾಡಿದ್ದು ಅದರಂತೆ ಸದ್ರಿಯವರು ಮನೆಗೆ ಬಂದವರು ಅದೇ ದಿನ ಸಂಜೆ 4.00 ಗಂಟೆಗೆ ಮನೆಯಿಂದ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೊದವರು ಈ ತನಕ ವಾಪಸ ಬಾರದೆ ಕಾಣೆಯಾಗಿದ್ದು ಅವರ ಮೊಬೈಲ್ ಕೂಡ ಸ್ವೀಚ್ ಆಪ್ ಆಗಿದ್ದು ಕಾಣೆಯಾದವರನ್ನು ಪತ್ತೆ ಹಚ್ಚಿ ಕೊಡುವಂತೆ ನೀಡಿದ ಪಿರ್ಯಾದಿ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ

ಇತ್ತೀಚಿನ ನವೀಕರಣ​ : 04-11-2023 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080