ಅಭಿಪ್ರಾಯ / ಸಲಹೆಗಳು

Barke PS.

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:05.01.2024 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ ಐ ಮಂಗಳೂರು ಉತ್ತರ ಪೊಲೀಸ್ ಠಾಣೆ  ರವರು  ಸಿಬ್ಬಂದಿ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ  ಬೆಳಿಗ್ಗೆ ಸಮಯ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಭಾಗ್ ಬಳಿ ತಲುಪಿದಾಗ ಒಬ್ಬ ಅಮಲು ಪದಾರ್ಥ ಸೇವಿಸಿದ ನಶೆಯಲ್ಲಿದ್ದಂತೆ  ಕಂಡು ಬಂದ ವೈಶಾಖ್ ಪ್ರಾಯ: 19 ವರ್ಷ ವಾಸ: ಅತಲ್ ಹೌಸ್, ಚೆಂಗಾಲ್ ತೆಕ್ಕಿಲ್ ಪೋಸ್ಟು ಕಾಸರಗೋಡು ಜಿಲ್ಲೆ ಕೇರಳ ರಾಜ್ಯ ಎಂಬಾತನನ್ನು ಮುಂದಿನ ಕ್ರಮದ  ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಎ,ಜೆ ಆಸ್ಪತ್ರೆಗೆ. ಕಳುಹಿಸಿಕೊಟ್ಟಲ್ಲಿ  “Methamphetamine  POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆಪಾದಿತನನ್ನು ವರದಿಯೊಂದಿಗೆ ಠಾಣೆಗೆ  ಕರೆ ತಂದು ನೀಡಿ ಆಪಾದಿತನ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:05-01-2024 ರಂದು ಪಿರ್ಯಾದಿ ದಾರಾದ  Puneeth  M Gaonkar  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ 11.40 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ರೆಂಜಾಡಿ ಬಯಲು ಮೈದಾನದ ಬಳಿ  ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ರಾಜ್ ಕಿರಣ್, ಪ್ರಾಯ: 30 ವರ್ಷ, ವಾಸ: ಸೋಮನಾಥ ನಗರ, ಮೂಡ, ಸೋಮೇಶ್ವರ, ಕೋಟೆಕಾರ್, ಉಳ್ಳಾಲ ತಾಲೂಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು AMPHETAMINES ಎಂಬ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

 

Ullal PS 

ಮಂಗಳೂರು ನಗರದ ದಿನಾಂಕ 05/01/2024 ರಂದು  ಪಿರ್ಯಾದಿದಾರಾದ  ಸಂತೋಷ್ ಕುಮಾರ್ ಡಿ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಉಪನೀರಿಕ್ಷಕರು ಇವರು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳ ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಉಳ್ಳಾಲ ತಾಲೂಕು ಕೋಟೆಕಾರು ಗ್ರಾಮದ ಯೆನೆಪೊಯ ಶಾಂತಿಭಾಗ್ ಬಸ್‌ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಸುಶಾನ್ ಡಿ ಕುಮಾರ್ ಪ್ರಾಯ 32 ವರ್ಷ. ವಾಸ : ದೂಮಯ ಮನೆ, ಜಾರಂದಾಯ ದೈವಸ್ಥಾನದ ಹತ್ತಿರ, ಬೋಳೂರು, ಕೊಡಿಯಾಲ್ ಬೈಲ್, ಮಂಗಳೂರು  ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಹಾಜರುಪಡಿಸಿದಾಗ, ಸದ್ರಿ ವ್ಯಕ್ತಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ Positive for MARIJUANA (THC) ಎಂಬುದಾಗಿ ದೃಡಪತ್ರ ನೀಡಿರುತ್ತಾರೆ. ಈ  ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಪ್ರಕರಣದ ಸಾರಾಂಶ ಎಂಬಿತ್ಯಾದಿ.

 

Mangalore East PS

ಈ ಪ್ರಕರಣದ ಸಾರಾಂಶವೇನೆಂದರೆ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ವತಿಯಿಂದ ರಚಿಸಲಾಗಿರುವ Anti Drug Team ತಂಡದ ಅಧಿಕಾರಿ ಪೊಲೀಸ್ ಉಪ ನಿರೀಕ್ಷರಾದ ಪ್ರದೀಪ್ ಟಿ ಆರ್ ಉತ್ತರ ಪೊಲೀಸ್ ಠಾಣೆ ರವರು ದಿನಾಂಕ:05-01-2024 ರಂದು ಬೆಳಿಗ್ಗೆ Anti Drug Team  ನ  ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ  ಕದ್ರಿ ಪಾರ್ಕ್  ಬಳಿ ತಲುಪಿದಾಗ ಒಬ್ಬ ವ್ಯಕ್ತಿ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದ  ಮೊಹಮ್ಮದ್ ಸಪ್ವಾನ್ ಪಿ ಪ್ರಾಯ 19 ವರ್ಷ  ತಂದೆ: ಅಬ್ದುಲ್ ಮಜೀದ್ ವಾಸ: ಆಯ್ಯಾ ಮಂಜಿಲ್,ಚಿರುವತ್ತೂರು,ಕಡಂಗೋಡ್,ನೆಲ್ಲಿಕಾಲ್, ಕಾಸರಗೋಡ್, ಕೇರಳ ರಾಜ್ಯ ಎಂಬಾತನನ್ನು , ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ಇವನನ್ನು ಕುಂಟಿಕಾನ ಎ ಜೆ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಿರುತ್ತೇನೆ. ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ Amphetamine,Methamphetamine ಹಾಗೂ TETRAHYDARCANNABINOID(MARIJUANA) 50ng per ml POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ 27(ಬಿ) NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 05-01-2024 08:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080