ಅಭಿಪ್ರಾಯ / ಸಲಹೆಗಳು

Crime Report in : Barke PS

ದಿನಾಂಕ:02.12.2023 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ 20-50 ಗಂಟೆಗೆ ಮಂಗಳೂರು ನಗರ ಕರಾವಳಿ ಮೈದಾನದ ಬಳಿ ಇಬ್ಬರು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ವಿಚಾರಿಸಲಾಗಿ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು  ಹೆಸರು 1). ಯಮನೂರ್ ಪ್ರಾಯ 22 ವರ್ಷ ವಾಸ: ಗಂಗನಬೂದಿಹಾಳ್ ಗ್ರಾಮ, ಬಾಗಲಕೋಟೆ ಜಿಲ್ಲೆ, ಹಾಲಿವಾಸ: ಪಾಲ್ಗುಣಿ ಸಂಕದ  ಬಳಿ ಬಾಡಿಗೆ ಮನೆ, ದಂಬೆಲ್ ಮಂಗಳೂರು.2). ನಂದನ್ ಪ್ರಾಯ 20 ವರ್ಷ ವಾಸ: ಬಾಲಾಜಿ ಗ್ಲಾಸ್ ಹೌಸ್, ಕೋಟೆಕಣ ಮಂಗಳೂರು.ಎಂಬುದಾಗಿ ತಿಳಿಸಿದ್ದು  ಸದ್ರಿ ಯಮನೂರ್ ಮತ್ತು ನಂದನ್ ರವರನ್ನು  ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಎ,ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ  “Tetrahydracannabinoid (Marijuana) POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಸದ್ರಿ ಆಪಾದಿತರ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

Mangalore East PS

ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ವತಿಯಿಂದ ರಚಿಸಲಾಗಿರುವ Anti Drug Team ತಂಡ ದಿನಾಂಕ:02-12-2023 ರಂದು 19-15 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸಮಯ 19-45 ಗಂಟೆಗೆ ಬಲ್ಮಠ ಗ್ರೌಂಡ್ ಬಳಿ ತಲುಪಿದಾಗ ಇಬ್ಬರು ವ್ಯಕ್ತಿಗಳು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಹೆಸರು ದೀಕ್ಷಿತ್ ಪ್ರಾಯ:27 ವರ್ಷ ವಾಸ: ಗೋಕಲ್ ಡೈರಿ ಹತ್ತಿರ ಉರ್ವಾ ಸ್ಟೋರ್ ಸುಂಕದ ಕಟ್ಟೆ ಮಂಗಳೂರು ಮತ್ತೋಬ್ಬನ ಹೆಸರು ಭೀಮಣ್ಣ ಗೋಗಿ ಪ್ರಾಯ;24 ವರ್ಷ ವಾಸ: ಅಕ್ಷಯ ಕ್ಯಾಂಟ್ರೇಸ್ ಹತ್ತಿರ ಅಶೋಕ ನಗರ ಉರ್ವಾ ಸ್ಟೋರ್ ಮಂಗಳೂರು ಅವರನ್ನು ವಶಕ್ಕೆ ಪಡೆದು ಠಾಣೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಿದ್ದು ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) 50ng per ml POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುವ ಮೇರೆಗೆ ಾಪಾದಿತರ ವಿರುದ್ದ  NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Moodabidre PS

ಪಿರ್ಯಾದಿ Sri Siddappa Naranoor PSI ದಿನಾಂಕ 02-12-2023 ರಂದು 23.00 ಗಂಟೆಗೆ ಠಾಣೆಯಲ್ಲಿರುವಾಗ ಮೂಡಬಿದರೆ ತಾಲೂಕು ಶಿರ್ತಾಡಿ ಗ್ರಾಮದ ಬ್ರಹ್ಮ ರೆಸಿಡೆನ್ಸಿ ಬಳಿ ಇರುವ ಖಾಲಿ ಜಾಗದಲ್ಲಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಮಾಹಿತಿಯನ್ನಾಧರಿಸಿ ಮಾಹಿತಿ ಬಂದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ಗಮನಿಸಿದಾಗ ಅಲ್ಲೇ ಸ್ವಲ್ಪ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಟಾರ್ಪಲ್ ಒಂದನ್ನು ನೆಲಕ್ಕೆ ಹಾಸಿ ಮೇಣದ ಬತ್ತಿಯನ್ನು ಹಚ್ಚಿಕೊಂಡು ಕೆಲವರು ಹಣವನ್ನು ಪಣವನ್ನಾಗಿ ಇಟ್ಟು ಉಲಾಯಿ- ಪಿದಾಯಿ ಎಂಬ ಜುಗಾರಿ ಅದೃಷ್ಟದ ಆಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 00.15 ಗಂಟೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ಮಾಡಲು ಹತ್ತಿರ ಹೋಗಿ  ಜುಗಾರಿ ಆಟ ಆಡುತ್ತಿದ್ದ 6 ಜನರನ್ನು ಸಿಬ್ಬಂದಿಗಳೊಂದಿಗೆ ಸುತ್ತುವರೆದು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಆರೋಪಿಗಳೆಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದು, ಜುಗಾರಿ ಆಟಕ್ಕೆ ಬಳಸಿದ ಇಸ್ಪಿಟ್ ಎಲೆಗಳು-52, ಟಾರ್ಪಲ್ -01, ಮೇಣದ ಬತ್ತಿ-02 ಹಾಗೂ ನಗದು 3200/- ರೂ ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ನೀಡಿದ ದೂರು ಎಂಬಿತ್ಯಾದಿ.

Barke PS

ದಿನಾಂಕ 02-12-2023 ರಂದು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗೇಶ್ ಹಸ್ಲರ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಸಂಜೆ 17-00 ಗಂಟೆಗೆ ಮಂಗಳೂರು ನಗರದ ಜೈಲ್ ರಸ್ತೆಯ ಬಳಿ ತಲುಪಿದಾಗ ಯುವಕನೊಬ್ಬನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ಕೂಡಲೇ ವಾಹನವನ್ನು ಆತನ ಬಳಿ ನಿಲ್ಲಿಸಿ ಸಿಬ್ಬಂದಿಗಳ ಸಹಾಯದಿಂದ ಸದ್ರಿ ಯುವಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತನ್ನ ಹೆಸರು ಶಶಾಂಕ್ ಜೈವಂತ್  (21)  ವಾಸ: ಜನತಾ ಕಾಲೋನಿ, ರೈಲ್ವೆ ಸ್ಟೇಷನ್,ಮುರಡೇಶ್ವರ,ಉತ್ತರ ಕನ್ನಡ, ಪ್ರಸ್ತುತ ವಾಸ ಶಿವ ಪಿ.ಜಿ, ಎಸ್.ಡಿ.ಎಮ್ ಕಾಲೇಜ್ ಹಿಂಬಾಗ,ಕೊಡಿಯಾಲ್ ಬೈಲ್, ಮಂಗಳೂರು. ಎಂಬುದಾಗಿ ತಿಳಿಸಿರುತ್ತಾನೆ. ಸದ್ರಿ ಯುವಕನಲ್ಲಿ ಮಾದಕವಸ್ತು ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ, ಮಾದಕ ವಸ್ತು ಸೇವನೆ ಮಾಡಿರುವುದಾಗಿ ಆತನು ಒಪ್ಪಿಕೊಂಡಿರುತ್ತಾನೆ. ಆತನನ್ನು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಿದಲ್ಲಿ ಎ ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು “Tetrahydracannabinoid (Marijuana)” POSITIVE”  ಎಂಬುದಾಗಿ  ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ.

Barke PS

ದಿನಾಂಕ 02-12-2023 ರಂದು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗೇಶ್ ಹಸ್ಲರ್  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಸಮಯ 20-00 ಗಂಟೆಗೆ ಮಂಗಳೂರು ನಗರದ ಎಸ್.ಡಿ.ಎಮ್ ಕಾಲೇಜ್ ಬಳಿ ತಲುಪಿದಾಗ ಯುವಕನೊಬ್ಬನು ಅಮಲಿನಲ್ಲಿದ್ದಂತೆ  ಕಂಡು ಬಂದಿದ್ದು  ವಶಕ್ಕೆ ಪಡೆದು ವಿಚಾರಿಸಿದಾಗ ಯುವಕನು ತನ್ನ ಹೆಸರು ಸೂರ್ಯ ಪ್ರತಾಪ್ ಸಿಂಗ್  (21) ವಾಸ: 408 ಶಿವಗಿರಿ ಶಾಪಿಂಗ್ ಆರ್ಕೇಡ್, ಅಳಕೆ, ಮಂಗಳೂರು ಎಂಬುದಾಗಿ ತಿಳಿಸಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ವೈದ್ಯಕೀಯ ತಪಾಸಣೆ ಬಗ್ಗೆ ಕಳುಹಿಸಿಕೊಟ್ಟಲ್ಲಿ ವೈದ್ಯರು “Tetrahydracannabinoid (Marijuana)” POSITIVE”  ಎಂಬುದಾಗಿ  ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ. 

ಇತ್ತೀಚಿನ ನವೀಕರಣ​ : 04-12-2023 11:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080