ಅಭಿಪ್ರಾಯ / ಸಲಹೆಗಳು

 

 Crime Report in Mulki PS

ಪಿರ್ಯಾದಿ Mr. Justin Jonathan D'Souza ದಾರರ ತಾತ ಅಂಟೋನಿ ವೇಗಸ್ (74), ರವರು ವಯೋ ಸಹಜ ಖಾಯಿಲೆಯಿಂದ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು ದಿನಾಂಕ 04-08-2023 ರಂದು ಸಂಜೆ 6-30 ಗಂಟೆಯಿಂದ ತನ್ನ ಮನೆಯಿಂದ ಕಾಣೆಯಾಗಿರುವುದಾಗಿದೆ. ಕಾಣೆಯಾದವರ ವಿವರ ಈ ಕೆಳಗಿನಂತಿರುತ್ತದೆ.

ಹೆಸರು: ಆಂಟೋನಿ ವೇಗಸ್, ಪ್ರಾಯ 74 ವರ್ಷ, ತಂದೆ: ದಿ|| ಪೆದ್ರು ವೇಗಸ್.

  1. ಹುಟ್ಟಿದ ದಿನಾಂಕ : 01-01-1949
  2. ಹಾಕಿದ ಬಟ್ಟೆ: ನೀಲಿ ಮುಂಡು, ಕಡು ನೀಲಿ ಬಣ್ಣದ ಬರ್ಮುಡಾ, ಹಳದಿ ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ.
  3. ಎತ್ತರ: 5 ಅಡಿ “4”

 

Mangalore North PS   

ದಿನಾಂಕ 05.08.2023  ರಂದು ಪಿರ್ಯಾದಿದಾರರಾದ ಉತ್ತರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ  ದಾಮೋದರ್ ರವರು  ಮಂಗಳೂರು ಉತ್ತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳಗ್ಗಿನ ಜಾವ ಸುಮಾರು 05-15 ಗಂಟೆಗೆ ಮಂಗಳೂರು ನಗರದ  ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ ಪ್ರಹ್ಲಾದ್ ಪೂಜಾರಿ (29), ವಾಸ-ಮಂಜುನಾಥ ಪ್ರಸಾದ್ ನಿಲಯ ಸಾಸ್ತಾನ, ಐರೋಡಿ, ಕುಂದಾಪುರ ಉಡುಪಿ  ಎಂಬಾತನು ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದು ರಾತ್ರಿ ಸಮಯ ಕನ್ನ ಕಳವು ಅಥವಾ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ, ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಸದ್ರಿ ಸಿಟಿ ಸೆಂಟರ್ ಬಳಿ ಇರುವ  ಅಂಗಡಿಗಳ  ಬಾಗಿಲ ಬೀಗ ಮುರಿಯಲು ಹೊಂಚು ಹಾಕುತ್ತಿದ್ದಾನೆಂಬ ಬಲವಾದ ಸಂಶಯದ ಮೇರೆಗೆ ವಶಕ್ಕೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

 

 

 

Mulki PS

ದಿನಾಂಕ:04-08-2023 ರಂದು ಬೆಳಿಗ್ಗೆ 10-30 ಗಂಟೆಯಿಂದ ದಿನಾಂಕ: 04-08-2023  ರಂದು ಮಧ್ಯಾಹ್ನ 1-30 ಗಂಟೆಯ ಮಧ್ಯಾವಧಿಯಲ್ಲಿ   ಪಿರ್ಯಾದಿ   Smt  Devamma ದಾರರು   ಬಪ್ಪನಾಡು ದೇವಸ್ಥಾನಕ್ಕೆ ಹೋಗಿರುವ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮನೆ Ashraya Colony, Lingappayakadu, Karnad Village      ಯ ಎದುರಿನ ಬೀಗವನ್ನು ಯಾವುದೋ ಸಾಧನದಿಂದ ಹೊಡೆದು ಮನೆಯ ಒಳಗೆ ಪ್ರವೇಶಿಸಿ ಮನೆಯೊಳಗಿದ್ದ ಗಾದ್ರೇಜ್ ನ ಬಾಗಿಲನ್ನು ಮತ್ತು ಗಾದ್ರೇಜ್ ನ ಲಾಕರ್ ನ ಲಾಕನ್ನು ಯಾವುದೋ ಸಾಧನದಿಂದ ಮುರಿದು ಗಾದ್ರೇಜ್ ನ ಲಾಕರ್ನಲ್ಲಿದ್ದ ಒಟ್ಟು 1,15,600/- ರೂ ಮೌಲ್ಯದ ಬಂಗಾರದ ಒಡವೆ ಹಾಗೂ ನಗದು  ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

                             

ಇತ್ತೀಚಿನ ನವೀಕರಣ​ : 21-08-2023 02:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080