ಅಭಿಪ್ರಾಯ / ಸಲಹೆಗಳು

Crime Report in Mangalore Rural PS

ಪಿರ್ಯಾದಿದಾರರು ಪ್ರಗತಿ ಸಹಕಾರಿ ಸಂಘ ನಿಯಮಿತ ನೀರುಮಾರ್ಗ ಶಾಖೆಯಲ್ಲಿ 2016 ಇಸವಿಯಿಂದ 2018 ರ ಜುಲೈ ತಿಂಗಳ ಮಧ್ಯಾವಧಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಮಯ ದಿನಾಂಕ: 20-01-2018 ರಂದು ಸದ್ರಿ ಸಹಕಾರಿ ಸಂಘದ ಸದಸ್ಯರಾಗಿದ್ದ ಪ್ರೀತಮ್, ತಂದೆ: ಕೆ ಜಾರಪ್ಪ, ವಾಸ: ನಂ: 22/14, ಕೆ.ಎಂ.ಎಫ್ ಡೈರಿ ಬಳಿ ಮನೆ, ಪದವು ಗ್ರಾಮ, ಕುಲಶೇಖರ ಅಂಚೆ, ಮಂಗಳೂರು ತಾಲೂಕು-575005 ರವರು 2014 ನೇ ಇಸವಿಯಲ್ಲಿ ತಯಾರಾದ Loader ( JCB) ವಾಹನದ ಮೇಲೆ ಸಾಲ ಪಡೆದುಕೊಳ್ಳಲು ಸದ್ರಿ ವಾಹನದ ಅಸಲಿ ದಾಖಲೆಗಳನ್ನು ಹಾಜರುಪಡಿಸಿ ಸಂಘದಿಂದ ರೂ: 8,00,000-00 ಹಣವನ್ನು ಸಾಲವಾಗಿ ಪಡೆದುಕೊಂಡು ಆ ಸಾಲದ ಬಾಬ್ತು ಮಾಸಿಕ ರೂ: 13,400-00 ಸಾಲದ ಕಂತುಗಳನ್ನು ಕ್ರಮಬದ್ಧವಾಗಿ 07 ತಿಂಗಳ ಕಂತುಗಳನ್ನು ಸಹಕಾರಿ ಸಂಘಕ್ಕೆ ಮರುಪಾವತಿ ಮಾಡಿದ್ದು, ಉಳಿದ ಸಾಲದ ಕಂತುಗಳನ್ನು ಮರುಪಾವತಿಸದೇ ಇದ್ದಾಗ ಆರೋಪಿ ಪ್ರೀತಮ್ ರವರು ಸಹಕಾರಿ ಸಂಘಕ್ಕೆ ಸಾಲ ಪಡೆಯಲು ಸಲ್ಲಿಸಿದ Loader ( JCB) ವಾಹನದ ದಾಖಲೆಗಳನ್ನು ಆರ್.ಟಿ.ಓ ದಲ್ಲಿ ಪರಿಶೀಲಿಸಿದಾಗ ಸಾಲ ಪಡೆಯಲು ಸಹಕಾರಿ ಸಂಘಕ್ಕೆ ಸಲ್ಲಿಸಿದ ವಾಹನದ ದಾಖಲೆಗಳು Loader ( JCB) ವಾಹನದ ದಾಖಲೆಗಳು ಅಲ್ಲದೇ ಇದ್ದು, ಅದು ಟಾಟಾ ಇಂಡಿಕಾ ಕಾರಿನ ದಾಖಲೆಗಳೆಂದು ಕಂಡು ಬಂದಿದ್ದು, ಆರೋಪಿತನು Loader ( JCB)  ವಾಹನದ ಮೇಲೆ ಸಾಲ ಪಡೆಯುವುದಾಗಿ ಸಹಕಾರಿ ಸಂಘಕ್ಕೆ Loader (JCB) ವಾಹನದ ದಾಖಲೆಗಳೆಂದು ನಂಬಿಸಿ ಟಾಟಾ ಇಂಡಿಕಾ ಕಾರಿನ ದಾಖಲೆಗಳನ್ನು ನೀಡಿ ಪಿರ್ಯಾದಿದಾರರನ್ನು ನಂಬಿಸಿ ಮೋಸ ಮಾಡುವ ಉದ್ಧೇಶದಿಂದ ಆರೋಪಿತನು ಕೃತ್ಯವೆಸಗಿರುವುದು ಎಂಬಿತ್ಯಾದಿ.

Traffic South Police Station              

ದಿನಾಂಕ: 04-09-2023 ರಂದು ಫಿರ್ಯಾದಿ JAYATH KUMAR ದಾರರು ಕೆಲಸದಲ್ಲಿರುವಾಗ ಅವರ ಸ್ನೇಹಿತರೊಬ್ಬರು ಕರೆ ಮಾಡಿ ಪಿರ್ಯಾದಿದಾರರ ತಂದೆಯವರಾದ ಗಂಗಾಧರ ಬೆಳ್ಚಾಡ ರವರಿಗೆ ಬೋಳಿಯಾರ್ ಬಳಿ ಅಪಘಾತವಾಗಿ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ತಿಳಿಸಿದಾಗ ಪಿರ್ಯಾದಿದಾರರು ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ದಿನಾಂಕ:04-09-2023 ರಂದು ಪಿರ್ಯಾದಿದಾರರ ತಂದೆಯವರಾದ ಗಂಗಾಧರ ಬೆಳ್ಚಾಡ ರವರು ಬೋಳಿಯಾರ್ ನಲ್ಲಿ ಹೋಟೆಲ್ ನಡೆಸುತ್ತಿದ್ದು, ಆ ಸಮಯ ಹೋಟಲಿಗೆ ಬೇಕಾದ ದಿನಸಿ ಖರಿದಿಸಲು ಹೋಟೆಲ್ ಎದುರುಗಡೆ ಇದ್ದ ದಿನಸಿ ಅಂಗಡಿಗೆ ಹೋಗಲು ಬಿ. ಸಿ ರೋಡ್ ಕಡೆಯಿಂದ ಕಾಯರ್ ಗೋಳಿ ಕಡೆಗೆ ಹೋಗುವ ಡಾಮಾರು ರಸ್ತೆಯನ್ನು ದಾಟುತ್ತಿರುವಾಗ ಸಂಜೆ ಸಮಯ ಸುಮಾರು 5.45 ಗಂಟೆಗೆ ಬಿ.ಸಿ ರೋಡ್ ಕಡೆಯಿಂದ ಕಾಯರ್ ಗೋಳಿ ಕಡೆಗೆ ಬರುತ್ತಿದ್ದ ಬೈಕ್ ನಂಬ್ರ KA-19-HB-8513 ನೇದರ ಸವಾರ ಹೃತೀಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ತಂದೆಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಡಾಮಾರು ರಸ್ತೆಗೆ ಬಿದ್ದಿದ್ದು ಕೊಡಲೇ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಬೈಕ್ ಸವಾರನು ಉಪಚರಿಸಿ,ನಂತರ ಡಿಕ್ಕಿ ಪಡಿಸಿದ ಬೈಕ್ ಸವಾರನು ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಅಲ್ಲಿಯ ವೈಧ್ಯರು ಪಿರ್ಯಾದಿದಾರರ ತಂದೆಯವರನ್ನು ಪರೀಕ್ಷಿಸಿದಾಗ ಬಲಕಾಲಿನ ಕೋಲು ಕಾಲಿಗೆ ಮೊಳೆಮುರಿತದ ಗಾಯ, ಎಡಕಾಲಿಗೆ ತರಚಿದ ರಕ್ತಗಾಯ, ಎದೆಗೆ ಗುದ್ದಿದ ಗಾಯ ಹಾಗೂ ಕೈಗಳಿಗೆ, ಮುಖದ ಬಲಭಾಗಕ್ಕೆ ತರಚಿದ ರಕ್ತಗಾಯವಾಗಿದೆ ಎಂದು ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಆದ್ದರಿಂದ KA-19-HB-8513 ನೇದರ ಬೈಕ್ ಸವಾರನಾದ ಹೃತೇಶ್ ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿದ್ದೆ ಕಾರಣವಾಗಿದ್ದು ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Mangalore North PS

ಪಿರ್ಯಾದಿ MAHESH ದಾರರು  ಇಂಟಾಸ್ ಪಾರ್ಮಸಿಟಿಕಲ್  ಕಂಪನಿಯಲ್ಲಿ ಮೆಡಿಕಲ್ ರೆಪ್ ಆಗಿ 1 ವರ್ಷದಿಂದ ಕೆಲಸ ಮಾಡಿಕೊಂಡಿದ್ದು ,ಮಂಗಳೂರಿನ  ಜ್ಯೋತಿ ಕೆ,ಎಂ,ಸಿ ಆಸ್ಪತ್ರೆಯ ಹಿಂಬದಿ ಸೋಮನಾಥೇಶ್ವರ  ಕಂಪೌಂಡ್ ರೂಮ್ ನಂಬ್ರ 2 ನೇದರಲ್ಲಿ  ಪಿರ್ಯಾದಿದಾರರು ಮತ್ತು ಅವರ ಸ್ನೇಹಿತ ಬಾಡಿಗೆದಾರರಾಗಿದ್ದು ದಿನಾಂಕ  31/08/2023 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸ ಮುಗಿಸಿ  ಬಂದವರು  ಮಂಗಳೂರಿನ ಪಳ್ನೀರ್ ರಸ್ತೆ ಬಳಿ ಇರುವ ಕೆ,ಎಂ,ಸಿ ಆಸ್ಪತ್ರೆಯ  ಪಾರ್ಕಿಂಗ್  ಜಾಗದಲ್ಲಿ  ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA -20ED- 3020 ನೊಂದಣಿ ನಂಬ್ರದ  ಸ್ಲೆಂಡರ್ ಹೀರೋ ಹೋಂಡಾ ಮೋಟಾರ್ ಸೈಕಲ್ ನ್ನು  ರಾತ್ರಿ  10.45 ಗಂಟೆಗೆ  ಪಾರ್ಕ್ ಮಾಡಿದ್ದು ಮರುದಿನ  ದಿನಾಂಕ 01-09-2023 ರಂದು  ಬೆಳಿಗ್ಗೆ 11.45  ಗಂಟೆಗೆ ಪಾರ್ಕ್ ಮಾಡಿದ ಮೋಟಾರ್ ಸೈಕಲಿನ್ನು ನೋಡಲಾಗಿ ಅಲ್ಲಿ ಇಲ್ಲದೇ ಇದ್ದು ನಂತರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು , ಸದ್ರಿ KA -20ED- 3020 ನೊಂದಣಿ ನಂಬ್ರದ  ಸ್ಲೆಂಡರ್ ಹೀರೋ ಹೋಂಡಾ ಮೋಟಾರ್ ಸೈಕಲ್ ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಪಿರ್ಯಾದಿದಾರರು ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ. ಕಳವಾದ ಮೋಟಾರ್ ಸೈಕಲ್  ನ ವಿವರಗಳು ಈ ಕೆಳಗಿನಂತಿದೆ:

KA -20ED- 3020 ನೊಂದಣಿ ನಂಬ್ರದ  ಸ್ಲೆಂಡರ್ ಹೀರೋ ಹೋಂಡಾ ಮೋಟಾರ್ ಸೈಕಲ್  ಮಾಡೆಲ್ 2013 ಕಪ್ಪು ಬಣ್ಣ,ಅಂದಾಜು ಮೌಲ್ಯ ರೂ. 20,000/-

ಇತ್ತೀಚಿನ ನವೀಕರಣ​ : 05-09-2023 07:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080