ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS                 

ಪಿರ್ಯಾದಿದಾರರಾದ ಸಿದ್ದಪ್ಪ, ಪ್ರಾಯ-50 ವರ್ಷ ಎಂಬವರು ದಿನಾಂಕ: 05-04-2024 ರಂದು  KL-65-N-8286 ನಂಬ್ರದ ಸನ್ನಿಧಿ ಪಾಟರ್ ಸಪ್ಲೈ ಟ್ಯಾಂಕರಿನಲ್ಲಿ ನಂತೂರು ಜಂಕ್ಷನ್ ಕಡೆಯಿಂದ ತಾರೇತೋಟ ರಸ್ತ ಕಡೆಯ ಮೂಲಕ ಪಂಪ್ ವೆಲ್ ಕಡೆಗೆ ಹಾದು ಹೋಗಿರುವ ರಾ.ಹೆ 66ನೇ ಡಾಮಾರು ರಸ್ತೆಯ ಮದ್ಯದಲ್ಲಿ ನೆಡಲಾದ ಗಿಡಗಳಿಗೆ ನೀರನ್ನು ಹಾಕುವ ಸಲುವಾಗಿ ತಾರೆತೋಟ ಎಂಬಲ್ಲಿ ಬೆಳಿಗ್ಗೆ ಸಮಯ ಸುಮಾರು 06:50 ಗಂಟೆಗೆ ಟ್ಯಾಂಕರಿನ ಚಾಲಕನಾದ ಬಸವರಾಜ ರವರು ಟ್ಯಾಂಕರನ್ನು ರಾ.ಹೆ 66 ನೇ ಡಾಮಾರು ರಸ್ತೆಯಲ್ಲಿ ಯಾವುದೇ ಮುಂಜಾಗ್ರತಾ ಸೂಚನಾ ಫಲಕವನ್ನು ಅಳವಡಿಸದೇ ಟ್ಯಾಂಕರನ್ನು ನಿಲ್ಲಿಸಿದ್ದು, ಪಿರ್ಯಾದಿದಾರರು ಗಾರ್ಡನಿಗೆ ನೀರನ್ನು ಹಾಕುತ್ತಿದ್ದ ವೇಳೆ ನಂತೂರು ಜಂಕ್ಷನ್ ಕಡೆಯಿಂದ ಪಂಪ್ ವೆಲ್ ಕಡೆಗೆ MH-09 EM-9404 ನಂಬ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕನಾದ ಗಣೇಶ್ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನೀರಿನ ಟ್ಯಾಂಕರಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ನೀರಿನ ಟ್ಯಾಂಕರಿನ ಹಿಂಬದಿಯ ಬಾಡಿ, ಹಿಂಬದಿಯ ಪಂಪ್ ಸೆಟ್ ಜಖಂ ಆಗಿದ್ದು, ಅಲ್ಲದೇ ಡಿಕ್ಕಿಯ ರಭಸಕ್ಕೆ ಅಪಘಾತಪಡಿಸಿದ ಗೂಡ್ಸ್ ಲಾರಿಯ ಎದುರಿನ ಕ್ಯಾಂಬೀನ್ ಜಖಂ ಗೊಂಡಿದ್ದು ಅಲ್ಲದೇ ಗೂಡ್ಸ್ ಲಾರಿಯ ಬಾಡಿ ಜಖಂಗೊಂಡ ವೇಳೆ ಅಪಘಾತ ಪಡಿಸಿದ ಗೂಡ್ಸ್ ಲಾರಿಯ ಚಾಲಕನಾದ ಗಣೇಶ್ ಎಂಬಾತನಿಗೆ ಕಾಲಿಗೆ ರಕ್ತಗಾಯವಾಗಿದ್ದು, ಗಣೇಶ್ ರವರನ್ನು ಚಿಕಿತ್ಸೆಯ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಎಂಬಿತ್ಯಾದಿ

 

Mangalore East Traffic PS                 

ಪಿರ್ಯಾದಿದಾರರಾದ ಡಾ ಗಣಪತಿ ಗೌಡ, ಪ್ರಾಯ-58 ವರ್ಷ ಎಂಬವರು ದಿನಾಂಕ: 05/04/2024 ರಂದು ತನ್ನ ಬಾಬ್ತು KA-12 P 1189 ನೇ ಕಾರನ್ನು ತನ್ನ ಮನೆಯಿಂದ ಹಂಪನಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಪಿವಿಎಸ್ ಲಲಿತ ಜ್ಯುವೆಲ್ಲರ್ ಬಳಿ ತಲುಪುವಾಗ ಬೆಳಿಗ್ಗೆ ಸಮಯ ಸುಮಾರು 09:30 ಗಂಟೆಗೆ ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಹಿಂದುಗಡೆಯಿಂದ KA-19-AC-0074 ನೇ ಅಟೋ ರಿಕ್ಷಾವನ್ನು ಅದರ ಚಾಲಕ ಸಿದ್ದೀಕ್ ಎಂಬಾತನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿಯು ಜಖಂಗೊಂಡಿರುವುದಲ್ಲದೇ ಅಪಘಾತಪಡಿಸಿದ KA-19-AC-0074  ಅಟೋ ರಿಕ್ಷಾವು ಕೂಡಾ ಜಖಂಗೊಂಡಿರುವುದಲ್ಲದೇ ಅಪಘಾತದ ವೇಳೆ ಅಪಘಾತಪಡಿಸಿದ ಅಟೋ ಚಾಲಕ ಸಿದ್ದಿಕ್ ನಿಗೆ ಗಾಯವಾಗಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾನೆ ಎಂಬಿತ್ಯಾದಿ

 

Barke PS

ಪಿರ್ಯಾದಿದಾರರಾದ ಗಣೇಶ್ ಶೆಟ್ಟಿಗಾರ ರವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಗಾಂಧಿನಗರ 8 ನೇ ಅಡ್ಡ ರಸ್ತೆಯಲ್ಲಿರುವ ಮಹಾಲಸಾ ಅಪಾರ್ಟಮೆಂಟ್ ನಲ್ಲಿ ವಾಸವಾಗಿದ್ದು, ದಿನಾಂಕ:23-03-2024 ರಂದು ಪಿರ್ಯಾದಿಯವರು ತನ್ನ ಪತ್ನಿಯನ್ನು ಪಿ.ಯು.ಸಿ ಪೇಪರ್ ವ್ಯಾಲೂವೇಷನ್ ಗಾಗಿ ಬೆಂಗಳೂರಿಗೆ ಬಿಟ್ಟು ವಾಪಾಸು ದಿನಾಂಕ: 25-03-2023 ರಂದು ಬೆಳಿಗ್ಗೆ  ಸುಮಾರು 07-45 ಗಂಟೆಗೆ ಮಂಗಳೂರಿನ ಮನೆಗೆ ಬಂದಿರುತ್ತಾರೆ. ಅದೇ ದಿನ ಪಿರ್ಯಾದಿದಾರರು ಅತ್ತಾವರದ ವಿನಸ್ ಲ್ಯಾಬ್ ಗೆ ಹೋಗಿ ಹೆಂಡತಿಯ ಮೆಡಿಕಲ್ ರಿಪೊರ್ಟ್ ತೆಗೆದುಕೊಂಡು  ಮನೆಗೆ ವಾಪಸು ಬರುತ್ತಿರುವಾಗ ಮಣ್ಣಗುಡ್ಡ ಜಂಕ್ಷನ್  ಬಳಿ ಇರುವ ಅಂಗಡಿಗೆ ಹೋಗಲು  ಸ್ಕೂಟರ್ ನಿಲ್ಲಿಸಿದಾಗ ಪಿರ್ಯಾದಿಯ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ಬಂದು ಬಾಡಿಗೆ ಮನೆ ಬಗ್ಗೆ ವಿಚಾರಿಸಿದ್ದು, ಪಿರ್ಯಾದಿದಾರರು ಆತನಲ್ಲಿ  ಕೊಂಚಾಡಿಯಲ್ಲಿ ಅವರ ಪ್ಲ್ಯಾಟ್ ಇದೆ ನೀವು ಅಲ್ಲಿ ಹೋಗುವುದಾದರೆ ಪ್ಲ್ಯಾಟ್ ನ್ನು ತೋರಿಸುವುದಾಗಿ ಹೇಳಿದಾಗ  ಆತನು ಒಪ್ಪಿಕೊಂಡಿದ್ದು, ಕೊಂಚಾಡಿಯಲ್ಲಿರುವ ಪ್ಲ್ಯಾಟ್ ಕೀಯು ಪಿರ್ಯಾದಿದಾರರ  ಮಣ್ಣಗುಡ್ಡ ಗಾಂಧಿನಗರದಲ್ಲಿರುವ ಮನೆಯಲ್ಲಿ ಇರುವುದರಿಂದ ಆ ಅಪರಿಚಿತ ವ್ಯಕ್ತಿಯನ್ನು ಪಿರ್ಯಾದಿದಾರರು ತನ್ನ ಸ್ಕೂಟರ್ ನಲ್ಲಿ ಕರೆದುಕೊಂಡು ಮಹಾಲಸಾ ಅಪಾರ್ಟಮೆಂಟ್ ಬಳಿ  ಮದ್ಯಾಹ್ನ 12.20 ಗಂಟೆ ಸುಮಾರಿಗೆ ಕರೆದುಕೊಂಡು ಬಂದು, ಆ ಅಪರಿಚಿತ ವ್ಯಕ್ತಿಗೆ  ಅಪಾರ್ಟಮೆಂಟ್ ನ ಮುಂಭಾಗದ ಗೇಟ್ ಹತ್ತಿರ ನಿಲ್ಲಲು ಹೇಳಿದಾಗ  ಆತನು ಪಿರ್ಯಾದಿದಾರರಲ್ಲಿ ನೀರು ಬೇಕಿತ್ತು ಬಾಯಾರಿಕೆ ಆಗಿದೆ ಎಂದು ಹೇಳಿದಾಗ ಆತನನ್ನು ಜೊತೆಗೆ ಮನೆಯ ಒಳಗೆ ಕರೆದುಕೊಂಡು ಹೋಗಿದ್ದು, ಆತನನ್ನು ಮನೆಯ ಹಾಲ್  ನಲ್ಲಿ ಕುಳ್ಳಿರಿಸಿ ಪಿರ್ಯಾದಿದಾರರು ನೀರು ತರಲು  ಅಡುಗೆ ಕೋಣೆಗೆ ಹೋದಾಗ  ಅಪರಿಚಿತ ವ್ಯಕ್ತಿಯು ಪಿರ್ಯಾದಿಯನ್ನು ಹಿಂಭಾಲಿಸಿ ಬಂದು ಪಿರ್ಯಾದಿದಾರರ ಶರ್ಟ್  ಕಲರ್ ಹಿಡಿದು ಹಿಂದಕ್ಕೆ ಎಳೆದು ಆತನು ತನ್ನ ಪ್ಯಾಂಟ್ ಜೇಬಿನಿಂದ  ಬಟನ್ ಚಾಕು ತೆಗೆದು ತೋರಿಸಿ, ಹೆದರಿಸಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ  ಚಿನ್ನದ ಸರಕ್ಕೆ ಕೈ ಹಾಕಿ ಎಳೆದಾಗ ಪಿರ್ಯಾದಿದಾರರು ಪ್ರತಿಭಟಿಸಿದರೂ ಆತನು ಕೊಲ್ಲುವುದಾಗಿ ಹೆದರಿಸಿ ಬಲವಂತವಾಗಿ  ಸುಮಾರು  1,90,000 ಮೌಲ್ಯದ ಅಂದಾಜು 32 ಗ್ರಾಂ ತೂಕದ ಚಿನ್ನದ ಸರವನ್ನು ಮತ್ತು ನನ್ನ  ಪ್ಯಾಂಟ್  ನ ಬಲ ಕಿಸೆಯಲ್ಲಿದ್ದ  10,500/-  ನಗದು ಹಣವನ್ನು  ಕಿತ್ತುಕೊಂಡು  ಸುಲಿಗೆ ಮಾಡಿಕೊಂಡು  ಮನೆಯಿಂದ ಮದ್ಯಾಹ್ನ  12-30 ಗಂಟೆ ಸುಮಾರಿಗೆ ತಾನು ಇಲ್ಲಿಂದ ಹೋಗುವ ತನಕ ಮನೆಯ ಹೊರಗೆ ಬಂದರೆ  ಕೊಲ್ಲುವುದಾಗಿ ಹೆದರಿಸಿ ಚಾಕು ಅನ್ನು ಜೊತೆಯಲ್ಲಿ ತೆಗೆದುಕೊಂಡು ಮನೆಯಿಂದ ಹೋಗಿರುತ್ತಾನೆ. ಪಿರ್ಯಾದಿದಾರರ ಚಿನ್ನದ ಸರ ಮತ್ತು ನಗದು ಹಣವನ್ನು  ಬಲವಂತವಾಗಿ ತೆಗೆದುಕೊಂಡು  ಹೋದ ಅಪರಿಚಿತ ವ್ಯಕ್ತಿಗೆ ಸುಮಾರು 30-40 ವರ್ಷ ಪ್ರಾಯ ಆಗಿರಬಹುದು. ಆತನು ಮನೆಗೆ ಬಂದ ಸಮಯ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿದ್ದನು ಎಂಬಿತ್ಯಾದಿ ಸಾರಾಂಶ

 

Mulki PS

ದಿನಾಂಕ 04.04.2024 ರಂದು 22.00 ಗಂಟೆಯಿಂದ ದಿನಾಂಕ 05.04.2024 ರ ಬೆಳಿಗ್ಗೆ 06.00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ Hendry Noronha ಇವರ  ಜಾಗದ ಕಾಂಪೌಂಡ್ ನ  ಹಾಗೂ ಇತರರಾದ ಜಾರ್ಜ್ ನೊರೊನ್ನ, ವೀಲಿಯಂ ನೊರೊನ್ನ ಹಾಗೂ ರಾಬರ್ಟ್ ರೋಸರಿಯಾ ರವರ ಜಾಗದ ಕಾಂಪೌಂಡ್ ಗೆ ಅಳವಡಿಸಿದ ಒಟ್ಟು 05 ಗೇಟುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಗೇಟುಗಳ  ಮೌಲ್ಯ 90.000/- ರೂ ಆಗಿರುತ್ತದೆ ಎಂಬಿತ್ಯಾದಿ ಫಿರ್ಯಾದಿಯ ಸಾರಾಂಶ

 

Konaje PS        

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:05.04.2024 ರಂದು ಪಿರ್ಯಾದಿ Nagaraj S ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ಬೆಳ್ಮ ಗ್ರಾಮದ ದೇರಳಕಟ್ಟೆ ಗ್ರೀನ್ ಗ್ರೌಂಡ್ ಬಳಿ ತಲುಪಿದಾಗ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡುಬಂದ ಎ ನಿಯಾಜ್, ಪ್ರಾಯ:33 ವರ್ಷ, ತಂದೆ: ಇಸ್ಮಾಯಿಲ್, ವಾಸ: ಮನೆ ನಂ: 22-86/20, ಅನಿಲ ಕಂಪೌಂಡ್, ಉಳ್ಳಾಲ ಬೈಲು, ಉಳ್ಳಾಲ ತಾಲೂಕು. ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಎ ನಿಯಾಜ್ TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ. ಆರೋಪಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂಬಿತ್ಯಾದಿ

 

Mangalore South PS

ಈ ಪ್ರಕರಣದ ಸಾರಾಂಶವೇನೆನಂದರೆ ಪಿರ್ಯಾದಿ GEETHA S  ಇವರ  ಮಗ ವಿಕಾಸ್, ಎಸ್ (26 ವರ್ಷ) ಎಂಬಾತನು ಈ ದಿನ ದಿನಾಂಕ : 05-04-2024 ರಂದು ಸಂಜೆ ಸುಮಾರು 04-00 ಗಂಟೆಗೆ ಪಿರ್ಯಾದಿದಾರರ ಸಂಬಂಧಿ ತೇಜಸ್ ಎಂಬಾತನೊಂದಿಗೆ ವಾಕಿಂಗ್ ಮಾಡಲು ಹೋಗಿದ್ದು, ಸಂಜೆ ಸುಮಾರು 04-48 ಗಂಟೆಗೆ ಮಾರ್ಗನ್ಸ್ ಗೇಟ್ ರೈಲ್ವೆ ಸೇತುವೆ ಬಳಿ ಕಾಣಿಯಾಗಿರುತ್ತಾನೆ, ಆತನ ಮೊಬೈಲ್ ನಂಬರ್ ಗೆ ಕರೆ ಮಾಡಲಾಗಿ  ಸ್ವಿಚ್ ಆಫ್ ಆಗಿರುತ್ತದೆ ಎಂಬಿತ್ಯಾದಿ

 

Mangalore South PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ K M HANEEF ಇವರು  ಸಹಕಾರಿ ಸದನ ಕಾಂಪ್ಲೆಕ್ಸ್, ಮಿಷನ್ ಸ್ಟ್ರೀಟ್ ನ ಅಂಗಡಿ ಮಾಲಕರ ಸಂಘದ ಅದ್ಯಕ್ಷರಾಗಿದ್ದು, ದಿನಾಂಕ : 05-04-2024 ರಂದು ರಾತ್ರಿ ಸುಮಾರು 09-00 ಗಂಟೆಗೆ ಪಿರ್ಯಾದಿದಾರರು ಸದರಿ ಕಾಂಪ್ಲೆಕ್ಸ್ ನ ‘NATURAL MEDICALS’ ನಲ್ಲಿ ಔಷಧ ತೆಗೆಯಲು ಬಂದ ಸಮಯ ಪ್ರಕರಣದ ಆರೋಪಿಗಳಾದ ಸರ್ಫ್ ರಾಜ್, ಮುಸ್ತ ಮತ್ತು ಇತರರು ಪಿರ್ಯಾದಿದಾರರಿಗೆ ಕೊಲ್ಲುವ ಉದ್ದೇಶದಿಂದ ಕೈಯಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಜಿನಪ್ರಸಾದ್ ತಂದೆ: ಜಗದೀಶ್ ಜೈನ್ ಎಂಬವರು ಮೂಡಬಿದ್ರೆ ಪೇಟೆಯಲ್ಲಿರುವ ಅಮರಶ್ರೀ ಅಮರನಾಥ್ ಶೆಟ್ಟಿಯವರ ಮಾಲಿಕತ್ವದ ಅಮರಶ್ರೀ ಚಿತ್ರಮಂದಿರವನ್ನು ನೋಡಿಕೊಳ್ಳುತ್ತಿದ್ದು ಸುಮಾರು 10 ದಿನಗಳ ಅಂದರೆ ದಿನಾಂಕ 22.03.2024 ರಂದು ಪಿರ್ಯಾದಿದಾರರು ಥಿಯೇಟರ್ ಕೆಲಸ ಕಾರ್ಯಗಳನ್ನು ಮುಗಿಸಿ ಸಂಜೆ 06.00 ಗಂಟೆಗೆ ಥಿಯೆಟರ್‌ನ ಹಳೆ ಬಾಗಿಲುಗಳನ್ನು ಭದ್ರಪಡಿಸಿ ಹೋಗಿದ್ದು, ಈ ದಿನ ದಿನಾಂಕ 05.04.2024 ರದು ಮದ್ಯಾಹ್ನ 14.00 ಗಂಟೆಗೆ ಪಿರ್ಯಾದಿದಾರರು ಚಿತ್ರಮಂದಿರಕ್ಕೆ ಬಂದು ನೋಡಿದಾಗ ಯಾರೋ ಕಿಡಿಗೇಡಿಗಳು ಚಿತ್ರಮಂದಿರದ ಹಿಂಬದಿಯ ಕಿಟಕಿಯ ಮುಖೇನ ಒಳಪ್ರವೇಶಿಸಿ ಚಲನಚಿತ್ರ ಪರದೆಗೆ ಇರುವ ಕಿಟಕಿಗೆ ಹಾನಿ ಮಾಡಿ ಸ್ಪೀಕರ್‌ಗೆ ಇರುವ ವಯರ್ ಕಟ್ ಮಾಡಿ ನಂತರ ಅಡಿಟೋರಿಯಂ ದುರಸ್ತಿ ಕೆಲಸ ಮಾಡಲು ಅಳವಡಿಸಿದ ವಯರ್, ಹೋಲ್ಡರ್ ಗಳನ್ನು ತುಂಡು ಮಾಡಿರುತ್ತಾರೆ. ಇದರಿಂದಾಗಿ ಸುಮಾರು ರೂ. 12000/- ನಷ್ಟ ಉಂಟಾಗಿರುತ್ತದೆ ಎಂಬಿತ್ಯಾದಿ

 

 

Ullal PS   

ಸಾರಾಂಶವೇನೆಂದರೆ ಈ ದಿನ ದಿನಾಂಕ: 04-04-2024 ರಂದು ಪಿರ್ಯಾದಿದಾರರಾದ    ಶೀತಲ್ ಆಲಗೂರು   PSI  ಇವರು  ಸಿಬ್ಬಂದಿ ರವರೊಂದಿಗೆ ಉಳ್ಳಾಲ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಉಳ್ಳಾಲ ತಲೂಕು ಪೆರ್ಮನ್ನೂರು ಗ್ರಾಮದ ಪಂಡಿತಹೌಸ್  ಬಳಿ  ಸಾರ್ವಜನಿಕ  ಸ್ಥಳಕ್ಕೆ  ತಲುಪಿದಾಗ ತೇಜಸ್   ಪ್ರಾಯ: 23  ವರ್ಷ, ತಂದೆ:   ಕೃಷ್ಣ ಶೆಟ್ಟಿಗಾರ್  ವಾಸ: ಡೋರ್ ನಂ 1-15 Z 23B ಪ್ರಕಾಶನಗರ ಪಂಡಿತಹೌಸ್ ಸೋಮೇಶ್ವರ ಗ್ರಾಮ ಕೋಟೇಕಾರ ಅಂಚೆ ಉಳ್ಳಾಲ   ತಾಲೂಕು ಎಂಬಾತನು ನಿಷೇದಿತ ಮಾದಕ ವಸ್ತು ಸೇವನೆ ಮಾಡಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದವನನ್ನು ಮುಂದಿನ ಕ್ರಮದ ಬಗ್ಗೆ , ದೇರಳಕಟ್ಟೆ  ಕೆ.ಎಸ್ ಹೆಗ್ಡೆ  ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿದಲ್ಲಿ  ತೇಜಸ್ ನು ಮಾದಕ ವಸ್ತು ‘TETRAHYDROCANNOBINOL(THC)’ (A Derivative of Cannabis ) Amphetamines ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿರುವುದರಿಂದ ತೇಜಸ್ ನ ವಿರುದ್ಧ ಪ್ರಕರಣ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

Ullal PS

ಪ್ರಕರಣದ ಸಾರಾಂಶವೇನೆಂದರೆ ದಿನಾಂಕ. 11-03-2024 ರಂದು ಮದ್ಯಾಹ್ನ 1-30 ಗಂಟೆಯ ನಂತರದಿಂದ ದಿನಾಂಕ. 04-04-2024 ರಂದು ಮದ್ಯಾಹ್ನ 1-45 ಗಂಟೆಯ ಮದ್ಯಾವಧಿಯಲ್ಲಿ ಕೋಟೆಕಾರು ಗ್ರಾಮದ ಕೊಂಡಾಣ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿದ್ದ 6 (ಆರು) ಸಿಸಿ ಕ್ಯಾಮರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸಿಸಿ ಕ್ಯಾಮರಗಳ ಒಟ್ಟು ಅಂದಾಜು ಮೌಲ್ಯ ರೂ.50,000/- ಆಗಿದ್ದು, ಕಳವಾದ ಸಿಸಿ ಕ್ಯಾಮರಗಳನ್ನು ಹಾಗೂ ಕಳವು ಮಾಡಿದ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣದ ಸಾರಾಂಶ.

ಇತ್ತೀಚಿನ ನವೀಕರಣ​ : 07-04-2024 10:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080