ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

 

Barke PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೆನೆಂದರೆ ದಿನಾಂಕ: 05-02-2024 ರಂದು  ಸಮಯ ಸುಮಾರು 09.30 ಗಂಟೆಗೆ ಬರ್ಕೆ ಠಾಣಾ ವ್ಯಾಪ್ತಿಯ ಉರ್ವ ಮಾರ್ಕೇಟ್ ಕಟ್ಟಡದ ಪಾರ್ಕಿಂಗ್ ನ ಸಾರ್ವಜನಿಕ ಸ್ಥಳದಲ್ಲಿ ಯತೀಶ್ ಶೆಟ್ಟಿ ಎಂಬಾತನು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿಕೊಂಡು ಮಟ್ಕಾ ಚೀಟಿಯನ್ನು ಬರೆಯುತ್ತಿಯುತಿದ್ದವರ ಮೇಲೆ  ಮಾನ್ಯ ನ್ಯಾಯಾಲಯದ ರಂತೆ ಅನುಮತಿಯನ್ನು ಪಡೆದುಕೊಂಡು ಠಾಣಾ ಅ.ಕ್ರ. 07/2024 ಕಲಂ:78 ಕೆ.ಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

 

Barke PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 05-02-2024 ರಂದು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕಿಯಾದ ಶ್ರೀಮತಿ ರೇಖಾ ಆರ್ ಇವರು ಸಿಬ್ಬಂದಿವರೊಂದಿಗೆ  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಸಮಯ ಮಂಗಳೂರು ನಗರದ ಸಾಯಿಬಿನ್ ಕಾಂಪ್ಲೇಕ್ಸ್ ಬಳಿ ತಲುಪಿದಾಗ ವಿಷ್ಣು.ಜಿ.ಕೆ ಪ್ರಾಯ 20 ವರ್ಷ ತಂದೆ:ಉನ್ನಿಕೃಷ್ಣನ್, ವಾಸ: ವಿಶ್ವ ಕರ್ಮ ಮನೆ, ಗುಡ್ಡೆ ಹೊಸೂರು, ಕುಶಾಲನಗರ, ಸೋಮವಾರ ಪೇಟೆ ತಾಲೂಕು, ಕೊಡಗು ಜಿಲ್ಲೆ ಹಾಲಿ ವಿಳಾಸ: ಶರೂನ್ ಪಿ.ಜಿ. ಫ್ರಾನ್ಸಿಸ್ ಕೋಟೆ ವುಡ್ ಲ್ಯಾಂಡ್ ಹೋಟೆಲ್ ಹಿಂಭಾಗ ಮಂಗಳೂರು   ಎಂಬಾತನು ಯಾವುದೊ ಸಶೆ ವಸ್ತು ಸೇವಿಸದ್ದಂತೆ ಕಂಡುಬಂದಿದ್ದು, ಮುಂದಿನ ಕ್ರಮದ ಬಗ್ಗೆ ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ವೈದ್ಯಕೀಯ ತಪಾಸಣೆ ಬಗ್ಗೆ ಕೋರಿಕೆ ಪತ್ರದೊಂದಿಗೆ ಕಳುಹಿಸಿಕೊಟ್ಟಿದ್ದು ಸದ್ರಿ ಮಂಗಳೂರು ನಗರದ ಕುಂಟಿಕಾನದ ಎ.ಜೆ.ಆಸ್ಪತ್ರೆಯ ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು “Tetrahydracannabinoid (Marijuana) POSITIVE” ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಬರ್ಕೆ ಪೊಲೀಸ್ ಠಾಣಾ ಅ.ಕ್ರ 08/2024 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.ಎಂಬಿತ್ಯಾದಿಯಾಗಿರುತ್ತದೆ.

 

CEN Crime PS

ಪ್ರಕರಣದ  ಸಾರಾಂಶವೆನೆಂದರೆ, ದಿನಾಂಕ 18/12/2023 ರಂದು  ಯಾರೋ  ಅಪರಿಚಿತ  ವ್ಯಕ್ತಿ ಮೊಬೈಲ್  ನಂ.7252878942 ನೇದ್ದರಿಂದ  ಪಿರ್ಯಾದಿದಾರರಿಗೆ ಕರೆ  ಮಾಡಿ  Pantheon Group, UK ಕಂಪನಿಯಲ್ಲಿ ಷೇರುಗಳನ್ನು  ಖರೀದಿಸುವಂತೆ  ತಿಳಿಸಿ   ಅಂಡ್ರಾಯಿಡ್  ಅಪ್ಲಿಕೇಶನ್    ಇನ್  ಸ್ಟಾಲ್  ಮಾಡುವಂತೆ   URL-pt-vc.vip/ ಲಿಂಕ್ ನ್ನು  ಕಳುಹಿಸಿರುತ್ತಾರೆ.  ಅದರಂತೆ  ಪಿರ್ಯಾದಿ NISCHITH D’SOUZA ಇವರು  ಸದ್ರಿ  ಆಪ್ ನ್ನು  ಡೌನ್ ಲೋಡ್  ಮಾಡಿ ಅದರಲ್ಲಿ ಲಾಗಿನ್ ಆಗಿ  ದಿನಾಂಕ: 18-12-2023 ರಿಂದ  ಸುಮಾರು 23-01-2024ರವರೆಗೆ  ಪಿರ್ಯಾದಿದಾರರು ರೂ.32,71,000/-  ಹಾಗೂ  ಅವರ  ಸ್ನೇಹಿತರಾದ ಲ್ಯಾನ್ಸಲ್ ಡಿ’ಸೋಜಾ ರೂ,8,00,000/-, ನಮಿತಾ ಡಿ’ಸೋಜಾ ರೂ.12,00,000/-, ಅಮರ್ ರಾವ್ ರೂ.4,75,000/-  ಹಣ ಸೇರಿ   ಒಟ್ಟು ರೂ. 57,46,000/-ಹಣವನ್ನು ಹಂತ ಹಂತವಾಗಿ     ಹೂಡಿಕೆ ಮಾಡಿದ್ದು  ತದನಂತರದಲ್ಲಿ  ಸದ್ರಿ  ಹಣವನ್ನು  ವಿತ್ ಡ್ರಾ ಮಾಡಲು  ಪ್ರಯತ್ನಿಸಿದ್ದಲ್ಲಿ  ಹಣ  ವಿತ್ ಡ್ರಾ  ಆಗಿರುವುದಿಲ್ಲ  , ತದನಂತರ  ಪಿರ್ಯಾದಿದಾರರಿಗೆ ಇದು ಒಂದು   ಮೋಸದ  ಜಾಲ ಎಂದು  ತಿಳಿದುಬಂದಿರುತ್ತದೆ. ಎಂಬಿತ್ಯಾದಿಯಾಗಿದೆ. 

 

Mangalore Rural PS

ಈ ಪ್ರಕರಣದ ಸಾರಾಂಶವೇನೆಂದರೆ, ಠಾಣೆಯಲ್ಲಿ ದಾಖಲಾದ ಎನ್.ಸಿ.ಆರ್ ಸಂಖ್ಯೆ: PO:1056240600070   ರಂತೆ Arun Kumar D ಮಂಗಳೂರು ಗ್ರಾಮಾಂತರ ಪೊಲೀಸು ಠಾಣಾ ಪೊಲೀಸು ಉಪನಿರೀಕ್ಷಕರು -1 ರವರು ಠಾಣಾ ಸಿಬ್ಬಂದಿಗಳೊಂದಿಗೆ 15.40 ಗಂಟೆಗೆ  ತಿರುವೈಲು ಗ್ರಾಮದ ವಾಮಂಜೂರು  ಆಳ್ವರಿಸ್ ಪೆಟ್ರೋಲ್ ಬಂಕ್ ಎದುರುಗಡೆಯ  ಸಾರ್ವಜನಿಕ  ಮೈದಾನ ಸ್ಥಳದಲ್ಲಿರುವ  ಮರದ ಕೆಳಗಡೆ ಧಾಳಿಯನ್ನು ನಡೆಸಿ ಇಸ್ಪೀಟ್ ಆಟದಲ್ಲಿ ನಿರತರಾದ  (1) ದಿವಾಕರ  (36 ವರ್ಷ) (2) ದೀಪಕ್ ನಾಯ್ಕ  (32 ವರ್ಷ)  (3) ರಾಘವೇಂದ್ರ @ ರಾಘು   (37 ವರ್ಷ)  (4) ಜಯರಾಮ  (36 ವರ್ಷ) (5) ಶಿವಾನಂದ  (43 ವರ್ಷ)  (6) ಚಂದ್ರಶೇಖರ (49 ವರ್ಷ) (7) ಜನಾರ್ಧನ  (58 ವರ್ಷ) ಎಂಬವರನ್ನು ವಶಕ್ಕೆ ಪಡೆದು ಉಲಾಯಿ- ಪಿದಾಯಿ ಎಂಬ ಜುಗಾರಿ ಆಟವನ್ನು ಆಡುವರೇ ಉಪಯೋಗಿಸಿದ್ದ ಇಸ್ಪೀಟ್ ಎಲೆಗಳು-52  ಮತ್ತು  ನಗದು ಹಣ ರೂಪಾಯಿ 810/- ಸ್ವಾಧೀನಪಡಿಸಿಕೊಂಡು  ಠಾಣೆಗೆ ಬಂದು ಕಲಂ 87 ಕೆ. ಪಿ. ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

 

Mangalore North PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೆಂದರೆ,  ಈ ಪ್ರಕರಣದ ಪಿರ್ಯಾದಿ ಅಜ್ಮತ್ ಅಲಿ ಪೊಲೀಸ್ ನಿರೀಕ್ಷಕರು ಮ ಮಂಗಳೂರು ಉತ್ತರ ಪೊಲೀಸ್ ಇವರು ರಾತ್ರಿ ರೌಂಡ್ಸ್ ಕರ್ತವ್ಯ ಮಾಡುತ್ತಾ ಬಾವುಟಗುಡ್ಡ ತಲುಪಿದಾಗ ,  ಗ್ಲಿನ್ ಮಥಾಯಸ್ ಪ್ರಾಯ:29 ವರ್ಷ ತಂದೆ:ಗ್ರೆಗೋರಿ ಮಥಾಯಸ್ ವಾಸ:14-1-74/28 ಕ್ಲಾಸಿಕ್ ಅಪಾರ್ಟ್ ಮೆಂಟ್ ಬಂಟ್ಸ್ ಹಾಸ್ಟೇಲ್ ರೋಡ್  ಎಂಬಾತನು ಅಮಲುಕೋರನಾಗಿ ತೂರಾಡುತ್ತಿದ್ದವನನ್ನು, ಮುಂದಿನ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಹಾಜರುಪಡಿಸಿದಲ್ಲಿ, ಎ.ಜೆ. ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಗ್ಲಿನ್ ಮಥಾಯಸ್ ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುತ್ತಾರೆ.  ಎಂಬಿತ್ಯಾದಿ 

ಇತ್ತೀಚಿನ ನವೀಕರಣ​ : 05-02-2024 10:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080