Crime Reported in : Barke PS
ಪಿರ್ಯಾದಿ Naveenachandra Alva K MH03 BF5279 ನೇ ನೊಂದಣಿ ಸಂಖ್ಯೆಯ ರಾಯಲ್ ಎನ್ ಫೀಲ್ಡ್ ಕಂಎನಿಯ ಬುಲೆಟ್ 500 ಸಿಸಿ ದ್ವಿ ಚಕ್ರ ವಾಹನವನ್ನು ದಿನಾಂಕ: 31-01-2023 ರಂದು ಸಂಜೆ 5-30 ಗಂಟೆಗೆ ಕೆ.ಎಸ್.ಆರ್.ಟಿಸಿ ಬಸ್ಸು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಪಿರ್ಯಾದಿದಾರರು ತನ್ನ ಊರಾದ ಕುಂಭ್ಲೆಗೆ ತೆರೆಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ದಿನಾಂಕ: 02-02-2023 ರಂದು ತನ್ನ ಊರಿನಿಂದ ವಾಪಾಸು ಮಂಗಳೂರಿಗೆ ಬಂದು ತನ್ನ ಮೋಟಾರ್ ಸೈಕಲ್ ನಿಲ್ಲಿಸಿದ್ದ ಕೆ.ಎಸ್.ಆರ್.ಟಿಸಿ ಬಸ್ಸು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನೋಡಿದಾಗ ದ್ವಿ ಚಕ್ರವಾಹನವು ಇಲ್ಲದೇ ಇದ್ದು ಈ ಬಗ್ಗೆ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ನಗರದ ಇತರೆ ಕಡೆ ಹುಡುಕಾಡಿದಲ್ಲಿ ಈ ವೆರೆಗೆ ಸಿಕ್ಕಿರುವುದಿಲ್ಲ. ಪಿರ್ಯಾದಿದಾರರ ಬಾಬ್ತು MH03 BF5279 ನೇ ನೊಂದಣಿ ಸಂಖ್ಯೆಯ ರಾಯಲ್ ಎನ್ ಫೀಲ್ಡ್ ಕಂಎನಿಯ ಬುಲೆಟ್ 500 ಸಿಸಿ ದ್ವಿ ಚಕ್ರ ವಾಹನವನ್ನು ದಿನಾಂಕ: 31-01-2023 ರ ರಾತ್ರಿಯಿಂದ ದಿನಾಂಕ: 02-03-2023 ರ ಬೆಳಿಗ್ಗೆ 10-30 ಗಂಟೆಗಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದು ಸದ್ರಿ ದ್ವಿಚಕ್ರ ವಾಹನದ ಅಂದಾಜು ಮೌಲ್ಯ ಸುಮಾರು 1,30,000/- ರೂಪಾಯಿ ಆಗಬಹುದು ಎಂದು ಠಾಣೆಗೆ ನೀಡಿದ ದೂರಿನ ಸಾರಾಂಶವಾಗಿರುತ್ತದೆ.
Crime Reported in : Traffic North Police Station
ಪಿರ್ಯಾದಿದಾರರು ದಿನಾಂಕ 11.07.2022 ರಂದು ತನ್ನ ಅಕ್ಕನ ಬಾಬ್ತು KA-20-EL-8286 ಮೋಟಾರ್ ಸೈಕಲಿನಲ್ಲಿ ಮನೆಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕಡೆಗೆ ಹೋಗುತ್ತಿದ್ದಾಗ ಸಮಯ ಬೆಳಿಗ್ಗೆ ಸುಮಾರು 10:00 ಗಂಟೆ ಸಮಯಕ್ಕೆ ಮುಕ್ಕ ಟೋಲ್ ಗೇಟಿನಿಂದ ಸ್ವಲ್ಪ ಹಿಂದೆ ಶ್ರೀ ಧೂಮಾವತಿ ದೇವಸ್ಥಾನದ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪುತ್ತಿದ್ದಂತೆ ತೆರೆದ ಡಿವೈಡರ್ ಕಡೆಯಿಂದ ಅಂದರೆ ಮುಕ್ಕ ಕಡೆಯಿಂದ ಸುರತ್ಕಲ್ ಕಡೆಗೆ KA-19-D-4365 ನಂಬ್ರದ ಟಾಟಾ ಏಸ್ ಗೂಡ್ಸ್ ವಾಹನವನ್ನು ಅದರ ಚಾಲಕ ಪ್ರಮೋದ್ ಕುಮಾರ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲಿನ ಬಲಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಗಾಯಗೊಂಡ ಪಿರ್ಯಾದಿದಾರರನ್ನು ಟಾಟಾ ಏಸ್ ಗೂಡ್ಸ್ ಚಾಲಕ ಚಿಕಿತ್ಸೆ ಬಗ್ಗೆ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಗತ್ಯ ಚಿಕಿತ್ಸೆ ಪಡೆದಿದ್ದು, ಬಳಿಕ ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.
Crime Reported in : Traffic North Police Station
ಪಿರ್ಯಾದಿ Yogish Karkera ತಮ್ಮನಾದ ಗಿರೀಶ್ ಕರ್ಕೇರಾ (42) ರವರು ದಿನಾಂಕ; 05-02-2023 ರಂದು ಆತನ ಮಾಲಕತ್ವದ KA-19-C-8663 ನಂಬ್ರದ ಆಟೋ ಟೆಂಪೋದಲ್ಲಿ ಪಿರ್ಯಾದಿದಾರರ ತಂಗಿಯ ಮಗಳಾದ ಕುಮಾರಿ ಪರಿಣಿತಿ ಮಹೇಶ್ ರೆಡ್ಡಿ (10) ರವರನ್ನು ಚಾಲಕನ ಸೀಟಿನ ಎಡಬದಿಯಲ್ಲಿ ಕುಳ್ಳಿರಿಸಿಕೊಂಡು ಕಾವೂರು ಜಂಕ್ಷನ್ ಕಡೆಯಿಂದ ಕುಂಟಿಕಾನ ಕಡೆಗೆ ಬರುತ್ತಾ ಬೆಳಿಗ್ಗೆ ಸಮಯ ಸುಮಾರು 9:30 ಘಂಟೆಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಬಸ್ ಸ್ಟಾಪ್ ಕಟ್ಟಡದ ಬಳಿ ಹೊಸದಾಗಿ ನಿರ್ಮಿಸಿದ ರಸ್ತೆಯ ಹಂಪ್ಸ್ ನಲ್ಲಿ ಆಟೋ ಟೆಂಪೋಗೆ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಗಿರೀಶ್ ಕರ್ಕೇರನು ತನ್ನ ಆಟೋ ಟೆಂಪೋದ ನಿಯಂತ್ರಣ ತಪ್ಪಿ ಆಟೋ ಟೆಂಪೋ ಬಲ ಮಗ್ಗುಲಿಗೆ ಮುಗುಚಿ ಬಿದ್ದು ಗಿರೀಶ್ ಕರ್ಕೇರಾ ರವರಿಗೆ ಎದೆಯ ಬಲಬದಿಗೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಎರಡೂ ಕೈಗಳಿಗೆ ಚರ್ಮ ತರಚಿದ ಗಾಯ ಹೊಟ್ಟೆಯ ಬಲಬದಿ ತರಚಿದ ಗಾಯ ಹಾಗೂ ಕುಮಾರಿ ಪರಿಣಿತಿ ಮಹೇಶ್ ರೆಡ್ಡಿ ರವರಿಗೆ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಬಲಕೈ ತಟ್ಟಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಗೆ ಸಾಗಿಸಲ್ಪಟ್ಟು ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.
Crime Reported in : Bajpe PS
ಪಿರ್ಯಾದಿ Shafi Khalandar ಹೆಂಡತಿಯ ತಮ್ಮನಾದ ಅಜ್ವದ್ ಎಂಬುವನು ದಿನಾಂಕ 04.02.2023 ರಂದು ರಾತ್ರಿ 9.45 ಗಂಟೆಗೆ ತನ್ನ ಸ್ಕೂಟರ್ ನಂಬ್ರ KA19-EW-0211 ನೇ ದನ್ನು ಚಲಾಯಿಸಿಕೊಂಡು ಮಂಗಳೂರು ತಾಲೂಕು ಬಜಪೆ ಗ್ರಾಮದ ಪೆಟ್ರೂಲ್ ಪಂಪ್ ಬಳಿ ತಲುಪುತಿದ್ದಂತೆ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತಿದ್ದ KA19-HH-8963 ನೇದರ ಬೈಕ್ ಚಾಲಕ ತನ್ನ ಬೈಕ್ ನ್ನು ಅತೀವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿ KA19-EW-0211 ನೇ ಸ್ಕೂಟರ್ ಗೆ ಡಿಕ್ಕಿ ಹಡೆದ ಪರಿಣಾಮ ಪಿರ್ಯಾದಿದಾರರ ಹೆಂಡತಿಯ ತಮ್ಮನಾದ ಅಜ್ವದ್ ಗೆ ಬಲಕಾಲಿನ ಮೊಣಗಂಟಿಗೆ ಗಾಯವಾಗಿದ್ದು ನಂತರ ಅಜ್ವದ್ ರನ್ನು ಐಲ್ಯಾಂಡ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ
Crime Reported in : Traffic North Police Station
ಪಿರ್ಯಾದಿ ಪ್ರಸನ್ನ ಪ್ರಭಾಕರ ಉದ್ಯಾವರ (44 ವರ್ಷ) ರವರು ದಿನಾಂಕ:05-02-2023 ರಂದು ದೇರೆಬೈಲು ಲ್ಯಾಂಡ್ ಲಿಂಕ್ಸ್ ನಲ್ಲಿರುವ ತನ್ನ ಪರಿಚಯದವರ ಮನೆಗೆ ಹೋಗಲು ಚೊಕ್ಕಬೆಟ್ಟುವಿನಿಂದ ಕೊಟ್ಟಾರಚೌಕಿವರೆಗೆ ಬಸ್ಸಿನಲ್ಲಿ ಬಂದು ಕೊಟ್ಟಾರ ಚೌಕಿಯಿಂದ KA-19-AD-9608 ನಂಬ್ರದ ಆಟೋರಿಕ್ಷಾದಲ್ಲಿ ಪ್ರಯಾಣಿಕನಾಗಿ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 08:30 ಘಂಟೆಗೆ ಕುಂಟಿಕಾನ- ಕಾವೂರು ರಸ್ತೆಯಲ್ಲಿ ಲ್ಯಾಂಡ್ ಲಿಂಕ್ಸ್ ಕಡೆಗೆ ಹೋಗುತ್ತಾ ಕೋಂಚಾಡಿ ಕೆನರಾ ಬ್ಯಾಂಕ್ ಹತ್ತಿರ ತಲುಪುತ್ತಿದ್ದಂತೆ KA-19-MH-9701 ನಂಬ್ರದ ಕಾರನ್ನು ಅದರ ಚಾಲಕ ಜಗದೀಶ ಎಂಬಾತನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದವನು ರಸ್ತೆಯಲ್ಲಿ ಬರುವ ವಾಹನವನ್ನು ಗಮನಿಸದೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾ ಮುಗುಚಿ ಬಿದ್ದು ಸ್ವಲ್ಪ ಮುಂದಕ್ಕೆ ಚಲಾಯಿಸಿದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಎಡಕೈ ಭುಜದ ಬಳಿ ಮೂಳೆ ಮುರಿತದ ಗಾಯ, ಎಡ ತೊಡೆಯ ಬಳಿ, ಎಡಕಾಲಿನ ಮಂಡಿಯ ಬಳಿ ತರಚಿದ ರೀತಿಯ ಗಾಯ ಹಾಗೂ ಎಡಕಾಲಿನ ಹಿಮ್ಮಡಿಯ ಗಂಟಿನ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.
Crime Reported in : Traffic South Police Station
ಪಿರ್ಯಾದಿ ಸೈದ (39 ವರ್ಷ ) ರವರು ದಿನಾಂಕ:03-02-2023 ರಂದು ಕೆಲಸಕ್ಕೆಂದು ಜಪ್ಪಿಗೆ ಬಂದಿದ್ದು ಅಲ್ಲಿ ಕೆಲಸ ಮುಗಿಸಿ ವಾಪಸ್ಸು ಮನೆಗೆ ಹೋಗಲು ಜಪ್ಪಿನಮೊಗೆರು ಮಹಾಕಾಳಿ ಪಡ್ಪು ಜಂಕ್ಷನ್ ಬಳಿ ಪಂಪ್ ವೆಲ್ ನಿಂದ ತೊಕ್ಕೊಟ್ಟು ಕಡೆಗೆ ಹೋಗುವ ರಾ.ಹೆ-66 ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ಸಂಜೆ 6-30 ಗಂಟೆಗೆ ಪಂಪ್ ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ:KA-19-HD-4097 ನೇದನ್ನು ಅದರ ಸವಾರ ಸರ್ಫರಾಜ್ ಎಂಬಾತನು ಓಮ್ಮೇಲೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಅವರ ಬಲಗಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಸೇರಿ ವಾಹನವೊಂದರಲ್ಲಿ ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದಲ್ಲಿ ಅಲ್ಲಿನ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಪಿರ್ಯಾದಿದಾರರಿಗೆ ಕಾನೂನಿನ ಅರಿವಿಲ್ಲದ ಕಾರಣ ಈ ದೂರನ್ನು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.
Crime Reported in : Traffic South Police Station
ದಿನಾಂಕ: 04-02-2023 ರಂದು ಪಿರ್ಯಾದಿ ಸೀಫಿಡೇಲ್ ಎ ಸಿ (71 ವರ್ಷ) ರವರು ಸ್ಟೆಲ್ಲಾ ಮಾರೀಸ್ ಕಾನ್ವೇಂಟ್ ಕೋಟೆಕಾರ್ ಕಡೆಗೆ ಬರಲು ಆಟೋರಿಕ್ಷಾ ನಂಬ್ರ:KA-19-AC-6834 ನೇದರಲ್ಲಿ ಪ್ರಯಾಣಿಕರಾಗಿ ಕುಳ್ಳಿತುಕೊಂಡು ಪ್ರಯಾಣಿಸುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 1-15 ಗಂಟೆಗೆ ಕುಂಪಲ ಬೈಪಾಸ್ ಬಳಿ ತಲುಪುತ್ತಿದ್ದಂತೆ ಆಟೋರಿಕ್ಷಾ ಚಾಲಕ ಪುರುಷೋತ್ತಮ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಆಟೋರಿಕ್ಷಾವನ್ನು ಚಲಾಯಿಸಿ ಓಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾವು ಬಲಗಡೆಗೆ ಮಗುಚಿ ಬಿದ್ದು ಪಿರ್ಯಾದಿದಾರರಿಗೆ ಎಡಬದಿಯ ಕಣ್ಣಿನ ಬದಿಗೆ ರಕ್ತಗಾಯ,ಎಡಕಾಲಿಗೆ ಗುದ್ದಿದ ಗಾಯ,ಮುಖಕ್ಕೆ ಕೈಗೆ ತರಚಿದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಹಾಗೂ ಆಟೋರಿಕ್ಷಾ ಚಾಲಕ ಸೇರಿ ಚಿಕಿತ್ಸೆ ಬಗ್ಗೆ ಬೆರೊಂದು ಆಟೋರಿಕ್ಷಾದಲ್ಲಿ ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪಿರ್ಯಾದಿದಾರರು ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ
Crime Reported in : Traffic South Police Station
ಪಿರ್ಯಾದಿ MOHANDASA SHETTY ಮತ್ತು ಅವರ ಹೆಂಡತಿಯೊಂದಿಗೆ ದಿನಾಂಕ 05-02-2023 ರಂದು ಅವರ ಬಾಬ್ತು ಕಾರಿನಲ್ಲಿ ಅಡ್ಯಾರದಿಂದ ವಾಮಂಜೂರು ಕಡೆಗೆ ಹೊಗುತ್ತಿರುವಾಗ ಪಿರ್ಯಾದಿದಾರರೂ ವಾಮಂಜೂರು ಜಂಕ್ಷನ ಬಳಿ ತಲುಪಿದಾಗ ಡಾಕಿಮೆಂಟ್ಸ ಒಂದನ್ನೂ ಜೆರಾಕ್ಸ ಮಾಡಿಸಲು ಕಾರನ್ನೂ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಜೆರಾಕ್ಸ ಅಂಗಡಿಗೆಹೋಗಲು ರಸ್ತೆ ಬದಿಯಲ್ಲಿ ನಿಂತಿರುವಾಗ ಮಧ್ಯಾಹ್ನ ಸಮಯ ಸುಮಾರು 02.00 ಗಂಟೆಗೆ ಮಂಗಳೂರು ಕಡಯಿಂದ ಗುರುಪುರ ಕಡೆಗೆ ಮುಖ್ಯರಸ್ತೆಯಲ್ಲಿ ಆಟೋರಿಕ್ಷಾ ನಂಬ್ರ KA19AD3315 ನೇದರ ಚಾಲಕನೂ ದುಡುಕತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಂಬರು ರಸ್ತೆಗೆ ಬಿದ್ದು ಬಲಗೈ ಬುಜಕ್ಕೆ ಗುದ್ದಿದ ಗಾಯ ,ಬಲಕೈ ತಟ್ಟಿಗೆ ರಕ್ತಗಾಯ ಬಲಗಾಲಿನ ಮೊಣ ಗಂಟಿಗೆ ರಕ್ತ ಗಾಯ ಹಾಗೂ ಕಣ್ಣಿನ ಬಲ ಬದಿಯ ಹುಬ್ಬಿನ ಹತ್ತಿರ ರಕ್ತ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರೂ ಮತ್ತು ಪಿರ್ಯಾದಿದಾರ ಹೆಂಡತಿ ಉಪಚರಿಸಿ ಡಿಕ್ಕಿ ಪಡಿಸಿದ ಆಟೋರಿಕ್ಷಾದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೋರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಅಪಘಾತಕ್ಕೆ ಆಟೋರಿಕ್ಷಾ ನಂಬರ KA19AD3315 ನೇದರ ಚಾಲಕ ಸುನೀಲನ ದುಡುಕತನ ಮತ್ತು ನಿರ್ಲಕ್ಷತನವೇ ಕಾರಣ ಎಂಬಿತ್ಯಾದಿ
Crime Reported in : Moodabidre PS
ದಿನಾಂಕ 03-02-2023 ರಂದು ಮದ್ಯಾಹ್ನ 12.10 ಗಂಟೆಗೆ ಪಿರ್ಯಾದಿ Praveen Jain ತನ್ನ ಬಾಬ್ತು KA-19-HL-1485 ನಂಬರಿನ ಮೋಟಾರು ಸೈಕಲ್ ನಲ್ಲಿ ನಾಗರಕಟ್ಟೆ ರಸ್ತೆಯ ಹಳೆ ಮಾರ್ಕೆಟ್ ಬಳಿ ಹೋಗುತ್ತಿರುವಾಗ ಪಿರ್ಯಾದುದಾರರ ಎದುರಿನಿಂದ ಹೋಗುತ್ತಿದ್ದ KA-19-MH-5938 ನಂಬರಿನ ಕಾರನ್ನು ಅದರ ಚಾಲಕನಾದ ಪ್ರವೀಣ್ ಕ್ರಾಸ್ತಾ ಎಂಬವರು ಯಾವುದೇ ಸೂಚನೆಯನ್ನು ನೀಡದೇ ತನ್ನ ನಿರ್ಲಕ್ಷತನದಿಂದ ಒಮ್ಮಲೇ ರಸ್ತೆಯ ಬದಿ ನಿಲ್ಲಿಸಿದ್ದು, ಪಿರ್ಯಾದುದಾರರು ಕಾರಿನ ಸಮೀಪ ಹೋಗುತ್ತಿದ್ದಂತೆ ಕಾರಿನ ಎದುರಿನ ಡೋರನ್ನು ತೆಗೆದಿದ್ದರಿಂದ ಮೋಟಾರು ಸೈಕಲ್ ಕಾರಿನ ಡೋರಿಗೆ ಡಿಕ್ಕಿಯಾಗಿ ಪಿರ್ಯಾದುದಾರರು ಮೋಟಾರು ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ ಎಡಕಾಲಿನ ಕೋಲು ಕಾಲಿಗೆ, ಬಲಭುಜಕ್ಕೆ ರಕ್ತ ಗಾಯವಾಗಿದ್ದು, ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.
Crime Reported in : Surathkal PS
ಪಿರ್ಯಾದಿ Smt Laxmi Avinash Devadiga ಮತ್ತು ಅವರ ನೆರೆಮನೆಯ ಸಂಭಂಧಿ ಶ್ರೀಮತಿ ದೀನಾವತಿ – ಉಮೇಶ್ ರವರಿಗೆ ತಮ್ಮ ಭೂ ಆಸ್ತಿಗೆ ಸಂಬಂದಿಸಿದ ವಿಚಾರವಾಗಿ ತಕರಾರು ಇರುತ್ತದೆ. ಇದೇ ವಿಚಾರವಾಗಿ 05-02-2023 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರು ತಮ್ಮ ಮನೆಯವರೊಂದಿಗೆ ಮನೆಯ ಹಿಂಬಾಗದಲ್ಲಿ ಇದ್ದಾಗ, ಅಲ್ಲಿಗೆ ಬಂದ ನೆರೆಮನೆಯ ಸಂಭಂದಿ ಯತೀಶ್ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ನಡೆಸಿ, ಮಾನ ಹಾನಿ ಮಾಡಿ,ಬೆದರಿಸಿರುತ್ತಾರೆ. ಎಂಬಿತ್ಯಾದಿ
Crime Reported in : Mangalore South PS
ಪಿರ್ಯಾದಿ ಮನೋಹರ ಪ್ರಸಾದ್ ಪಿ. ಪೊಲೀಸ್ ಉಪ ನಿರೀಕ್ಷಕರು (ಕಾ ಮತ್ತು ಸು-2), ದಕ್ಷಿಣ ಪೊಲೀಸ್ ಠಾಣೆ, ಮಂಗಳೂರು ನಗರರವರು ದಿನಾಂಕ 05-02-2023 ರಂದು ರೌಂಡ್ಸ್ ಕರ್ತವ್ಯದಲ್ಲಿ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ 18-00 ಗಂಟೆ ಸಮಯಕ್ಕೆ ಇದ್ದಾಗ ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಮುತ್ತಪ್ಪ ಗುಡಿಯ ಜಂಕ್ಷನ್ ಬಳಿ ಫಾರೂಕ್ ಎಂಬಾತನು ಸುಮಾರು 1 ಕೆ.ಜಿ. ಗಿಂತಲೂ ಅಧಿಕ ಪ್ರಮಾಣದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ತನ್ನ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿರುವುದರಿಂದ ಗಾಂಜಾ ಮಾರಾಟ ಮಾಡುತ್ತಿರುವ ಫಾರೂಕ್ ಎಂಬಾತನ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿಯಾಗಿರುತ್ತದೆ