ಅಭಿಪ್ರಾಯ / ಸಲಹೆಗಳು

‌ದೈನಂದಿನ ಅಪರಾಧ ವರದಿ

Traffic South Police Station                                                

ಈ ಪ್ರಕರಣದ ಸಾರಂಶವೇನೆಂದರೆ, ಪಿರ್ಯಾದಿ SANATH KIRAN ಇವರು  ದಿನಾಂಕ:05-03-2024 ರಂದು ತನ್ನ ಕಾರು KA-19-M.N.-6205 ರಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲಪಾಡಿ ಕಡೆಗೆ ಚಲಾಯಿಸುತ್ತಾ ಕೊಲ್ಯ ಜಂಕ್ಷನ್  ರಾಮ ಮಂದಿರದ ಮುಂಭಾಗ ಸಮೀಪಿಸುತ್ತಿದ್ದಂತೆಯೇ  ಮಧ್ಯಾಹ್ನ 1-00 ಗಂಟೆಗೆ ಕಪ್ಪು ಬಣ್ಣದ ಮಹೀಂದ್ರಾ ಥಾರ್ ಕಾರು ನಂಬ್ರ KL-60-S-3938 ನೇದರ ಚಾಲಕ ಮಹಮ್ಮದ್ ಅಸ್ಕರ್ ನು  ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅದರ ಮುಂಭಾಗದಲ್ಲಿ ಹೋಗುತ್ತಿದ್ದ ಮಾರುತಿ ಬಲೇನೋ KL-60-S-4278 ಕಾರಿಗೆ ಬಲವಾಗಿ ಗುದ್ದಿದ್ದು, ಸದ್ರಿ ಸಮಯ ಬಲೇನೋ ಕಾರು  ರಸ್ತೆಯ ತೀರ ಎಡಭಾಗಕ್ಕೆ ತಳ್ಳಲ್ಪಟ್ಟು ರಸ್ತೆಯ ಎಡ ಭಾಗದಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-H.B-4929 SUZUKI ಕಂಪೆನಿಯ ಕೆಂಪು ಬಣ್ಣದ ACCESS 125  ಡಿಕ್ಕಿ ಹೊಡೆದು ಸುಮಾರು ದೂರ ಸ್ಕೂಟರನ್ನು ಎಳೆದುಕೊಂಡು ಹೋಗಿರುತ್ತದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಸವಾರನು ರಸ್ತೆಯ ತೀರ ಎಡಬದಿಗೆ ಎಸೆಯಲ್ಪಟ್ಟು ರಸ್ತೆಯ ಎಡಬದಿಯ ಸರ್ವೀಸ್ ರಸ್ತೆಯ ವಿಭಜಕದ ಮೇಲೆ ಬಿದ್ದಿರುತ್ತಾರೆ, ಪಿರ್ಯಾದಿದಾರರು ಕಾರನ್ನು ನಿಧಾನಿಸಿ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ, ಕೂಡಲೇ ಅಪಘಾತವಾದಲ್ಲಿಗೆ ತೆರಳಿ ಪಿರ್ಯಾದಿದಾರರು ಮತ್ತು ಅಲ್ಲಿದ್ದವರು ರಸ್ತೆಯಲ್ಲಿ ಬಿದ್ದಿದವರನ್ನು ಉಪಚರಿಸಿ ನೋಡಲಾಗಿ ಅಪಘಾತಕ್ಕೊಳಗಾದ ವ್ಯಕ್ತಿ ಪಿರ್ಯಾದಿದಾರರ ಪರಿಚಯದ ಕನ್ನೀರು ತೋಟ ನಿವಾಸಿ ಕೆ.ಸಂತೋಷ್ ಕುಮಾರ್ ಆಗಿದ್ದು ,ಅವರ ತಲೆಗೆ ರಕ್ತ ಗಾಯ,ಕೈ ಕಾಲು ಮತ್ತು ಬೆನ್ನಿಗೆ ತರಚಿದ ಮತ್ತು ಗುದ್ದಿದ ಗಾಯಗಳಾಗಿದ್ದು ತೀವ್ರ ರಕ್ತ ಸ್ರಾವ ಆಗುತ್ತಿತ್ತು, ಗಾಯಾಳು ಸಂತೋಷ್ ರವರನ್ನು ಕೂಡಲೇ ವಾಹನವೊಂದರಲ್ಲಿ ಗಾಯಾಳು ಸಂತೋಷ್ ರವರನ್ನು ಕೂಡಲೇ ವಾಹನವೊಂದರಲ್ಲಿ ಇಂಡಿಯಾನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿರುತ್ತದೆ. ಬಲೇನೋ ಕಾರು KL-60-S-4278 ನೇದರ ಚಾಲಕನ ಹೆಸರು ಅಜೇಶ್ ಆಗಿರುತ್ತದೆ. ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡ ಕೆ. ಸಂತೋಷ್ ಕುಮಾರ್ ರವರನ್ನು ಇಂಡಿಯಾನ ಆಸ್ಪತ್ರೆಗೆ 14.20 ಗಂಟೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಪಘಾತಕ್ಕೆ ಕಾರಣರಾದ KL-60-S-3938 ನೇದರ ಚಾಲಕ ಮಹಮ್ಮದ್ ಅಸ್ಕರ್ ಅಲಿ  ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ

 

Traffic South Police Station                      

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ VITTAL ಇವರು  ದಿನಾಂಕ:05-03-2024 ರಂದು ಪಿರ್ಯಾದಿದಾರ ತಮ್ಮನಾದ ಲಕ್ಷ್ಮಣ ಬಿಳಿಗುಡ್ಡ ರವರ ಬಾಬ್ತು KA-37-EG-2286 ನೇ ಮೋಟಾರು ಸೈಕಲ್ ನ್ನು ನಗೂರಿ ಕಡೆಯಿಂದ ಪಡೀಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ನನ್ನ ಎದುರಿನಿಂದ  KA-19 B-6193 ನೇ ಟಿಪ್ಪರ್ ಲಾರಿ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರ ಮೋಟಾರು ಸೈಕಲ್  ಮುಂಬಾಗಕ್ಕೆ ಅಪಘಾತಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್  ಸಮೇತ ರಸ್ತೆಗೆ ಬಿದ್ದಿರುತ್ತಾರೆ.. ಅಪಘಾತದಿಂದ ಪಿರ್ಯಾದಿದಾರ ಬೆನ್ನು ಮೂಳೆ ಮುರಿತದ ಗಾಯ, ಬಲಕಾಲಿನ ತೊಡೆಯ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ. ಮತ್ತು  ಮೋಟಾರು ಸೈಕಲ್ ನಮುಂಭಾಗ ಹಾಗೂ ಇತರೆ ಭಾಗಗಳು ಜಖಂಗೊಂಡಿರುತ್ತದೆ. ಅಪಘಾತ ಸ್ಧಳದಲ್ಲಿ ಸೇರಿದ ಸಾರ್ವಜನಿಕರು ರಿಕ್ಷಾದಲ್ಲಿ ಪಿರ್ಯಾದಿದಾರರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ,ವೈದ್ಯರು ಪರಿಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ

 

Kankanady Town PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ Suman Jonet Dsouza ಇವರ ಗಂಡನಾದ ವಿನ್ಸೆಂಟ್ ಡಿಸೋಜಾ (59 ವರ್ಷ) ರವರು ವಿಪರೀತ ಮಧ್ಯಪಾನ ಮಾಡುವ ಹವ್ಯಾಸ ಹೊಂದಿರುತ್ತಾರೆ ಹಾಗೂ ಅನಾರೋಗ್ಯದ ಸಮಸ್ಯೆ ಇರುತ್ತದೆ. ಪಿರ್ಯಾದಿದಾರರ ಗಂಡ ವಿನ್ಸೆಂಟ್ ಡಿಸೋಜಾ ರವರು ಈ ಮುಂಚೆ ಮನೆಯಿಂದ ಹಲವು ಬಾರಿ ಹೋದವರು ಅವರಾಗಿಯೇ ವಾಪಾಸ್ಸು ಬಂದಿದ್ದು, ಕೆಲವು ಬಾರಿ ಪ್ರಜ್ಙೆ ಇಲ್ಲದೇ ರಸ್ತೆಯಲ್ಲಿ ಬಿದ್ದಿರುವಾಗ ಸಾರ್ವಜನಿಕರು ಮನೆಗೆ ಕರೆದುಕೊಂಡು ಬಂದು ಬಿಟ್ಟಿರುತ್ತಾರೆ. ದಿನಾಂಕ 30/12/2023 ರಂದು ಮಧ್ಯಾಹ್ನ 3.00 ಗಂಟೆಗೆ ಹೋದವರು ಈವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ ಈ ಬಗ್ಗೆ ಮಂಗಳೂರಿನ ಕೆಲವೊಂದು ಆಸ್ಪತ್ರೆ, ಸಂಬಂಧಿಕರಲ್ಲಿ ಹಾಗೂ ಪರಿಚಯದವರಲ್ಲಿ ವಿಚಾರಿಸಿದ್ದು ಈ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಆದ್ದರಿಂದ ಪಿರ್ಯಾದಿದಾರರು ವಿನ್ಸೆಂಟ್ ಡಿಸೋಜಾ ರವರು ಕಾಣೆಯಾದ ಬಗ್ಗೆ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ, ಎಂಬಿತ್ಯಾದಿ.

ಕಾಣೆಯಾದ ವ್ಯಕ್ತಿಯ ಚಹರೆ-

ಹೆಸರು- ವಿನ್ಸೆಂಟ್ ಡಿಸೋಜಾ(59)  ಎತ್ತರ- 5.6 ಅಡಿ ಎತ್ತರ ಚಹರೆ- ಗೋಧಿ ಮೈಬಣ್ಣ, ಸಪೂರ ಶರೀರ ಬಲಗೈ ಮೇಲೆ ಮೊಣಕಾಲಿನಿಂದ ಕತ್ತಿರಸಿರುತ್ತದೆ.  ಮೇರೂನ್ ಬಣ್ಣದ ಟಿ ಶರ್ಟ್ ಧರಿಸಿರುತ್ತಾರೆ. ಮಾತನಾಡುವ ಭಾಷೆ- ಕನ್ನಡ, ಕೊಂಕಣಿ, ತುಳು, ಇಂಗ್ಲೀಷ್, ಮಲಿಯಾಳಿ ಭಾಷೆ ಬಲ್ಲವರಾಗಿರುತ್ತಾರೆ

Kankanady Town PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ Avinash ಇವರ ಅಣ್ಣನಾದ ಶಿವ ಪ್ರಸಾದ ಎಂಬವರು ದಿನಾಂಕ:10.01.2024 ರಂದು ಬೆಳಿಗ್ಗೆ 6:00 ಗಂಟೆಗೆ ಮನೆಯಲ್ಲಿ ತನ್ನ ತಂಗಿ ಶ್ವೇತಾಳ ಹತ್ತಿರ ನಾನು ರಾಮ ಮಂದಿರ ದೇವಸ್ಥಾನಕ್ಕೆ ಹೋಗಿ ನೋಡಿಕೊಂಡು ಬರುವುದಾಗಿ ಹೇಳಿ ಬ್ಯಾಗ್ ತೆಗೆದುಕೊಂಡು ಹೋದವರು ದಿನಾಂಕ:11.01.2024 ರಂದು ಅವನ ಚಿಕ್ಕಮ್ಮ ಶ್ರೀಮತಿ ಪ್ರಮೀಳಾ ರವರ ಮನೆಗೆ ಹೋಗಿ ಆ ದಿನ ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆದುಕೊಂಡು ಬೆಳಿಗ್ಗೆ ಮನೆಯಿಂದ ಹೋಗಿರುವುದಾಗಿ ಪ್ರಮೀಳಾ ರವರು ಪಿರ್ಯಾದಿದಾರರಲ್ಲಿ ತಿಳಿಸಿರುತ್ತಾರೆ. ದಿನಾಂಕ:14.01.2024 ರಂದು ಬೆಳಿಗ್ಗೆ ಸುಮಾರು 8:00 ಗಂಟೆಗೆ ಅವನ ಗೆಳೆಯ ಸಂದೇಶನಿಗೆ ಕರೆ ಮಾಡಿ ನಾನು ಪಂಪುವೆಲ್ ಹತ್ತಿರ ಇದ್ದೇನೆ ರಿಕ್ಷಾ ತೆಗೆದುಕೊಂಡು ಬರುವಂತೆ ತಿಳಿಸಿರುತ್ತಾನೆ. ನಂತರ ಅವನ ಬಗ್ಗೆ ಇಲ್ಲಿಯ ವರೆಗೂ ಮಾಹಿತಿ ಇರುವುದಿಲ್ಲ, ಶಿವ ಪ್ರಸಾದ ರವರು ಹೆಚ್ಚಾಗಿ ಮಧ್ಯಪಾನ ಮಾಡುವ ಹವ್ಯಾಸ ಹೋಂದಿರುತ್ತಾನೆ. ಪಿರ್ಯಾಧಿದಾರರ ಅಣ್ಣನ ಬಗ್ಗೆ ಮಂಗಳೂರಿನ ಕೆಲವೊಂದು ಕಡೆಗಳಲ್ಲಿ ಹುಡುಕಿ, ಸ್ನೇಹಿತರಲ್ಲಿ, ಪರಿಚಯದವರಲ್ಲಿ, ಸಂಬಂದಿಕರಲ್ಲಿ, ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಆದುದರಿಂದ ಠಾಣೆಗೆ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

ಚಹರೆ ವಿವರ:- ಎತ್ತರ: 5.9 ಅಡಿ, ಕಪ್ಪು ಮೈಬಣ್ಣ, ಸಪೂರ ಶರೀರ, ಕೋಲು ಮುಖ, ಧರಿಸಿರುವ ಬಟ್ಟೆ: ನೀಲಿ ಬಣ್ಣದ ಟೀ ಶರ್ಟ್ ಮತ್ತು ಕಪ್ಪ ಬಣ್ಣದ ಪ್ಯಾಂಟ್ ಮಾತನಾಡುವ ಬಾಷೆ: ಕನ್ನಡ, ತುಳು, ಹಿಂದಿ, ಭಾಷೆ ಬಲ್ಲವರಾಗಿರುತ್ತಾರೆ

ಇತ್ತೀಚಿನ ನವೀಕರಣ​ : 06-03-2024 09:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080