ಅಭಿಪ್ರಾಯ / ಸಲಹೆಗಳು

Crime Reported in : Panambur PS

ಪಿರ್ಯಾಧಿ KUMARESHAN ರವರು ಠಾಣಾ ಸಿಬ್ಬಂದಿಯವರೊಂದಿಗೆ  ಠಾಣಾ ವ್ಯಾಪ್ತಿಯಲ್ಲಿ  ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದು, ದಿನಾಂಕ:05-08-2022 ರಂದು ಮುಂಜಾನೆ ಸುಮಾರು  00-15 ಗಂಟೆಗೆ  ಕುದುರೆಮುಖ ಜಂಕ್ಷನ್ ಬಳಿ ಕೂಳೂರು ಪಲ್ಗುಣಿ ನದಿಯಲ್ಲಿ  ಯಾರೋ ಮರಳು ಕಳ್ಳತನ ಮಾಡುತ್ತಿರುವ  ಬಗ್ಗೆ  ಬಂದ ಮಾಹಿತಿಯಂತೆ  ಕುದುರೆಮುಖ ಜಂಕ್ಷನ್ ಬಳಿ ಕೂಳೂರು ಪಲ್ಗುಣಿ ನದಿಯ ಉತ್ತರ ಬದಿ ನದಿ ದಡದಲ್ಲಿ  ತೆರಳಿ ನೋಡಿದಾಗ ಅಲ್ಲಿ ಜೆ.ಸಿ.ಬಿ ಯಂತ್ರ ಮತ್ತು 02 ಡ್ರೇಜಿಂಗ್ ಯಂತ್ರದ  ಮೂಲಕ ನದಿಯಿಂದ ಮರಳನ್ನು ತೆಗೆದು  01 ಟಿಪ್ಪರ್ ಲಾರಿಗೆ ತುಂಬುತ್ತಿರುವುದು ಮತ್ತು ಅಲ್ಲೆ ಸಮೀಪದಲ್ಲಿ  ಇನ್ನೊಂದು ಟಿಪ್ಪರ್ ನಿಲ್ಲಿಸಿರುವುದು ಕಂಡು ಸಿಬ್ಬಂದಿಗಳೊಂದಿಗೆ ಸಮೀಪ ಹೋಗಿ ಪರಿಶೀಲನೆ ಮಾಡಿದಾಗ  ಅಲ್ಲಿದವರು ಪರಾರಿಯಾಗಿರುತ್ತಾರೆ. ಅಲ್ಲೇ ಪಕ್ಕದಲ್ಲಿ  ಕುದುರೆಮುಖ ಜಂಕ್ಷನ್ ನಿಂದ  SEZ  ಕಡೆಗೆ ಹಾದುಹೋಗುವ ಮುಖ್ಯ ರಸ್ತೆಯಲ್ಲಿ  ನಿಲ್ಲಿಸಿದ ಸ್ಕೂಟರ್ ನೊಂದಾಣಿ ನಂ KA-19-EA-2760 , ಪಲ್ಸರ್ ಮೋಟಾರ್ ಬೈಕ್ ನೊಂದಾಣಿ ನಂ: KA-19-EJ-1126, ಮತ್ತು ಬಿಳಿ ಬಣ್ಣದ ಸ್ವಿಪ್ಟ್ ಕಾರು ನೊಂದಾಣಿ ನಂ: KA-19-AD-1406, ನಲ್ಲಿ ಬಂದ ಯಾರೋ ಕಳ್ಳರು 02 ಡ್ರೇಜಿಂಗ್ ಯಂತ್ರ ಮತ್ತು ಒಂದು ಜೆ.ಸಿ.ಬಿ ಯಂತ್ರ ಬಳಸಿ ಟಿಪ್ಪರ್ ನೊಂದಾಣಿ ನಂ: KA-19-B-4287, ಟಿಪ್ಪರ್ ನೊಂದಾಣಿ ನಂ:  KL-27-B-3015,ನೇದರಲ್ಲಿ ಮರಳು ಕಳ್ಳತನ ಮಾಡುತ್ತಿರುವುದು ಕಂಡು ಬಂದಿರುತ್ತದೆ.  ಕುದುರೆಮುಖ ಜಂಕ್ಷನ್ ಬಳಿ ಕೂಳೂರು ಪಲ್ಗುಣಿ ನದಿಯ ಉತ್ತರ ಬದಿ ನದಿ ದಡದಲ್ಲಿ ಯಾರೋ ಕಳ್ಳರು ಅಕ್ರಮವಾಗಿ ಮರಳು ಕಳ್ಳತನ  ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ  ಎಂಬಿತ್ಯಾದಿಯಾಗಿರುತ್ತದೆ.

Crime Reported in : Kavoor PS

ಪಿರ್ಯಾದಿದಾರರಾದ ಮಧ್ವರಾಯ್ ಭಟ್ ಎಂಬುವರು ನೀಡಿದ ದೂರಿನ ಆರೋಪಿಗಳಾದ 1) ಶ್ರೀಮತಿ ರಕ್ಷಾ ಬಾಳಿಗ 2) ಶ್ರೀ ನಿಧಿ ವಾಸುದೇವ ಕಾಮತ್ 3) ಶ್ರೀ ವಾಸದೇವ ಕಾಮತ್ ಎಂಬುವರು ಮಹಾರಾಷ್ಟ್ರದಲ್ಲಿ ಡೈರಿ ಫಾರಂ ಹುಟ್ಟು ಹಾಕುವ ಉದ್ದೇಶ ಹೊಂದಿ ಇದರ ಹಣ ಕಾಸಿನ ವ್ಯವಸ್ಥೆಯನ್ನು ಭಾರತ್ ಕೋ. ಅಪಾರೇಟಿವ್ ಬ್ಯಾಂಕ್ ಮಂಗಳೂರು ಶಾಖೆಯಿಂದ ಸುಮಾರು 1 ಕೋಟಿ 75 ಲಕ್ಷ ಸಾಲ ಪಡೆದಿರುತ್ತಾರೆ. 3ನೇ ಆರೋಪಿಯಾದ ಶ್ರೀ ವಾಸುದೇವ ಕಾಮತ್ ಎಂಬುವರು ನಿವೃತ್ತ ಬ್ಯಾಂಕ್ ಪ್ರಬಂಧಕನಾಗಿದ್ದು, ತನ್ನ ಬ್ಯಾಂಕ್ ಸೇವೆಯ ಅವಧಿಯಲ್ಲಿ ಗಳಿಸಿದ ಪ್ರಭಾವ ಬಳಸಿ ಶಾಖೆಯಿಂದ ಸಾಲ ಪಡೆಯಲು ಯಶಸ್ವಿಯಾಗಿರುತ್ತಾನೆ. 3ನೇ ಆರೋಪಿಯು ಪಿರ್ಯಾದಿದಾರರಿಗೆ ಪರಿಚಯಸ್ಥರಾಗಿದ್ದು 1ನೇ ಆರೋಪಿಯ ಸಾಲಕ್ಕೆ ಪಿರ್ಯಾದಿದಾರರನ್ನು ಜಾಮೀನುದಾರನಾಗಿ ನಿಲ್ಲುವಂತೆ 3 ನೇ ಆರೋಪಿಯು ಕೇಳಿಕೊಂಡಿದ್ದು,  ಕೆಲವು ಷರತ್ತುಗಳನ್ನು ತಿಳಿಸಿ ದೂರುದಾರರು ಜಾಮೀನುದಾರನಾಗಿ ಸಹಿ ಹಾಕಲು ಒಪ್ಪಿಕೊಂಡಿರುತ್ತಾರೆ.ಈ ಸಾಲಕ್ಕಾಗಿ ಪಿರ್ಯಾದಿದಾರರು 2.50 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿಯನ್ನು ಅಡಮಾನ ಇಟ್ಟಿದಾಗಿದೆ. ಈ ಸಂಧರ್ಭದಲ್ಲಿ 1ನೇ ಮತ್ತು 3ನೇ ಆರೋಪಿಗಳು ಮುಂದಿನ 6 ತಿಂಗಳಿನ ಒಳಗಾಗಿ ಬದಲಿ ವ್ಯವಸ್ಥೆ ಮಾಡಿ ಬೇರೆ ಸ್ಥಿರಾಸ್ತಿಯನ್ನು ಅಡಮಾನ ಇಟ್ಟು, ಪಿರ್ಯಾದಿದಾರರ ಸ್ಥಿರಾಸ್ತಿಯನ್ನು ಬಿಟ್ಟು ಕೊಡುವುದಾಗಿ ತಿಳಿಸಿರುತ್ತಾರೆ. ಆದರೆ ಸದ್ರಿ ಆರೋಪಿಗಳು ಭಾರತ್ ಕೋ. ಅಪಾರೇಟಿವ್ ಬ್ಯಾಂಕ್ ಮಂಗಳೂರು ಶಾಖೆಯಿಂದ ಪಡೆದುಕೊಂಡ ಸಾಲವನ್ನು ಮರುಪಾವತಿಸದೇ ಇರುವುದರಿಂದ ಆರೋಪಿತರಿಗೆ ಹಣವನ್ನು ಮರುಪಾವತಿ ಮಾಡುವಂತೆ ತಿಳಿಸಿದಾಗ ಆರೋಪಿತರು ಜೀವ ಬೆದರಿಕೆ ಹಾಕಿ ತಪ್ಪಿಸಿಕೊಂಡಿರುತ್ತಾರೆ. ಆದುದರಿಂದ ಪಿರ್ಯಾದಿದಾರಿಗೆ ಬ್ಯಾಂಕ್ ನವರು ಸಾಲ ಪಾವತಿ ಮಾಡುವಂತೆಯೂ ಹಾಗೂ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕುವುದಾಗಿ ನೋಟಿಸು ನೀಡಿರುತ್ತಾರೆ. ಈ ಆರೋಪಿತರು ಸಮಾನ ಉದ್ದೇಶದಿಂದ ಬ್ಯಾಂಕ್ ಗೆ ಮತ್ತು ಪಿರ್ಯಾದಿದಾರಿಗೆ ಪೂರ್ವ ಯೋಜಿತವಾಗಿ ನಂಬಿಸಿ ಸಾಲವನ್ನು ಪಡೆದು ಮರುಪಾವತಿ ಮಾಡದೇ ಬ್ಯಾಂಕ್ ಗೆ ಮತ್ತು ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Crime Reported in : Mangaluru Traffic North PS

ದಿನಾಂಕ: 04-08-2022 ರಂದು ಪಿರ್ಯಾದಿದಾರ PRAVEEN K ತಂದೆ ಕೇಶವ ಶೆಟ್ಟಿ (75) ರವರು ತನಗೆ ಬೇಕಾದ ಔಷಧಿ ಖರೀದಿಯ ಬಗ್ಗೆ ಸುರತ್ಕಲಿಗೆ ಬಂದು ವಾಪಾಸು ಮನೆ ಕಡೆಗೆ ಹೋಗಲು ಸುರತ್ಕಲಿನಿಂದ ಗಣೇಶ್ ಎಂಬ ಹೆಸರಿನ KA-19-C-6876 ನಂಬ್ರದ ರೂಟ್ ನಂ 45 C ಬಸ್ಸಿನಲ್ಲಿ ಚೊಕ್ಕಬೆಟ್ಟು ಕಡೆಗೆ ಬರುತ್ತಾ ಬಸ್ಸು ಚೊಕ್ಕಬೆಟ್ಟು ಜಂಕ್ಷನ್ ಸಮೀಪಿಸುತ್ತಿದ್ದಂತೆ ಬಸ್ಸಿನಿಂದ ಇಳಿಯುವ ಸಲುವಾಗಿ ಕೇಶವ ಶೆಟ್ಟಿಯವರು ಕೂತಲ್ಲಿಂದ ಮೇಲಕ್ಕೆ ಎದ್ದು ನಿಂತಾಗ ಮಧ್ಯಾಹ್ನ ಸಮಯ ಸುಮಾರು 12.10 ಗಂಟೆಗೆ ಬಸ್ ಚಾಲಕನಾದ ಹನೀಫ್ ಎಂಬಾತನು ಬಸ್ಸಿಗೆ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಕೇಶವ ಶೆಟ್ಟಿಯವರು ಬಸ್ಸಿನ ಒಳಭಾಗದಲ್ಲಿ ಇಂಜಿನ್ ಮೇಲ್ಭಾಗಕ್ಕೆ ಬಿದ್ದು ಕೇಶವ ಶೆಟ್ಟಿಯವರ ಎಡಕೈಯ ಮಣಿಗಂಟಿನ ಬಳಿ ಮೂಳೆ ಮುರಿತವಾಗಿದ್ದು ಚಿಕಿತ್ಸೆಗೆ ಸುರತ್ಕಲಿನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in : Mangaluru Traffic South PS

ದಿನಾಂಕ:04-08-2022 ರಂದು ಪಿರ್ಯಾದಿದಾರ MANJUNATHA B G ಪುತ್ತೂರು ವಿಭಾಗದ ಪುತ್ತೂರು ಘಟಕದ ಕೆ.ಎಸ್.ಆರ್.ಟಿ.ಸಿ ಬಸ್ಸು ನಂಬ್ರ KA-21-F-0072 ನೇದರಲ್ಲಿ ಚಾಲಕರಾಗಿಯೂ ವಾಮನ.ಕೆ ಎಂಬವರು ನಿರ್ವಾಹಕರಾಗಿ ಕರ್ತವ್ಯದಲ್ಲಿದ್ದು ಪುತ್ತೂರಿನಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಾ ಸಂಜೆ ಸಮಯ ಸುಮಾರು 07:00 ಗಂಟೆಗೆ ಪಡೀಲು ಅಳಪೆಯ ತಿರುವು ರಸ್ತೆಯಲ್ಲಿ ತಲುಪುತ್ತಿದ್ದಂತೆ ಪಂಪ್ ವೆಲ್ ಕಡೆಯಿಂದ ಪಡೀಲ್ ಕಡೆಗೆ ಬರುತ್ತಿದ್ದ KA-19-AD-0677 ನೇ ನಂಬ್ರದ ಸೆಲೀನಾ ಮೆಟ್ರೊ ಎಂಬ ಹೆಸರಿನ ಬಸ್ಸನ್ನು ಅದರ ಚಾಲಕ ಭರತ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಆತನ ತೀರಾ ಬಲ ಬದಿಗೆ ಬಂದು ಪಿರ್ಯಾದಿದಾರರ ಬಸ್ಸಿನ ಮುಂಭಾಗದ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಸ್ಸಿನ ಮತ್ತು ಡಿಕ್ಕಿ ಹೊಡೆದ ಬಸ್ಸಿನ ಪ್ರಯಾಣಿಕರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ್ದ ಸಾರ್ವಜನಿಕರು ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ, ಹಾಗೂ ಈ ಅಪಘಾತದಿಂದ ಎರಡು ಬಸ್ಸುಗಳು ಜಖಂಗೊಂಡಿರುತ್ತದೆ, ಎಂಬಿತ್ಯಾದಿ.

Crime Reported in : Ullal PS

ಮಾನ್ಯ ಪೊಲೀಸ್ ಆಯುಕ್ತರು, ಮಂಗಳೂರು ನಗರ ರವರು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಕಲಂ 144 ಸಿಆರ್.ಪಿ.ಸಿ ಯನ್ವಯ ನಿಷೇದಾಜ್ಞೆ ಹೊರಡಿಸಿದ್ದು ಮತ್ತು ಮಾನ್ಯ ಜಿಲ್ಲಾಧಿಕಾರಿ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲೆ ರವರು ದಿನಾಂಕ. 3-8-2022 ರಿಂದ 5-8-2022 ರ ವರೆಗೆ ಸಂಜೆ 6-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯ ತನಕ ಆಸ್ಪತ್ರೆ, ಔಷಧಿ ಅಂಗಡಿ ಹಾಗೂ ಇತರ ತುರ್ತು ಸೇವೆಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಅಂಗಡಿ ಮುಂಗಟ್ಟುಗಳು ಹಾಗೂ ಯಾವುದೇ ವ್ಯಾಪಾರ ವಹಿವಾಟುಗಳ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದು, ಅದರಂತೆ ಫಿರ್ಯಾದಿದಾರರಾದ ಉಳ್ಳಾಲ ಠಾಣಾ ಪಿಎಸ್ಐ ರೇವಣಸಿದ್ಧಪ್ಪ ರವರು ಸಿಬ್ಬಂದಿಯವರ ಜೊತೆಯಲ್ಲಿ ಸಮವಸ್ತ್ರದಲ್ಲಿ ದಿನಾಂಕ. 4-8-2022 ರಂದು ಸಂಜೆ ವಾಹನದಲ್ಲಿ ರೌಂಡ್ಸ್ ಕರ್ತವ್ಯವನ್ನು ನಿರ್ವಹಿಸುತ್ತಾ ಮೇಲಾಧಿಕಾರಿಗಳ ಆದೇಶವನ್ನು ತಿಳಿಯಪಡಿಸುತ್ತಾ ಸಂಜೆ 6-15 ಗಂಟೆಯ ಸಮಯಕ್ಕೆ ಉಳ್ಳಾಲ ಗ್ರಾಮದ ಮಾಸ್ತಿಕಟ್ಟೆ ಯ ಬಳಿಗೆ ತಲುಪಿದಾಗ ಅಲ್ಲಿನ ಪರಿಸರದಲ್ಲಿರುವ  EYE TO EYE OPTICALS ಎಂಬ ಕನ್ನಡಕ ಮಾರಾಟದ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸಮಯದಲ್ಲಿ ಫಿರ್ಯಾದಿದಾರರು ಸಿಬ್ಬಂದಿಯವರ ಜೊತೆಯಲ್ಲಿ ಅಂಗಡಿಯಲ್ಲಿದ್ದ ಯುವಕನಲ್ಲಿ ಅಂಗಡಿ ಮುಚ್ಚುವಂತೆ ಹಾಗೂ ಮೇಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡುವಂತೆ ತಿಳಿಸಿದರೂ ಆತನು ಕೇಳದೇ ಉಡಾಪೆ ಮಾತನಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ,  ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಅಂಗಡಿ ಮಾಲಕ  ಶಬೀಲ್ ಅಹಮ್ಮದ್ ಎಂಬಾತನು ಫಿರ್ಯಾದಿ ಹಾಗೂ ಸಿಬ್ಬಂದಿಯವರನ್ನು ಅವಾಚ್ಯಶಬ್ದಗಳಿಂದ ಬೈದಿರುತ್ತಾನೆ. ಆತನಲ್ಲಿ ನಿಷೇದಾಜ್ಞೆ ಜ್ಯಾರಿಯಲ್ಲಿರುವುದರಿಂದ ಅಂಗಡಿ ಬಂದ್ ಮಾಡಿ ನಿಷೇದಾಜ್ಞೆಯನ್ನು ಪಾಲನೆ ಮಾಡಬೇಕು ಮತ್ತು ಪರಿಸರದಲ್ಲಿ ಗೊಂದಲ ಉಂಟು ಮಾಡಬೇಡಿ ಎಂದು ತಿಳಿ ಹೇಳಿದರೂ ಶಬೀಲ್ ಅಹಮ್ಮದ್ ಮತ್ತು ಆತನ ಮಗನು ಅಂಗಡಿ ಬಂದ್ ಮಾಡುವುದಿಲ್ಲ ಎಂದು ಬೊಬ್ಬೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂಬಿತ್ಯಾದಿ.

2) ಪಿರ್ಯಾದಿದಾರ Ahammad Kunhi Kayar ಮಗ ಇಬ್ರಾಹಿಂ ಖಲೀಲ್ ಆರ್ ಸಿ ಮಾಲಕತ್ವದ KA-19-HF-5868 ನೇ ಸುಜುಕಿ ಆಕ್ಸೆಸ್ ಕಂಪನಿಯ ಸ್ಕೂಟರ್ ನ್ನು ದಿನಾಂಕ: 07.07.2022 ರಂದು ಪಿರ್ಯಾದಿದಾರರ ಪರಿಚಯದ ಆರೀಫ್ ಎಂಬಾತನು ಕೇಳಿ ಪಡೆದುಕೊಂಡು ಹೋಗಿದ್ದು, ಅದೇ ದಿನ ರಾತ್ರಿ 9-30 ಗಂಟೆಗೆ ಸದ್ರಿ ಸ್ಕೂಟರ್ ನ್ನು ತಂದು ಮನೆಯ ಎದುರು ನಿಲ್ಲಿಸಿ ಲಾಕ್ ಮಾಡಿ ಅದರ ಕೀ ಯನ್ನು ಪಿರ್ಯಾದಿದಾರರಿಗೆ ನೀಡಿ ಹೋಗಿದ್ದು ದಿನಾಂಕ: 08.07.2022 ರಂದು ಬೆಳಿಗ್ಗೆ 05.30 ಗಂಟೆಗೆ ಪಿರ್ಯಾದಿದಾರರು ಬಂದು ನೋಡಿದಾಗ ಪಾರ್ಕ್ ಮಾಡಿದ ಮೋಟಾರ್ ಸೈಕಲ್ ಕಾಣದೇ ಇದ್ದು ಕೂಡಲೇ ಎಲ್ಲಾ ಕಡೆ ಈತನಕ ಹುಡುಕಾಡಿದಲ್ಲಿ ಸೈಕಲ್ ಪತ್ತೆಯಾಗಿರುವುದಿಲ್ಲ. ಸದ್ರಿ ಸ್ಕೂಟರ್ ನ್ನು ಯಾರೋ ಕಳ್ಳರು ದಿನಾಂಕ: 07.07.2022 ರಂದು ಸಂಜೆಯಿಂದ ಅದೇ ರಾತ್ರಿ 9.30 ಗಂಟೆಯ ಮದ್ಯೆ ಸದ್ರಿ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಎಂಬಿತ್ಯಾದಿ ಪಿರ್ಯಾದಿದಾರರ ಸಂಶಯವಾಗಿರುತ್ತದೆ. ಕಳವಾದ ಸ್ಕೂಟರಿನ ಅಂದಾಜು ಮೌಲ್ಯ 75000/- ಆಗಬಹುದು.

ಇತ್ತೀಚಿನ ನವೀಕರಣ​ : 05-08-2022 04:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080