ಅಭಿಪ್ರಾಯ / ಸಲಹೆಗಳು

Crime report in Mangalore Rural PS

ಪಿರ್ಯಾದಿ ಗಾಯಾಳು ಕೃಷ್ಣಪ್ಪ ಎಂಬವರು ದಿನಾಂಕ: 04-07-2023 ರಂದು ಬೆಳಿಗ್ಗೆ ಎಂದಿನಂತೆ 6.30 ಗಂಟೆಗೆ ಪಿರ್ಯಾದಿದಾರರ ಮನೆಯಾದ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಅಂಗಡಿ ಪಡ್ಪು ಮನೆಯ  ಅಂಗಳದಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿರುವ ಸಮಯ ಆರೋಪಿ ಲೋಕೇಶ್ ಎಂಬವನು ಪಿರ್ಯಾದಿದಾರರ ಬಳಿಗೆ ಬಂದಾಗ ಪಿರ್ಯಾದಿದಾರರು ತುಳು ಭಾಷೆಯಲ್ಲಿ “ ಚಾ ಕುಡಿದು ಆಯ್ತಾ” ಎಂಬುದಾಗಿ ಕೇಳಿದಾಗ ಆರೋಪಿಯು “ನನ್ನಲ್ಲಿ ಚಾ ಕುಡಿದಾಯ್ತಾ ಎಂದು ಕೇಳುವರೇ ನೀನು ಯಾರು ಬೇವರ್ಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಬೈದು ಏಕಾಏಕಿಯಾಗಿ ಯಾವುದೋ ದುರುದ್ದೇಶದಿಂದ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರ ತಲೆಯ ಹಿಂಬದಿಗೆ 2 ಸಲ ಹೊಡೆದು ಗಾಯಗೊಳಿಸಿದನು. ಜೋರಾಗಿ ಬೊಬ್ಬೆ ಹಾಕಿದಾಗ ಅಲ್ಲಿಗೆ ಪಿರ್ಯಾದಿದಾರರ ಬಾವ ಮತ್ತು ಹೆಂಡತಿ ಓಡಿ ಬರುವುದನ್ನು ನೋಡಿದ ಆರೋಪಿಯು ಅಲ್ಲಿಂದ ಪರಾರಿಯಾಗಿರುತ್ತಾನೆ. ಗಾಯಾಳು ಚಿಕಿತ್ಸೆ ಬಗ್ಗೆ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Mulki PS

ಪಿರ್ಯಾದಿ Smt Vishala S Poojary ಕಳೆದ ಸುಮಾರು 1 ವರ್ಷದಿಂದ ಕಿಲ್ಪಾಡಿ ಗ್ರಾಮದಲ್ಲಿ ಮನೆ ಸಹಿತ ಇರುವ  6 ಸೆಂಟ್ಸ್ ಜಾಗವನ್ನು ವಿಶ್ವನಾಥ ಗುಜರನ್ ಎಂಬವರಿಂದ ಖರೀದಿಸಿ ತನ್ನ ಚಿಕ್ಕಪ್ಪ ಮಗ ದನಂಜಯ ಅಮೀನ್ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಸದ್ರಿ ಮನೆಗೆ ಬರುವ ರಸ್ತೆ ಮತ್ತು ಬಾವಿ ವಿಚಾರದಲ್ಲಿ ವಿಶ್ವನಾಥ ಗುಜರನ್ ರವರ ಅಣ್ಣ ದಯಾನಂದ ಗುಜರನ್ ರವರು ತೊಂದರೆ ನೀಡುತ್ತಿದ್ದು, ದಿನಾಂಕ: 03-07-2023 ರಂದು ದನಂಜಯ ಅಮೀನ್ ರವರು ಮುಲ್ಕಿಯಿಂದ ಹರೀಶ್ ಕೋಟ್ಯಾನ್ ಎಂಬವರ ಆಟೋರಿಕ್ಷಾದಲ್ಲಿ ಮನೆಯ ಬಳಿ ಬಂದು ಆಟೋರಿಕ್ಷಾದಿಂದ ಇಳಿದು ಬಳಿಕ ಹರೀಶ್ ಕೋಟ್ಯಾನ್ ರವರು ಆಟೋರಿಕ್ಷಾವನ್ನು ವಾಪಾಸ್ಸು ಕೊಂಡ್ಹೋಗುವ ವೇಳೆ ಆರೋಪಿ ದಯಾನಂದ ಗುಜರನ್ ಎಂಬಾತನು ಆಟೋರಿಕ್ಷಾವನ್ನು ಬರಬಾರದೆಂದು ತಿಳಿಸಿದ್ದು, ಈ ಬಗ್ಗೆ ಪಿರ್ಯಾದಿದಾರರು ಕೇಳಿದಾಗ ಮದ್ಯಾಹ್ನ ಸುಮಾರು 2-30 ಗಂಟೆಗೆ ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ “ ಬೇವರ್ಸಿ, ಈ ಬ್ಯಾರ ಮಲ್ಪುಂಡು, ಮಿಂಡನಕ್ಲೆನ್ ಲೆತೊಂದು ಬರ್ಪ” ( ಬೆವರ್ಸಿ, ನೀನು ವ್ಯಾಪಾರ ಮಾಡುತ್ತೀ, ನಿನ್ನ ಮಿಂಡರನ್ನು ಕರೆದುಕೊಂಡು ಬರುತ್ತಿ) ಎಂದು ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅವಮಾನಪಡಿಸಿ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಎರಡೂ ಕೈಗಳಿಗೆ ಮತ್ತು ಎರಡೂ ಕಾಲುಗಳಿಗೆ ಹಲ್ಲೆ ನಡೆಸಿ ಮಹಿಳೆಯಾದ ಪಿರ್ಯಾದಿದಾರರ ಮಾನಭಂಗವುಂಟುಮಾಡಿದ್ದು, ಅಲ್ಲದೇ ಕೈಯಿಂದ ದೂಡಿದಾಗ ಪಿರ್ಯಾದಿದಾರರ ಕಿವಿಯ ರಿಂಗ್ ಮಣ್ಣಿನಲ್ಲಿ ಬಿದ್ದು ಹೋಗಿದ್ದು,  ಅಲ್ಲದೇ ಈದಿನ ಬೆಳಿಗ್ಗೆ ಕೂಡಾ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವಾಗಿ ಜೀವಬೆದರಿಕೆ ಒಡ್ಡಿರುತ್ತಾನೆ ಎಂಬಿತ್ಯಾದಿ.

Panambur PS

ದಿನಾಂಕ 05.07.2023 ರಂದು ಸೃಜನ್ ಎ ಕೋಟ್ಯಾನ್ (20) ವಾಸ:   ಸೃಜನ್ ನಿವಾಸ, ಸ್ಯಾಂಡ್ ಪಿಟ್ ಬೆಂಗ್ರೆ, ಮಂಗಳೂರು ತಾಲೂಕು ಎಂಬಾತನು   09:45 ಗಂಟೆಗೆ ಮಂಗಳೂರು ತಾಲೂಕು ಬೇಂಗ್ರೆ ಗ್ರಾಮದ ತೋಟ ಬೇಂಗ್ರೆ ನದಿ ತೀರದ ಬಳಿ, ಯಾವುದೋ ಮಾದಕ ವಸ್ತು ಸೇವಿಸಿ, ಅಮಲಿನಲ್ಲಿದ್ದವನನ್ನು ವಿಚಾರಿಸಿ, ವಶಕ್ಕೆ ಪಡೆದುಕೊಂಡು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವೈದ್ಯಾಧಿಕಾರಿಗಳು ಪರೀಕ್ಷಿಸಿ “The Urine Sample Tested For The Presence of  Marijuana is Positive” ಎಂದು ವರದಿ ನೀಡಿರುತ್ತಾರೆ. ಸೃಜನ್ ಕೋಟ್ಯಾನ್ ಗಾಂಜಾ ಎಂಬ ಮಾದಕ ದ್ರವ್ಯ ಸೇವನೆ ಮಾಡಿರುವುದು ಧೃಡ ಪಟ್ಟಿರುವುದರಿಂದ ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

 

 

                 

 

ಇತ್ತೀಚಿನ ನವೀಕರಣ​ : 21-08-2023 02:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080