ಅಭಿಪ್ರಾಯ / ಸಲಹೆಗಳು

Crime Reports: CEN Crime PS Mangaluru City

ಪಿರ್ಯಾದಿ ದಿನಾಂಕ-26-04-2023 ರಂದು ಪಿರ್ಯಾದಿದಾರರು  ಅಮೇಜಾನ್ ನಲ್ಲಿ  ಮೊಬೈಲ್ ಚಾರ್ಜರ್ ಆರ್ಡರ್ ಮಾಡಿ ,ಸದ್ರಿ ಆರ್ಡರ್ ಸ್ವೀಕರಿಸಿರುತ್ತಾರೆ ಆದರೆ ಮೋಬೈಲ್ ಚಾರ್ಜರ್ ಡ್ಯಾಮೇಜ್ ಆಗಿರುವುದರಿಂದ ಅಮೇಜಾನ್ ಮುಖಾಂತರ ರಿಟರ್ನ್ ಮಾಡಿ ರೀಪ್ಲೇಸ್ಮೆಂಟ್ ಆರ್ಡರ್ ಮಾಡಿರುತ್ತಾರೆ,ಆದರೆ ರೀಪ್ಲೇಸ್ಮೆಂಟ್ ಆರ್ಡರ್  ಬರುವುದು ತಡವಾದ ಕಾರಣ ಪಿರ್ಯಾದಿದಾರರು ಗೂಗಲ್ ನಿಂದ   ಬ್ಲೂಡರ್ಟ್ ಕೊರಿಯರ್ ಸರ್ವೀಸ್ ರವರ ನಂಬರ್-7091032967 ನೇದ್ದನ್ನು   ಪಡೆದುಕೊಂಡು ಕರೆ ಮಾಡಿ ವಿಚಾರಿಸಿರುತ್ತಾರೆ. ನಂತರ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಂಬರ್-8147160555 ನೇದ್ದರಿಂದ ಕರೆಮಾಡಿ ಪಿರ್ಯಾದಿದಾರರೊಂದಿಗೆ ಸದ್ರಿ ಮೋಬೈಲ್ ಚಾರ್ಜರ್ ನ  ರಿಟರ್ನ್ ಮತ್ತು ರೀಪ್ಲೇಸ್ಮೆಂಟ್ ಆರ್ಡರ್ ನ ಬಗ್ಗೆ ವಿಚಾರಿಸಿ ಆರ್ಡರ್ ಕ್ಯಾನ್ಸಲೇಶನ್ ಚಾರ್ಜ್ ಪೇ ಮಾಡಲು ತಿಳಿಸಿ ಪಿರ್ಯಾದಿದಾರರಿಗೆ  ಮೊಬೈಲ್ ನಂಬ್ರ-9382825180ನೇದ್ದರಿಂದ http://bluedartregistration.wixsite.com/my-site ಎಂಬ ಲಿಂಕ್ ಅನ್ನು ಕಳುಹಿಸಿ ಲಿಂಕ್ ನಲ್ಲಿ ಮೊಬೈಲ್ ನಂಬ್ರ, ಯುಪಿಐ ಪಿನ್ ನಂಬ್ರ ಮತ್ತು ಒಟಿಪಿ ಯನ್ನು ನಮೂದು ಮಾಡಲು ತಿಳಿಸಿದಂತೆ ಪಿರ್ಯಾದಿದಾರರು ನಮೂದಿಸಿರುತ್ತಾರೆ, ಬಳಿಕ ದಿನಾಂಕ-04-05-2023 ರಂದು ಪಿರ್ಯಾದಿದಾರರು ಹೊಂದಿರುವ ಎಸ್.ಬಿ.ಐ ಖಾತೆ ಸಂಖ್ಯೆ-ನೇದ್ದರಿಂದ ರೂಪಾಯಿ-70,000 /- ಹಣವನ್ನು ಆರೋಪಿಯು ಬ್ಲೂಡರ್ಟ್ ಕೊರಿಯರ್ ಸರ್ವೀಸ್ ಎಂದು  ನಂಬಿಸಿ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

CEN Crime PS Mangaluru City

ದಿನಾಂಕ 03-05-2023 ರಂದು ಬೆಳಿಗ್ಗೆ 9.52 ಸಮಯಕ್ಕೆ ಪಿರ್ಯಾದಿದಾರರು ಕೆಲಸದಲ್ಲಿದ್ದ ಸಮಯ ಮೊಬೈಲ್ ನಂಬ್ರ +91960880085ನೇ ರಿಂದ ಕರೆಯೊಂದು ಬಂದಿದ್ದು ಸದರಿ ಕರೆಯಲ್ಲಿ ಮಾತನಾಡಿದ ವ್ಯಕ್ತಿಯು ತಾನು ಮುಂಬಯಿ ಫೆಡೆಕ್ಸ್ ಕೊರಿಯರ್ ನಿಂದ ಮಾತನಾಡುವುದಾಗಿ ತಿಳಿಸಿ  ನೀವೊಂದು ಪಾರ್ಸೆಲ್ ಮುಂಬಯಿಯಿಂದ ತೈವಾನ್ ಗೆ ಕಳುಹಿಸಿದ್ದೀರಿ ಸದ್ರಿ ಪಾರ್ಸೆಲ್ ನಲ್ಲಿ illegal substances ಇರುವ ಕಾರಣ ಅದನ್ನು ಕಸ್ಟಮ್ಸ್ ನವರು ಸೀಝ್ ಮಾಡಿದ್ದಾರೆ ಎಂಬುದಾಗಿ ತಿಳಿಸಿ ಕರೆಯನ್ನು ಮುಂಬಯಿ ಪೊಲೀಸ್ ಗೆ ಕನೆಕ್ಟ್ ಮಾಡುವುದಾಗಿ ಹೇಳಿ ನಂತರ ಮುಂಬಯಿ ಪೊಲೀಸ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯು ಪಿರ್ಯಾದಿದಾರರಲ್ಲಿ ಸ್ಕೈಪ್ ಮೂಲಕ ಮಾತನಾಡಿದ್ದು ( SKYE ID: MUMBAI CYBER CRIME – live:cid.6e85ccb91911b359 ) ಪಿರ್ಯಾದಿದಾರರ ಆಧಾರ್ ಹಾಗೂ ಮೊಬೈಲ್ ನಂಬ್ರವನ್ನು ಹೊಂದಿ ಮುಂಬಯಿಯಲ್ಲಿ ಅನೇಕ ಬ್ಯಾಂಕ್  ಖಾತೆಗಳಿವೆ ಆದುದರಿಂದ ಪಿರ್ಯಾದಿದಾರರ ಸರಿಯಾದ ಖಾತೆಯನ್ನು ಪರಿಶೀಲಿಸುವರೇ ರೂ. 48132/- ನ್ನು ಅವರು ತಿಳಿಸಿರುವ YES BANK ACCOUNT NUMBER xxxxxxxxxx5535 (andheri east branch)  ಪಾವತಿಸುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ರೂ.40000/- ನ್ನು ಸದ್ರಿ ಖಾತೆಗೆ ಬ್ಯಾಂಕ್ ಟ್ರಾನ್ಸ್ ಫರ್ ಮಾಡಿರುತ್ತಾರೆ.  ನಂತರ ಸದರಿ ವ್ಯಕ್ತಿಯು ಇನ್ನು ಹೆಚ್ಚಿನ ಹಣವನ್ನು ವರ್ಗಾಯಿಸುವಂತೆ ತಿಳಿಸಿದ್ದು ಇದರಿಂದ ಸಂಶಯಗೊಂಡ ಪಿರ್ಯಾದಿದಾರರು ತಾನು ಮೋಸ ಹೋಗಿರುವ ಬಗ್ಗೆ ತಿಳಿದುಕೊಂಡಿರುತ್ತಾರೆ. ಹೀಗೆ ಯಾರೋ ಅಪರಿಚಿತರು ಫೆಡೆಕ್ಸ್ ಕೊರಿಯರ್ ಸರ್ವಿಸ್ ನಿಂದ ಮಾತನಾಡುವುದಾಗಿ ತಿಳಿಸಿ ನಂತರ ಕರೆಯನ್ನು ಮುಂಬಯಿ ಪೊಲೀಸ್ ಠಾಣೆಗೆ ವರ್ಗಾಯಿಸಿ ಪಿರ್ಯಾದಿದಾರರ ಆಧಾರ್ ಹಾಗೂ  ಮೊಬೈಲ್ ನಂಬ್ರವನ್ನು ಯಾರೋ ದುರುಪಯೋಗ ಮಾಡಿದ್ದು ಅದರ ಪರಿಶೀಲನೆ ಬಗ್ಗೆ ಪಿರ್ಯಾದಿದಾರರ  ಐ.ಸಿ.ಐ.ಸಿ.ಐ  ಖಾತೆ ಸಂಖ್ಯೆ ನೇ ದರಿಂದ ಒಟ್ಟು ರೂ.40,000/-ನ್ನು ತನ್ನ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿ ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

CEN Crime PS Mangaluru City

ದಿನಾಂಕ 12-04-2023 ರಂದು ಪಿರ್ಯಾದಿದಾರರು ತಮ್ಮ ವೀಸಾ ಅರ್ಜಿಯು ಮುಂಬೈನಿಂದ ಬರದಿರುವ ಕಾರಣ ಗೂಗಲ್ ನಲ್ಲಿ ಹೋಗಿ ಕಸ್ಟಮರ್ ನಂಬ್ರ ಹುಡುಕಾಡಿರುತ್ತಾರೆ ಅಂತೆಯೇ ದೂರವಾಣಿ ಸಂಖ್ಯೆ-7003622060 ನೆದನ್ನು ಪಡೆದುಕೊಂಡು ಸದ್ರಿ ನಂಬರ್ ಕರೆ ಮಾಡಿ ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿಯು ನಿಮ್ಮ ಶಿಪ್ ಮೆಂಟ್ ಹೋಲ್ಡ್ ಆಗಿರುವುದಾಗಿ ಹಾಗೂ 2 ರೂ ಜಿ ಎಸ್ ಟಿ ಶುಲ್ಕ ಪಾವತಿಸುವಂತೆ ತಿಳಿಸಿರುತ್ತಾರೆ ನಂತರ ಪಿರ್ಯಾದಿದಾರರಿಗೆ 7381142309 ನೇದರಿಂದ ಲಿಂಕ್ ಒಂದನ್ನು ಕಳುಹಿಸಿರುತ್ತಾರೆ.ಅದೇ ರೀತಿ 8389091590 ನೇದರಿಂದಲೂ ಕರೆ ಮಾಡಿ ತಿಳಿಸಿರುತ್ತಾರೆ.ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ಅನ್ನು ಕ್ಲಿಕ್ ಮಾಡಿ ತಮ್ಮ ಹೆಸರು ಮೊಬೈಲ್ ನಂಬ್ರ ಮತ್ತು ಪೋನ್ ಪೇ ಪಿನ್ ನಮೂದಿಸಿ 2 ರೂಗಳನ್ನು ತಮ್ಮ ಎಸ್ ಬಿ ಐ ಬ್ಯಾಂಕ್ ನಿಂದ ಪಾವತಿಸಿರುತ್ತಾರೆ.ಅದೇ ದಿನ ಪಿರ್ಯಾದಿದಾರರು ತಮ್ಮ ಶಿಪ್ ಮೆಂಟ್ ಅನ್ನು ಸ್ವೀಕರಿಸಿರುತ್ತಾರೆ.ಮರು ದಿನ ದಿನಾಂಕ 13-04-2023 ರಂದು ಪಿರ್ಯಾದಿದಾರರ ಎಸ್ ಬಿ ಐ ಬ್ಯಾಂಕ್ ಖಾತೆ ಸಂಖ್ಯೆ- ನೇದರಿಂದ ಪಿರ್ಯಾದಿದಾರರ ಗಮನಕ್ಕೆ ಬಾರದೆ ಒಟ್ಟು 99,000/- ರೂಗಳನ್ನು ಅಪರಿಚಿತ ವ್ಯಕ್ತಿಯು ಮೋಸದಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುತ್ತಾನೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಲಿಂಕ್ ಕಳುಹಿಸಿ ಮೋಸದಿಂದ ನಂಬಿಸಿ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

CEN Crime PS Mangaluru City

ಪಿರ್ಯಾದಿದಾರರು ದಿನಾಂಕ 04-05-2023 ರಂದು ತನ್ನ ಮನೆಯಲ್ಲಿರುವ ಸಮಯ ಸಂಜೆ 17.00 ಗಂಟೆ ಸಮಯಕ್ಕೆ 9648072496ನೇ ಮೊಬೈಲ್ ನಂಬ್ರದಿಂದ ಕರೆಯೊಂದು ಬಂದಿದ್ದು ಕರೆಯಲ್ಲಿ ಮಾತನಾಡಿದ ವ್ಯಕ್ತಿಯು ತಾನು ಐ.ಸಿ.ಐ.ಸಿ.ಐ ಬ್ಯಾಂಕ್ ಉದ್ಯೋಗಿಯಾಗಿದ್ದು ತನ್ನ ಹೆಸರು ಪ್ರಿಯದರ್ಶಿನಿ ಎಂಬುದಾಗಿಯೂ ತಾನು employee Id-441080ನೇ ದನ್ನು ಹೊಂದಿರುವುದಾಗಿ ತಿಳಿಸಿ   ನಿಮಗೆ ಕ್ರೆಡಿಟ್ ಕಾರ್ಡ್ ಗೆ ಸಂಬಂದಿಸಿದಂತೆ ಯಾವುದಾದರೂ ಸಮಸ್ಯೆಯಿದೆಯಾ? ಎಂದು ಪಿರ್ಯಾದಿದಾರರಲ್ಲಿ ಕೇಳಿದ್ದು ಈ ಬಗ್ಗೆ ಪಿರ್ಯಾದಿದಾರರು ಯಾವುದೇ ಸಮಸ್ಯೆಯಿರುವುದಿಲ್ಲವಾಗಿ ತಿಳಿಸಿದಂತೆ ಸದ್ರಿ ವ್ಯಕ್ತಿಯು ನಿಮಗೆ ಪರ್ಸನಲ್ ಲೋನ್ ನೀಡುತ್ತೇವೆ ಬೇಕಾ? ಎಂದು ಕೇಳಿದ್ದು  ಪಿರ್ಯಾದಿದಾರರು ಬೇಡ ಎಂಬುದಾಗಿ ತಿಳಿಸಿದಾಗ ಸದ್ರಿ ವ್ಯಕ್ತಿಯು ಅದನ್ನು confirm ಮಾಡಬೇಕು ಅದಕ್ಕಾಗಿ ನಿಮ್ಮ debit card ನಲ್ಲಿರುವ ಗ್ರಿಡ್ ನಂಬ್ರವನ್ನು ತಿಳಿಸಿ ಎಂದು ಹೇಳಿದಾಗ ಪಿರ್ಯಾದಿದಾರರು ಸದ್ರಿ ನಂಬ್ರವನ್ನು ತಿಳಿಸಿದ್ದು ಕೂಡಲೇ ಪಿರ್ಯಾದಿದಾರರ ಖಾತೆಗೆ ರೂ.4,61,681/- ಕ್ರೆಡಿಟ್ ಆಗಿದ್ದು   ಈ ಬಗ್ಗೆ ಪಿರ್ಯಾದಿದಾರರು ಪ್ರಶ್ನಿಸಿದಾಗ ಸದ್ರಿ ವ್ಯಕ್ತಿಯು ಅದು ತಪ್ಪಿ ಕ್ರೆಡಿಟ್ ಆಗಿದ್ದು ಅದನ್ನು ರಿವರ್ಟ್ ಮಾಡುತ್ತೇವೆ ನೀವು ನಿಮ್ಮ ಮೊಬೈಲ್ ಗೆ ಬರುವ .ಓ.ಟಿ.ಪಿ ವಿವರ ನೀಡಿ ಎಂದು ಕೇಳಿದಂತೆ ಪಿರ್ಯಾದಿದಾರರು ತನಗೆ ಬಂದಿರುವ ಓ.ಟಿ.ಪಿ ವಿವರವನ್ನು ನೀಡಿರುತ್ತಾರೆ. ಕೂಡಲೇ ಪಿರ್ಯಾದಿದಾರರ ಐ.ಸಿ.ಐ.ಸಿ.ಐ ಖಾತೆ ಸಂಖ್ಯೆ  ದರಿಂದ ರೂ 2,00,000/-, 2,00,000/-, 98,000/-, 2,95,000/- ಹೀಗೆ ಹಂತ ಹಂತವಾಗಿ ಒಟ್ಟು ರೂ. 7,93,000/- ವರ್ಗಾವಣೆಯಾಗಿರುತ್ತದೆ. ಆದುದರಿಂದ  ಯಾರೋ ಅಪರಿಚಿತರು ತನಗೆ  ಐ.ಸಿ.ಐ.ಸಿ.ಐ ಬ್ಯಾಂಕಿನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ತನ್ನಿಂದ ಕಾರ್ಡ್ ಹಾಗೂ .ಓ.ಟಿ.ಪಿ ವಿವರವನ್ನು ಪಡೆದು ತನ್ನ ಐ.ಸಿ.ಐ.ಸಿ.ಐ ಖಾತೆ ಸಂಖ್ಯೆ ನೇದರಿಂದ ಹಂತ ಹಂತವಾಗಿ ಒಟ್ಟು ರೂ. 7,93,000/- ನ್ನು ಅನಧಿಕೃತವಾಗಿ  ತನ್ನ ಖಾತೆಗೆ ವರ್ಗಾಯಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

Mangalore East PS

ದಿನಾಂಕ 05-05-2023 ರಂದು ಸಮಯ ಸುಮಾರು ಬೆಳಿಗ್ಗೆ 7.00 ಗಂಟೆಗೆ ಪಿರ್ಯಾದಿ Shivaram Alva K

 ವಾಕಿಂಗ್ ಮುಗಿಸಿ ವಾಪಸ್ಸು ತಮ್ಮ ಪ್ಲಾಟ್ ಗೆ ಹೋಗಲು ಸಾಯಿ ಮಹಲ್ ಅಪಾರ್ಟಮೆಂಟ್ ನ ಕಾರ್ ಪಾರ್ಕಿಂಗ್ ಬಳಿ ಬಂದ ವೇಳೆ ಅದೇ ಅಪಾರ್ಟಮೆಂಟ್ ನಲ್ಲಿಯೇ ವಾಸವಾಗಿರುವ ಮೋಹನದಾಸ್ ಶೆಟ್ಟಿ ಎಂಬವರು ಪಿರ್ಯಾದಿದಾರರ ಬಳಿ ಬಂದು ಅವರನ್ನು ಅಡ್ಡಗಟ್ಟಿ ತಡೆದು ಬೇವರ್ಸಿ ಮಗನೆ, ಸೂಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಆದುದರಿಂದ ಪಿರ್ಯಾದಿಗೆ ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಮೋಹನದಾಸ್ ಶೆಟ್ಟಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Kavoor PS     

ಪಿರ್ಯಾದಿ VIDYADHAR NAIK  ಬಾಬ್ತು KA-19-EK-4225  ನೇ ಹೊಂಡ  ಡ್ರೀಮ್ ಯುಗ ಬೈಕ್  ನ್ನು ಪಿರ್ಯಾದಿದಾರರ ಕೆಲಸದವನಾದ ಲಕ್ಷೀಶ ಎಂಬುವರು ಉಪಯೋಗ ಮಾಡುವುದಾಗಿದೆ. ದಿನಾಂಕ 26-4-2023 ರಂದು ಸಂಜೆ 4-00 ಗಂಟೆಗೆ  ಲಕ್ಷೀಶನು ಸದರಿ ಬೈಕ್ ನ್ನು  ಮಾಲೆಮಾರ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಆತನು ತನ್ನ ಹೆಂಡತಿ ಮನೆಗೆ ಹೋಗಿರುತ್ತಾನೆ, ನಂತರ ದಿನಾಂಕ 1-5-2023 ರಂದು ಬೆಳಿಗ್ಗೆ 9-30 ಗಂಟೆಗೆ ಲಕ್ಷೀಶನು ವಾಪಸ್ಸು ಬಂದು ನೋಡಿದಾಗ ಇರಿಸಿದ ಸ್ಥಳದಲ್ಲಿ ಬೈಕ್ ಇಲ್ಲದೇ ಕಾಣೆಯಾಗಿರುತ್ತದೆ.  ಸದ್ರಿ ಬೈಕ್ ನ್ನು ದಿನಾಂಕ 26-4-2023 ರ ಸಂಜೆ 4-00 ಗಂಟೆಯಿಂದ ದಿನಾಂಕ 1-5-2023 ರ ಬೆಳಿಗ್ಗೆ 9-30 ಗಂಟೆಯ ಮದ್ಯೆ ಯಾರೋ ಕಳ್ಳರು ಮಾಲೇ ಮಾರ್ ನಲ್ಲಿರಿಸಿದ  KA-19-EK-4225  ನೇ ಹೊಂಡ  ಡ್ರೀಮ್ ಯುಗ ಬೈಕ್  ನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ. ಸದರಿ ಬೈಕ್ ಮೌಲ್ಯ ಅಂದಾಜು ರೂ  22000/- ಆಗಬಹುದು , ಆದುದರಿಂದ ತಾವುಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ಎಂಬಿತ್ಯಾದಿ.

Traffic North Police Station

ಪಿರ್ಯಾದಿ Lakshmana Pakeerappa Bajanthri ದಿನಾಂಕ 04.05.2023 ರಂದು ಸುರತ್ಕಲ್ ನಲ್ಲಿ ಕೆಲಸ ಮುಗಿಸಿ ಬಸ್ಸಿನಲ್ಲಿ ಹಳೆಯಂಗಡಿ ಜಂಕ್ಷನಿಗೆ ಬಂದು ಬಸ್ಸಿನಿಂದ ಇಳಿದು ಊಟ ಪಾರ್ಸೆಲ್ ಮಾಡಿಸಿ ಮನೆಗೆ ಹೋಗುವರೇ ರಾತ್ರಿ ಸಮಯ ಸುಮಾರು 20:00 ಗಂಟೆಗೆ ಮಂಗಳೂರು ತಾಲೂಕು, ಹಳೆಯಂಗಡಿ ಜಂಕ್ಷನ್ ಬಳಿ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯನ್ನು ದಾಟುತ್ತಿರುವಾಗ ಸುರತ್ಕಲ್ ಕಡೆಯಿಂದ ಮೋಟಾರ್ ಸೈಕಲ್ ನಂಬ್ರ KA-19-HC-3010 ನೇಯದನ್ನು ಅದರ ಸವಾರ ರವಿ ಎಂಬವರು ಸಹಸವಾರೆಯನ್ನು ಕುಳ್ಳಿರಿಸಿಕೊಂಡು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮಣಿಗಂಟಿನ ಸ್ವಲ್ಪ ಮೇಲೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರನ್ನು ಆರೋಪಿ ರವಿರವರು ಚಿಕಿತ್ಸೆಯ ಬಗ್ಗೆ ಒಂದು ಅಂಬ್ಯುಲೆನ್ಸ್ ನಲ್ಲಿ ಮುಲ್ಕಿ ಸಮುದಾಯ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಫಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Crime Reports: Barke PS

ಪಿರ್ಯಾದಿ Mithun kumar ಹೆಂಡತಿ ಶ್ರೀಮತಿ ವಸುಮತಿ ಮಣ್ಣಗುಡ್ಡ ಕೆನರಾ ಹೈಸ್ಕೂಲ್ ನಲ್ಲಿ ಕಚೇರಿ ಕೆಲಸ ಮಾಡಿಕೊಂಡಿರುತ್ತಾಳೆ. ಪ್ರಸ್ತುತ ಶಾಲೆಗೆ ರಜೆ ಇರುವುದರಿಂದ ಮಗಳು ರಿಶೀಕ ಅಜ್ಜಿ ಮನೆಗೆ ಹೋಗಿರುತ್ತಾಳೆ. ಪಿರ್ಯಾದಿದಾರರು ಬೆಳಿಗ್ಗೆ 8.30 ಗಂಟೆ ಹೊತ್ತಿಗೆ ಕೆಲಸದ ಬಗ್ಗೆ ಹೋಗಿರುತ್ತಾರೆ. ಪಿರ್ಯಾದಿ ಹೆಂಡತಿ ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಕೆಲಸದ ಬಗ್ಗೆ ಕೆನರಾ ಹೈಸ್ಕೂಲ್ ಗೆ ಹೋಗುವ ಸಮಯ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿರುತ್ತಾಳೆ. ಆಕೆ ಮಧ್ಯಾಹ್ನ ಊಟಕ್ಕೆಂದು 1.00 ಗಂಟೆಗೆ ಮನೆಗೆ ಬಂದಾಗ ಮನೆಯ ಪ್ರವೇಶ ದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮೀಟಿ ಮುರಿದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯ ಬೆಡ್ ರೂಮ್ ನಲ್ಲಿಟ್ಟಿದ್ದ ಕಬ್ಬಿಣದ ಕಪಾಟಿನ ಬಾಗಿಲನ್ನು ತೆರೆದು ಕಪಾಟಿನಲ್ಲಿ ಚಿನ್ನಾಭರಣಗಳನ್ನು ಇಡುವ ಲಾಕರ್ ತರಹದ ಕಬ್ಬಿಣದ ಪೆಟ್ಟಿಗೆಯ ಬೀಗವನ್ನು ಮುರಿದು ಅದರಲ್ಲಿಟ್ಟಿದ್ದ ಚಿನ್ನದ ಸುಮಾರು 8 ಗ್ರಾಂ ತೂಕದ ರೋಪ್ ಚೈನ್ -01 ಇದರ ಅಂದಾಜು ಮೌಲ್ಯ 30,000/- ಹಾಗೂ ಮಗುವಿನ ಚಿನ್ನದ ಉಂಗುರಗಳು -03 ಇವುಗಳ ಅಂದಾಜು ಮೌಲ್ಯ 5,000/- (ಸುಮಾರು 3 ಗ್ರಾಂ ತೂಕ) ಇವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನಾಭರಣಗಳ ಒಟ್ಟು ತೂಕ-11 ಗ್ರಾಂ ಆಗಬಹುದು ಹಾಗೂ ಇವುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ ಸುಮಾರು 35,000/- ಆಗಬಹುದು ಈ ಘಟನೆ ಈ ದಿನ ದಿನಾಂಕ:04.05.2023 ರಂದು ಬೆಳಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯ ಮಧ್ಯದಲ್ಲಿ ಆಗಿರುವುದಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಕಳವಾದ ಚಿನ್ನಾಭರಗಳನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

CEN Crime PS Mangaluru City                                                 

ದಿನಾಂಕ 01-05-2023 ರಂದು ಯಾರೋ ಅಪರಿಚಿತ ವ್ಯಕ್ತಿ ಫೇಸ್ ಬುಕ್ ಮುಖಾಂತರ MICHAEL FRANK ಎಂಬ ಹೆಸರಿನಿಂದ ಪರಿಚಹಿಸಿಕೊಂಡು ನಂತರ ಪಿರ್ಯಾದಿದಾರರ ವಾಟ್ಸಪ್ ನಂಬ್ರ  ನೇದಕ್ಕೆ +2348064411599 ನೇದರಿಂದ ವಾಟ್ಸಾಪ್ ಸಂದೇಶ ಕಳುಹಿಸಿ ತನ್ನ ಮಗಳ ಬರ್ತಡೇ ಪಾರ್ಟಿ ಇರುವುದರಿಂದ ಪಿರ್ಯಾದಿದಾರರಿಗೆ ವಿದೇಶದಿಂದ ಶೂ,ವಾಚ್,ಮೊಬೈಲ್,ಡ್ರೆಸ್,ಸ್ಯಾಂಡಲ್,ಪರ್ಸ್ ಮತ್ತು ವಿದೇಶಿ ಹಣ ಮೂವತ್ತು ಸಾವಿರ ಪೌಂಡ್ ಕಳುಹಿಸುವುದಾಗಿ ಪಿರ್ಯಾದಿದಾರರಿಗೆ ತಿಳಿಸಿರುತ್ತಾನೆ, ನಂತರ ದಿನಾಂಕ 02-05-2023 ರಂದು ಬೆಳಿಗ್ಗೆ ಯಾರೋ ಅಪರಿಚಿತ ವ್ಯಕ್ತಿ ತಾನು ಡೆಲ್ಲಿ ಕಸ್ಟಮ್ಸ್ ಆಫೀಸ್ ನಿಂದ ನಿಮಗೆ ಪಾರ್ಸೆಲ್ ಬಂದಿರುತ್ತದೆ ಎಂದು ಆತನ ವಾಟ್ಸ್ ಆಪ್ ನಂಬ್ರ 8123942826 ನೇದರಿಂದ ಪಿರ್ಯಾದಿದಾರರಿಗೆ ಸಂದೇಶ ಕಳುಹಿಸಿ ಹಾಗೂ ಅದಕ್ಕಾಗಿ ಕಸ್ಟಮ್ ಕ್ಲಿಯರೆನ್ಸ್ ಫೀಸ್ 7,500/- ರೂ  ಪಾವತಿಸಬೇಕೇಂದು ತಿಳಿಸಿದರು ಅದರಂತೆ ಪಿರ್ಯದಿದಾರರು ತಮ್ಮ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ- ನೇದರಿಂದ ಅಪರಿಚಿತ ವ್ಯಕ್ತಿಯ ಗೂಗಲ್ ಪೇ ನಂಬ್ರ-9957689447 ನೇದಕ್ಕೆ ಪಾವತಿಸಿರುತ್ತಾರೆ.ನಂತರ ಪಿರ್ಯಾದಿದಾರರಿಗೆ ಸದ್ರಿ ಅಪರಿಚಿತ ವ್ಯಕ್ತಿಯು  ವಿದೇಶಿ ಕರೆನ್ಸಿ ಇರುವುದರಿಂದ ಮನಿ ಲ್ಯಾಂಡರಿಂಗ್ ಸರ್ಟಿಫಿಕೆಟ್ ಮಾಡಲು 55,000/- ರೂ ಪಾವತಿಸುವಂತೆ ತಿಳಿಸಿರುತ್ತಾರೆ,ಪಿರ್ಯಾದಿದಾರರು ಅದರಂತೆ ಅಪರಿಚಿತ ವ್ಯಕ್ತಿಯ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ-110114869073 ನೇದಕ್ಕೆ ಪಿರ್ಯಾದಿದಾರರ ಕೆನರಾ ಬ್ಯಾಂಕ್ ನಿಂದ ದಿನಾಂಕ 02-05-2023  ಆನ್ಲೈನ್ ಬ್ಯಾಂಕ್ ವರ್ಗಾವಣೆ ಮಾಡಿರುತ್ತಾರೆ, ನಂತರ ಪಿರ್ಯಾದಿದಾರರಿಂದ ಇನ್ನು ಹೆಚ್ಚಿನ ಹಣ ಪಾವತಿಸುವಂತೆ ಬೇಡಿಕೆ ಬಂದಾಗ ಪಿರ್ಯಾದಿದಾರರು ತಾವು ಮೋಸ ಹೋಗಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ. ಈ ರೀತಿಯಾಗಿ ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿ ವಿದೇಶಿ ಉಡುಗೊರೆ ಕಳುಹಿಸುವುದಾಗಿ ತಿಳಿಸಿ ಒಟ್ಟು 62,500/- ರೂ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವುದಾಗಿದೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿದೆ.

Traffic South Police Station

ದಿನಾಂಕ: 04-05-2023 ರಂದು ಪಿರ್ಯಾದಿ NITHIN DSOUZA ತಾಯಿಯಾದ ಐರಿನ್ ಡಿಸೋಜ (33 ವರ್ಷ) ರವರು ಕುಲಶೇಖರ ಕೊಗ್ಗರ ಹೋಟೆಲ್ ಬಳಿ ಬಸ್ಸು ನಂಬ್ರ: KA-19-AA-8338 ನೇದರ 3D ಸಿಟಿ ಬಸ್ಸು ನಿಂದ ಬೆಳಿಗ್ಗೆ ಸಮಯ ಸುಮಾರು 8-30 ಗಂಟೆಗೆ ಇಳಿಯುವ ಸಮಯ ಅದರ ಚಾಲಕನಾದ ವರುಣ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಬಸ್ಸನ್ನು ಓಮ್ಮೇಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಐರಿನ್ ಡಿಸೋಜಾ ರವರು  ಬಸ್ಸಿನ ಒಳಗಿನಿಂದ ಮುಂದಿನ ಬಾಗಿಲಿನಿಂದ ಮಣ್ಣು ರಸ್ತೆಗೆ ಕೆಳಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ ತೀವ್ರ ರಕ್ತಗಾಯ ಹಾಗೂ ಬಲಕೈಯ ಗಂಟಿಗೆ ರಕ್ತಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಜನರು ಹಾಗೂ ಬಸ್ಸಿನ ಕಂಡಕ್ಟರ್ ಐರಿನ್ ಡಿಸೋಜಾ ರವರನ್ನು ಉಪಚರಿಸಿ ಬಸ್ಸಿನ ಕಂಡಕ್ಟರ್ ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದು ನಂತರ ಹೆಚ್ಚಿನ ಚಿಕಿತ್ಸೆ  ಬಗ್ಗೆ ಪಿರ್ಯಾದಿದಾರರು ತಾಯಿಯಾದ ಐರಿನ್ ಡಿಸೋಜರವರನ್ನು ಜ್ಯೋತಿಯ ಕೆ,ಎಂ,ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಐರಿನ್ ಡಿಸೋಜರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿ ತುರ್ತು ನಿಗಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿದೆ.ಎಂಬಿತ್ಯಾದಿ.

Traffic South Police Station         

ಪಿರ್ಯಾದಿ ಸಂದೀಪ್ (33 ವರ್ಷ ) ರವರು ದಿನಾಂಕ: 02-05-2023 ರಂದು ಅವರ ಬಾಬ್ತು ಬೈಕ್ ನಂಬ್ರ: KA-19-EC-8061 ನೇದರಲ್ಲಿ ಪಿರ್ಯಾದಿದಾರರು ಸವಾರರಾಗಿ ಅವರ ಪತ್ನಿ ಪ್ರತಿಮ ಹಾಗೂ ಮಗ ಶ್ರೀಂಜನ್ ಎಸ್ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಬೈಕ್ ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ: 8-15 ಗಂಟೆಗೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಬಳಿ ತಲುಪಿದಾಗ ಅವರ ಹಿಂದಿನಿಂದ ಅಂದರೆ ಕೊಣಾಜೆ ಕಡೆಯಿಂದ ಕಾರು ನಂಬ್ರ: KA-50-N-8881 ನೇದನ್ನು ಅದರ ಚಾಲಕನಾದ ಅಬೂಬಕ್ಕರ್ ಸಿದ್ದೀಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿನ ಹಿಂದುಗಡೆಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಪತ್ನಿ ಹಾಗೂ ಮಗು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಕೈಗೆ ಮತ್ತು ಕಾಲಿಗೆ ತರಚಿದ ಗಾಯ,ಅವರ ಪತ್ನಿ ಪ್ರತಿಮಾ ರವರ ಬೆನ್ನಿಗೆ ,ಸೊಂಟಕ್ಕೆ ಹಾಗೂ ಭುಜಕ್ಕೆ ಗುದ್ದಿದ ಗಾಯ,ಕಾಲಿಗೆ ರಕ್ತಗಾಯ ಹಾಗೂ ಮಗುವಿಗೆ ಕೈಗೆ ಮತ್ತು ಕಾಲಿಗೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಮತ್ತು ಕಾರಿನ ಚಾಲಕ ಸೇರಿ ಗಾಯಾಳುಗಳನ್ನು ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದಲ್ಲಿ  ಪಿರ್ಯಾದಿದಾರರಿಗೆ ಹಾಗೂ ಮಗುವಿಗೆ  ವೈದ್ಯರು ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಅವರ ಪತ್ನಿ ಪ್ರತಿಮಾ ರವರಿಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Mangalore South PS

ದಿನಾಂಕ;- 04.05.2023 ರಂದು ಮಧ್ಯಾಹ್ನ 12.00 ಗಂಟೆಯಿಂದ 15.15 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರ ಸುಭಾಶ್ ನಗರ ಮೈನ್ ರೋಡನಲ್ಲಿರುವ ವಿನಸ್ ಅಪಾರ್ಟ್ ಮೆಂಟ್ ನ 1 ನೇ ಮಹಡಿಯಲ್ಲಿರುವ ರೂಮ್ ನಂಬ್ರ- 03 ರ ಪಿರ್ಯಾದಿ LOHITHAKSHA ವಾಸ್ತವ್ಯದ ಮನೆಯ ಎದುರು ಬಾಗಿಲನ್ನು ಮುರಿದ್ದು ಒಳಗೆ ಪ್ರವೇಶಿಸಿ ಬೆಡ್ ರೂಮ್ ನ ಗೋಡ್ರೆಜ್ ಕಪಾಟಿನಲ್ಲಿದ ವಿವಿಧ ನಮೂನೆಯ 206 ಗ್ರಾಂ ಚಿನ್ನಾ ಭರಣಗಳನ್ನು ಕಳ್ಳವು ಮಾಡಿಕೊಂಡು ಹೋಗಿದ್ದು ಕಳ್ಳವು ಆದ ಸೋತ್ತಿನ ಒಟ್ಟು ಅಮದಾಜು ಮೌಲ್ಯ 750000/- ರೂಪಾಯಿ ಆಗಬಹುದು.

Ullal PS       

ಪ್ರಕರಣದ ಸಾರಾಂಶವೇನೆಂದರೆ ಉಳ್ಳಾಲ ನಗರ ಸಭೆಯ ಅಧೀನದಲ್ಲಿರುವ ನೀರಿನ ಸ್ಥಾವರಗಳಿಂದ ಸಾರ್ವನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಬಸ್ತಿಪಡ್ಪು ನಗರ ಸಭಾ ವಸತಿ ಗೃಹದ ಬಳಿಯ ಪಂಪ್ ನಿಂದ, ನಗರ ಸಭಾ ಕಛೇರಿಯ ಪಕ್ಕದಲ್ಲಿರುವ ತೆರೆದ ಬಾವಿಗೆ ಅಳವಡಿಸಿರುವ ಪಂಪ್ ನಿಂದ, ಉಳ್ಳಾಲ ಮೊಗವೀರಪಟ್ನ ಹಳೆಯ ಐಸ್ ಪ್ಯಾಕ್ಟರಿಯ ಬಳಿ ಇರುವ ಪಂಪ್ ನಿಂದ ಒಟ್ಟು 75  ಮೀಟರ್ ಕೇಬಲ್ಗಳನ್ನು ದಿನಾಂಕ. 28-4-2023 ರಂದು ರಾತ್ರಿ 9-00 ಗಂಟೆಯಿಂದ 29-4-2023 ರ ಪೂರ್ವಾಹ್ನ 7-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಕೇಬಲ್ನ ಅಂದಾಜು ಮೌಲ್ಯ ರೂಪಾಯಿ. 11,250/- ಆಗಬಹುದು ಎಂಬಿತ್ಯಾದಿ.

 

 

 

 

ಇತ್ತೀಚಿನ ನವೀಕರಣ​ : 21-08-2023 12:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080