ಅಭಿಪ್ರಾಯ / ಸಲಹೆಗಳು

 

Mulki PS

ದಿನಾಂಕ 04-06-2023 ರಂದು ಬೆಳಗ್ಗೆ 10-10 ಗಂಟೆಗೆ ಮುಲ್ಕಿ ತಾಲೂಕು ಕಿಲ್ಪಾಡಿ ಗ್ರಾಮದ ಮುಲ್ಕಿ ರೈಲ್ವೇ ಸ್ಟೇಷನ್ ಬಳಿಯ ವೈನ್ ಪಾರ್ಕ್ ಬಳಿ ಆರೋಪಿ ಅವಿನಾಶ್ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿ.ಎಸ್.ಐ ಮುಲ್ಕಿ ಶ್ರೀ ವಿನಾಯಕ ತೋರಗಲ್ ರವರು ತಮ್ಮ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ  ಸಂಗ್ರಹಿಸುತ್ತಿದ್ದ ನಗದು ಹಣ 450/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಾಳೆ 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಪೆನ್ನು 01 ಇವುಗಳನ್ನು ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದು ಸ್ವೀಕರಿಸಿ ಪ್ರಕರಣ ದಾಖಾಲಿಸಿರುವುದು ಎಂಬಿತ್ಯಾದಿ.

 

Mulki PS

ದಿನಾಂಕ 04-06-2023 ರಂದು ಬೆಳಗ್ಗೆ 10-15 ಗಂಟೆಗೆ ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಮುಲ್ಕಿ ಕಟ್ಟೆಯಂಗಡಿ ಬಳಿ ಆರೋಪಿ ಗಣೇಶ್ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿ.ಎಸ್.ಐ ಮುಲ್ಕಿ ಶ್ರೀ ಮಾರುತಿ ಪಿ ರವರು ತಮ್ಮ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ  ಸಂಗ್ರಹಿಸುತ್ತಿದ್ದ ನಗದು ಹಣ 440/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಾಳೆ 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಪೆನ್ನು 01 ಇವುಗಳನ್ನು ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದು ಸ್ವೀಕರಿಸಿ ಪ್ರಕರಣ ದಾಖಾಲಿಸಿರುವುದು ಎಂಬಿತ್ಯಾದಿ.

 

Mulki PS

ದಿನಾಂಕ 04-06-2023 ರಂದು ಬೆಳಗ್ಗೆ 12-15 ಗಂಟೆಗೆ ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಮುಲ್ಕಿ ಕೆಇಬಿ  ಬಳಿ ಆರೋಪಿ ಕೃಷ್ಣನಂದಾ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿ.ಎಸ್.ಐ ಮುಲ್ಕಿ ಶ್ರೀ ವಿನಾಯಕ ತೋರಗಲ್  ರವರು ತಮ್ಮ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ  ಸಂಗ್ರಹಿಸುತ್ತಿದ್ದ ನಗದು ಹಣ 420/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಾಳೆ 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಪೆನ್ನು 01 ಇವುಗಳನ್ನು ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದು ಸ್ವೀಕರಿಸಿ ಪ್ರಕರಣ ದಾಖಾಲಿಸಿರುವುದು ಎಂಬಿತ್ಯಾದಿ.

 

 Mulki PS

ದಿನಾಂಕ 04-06-2023 ರಂದು ಬೆಳಗ್ಗೆ 12-35 ಗಂಟೆಗೆ ಮುಲ್ಕಿ ತಾಲೂಕು ಲಿಂಗಪ್ಪಯ್ಯಕಾಡು ಮಾರ್ಕೆಟ್  ಬಳಿ ಕಾರ್ನಾಡು ಗ್ರಾಮ ಬಳಿ ಆರೋಪಿ ಸುಕೇಶ್ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿ.ಎಸ್.ಐ ಮುಲ್ಕಿ ಶ್ರೀ ಮಾರುತಿ ಪಿ   ರವರು ತಮ್ಮ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ  ಸಂಗ್ರಹಿಸುತ್ತಿದ್ದ ನಗದು ಹಣ 650/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಾಳೆ 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಪೆನ್ನು 01 ಇವುಗಳನ್ನು ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದು ಸ್ವೀಕರಿಸಿ ದಾಖಾಲಿಸಿರುವುದು ಎಂಬಿತ್ಯಾದಿ.

 

CEN Crime PS Mangaluru City

ದಿನಾಂಕ 03-06-2023 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರು ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಶಾಲೆಯ ಪ್ರಿನ್ಸಿಪಾಲ್ ಆದ xxxxx ರವರ ಹೆಸರಿರುವ ನಕಲಿ ಫೇಸ್ ಬುಕ್ ಖಾತೆ ಯಿಂದ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಹಾಗೂ ತನ್ನ ಸ್ನೇಹಿತನಾದ xxxx ರವರ ಮಗ ಮೆಡಿಕಲ್ ಎಮರ್ಜೆನ್ಸಿ ಯಲ್ಲಿರುತ್ತಾರೆ ಆದ ಕಾರಣ ತುರ್ತಾಗಿ ಒಂದು ಲಕ್ಷದ ಹಣ ಅಗತ್ಯವಿದೆ ಎಂದು ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ.ಇದನ್ನು ನಂಬಿದ ಪಿರ್ಯಾದಿದಾರು ತಮ್ಮ ಫೇಡರಲ್ ಬ್ಯಾಂಕ್,ಕಂಕನಾಡಿ ಶಾಖೆ ಖಾತೆ ಸಂಖ್ಯೆ- ನೇದರಿಂದ ಅಪರಿಚಿತ ವ್ಯಕ್ತಿಯು  ಕಳುಹಿಸಿದ ಗೂಗಲ್ ಪೇ ನಂಬ್ರ-7576043817 ನೇದಕ್ಕೆ ಹಂತ ಹಂತವಾಗಿ 30,000/- ರೂ, 30,000/-ರೂ ಮತ್ತು 20,000/- ರೂ ಒಟ್ಟು 80,000/- ರೂಗಳನ್ನು ವರ್ಗಾಯಿಸಿರುವುದಾಗಿದೆ ಎಂಬಿತ್ಯಾದಿ.

 

CEN Crime PS Mangaluru City

ಪಿರ್ಯಾದಿ ಕುಮಾರಿ ಸಹಿದತ್ ಎ.ಪಿ ಎಂಬವರು ಯೇನಪೋಯ ಕಾಲೇಜಿನಲ್ಲಿ ಡಾಕ್ಟರ್  ವ್ಯಾಸಂಗ ಮಾಡಿಕೊಂಡಿರುವುದಾಗಿದೆ.  ದಿನಾಂಕ 03-06-2023 ರಂದು ಸಂಜೆ 3-32 ಗಂಟೆಗೆ ಫಿರ್ಯಾದುದಾರರರಿಗೆ ಮೊಬೈಲ್ ನಂಬ್ರ; 7794013522 ನೇದರಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿಯು ಫಿರ್ಯಾದುದಾರರಲ್ಲಿ ತಾವು I PHONE PRO-12 ಗೆದ್ದಿದ್ದೀರಿ ಇದನ್ನು ವಿಳಾಸಕ್ಕೆ ಕಳುಹಿಸಿಲು ಜಿಎಸ್.ಟಿ ಹಣವನ್ನು ಪಾವತ್ತಿಸಬೇಕೆಂದು ಹೇಳಿದಾಗ, ಫಿರ್ಯಾದುದಾರರ ಕರೆ ಮಾಡಿದ ವ್ಯಕ್ತಿ ಮಾತನ್ನು ನಂಬಿ ತಾನು ಬ್ಯಾಂಕ್ ಆಫ್ ಬರೋಡಾ ದೇರಳಕಟ್ಟೆ ಬ್ರಾಂಚ್ ನ ಖಾತೆ ನಂಬ್ರ:  ನೇದರಿಂದ ಗೂಗಲ್ ಪೇ ಮೂಲಕ ಹಂತ ಹಂತವಾಗಿ ರೂಪಾಯಿ, 5000/-14,000/-24,990/-, 10,000/-30982/-  ಹೀಗೆ ಒಟ್ಟು ರೂಪಾಯಿ 98972/-  ನ್ನು ಕಳುಹಿಸಿರುತ್ತಾರೆ. ನಂತರ   ನಂತರ ಆರೋಪಿತರು ಇನ್ನೂ  ಹಣವನ್ನು ಕಳುಹಿಸಿ  ಸ್ಕ್ರೀನ್ ಶಾಟನ್ನು ಕಳುಹಿಸಿ ಎಂದು ಇನ್ನೊಂದು ಮೊಬೈಲ್ ನಂಬ್ರ: 9949457248, 7719182949 ನೇದರಿಂದ ಕರೆ ಮಾಡಿದಾಗಪಿರ್ಯಾದಿದಾರರು ಮೋಸ ಹೋಗಿರುವುದು ತಿಳಿಯಿತು. ಹೀಗೆ ದಿನಾಂಕ 03-06-2023 ರಂದು  ಹಂತ ಹಂತವಾಗಿ ಒಟ್ಟು ರೂಪಾಯಿ 98972/-/- ಹಣವನ್ನು ಆರೋಪಿಗಳು ಫಿರ್ಯಾದುದಾರರಿಂದ ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ

 

CEN Crime PS Mangaluru City

 ಪಿರ್ಯಾದಿ ರವರು ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ,ದಿನಾಂಕ-01-06-2023 ರಂದು ಸಂಜೆ 6:55 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬ್ರ 9047939874 ನಂಬ್ರದಿಂದ  ಪಿರ್ಯಾದಿದಾರರ ಮೊಬೈಲ್ ನಂಬ್ರ- ನೇದ್ದರ ವಾಟ್ಸಪ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬಂದಿದ್ದು.ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಟೆಲಿಗ್ರಾಮ್ ಆಪ್ ನ https://t.me/Receptionistnice ಲಿಂಕ್ ಅನ್ನು ಕಳಿಹಿಸಿರುತ್ತಾರೆ, ನಂತರ ಪಿರ್ಯಾದಿದಾರರಿಗೆ DAILY TASK ಎಂಬುದಾಗಿ ಅದರಲ್ಲಿ  PREPAID TASK  ಕಳುಹಿಸಿ ಆ ವ್ಯಕ್ತಿಯು  ಆತನ ಬ್ಯಾಂಕ್ ವಿವರ ಕಳುಹಿಸಿ ಹಣ ಜಮಾ ಮಾಡುವಂತೆ ತಿಳಿಸಿರುತ್ತಾರೆ , ಅದರಂತೆ ಪಿರ್ಯಾದಿದಾರರು ಮೊದಲು ಮೊಬೈಲ್ ಬ್ಯಾಂಕಿಂಗ್ ಮೂಲಕ 2,000/- ಹಣವನ್ನು ವರ್ಗಾಯಿಸಿರುತ್ತಾರೆ,ನಂತರ ಆರೋಪಿಯು ಪಿರ್ಯಾದಿದಾರರಲ್ಲಿ ಟಾಸ್ಕ್ ಬಗ್ಗೆ ಹಣವನ್ನು ತೊಡಗಿಸಿದ್ದಲ್ಲಿ ದ್ವಿಗುಣ ಮಾಡುವುದಾಗಿ ತಿಳಿಸಿ 12 ಟಾಸ್ಕ್ ಮಾಡಲು ತಿಳಿಸಿದ್ದು ಬಳಿಕ ಪಿರ್ಯಾದಿದಾರರು ಆರೋಪಿಯ ವಿವಿಧ ಬ್ಯಾಂಕ್ ಖಾತೆಗಳಿಗೆ ಪಿರ್ಯಾದಿದಾರರ ಐಸಿಐಸಿಐ ಬ್ಯಾಂಕ್ ಖಾತೆ ನಂಬ್ರ- ನೇದ್ದರಿಂದ ಹಂತ ಹಂತವಾಗಿ  ರೂಪಾಯಿ-6,13,000/- ಹಣವನ್ನು  ವರ್ಗಾಯಿಸಿದ್ದು, ಆರೋಪಿಯು ಪಾರ್ಟ್ ಟೈಂ ಜಾಬ್ ಎಂದು ನಂಬಿಸಿ ಪಿರ್ಯಾದಿದಾರರಿಂದ  ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ

 

 

 

 

Bajpe PS

ದಿನಾಂಕ 03-06-2023ರಂದು 18.30  ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಪೊರ್ಕೋಡಿ ದ್ವಾರದ ಬಳಿ ಆತೀಕ್ ರೆಹಮಾನ್ 24 ವರ್ಷ, ವಾಸ: ಮಸೀದಿ ಬಳಿ ಅಂಬೇಡ್ಕರ್ ನಗರ ಪೊರ್ಕೋಡಿ ಕೆಂಜಾರು  ಗ್ರಾಮ ಮಂಗಳೂರು ತಾಲೂಕು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ

 

Bajpe PS

ದಿನಾಂಕ 03-06-2023ರಂದು 18.40  ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ತಾರಿಕಂಬ್ಲ ನೀರಿನ ಟ್ಯಾಂಕ್  ಬಳಿ ಬಂದಾಗ ಅಲ್ಲಿ ಫಾಜೀಲ್ 25 ವರ್ಷ, ವಾಸ: ಅಂಬೇಡ್ಕರ್ ಭವನದ ಬಳಿ ಅಂಬೇಡ್ಕರ್ ನಗರ ಪೊರ್ಕೋಡಿ ಕೆಂಜಾರು  ಗ್ರಾಮ ಮಂಗಳೂರು ತಾಲೂಕು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ

 

Traffic North Police Station                   

ಪಿರ್ಯಾದಿ Ramaprakash N ದಿನಾಂಕ 03-06-2023 ರಂದು ಸಂಜೆ ಸುಮಾರು 18:00 ಗಂಟೆಗೆ ದಿನಸಿ ತರಲು ಕೊಂಚಾಡಿ ಕಟ್ಟೆಯಂಗಡಿಗೆ ನಡೆದುಕೊಂಡು ಹೋಗುತ್ತಿರುವಾಗ ಅಂದರೆ ಯೆಯ್ಯಾಡಿಯಿಂದ ಬೋಂದೆಲ್ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ರಸ್ತೆಯ ವಿರುದ್ದ ದಿಕ್ಕಿನಲ್ಲಿ KA-19-EK-7032 ನಂಬ್ರದ ಸ್ಕೂಟರನ್ನು  ಅದರ ಸವಾರ  ಲಕ್ಷಣ ಪೂಜಾರಿ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ  ವಾಹನವನ್ನು ಚಲಾಯಿಸಿಕೊಂಡು ಬಂದು ಏಕಾಏಕಿ ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸ್ಕೂಟರ್ ಸವಾರ ಇಬ್ಬರೂ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಸೊಂಟದ ಬೆನ್ನು ಮೂಳೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಸ್ಕೂಟರ್ ಸವಾರನಿಗೂ ಸಹ ಗಾಯವಾಗಿದ್ದು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic South Police Station

 ಪಿರ್ಯಾದಿ ವಾಮನ ಸುವರ್ಣ (56 ವರ್ಷ) ರವರು ದಿನಾಂಕ: 03-06-2023 ರಂದು ಕೆಲಸ ಮುಗಿಸಿ ಬಸ್ಸೊಂದರಲ್ಲಿ ಬಂದು ಕೆತ್ತಿಕಲ್ ಸ್ಟಾಪ್ ಬಳಿ ಇಳಿದು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ 169 ರ ಡಾಮಾರು ರಸ್ತೆಯನ್ನು ಕೆತ್ತಿಕಲ್ ಅಮೃತೇಶ್ವರ ದ್ವಾರದ ಬಳಿ ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 7-20 ಗಂಟೆಗೆ ಮೂಡುಬಿದ್ರೆ ಕಡೆಯಿಂದ ವಾಮಂಜೂರು ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ: KA-19-HG-5588 ನೇದನ್ನು ಅದರ ಸವಾರ ಚೈತನ್ಯ ಎಂಬುವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಎಡಕಾಲು ಕೋಲುಕಾಲಿಗೆ ಮೂಳೆಮುರಿತದ ಗಾಯ, ಎಡಭುಜಕ್ಕೆ ಮತ್ತು ತಲೆಯ ಹಿಂಭಾಗದ ಎಡಬದಿಗೆ ಗುದ್ದಿದ ಗಾಯವಾಗಿರುತ್ತದೆ, ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಪಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ ವೊಂದರಲ್ಲಿ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic South Police Station

ಪಿರ್ಯಾದಿ ಜೀವಂಧರ್ ಜೈನ್ (50 ವರ್ಷ) ರವರು  ದಿನಾಂಕ: 04-06-2023 ರಂದು ಅವರ ಬಾಬ್ತು ಆಟೋರಿಕ್ಷಾ ನಂಬ್ರ: KA-19-AE-1322 ನೇದರಲ್ಲಿ ಅವರು ಚಾಲಕನಾಗಿ ಹಾಗೂ ಅವರ ಮಗ ಪ್ರಜ್ಞೇಶ್ ನನ್ನು ಸಹ ಪ್ರಯಾಣಿಕನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಪಂಪ್ ವೆಲ್ ಮಾರ್ಗವಾಗಿ ಮಂಗಳೂರು ಮಾರ್ಕೆಟ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಗಿನ ಜಾವ 3-30 ಗಂಟೆಗೆ ಪಂಪ್ ವೇಲ್ ಪ್ಲೈ ಓವರ್ ಬಳಿ ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ಹೋಗುವ ಡಾಮಾರು ರಸ್ತೆಗೆ ತಲುಪಿದಾಗ ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದ ಕಾರು ನಂಬ್ರ:KA-05-MM-4465 ನೇದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋರಿಕ್ಷಾದ ಮುಂದಿನ ಎಡಭಾಗಕ್ಕೆ ಕಾರಿನ ಮುಂಭಾಗದ ಬಲಬದಿಯನ್ನು ಡಿಕ್ಕಿ ಪಡಿಸಿ ವಾಹನ ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾರೆ ಈ ಅಪಘಾತದ ಪರಿಣಾಮ ಆಟೋರಿಕ್ಷಾ ರಸ್ತೆಗೆ ಮಗುಚಿ ಬಿದ್ದು ಆಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರ ಮಗ ಪ್ರಜ್ಞೇಶ್ ಮತ್ತು ಪಿರ್ಯಾದಿದಾರರು ರಸ್ತೆಗೆ ಬಿದ್ದು ಪ್ರಜ್ಞೇಶ್ ರವರ ಎಡಕೈ ಮತ್ತು ಎಡಕಾಲಿಗೆ ತರಚಿದ ಗಾಯವಾಗಿದ್ದು ಪಿರ್ಯಾದಿದಾರರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು  ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳನ್ನು  ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಪ್ರಜ್ಞೇಶ್ ರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಪಿರ್ಯಾದಿದಾರರು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ ಎಂಬಿತ್ಯಾದಿ.

 

    

Traffic South Police Station

ಪಿರ್ಯಾದಿ ಪ್ರಕಾಶ್ ಗಟ್ಟಿ (46 ವರ್ಷ)ರವರು ಅವರ ಬಾಬ್ತು ಬೈಕ್ ನಂಬ್ರ KA-05-JL-4260 ನೇದರಲ್ಲಿ ಸವಾರರಾಗಿ ಹಾಗೂ ಅವರ ಹೆಂಡತಿ ಆಶಾಳನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಪಿರ್ಯಾದಿದಾರರ ಮಗಳು ಅಹನಾಳನ್ನು ಜೊತೆಯಲ್ಲಿ ಕರೆದುಕೊಂಡು ಮನೆಯಿಂದ ಹೊರಟು ಮಾಣಿಲ ಮಾರ್ಗವಾಗಿ ಗ್ರಾಮ ಚಾವಡಿ ಕಡೆಗೆ ಬೈಕ್ ಸವಾರಿಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಕಲ್ಪಾಡಿ (ಪಡೀಲ್) ಎಂಬಲ್ಲಿ ತಿರುವು ರಸ್ತೆ ಬಳಿ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಗ್ರಾಮ ಚಾವಡಿ ಕಡೆಯಿಂದ ಮಾಣಿಲ ಕಡೆಗೆ ಕಾರು ನಂಬ್ರ KA-41-B-6806 ನೇದನ್ನು ಅದರ ಚಾಲಕ ಮೊಹಮ್ಮದ್ ಸಿನಾನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಆಶಾ ಹಾಗೂ ಮಗಳು ಅಹನಾ ಬೈಕ್ ಸಮೇತಾ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಗಾಲಿಗೆ ಮೂಳೆ ಮುರಿತದ ಗಂಭೀರಗಾಯ ಹಾಗೂ  ಆಶಾರವರಿಗೆ ಬಲಗಾಲಿಗೆ ತರಚಿದ ಗಾಯ ಮತ್ತು ಅಹನಾಳ ಬಲಗಾಲಿಗೆ ತೀವ್ರ ಸ್ವರೂಪದ ರಕ್ತಗಾಯ ಹಾಗೂ ಮುಖಕ್ಕೆ ತರಚಿದ ಗಾಯವಾಗಿದ್ದು ನಂತರ ಅಲ್ಲಿ ಸೇರಿದ ಜನರು ಹಾಗೂ ಅಪಘಾತ ಪಡಿಸಿದ ಕಾರಿನ ಚಾಲಕ ಗಾಯಗೊಂಡವರನ್ನು ಉಪಚರಿಸಿ ಬೇರೆ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ.ಎಂಬಿತ್ಯಾದಿ

 

Kavoor PS

ದಿನಾಂಕ 03-06-2023 ರಂದು ಎಂದಿನಂತೆ ಪಿರ್ಯಾದಿ BIPAD TARAN BHUYA  ಮತ್ತು ಅವರ ಚಿಕ್ಕಪ್ಪ ಬಿಕಾಸ್ ಭುಯ್ಯ ರವರೊಂದಿಗೆ ಮಂಗಳೂರಿನ ಎಮ್ ಸಿ ಎಫ್ ನಲ್ಲಿ ಬೆಳಿಗ್ಗೆ 9 ಗಂಟೆಗೆ ಹೆಲ್ಪರ್ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ ಸುಮಾರು 5.30 ಗಂಟೆಗೆ ವಾಪಾಸು ಮನೆಗೆ ಬಂದಿರುತ್ತೇವೆ. ರಾತ್ರಿ ಸುಮಾರು 9.30  ಗಂಟೆಗೆ ಊಟ ಮುಗಿಸಿ, 10.00 ಗಂಟೆ ಸುಮಾರಿಗೆ ಮಲಗಿದ್ದವರು. ದಿನಾಂಕ 04.06-2023 ರಂದು ಬೆಳಿಗ್ಗೆ ಸುಮಾರು 06.30 ಗಂಟೆಗೆ ಪಿರ್ಯಾದಿದಾರರ ಎಡ ಬಾಗದಲ್ಲಿ ಮಲಗಿದ್ದ ಚಿಕ್ಕಪ್ಪ ನಾದ ಬಿಕಾಸ್ ರವರು ಜೋರಾಗಿ ಆ,… ಎಂದು ನೋವಿನಿಂದ ಕಿರುಚಿದ್ದು ಪಿರ್ಯಾದಿದಾರು ಕೂಡಲೇ ಚಿಕ್ಕಪ್ಪನ ಕಡೆ ತಿರುಗಿ ನೋಡಿದಾಗ ಮಲಗಿದ್ದ ಚಿಕ್ಕಪ್ಪನ ಎದೆಗೆ, ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಸುದೇಬ ಭುಯ್ಯ ಎಂಬಾತನು ಕಬ್ಬಿಣದ ಎಲ್ ಆಕಾರದ ರಾಡ್ ನ ಕೊಕ್ಕೆಯಿಂದ ಬಲವಾಗಿ ಹೊಡೆದು ಹೋರಗೆ ಎಳೆಯುತ್ತಿದ್ದನು, ಕೂಡಲೇ ಪಿರ್ಯಾದಿದಾರರು ಮತ್ತು ಅಕ್ಕಪಕ್ಕದಲ್ಲಿ ಮಲಗಿದ್ದ ಕರುಣ್, ಬಾಪಿ, ಜಯಂತ್ ಮತ್ತು ಕಾರ್ತಿ ಕ್ ಭುಯ್ಯ ಸೇರಿ ಪುನ: ರಾಡ್ ನಿಂದ ಹಲ್ಲೆ ಮಾಡಲು ಪ್ರಯತ್ನಿಸುತ್ತಿದ್ದ ಬಾಸುದೇಬ ಭುಯ್ಯ ನನ್ನು ನಾವೆಲ್ಲರೂ ಹಲ್ಲೆಮಾಡದಂತೆ ತಡೆದು ಹಿಡಿದಾಗ ಸದ್ರಿಯವರಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ನಂತರ ನೆಲಕ್ಕೆ ಬಿದ್ದು ನೋವಿನಿಂದ ನರಳುತ್ತಿದ್ದ ಪಿರ್ಯಾದಿದಾರರ ಚಿಕ್ಕಪ್ಪನನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಯ ಬಗ್ಗೆ ದಾಖಲು ಮಾಡಿದ್ದು, I C U  ನಲ್ಲಿ ಚಿಕಿತ್ಸೆಯಲ್ಲಿದ್ದ ಪಿರ್ಯಾದಿದಾರರ ಚಿಕ್ಕಪ್ಪ ಬಿಕಾಸ್ ಭುಯ್ಯ ಮಧ್ಯಾಹ್ನ 12.15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿರುತ್ತಾರೆ.

 

Traffic South Police Station

 ದಿನಾಂಕ  04-06-2023 ರಂದು  ಪಿರ್ಯಾದಿ SUJATHA NAGESH  ತಮ್ಮನಾದ ಸುಧೀರ್ ಸಾಲ್ಯಾನ್ ಎಂಬುವರು ಸ್ಕೂಟರ್ ನಂಬರ್ . KA-19-HJ-5376 ನೇದನ್ನು   ಪಂಪ್ ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ರಾ.ಹೆ. 66ರ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ  ಸುಮಾರು ರಾತ್ರಿ 7-40 ಗಂಟೆಗೆ ಎಕ್ಕೂರು ಬಳಿ ತಲುಪುತ್ತಿದ್ದಂತೆ ಅವರು ಸವಾರಿ ಮಾಡುತ್ತಿದ್ದ ಸ್ಕೂಟರ್ನ ನಿಯಂತ್ರಣ ತಪ್ಪಿ ಸ್ಕೂಟರ್ ಸ್ಕಿಡ್ ಆಗಿ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ  ತಲೆಗೆ ಗುದ್ದಿದ ಗಂಭೀರ ಸ್ವರೂಪದ ಗಾಯ,ಕಿವಿಯಲ್ಲಿ ರಕ್ತ ಸೋರುತ್ತಿರುವ ಗಾಯ ಮತ್ತು  ಎಡಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಅವರನ್ನು  ಚಿಕಿತ್ಸೆ  ಬಗ್ಗೆ ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ವಾಹನವೊಂದರಲ್ಲಿ ಕರೆದುಕೊಂಡು  ಹೋಗಿ  ಮಂಗಳೂರಿನ ಯನಿಟಿ  ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-08-2023 01:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080