ಅಭಿಪ್ರಾಯ / ಸಲಹೆಗಳು

Crime Report in : Surathkal PS

ದಿನಾಂಕ 03-12-2023 ರಂದು ಪಿರ್ಯಾದಿ Yogish D ಚಲಾಯಿಸಿಕೊಂಡು ಬರುತ್ತಿದ್ದ KA-14-B-3312 ನಂಬ್ರದ ಶಾಹಿಲ್ ಎಂಬ ಹೆಸರಿನ ಸರ್ವೀಸ್ ಬಸ್ ನ್ನು ಮಧ್ಯಾಹ್ನ 2:10 ಗಂಟೆಗೆ ಮಂಗಳೂರಿನಿಂದ ಬಿಟ್ಟು ಸುರತ್ಕಲ್ ಬಸ್ಸು ನಿಲ್ದಾಣಕ್ಕೆ ಸಂಜೆ 3:05 ಗಂಟೆಗೆ ತಲಪಬೇಕಾಗಿದ್ದು, ಕೊಟ್ಟಾರ ಚೌಕಿ ಬಳಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಸಂಜೆ 3:07 ಗಂಟೆಗೆ ಸುರತ್ಕಲ್ ಬಸ್ಸು ನಿಲ್ದಾಣಕ್ಕೆ ತಲುಪಿ ಬಸ್ ನ್ನು ನಿಲ್ಲಿಸಿದಾಗ ಬಸ್ಸಿನ ನಿರ್ವಾಹಕನಾದ ಸೈಯ್ಯದ್ ರಝಾನ್ ರವರು ಬಸ್ಸಿನಿಂದ ಇಳಿದು ಬಸ್ಸಿನ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಬಸ್ಸು 2 ನಿಮಿಷ ತಡವಾಗಿ ಬಂದ ವಿಚಾರದಲ್ಲಿ ಸುರತ್ಕಲ್ ಬಸ್ಸು ನಿಲ್ದಾಣದ ಟೈಮ್ ಕೀಪರ್ ಶಾಶ್ವತ್ ಹಾಗೂ ಶಫತ್ ಬಸ್ಸಿನ ಚಾಲಕ ಸಂಶೀರ್ ಮತ್ತು ಇನ್ನೋರ್ವ ವ್ಯಕ್ತಿಯು ಸೇರಿಕೊಂಡು ಸೈಯ್ಯದ್ ರಝಾನ್ ನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ “ರಂಡೆ ಮಗನೆ ಬೇವರ್ಸಿ” ಎಂಬುವುದಾಗಿ ಬೈದು ಮೂರು ಜನರು ಕೈಯಿಂದ ಹೊಡೆದು ನಿನ್ನನ್ನು ಕೊಲ್ಲದ ಬೀಡುವುದಿಲ್ಲ ಎಂಬುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ, ಕೂಡಲೇ ಪಿರ್ಯಾದಿದಾರರು ಮತ್ತು ಶಾಹಿಲ್ ಬಸ್ಸಿನ ಮಾಲಿಕರಾದ ಅಬ್ದುಲ್ ಖಾದರ್ ರವರುಗಳು ಬಿಡಿಸಲು ಹೋದಾಗ ಸದ್ರಿಯವರನ್ನು ಕೂಡ ಅವಾಚ್ಯ ಶಬ್ಧಗಳಿಂದ ಬೈದು ಅಲ್ಲಿಂದ ಓಡಿ ಹೋಗಿರುತ್ತಾರೆ, ಪಿರ್ಯಾದಿದಾರರು ಸೈಯ್ಯದ್ ರಝಾನ್ ನ್ನು ತಮ್ಮ ಬಸ್ಸಿನಲ್ಲಿಯೇ ಚಿಕಿತ್ಸೆಯ ಬಗ್ಗೆ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Mangalore East Traffic PS    

ಪಿರ್ಯಾದಿದಾರರಾದ ದೀಪ್ ಫ್ರಾನ್ಸಿಸ್ ಫೆರ್ನಾಂಡಿಸ್ ರವರು ತನ್ನ ಸ್ನೇಹಿತನೊಂದಿಗೆ ಬಿಕರ್ಣಕಟ್ಟೆ ಬಾಲಯೇಸು ಚರ್ಚ್ ಕಡೆಯಿಂದ ಪಿ.ವಿ.ಎಸ್ ಕಡೆಗೆ ಹೋಗಲು ನಂತೂರು ಶಿವಭಾಗ್ ಮಾರ್ಗವಾಗಿ ಹೊರಟು ರಾತ್ರಿ ಸುಮಾರು 10:10 ಗಂಟೆಗೆ ನಂತೂರು ಬಳಿ ಇರುವ ಮೊತೀಶಾಮ್ ಫೆರ್ನಿಲ್ ಅಪಾರ್ಟ್ಮೆಂಟ್ ಎದುರುಗಡೆ ತೆರೆದ ಡಿವೈಡರ್ ಬಳಿ ತಲುಪಿದಾಗ KL-58-K-5451 ನಂಬ್ರದ ದ್ವಿಚಕ್ರ ವಾಹನವನ್ನು ಅದರ ಸವಾರ ಶಿವಭಾಗ್-ನಂತೂರು ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಸದ್ರಿ ರಸ್ತೆಯಲ್ಲಿ ತೆರೆದ ಡಿವೈಡರ್ ಬಳಿ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದನ್ನು ಕಂಡು ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ  ಮೋಟಾರು ಸೈಕಲನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತ ಪೊಲೀಸರು ರಸ್ತೆಗೆ ಅಳವಡಿಸಿದ ಬ್ಯಾರಿಕೇಡಿಗೆ ತಾಗಿಸಿ ತೆರೆದ ಡಿವೈಡರ್ ಮೂಲಕ ರಸ್ತೆಯ ಇನ್ನೊಂದು ಬದಿಗೆ ವಾಹನಗಳು ಚಲಿಸುವ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರು ಚಲಾಯಿಸಿಕೊಂಡಿದ್ದ KA-19-MN-5424 ನಂಬ್ರದ ಕಾರಿನ ಎಡ ಮುಂಭಾಗಕ್ಕೆ ಡಿಕ್ಕಿ ಪಡಿಸಿದ್ದು, ಡಿಕ್ಕಿಯ ಪರಿಣಾಮ ದ್ವಿಚಕ್ರ ವಾಹನ ಸವಾರ ಮತ್ತು ಸಹ ಸವಾರ ಆನಂದ ಎಂಬಾತನು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಆ ಪೈಕಿ ಸವಾರ ಗಾಯಗೊಂಡಿರುತ್ತಾನೆ. ಅಪಘಾತದಲ್ಲಿ ಕಾರಿನ ಮುಂಭಾಗ ಎಡಬದಿಯ ಫೆಂಡರ್, ಎಡ ಬದಿಯ ಹೆಡ್ ಲೈಟ್, ಬೊನೆಟ್ ಎಡಬದಿಗೆ, ಎಡ ಮುಂಭಾಗದ ಬಂಪರ್ ಜಖಂಗೊಂಡಿದ್ದು, ಗಾಯಾಳು ಮೋಟಾರು ಸೈಕಲ್ ಸವಾರನನ್ನು ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಇಲಾಖಾ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪ್ರಸ್ತುತ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ದ್ವಿಚಕ್ರ ವಾಹನ ಸವಾರ ರೋಮಿಯೋ ಮೈಕಲ್ ಕೊಲಿನ್ಸ್ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

CEN Crime PS Mangaluru City

ದಿನಾಂಕ 19-06-2023 ರಂದು ಪಿರ್ಯಾದಿ ಟೆಲಿಗ್ರಾಮ್ ನಂಬ್ರ ಗೆ   ನೇದಕ್ಕೆ ಅಪರಿಚಿತ Aditi MMT guru ಎಂಬ  ಗ್ರೂಪ್ ನಲ್ಲಿ  ಹೋಟೆಲ್  ಮತ್ತು  ಹೋಂ  ಸ್ಟೇ ರೇಟಿಂಗ್  ನೀಡಿ ಪಾರ್ಟ್ ಟೈಮ್ ಜಾಬ್ ನೀಡುವುದರ ಬಗ್ಗೆ ಹಾಗೂ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ಗಳಿಸಬಹುದು ಎಂಬ ಬಗ್ಗೆ ಮೆಸೇಜ್ ಬಂದಿರುತ್ತದೆ. ನಂತರ ಪಿರ್ಯಾದಿದಾರರನ್ನು ಟೆಲಿಗ್ರಾಂ ಆಪ್ ಮೂಲಕ 30 ಟಾಸ್ಕ್ ಕಂಪ್ಲೀಟ್ ಮಾಡಿದಂತೆ  ರೂ.900/- ಹಣವನ್ನು ಲಾಭಾಂಶವೆಂದು  ನೀಡಿದ್ದು  ಅದೇ ದಿನ  ರೂ. 11,000/- ಡೆಪಾಸಿಟ್  ಮಾಡಿಸಿ ತದನಂತರ ಹಾಗೂ ರೂ. 20,000/- ಹಾಗೂ  70,000/-ಹಣವನ್ನು  ಲಾಭಾಂಶವೆಂದು ನೀಡಿರುತ್ತಾರೆ. ನಂತರದಲ್ಲಿ  ಈ  ರೀತಿ ಹಣ ಹೂಡಿಕೆ  ಮಾಡಿದ್ದಲ್ಲಿ  ಲಾಭಾಂಶ  ನೀಡುವುದಾಗಿ  ತಿಳಿಸಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು 27,56,129/- ಹಣವನ್ನು  IMPS ಮುಖೇನಾ ಆರೋಪಿತರು ಬೇರೆ ಬೇರೆ ಬ್ಯಾಂಕ್ ಅಕೌಂಟ್ ವರ್ಗಾಯಿಸಿಕೊಂಡಿರುತ್ತಾರೆ.  ಹೀಗೆ ದಿನಾಂಕ 19-06-2023 ರಿಂದ 26-08-2023 ರವರೆಗೆ ಪಿರ್ಯಾದಿದಾರರನ್ನು ನಂಬಿಸಿ ಮೊಸ ವಂಚನೆಯಿಂದ ಹಣ ವರ್ಗಾವಣೆ ಮಾಡಿಕೊಂಡಿರುತ್ತಾರೆ.ಪಿರ್ಯಾದಿದಾರರು  ಈವರೆಗೆ  ಆರೋಪಿತನು ಹಣವನ್ನು  ಹಿಂತಿರುಗಿಸಬಹುದು ಕಾದು ನಾನು  ಮೋಸ ಹೋಗಿದ್ದೇನೆ ಎಂದು  ತಿಳಿದು   ಪಿರ್ಯಾದಿ ನೀಡಿರುವುದು   ಎಂಬಿತ್ಯಾದಿ

Mulki PS  

ಫಿರ್ಯಾದಿ Vinayaka Bhavikatti ದಿನಾಂಕ: 02-12-2023 ರಂದು 16-00 ಗಂಟೆಯಿಂದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸುಮಾರು 17-30 ಗಂಟೆಗೆ ಮುಲ್ಕಿ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಯುವಕನೋರ್ವನು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅನುಚಿತವಾಗಿ ವರ್ತಿಸುತ್ತಿರುವುದಾಗಿ ಮಾಹಿತಿ ಬಂದಂತೆ ಸ್ಥಳಕ್ಕೆ ತೆರಳಿ  ಗಮನಿಸಿದಲ್ಲಿ ಸುಕೇತ್, ಪ್ರಾಯ: 20 ವರ್ಷ,  ವಾಸ: ಶಾಂತಿಗುಡ್ಡೆ ಹೌಸ್, ಕೊಡಿಪಾಡಿ, ಮಾಧವ ನಗರ, ಶ್ರೀನಿವಾಸ ನಗರ ಅಂಚೆ, ಸುರತ್ಕಲ್, ಮಂಗಳೂರು ತಾಲೂಕು ಎಂಬವನು ಗಾಂಜಾ ಸೇವನೆ ಮಾಡಿ ತೂರಾಡುತ್ತಿರುವವನನ್ನು ವಶಕ್ಕೆ ಪಡೆದು  ಎಜೆ ಆಸ್ಪತ್ರೆಗೆ ಕಳುಹಿಸಿದ್ದು ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವ ಬಗ್ಗೆ ಪರೀಕ್ಷಾ ವರದಿಯ ಧೃಡಪತ್ರವನ್ನು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಂತೆ  ಸೂಕ್ತ ಕಾನೂನು ಕ್ರಮ ಕೈಗೊಂಡು ಎಂಬಿತ್ಯಾದಿಯಾಗಿರುತ್ತದೆ.

Urva PS   

ಪಿರ್ಯಾದಿದಾರರಾದ ಉರ್ವಾ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಹರೀಶ್ ಹೆಚ್.ವಿ ರವರು ದಿನಾಂಕ: 03-12-2023 ರಂದು ಬೆಳಿಗ್ಗೆ ಸಮಯ ಸುಮಾರು 11-00 ರ ವೇಳೆಗೆ ಇಲಾಖಾ ವಾಹನ ನಂಬ್ರ KA-19-G-546 ನೇದರಲ್ಲಿ ಸಿಬ್ಬಂದಿಗಳ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿದ್ದ ಸಮಯ ದಂಬೆಲ್ ಬಳಿ ಸಮಯ ಸುಮಾರು ಮದ್ಯಾಹ್ನ 12-30 ರ ವೇಳೆಗೆ  ತಲುಪಿದಾಗ ಅಲ್ಲಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ಇಬ್ಬರು ಯುವಕರು  ಸೀಗರೇಟ್ ಸೇದುತ್ತಾ ನಿಂತಿದ್ದು, ಪಿರ್ಯಾದಿದಾರರನ್ನು ನೋಡಿ ಕೈಯಲಿದ್ದ ಸಿಗರೇಟ್ ಬಿಸಾಡಿದ್ದು, ಇದರಿಂದ ಸಂಶಯಗೊಂಡ ಪಿರ್ಯಾದಿದಾರರು ಆವರ ಬಳಿ ಹೋಗಿ ವಿಚಾರಿಸಿದಾಗ ಅವರ ಹೆಸರು 1). ಜಾನ್ ಸನ್,( 30) ,ತಂದೆ: ಗಣರಾಜ್, ವಾಸ: 6-91-4, ಜ್ಯೋತಿ ಕಂಪೌಂಡ್, ಕೋಡಿಕಲ್ ಕಟ್ಟೆ, ಅಶೊಕನಗರ, ಮಂಗಳೂರು ಮತ್ತು 2). ಕಾರ್ತಿಕ (33), ತಂದೆ: ಷಣ್ಮುಗನ್, ವಾಸ: ಡೋರ್ ನಂಬ್ರ 1, ಪಿಲಿಯರ್ ಕೊಯಿಲ್ ಸ್ಟ್ರೀಟ್, ದೇವರಕುಲಂ, ಸಂಗರನ್ ಕೊವಿಲ್, ತ್ರಿನಲ್ ವೆಲ್ ತಮಿಳುನಾಡು ಎಂಬುದಾಗಿ ತೊದಲುತ್ತಾ ನುಡಿದಿದ್ದು, ಇವರ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದುದರಿಂದ ಪಿರ್ಯಾದಿದಾರರು ಕೂಲಂಕುಷವಾಗಿ ವಿಚಾರಿಸಿದಾಗ ಇವರುಗಳು ಸಿಗರೇಟಿನ ಒಳಗಡೆ ಗಾಂಜಾವನ್ನು ತುಂಬಿಸಿ ಸೇದಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ  ಇವರನ್ನು ವಶಕ್ಕೆ ಪಡೆದು ಗಾಂಜ ಸೇವನೆ ಮಾಡಿರುವ ಬಗ್ಗೆ ವೈದ್ಯರ ಬಳಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಇವರು ಗಾಂಜ ಸೇವನೆ ಮಾಡಿರುವುದಾಗಿ ದೃಢಪಡಿಸಿ ವರದಿ ನೀಡಿರುವುದಾಗಿದೆ ಎಂಬಿತ್ಯಾದಿ.

Mangalore North PS

ದಿನಾಂಕ: 03.12.2023  ರಂದು  ಸಮಯ ಮದ್ಯಾಹ್ನ   12.00 ಗಂಟೆಗೆ ಮಾದಕ ದ್ಯವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team  ತಂಡದ ಅಧಿಕಾರಿ ಸಿಬ್ಬಂದಿಗಳು  ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಉತ್ತರ ದಕ್ಕೆ ಬಳಿ  ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ವಿಚಾರಿಸಲಾಗಿ  ಹೆಸರು: ವಿಲ್ಸನ್ (28), ವಾಸ: ಜ್ಯೋತಿ ಕಂಪೌಂಡ್ ಕೋಡಿಕಲ್ ಕಟ್ಟೆ ಅಶೋಕನಗರ ಪೋಸ್ಟ್ ಮಂಗಳೂರು  ಎಂಬುದಾಗಿ ತಿಳಿಸಿದ್ದು ಆತನನ್ನು  ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನುಪರೀಕ್ಷಿಸಿದಲ್ಲಿ, ವಿಲ್ಸನ್ ಎಂಬಾತನು, Tetrahydracannabinoid,(Marijuana)  ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ ಎಂಬಿತ್ಯಾದಿ

Traffic South Police Station

ಪಿರ್ಯಾದಿ ಅಮಿತ್ (19) ರವರು ನೀಡಿದ ದೂರಿನಂತೆ ದಿನಾಂಕ:03-12-2023 ರಂದು ಪಿರ್ಯಾದಿದಾರರು ಮಂಗಳೂರಿನ ಕುಂಪಲದಲ್ಲಿರುವ ಅವರ ದೊಡ್ಡಮ್ಮನ ಮನೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರು, ಪಿರ್ಯಾದಿದಾರರ  ತಾಯಿ ಭಾರತಿ [43] ಮತ್ತು ಅವರ ಅಣ್ಣ ಹಿತೇಶ್ [26] ರವರು ಕೂಡ ಕಾರ್ಯಕ್ರಮಕ್ಕೆ ಬಂದಿದ್ದು, ಅವರು ಕಾರ್ಯಕ್ರಮ ಮುಗಿಸಿ ಸ್ಕೂಟರ್ ನಂಬ್ರ: KA-19-HN-8372 ನೇದರಲ್ಲಿ ಪಿರ್ಯಾದಿದಾರರ ಅಣ್ಣ ಹಿತೇಶ್ ರವರು ಸವಾರರಾಗಿ ಹಾಗೂ ಅವರ ತಾಯಿ ಭಾರತಿ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕುಂಪಲ ಕಡೆಯಿಂದ ಮೇರೆಮಜಲು ಕಡೆಗೆ ಹೋಗಲು ಕುಂಪಲ ಬೈಪಾಸ್ ಮೂಲಕ ಕೊಲ್ಯದಲ್ಲಿರುವ ಮಿಡಿಯನ್ ನಲ್ಲಿ ಯೂ ಟರ್ನ್ ಮಾಡಲು ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 2-30 ಗಂಟೆಗೆ ಕುಂಪಲ ಬೈಪಾಸ್ ನಿಂದ ಕೊಲ್ಯ ಕಡೆಗೆ  ಸುಮಾರು 400 ಮೀಟರ್ ಮುಂದಕ್ಕೆ ರಾ.ಹೆ 66 ರ ಡಾಮಾರು ರಸ್ತೆಗೆ ತಲುಪಿದಾಗ ಸ್ಕೂಟರ್ ನ್ನು ಸವಾರಿ ಮಾಡುತ್ತಿದ್ದ ಹಿತೇಶ್ ರವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ಸಹ ಸವಾರರಾಗಿ ಕುಳಿತಿದ್ದ ಪಿರ್ಯಾದಿದಾರರ ತಾಯಿ ಭಾರತಿ ರವರು ನಿಯಂತ್ರಣ ತಪ್ಪಿ ಸ್ಕೂಟರ್ ನಿಂದ ರಸ್ತೆಗೆ ಬಿದ್ದಿರುತ್ತಾರೆ. ಈ ಅಪಘಾತದಿಂದ ಭಾರತಿ ರವರಿಗೆ ತಲೆಗೆ ಗಂಭೀರ ರಕ್ತಗಾಯವಾಗಿರುತ್ತದೆ. ಕೂಡಲೇ ಹಿತೇಶ್ ರವರು ಪಿರ್ಯಾದಿದಾರರಿಗೆ ಕರೆಮಾಡಿ ಅವರ ತಾಯಿ ಭಾರತಿ ರವರನ್ನು ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಸಹರಾ ಆಸ್ಪತ್ರೆಗೆ ಬಂದು ಅಲ್ಲಿ ಅವರ ತಾಯಿ ಭಾರತಿ ರವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಅವರ ಅಣ್ಣ ಹಿತೇಶ್ ರವರೊಂದಿಗೆ ಗಾಯಾಳುವನ್ನು ಅಂಬುಲೆನ್ಸ್ ನಲ್ಲಿ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

Moodabidre PS

ಪಿರ್ಯಾದಿ Sri Sandesh P G ದಿನಾಂಕ 03-12-2023 ರಂದು 17.30 ಗಂಟೆಗೆ ಠಾಣೆಯಲ್ಲಿರುವಾಗ ಭಾತ್ಮಿದಾರರೊಬ್ಬರು ಮೂಡಬಿದರೆ ತಾಲೂಕು ನೆಲ್ಲಿಕಾರು ಗ್ರಾಮದ ರೇಂಜಾಳು ರಸ್ತೆಯ ಪಕ್ಕದಲ್ಲಿರುವ ನಿರ್ಜನ ಪ್ರದೇಶದಲ್ಲಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ  ಮಾಹಿತಿಯನ್ನಾಧರಿಸಿ ಗಿಡಮರಗಳು ಬೆಳೆದುಕೊಂಡಿರುವ ಹಾಡಿ ಪ್ರದೇಶದಲ್ಲಿ ನಿಂತು ಗಮನಿಸಿದಾಗ ಅಲ್ಲೇ ಸ್ವಲ್ಪ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಬೆಡ್ ಶೀಟ್ ಒಂದನ್ನು ನೆಲಕ್ಕೆ ಹಾಸಿ ಮೇಣದ ಬತ್ತಿಯನ್ನು ಹಚ್ಚಿಕೊಂಡು ಕೆಲವರು ಹಣವನ್ನು ಪಣವನ್ನಾಗಿ ಇಟ್ಟು ಉಲಾಯಿ- ಪಿದಾಯಿ ಎಂಬ ಜುಗಾರಿ ಅದೃಷ್ಟದ ಆಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 18.30 ಗಂಟೆಗೆ ಸ್ಥಳಕ್ಕೆ ದಾಳಿ ಮಾಡಲು ಹತ್ತಿರ ಹೋಗುತ್ತಿದ್ದಂತೆ ಜುಗಾರಿ ಆಟ ಆಡುತ್ತಿದ್ದ 5 ಜನರನ್ನು ಸಿಬ್ಬಂದಿಗಳೊಂದಿಗೆ ಸುತ್ತುವರೆದು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಆರೋಪಿಗಳೆಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದು, ಜುಗಾರಿ ಆಟಕ್ಕೆ ಬಳಸಿದ ಇಸ್ಪಿಟ್ ಎಲೆಗಳು-52, ಬೆಡ್ ಶೀಟ್-01, ಮೇಣದ ಬತ್ತಿ-04 ಹಾಗೂ ನಗದು 14,460/- ರೂ ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ನೀಡಿದ ದೂರು ಎಂಬಿತ್ಯಾದಿ.

       

ಇತ್ತೀಚಿನ ನವೀಕರಣ​ : 05-12-2023 01:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080