ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Barke PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೆನೆಂದರೆ ದಿನಾಂಕ: 06-02-2024 ರಂದು  ಬೆಳಿಗ್ಗೆ ಬರ್ಕೆ ಠಾಣಾ ವ್ಯಾಪ್ತಿಯ ಬೋಳೂರು ಗ್ರಾಮದ ಹಿಂದೂಸ್ಥಾನ್ ಯೂನಿಲಿವರ್ ಕಂಪೆನಿ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯತೀಶ್ ಎಂಬಾತನು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿಕೊಂಡು ಮಟ್ಕಾ ಚೀಟಿಯನ್ನು ಬರೆಯುತ್ತಿದ್ದವರನ್ನು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣಾ ಅ.ಕ್ರ. 09/2024 ಕಲಂ:78 ಕೆ.ಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ

 

Barke PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 06-02-2024 ರಂದು ನಾಗೇಶ್ ಹಸ್ಲರ್ ಬರ್ಕೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ   ಇವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ದಲ್ಲಿರುವ ಸಮಯ ಮಂಗಳೂರು ನಗರದ ಕರಾವಳಿ ಮೈದಾನದ ಬಳಿ ತಲುಪಿದಾಗ,  ಅವಿನಾಶ್ ಬಾರೀಖ್ ಪ್ರಾಯ 20 ವರ್ಷ ತಂದೆ: ಕೃಷ್ಣಾ ಖರೀಬ್ ವಾಸ: ಟುಬುದಾಣಾ, ರಾಂಚಿ ಜಾರ್ಖಂಡ್ ಹಾಲಿ ವಿಳಾಸ: ಸಿಟಿ ಅರೇನಾ, ಕೋಡಿಯಾಲ್ ಗುತ್ತು ಮಂಗಳೂರು ಎಂಬ ಯುವಕನೊಬ್ಬನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು  ಇವರನ್ನು ಮುಂದಿನ ಕ್ರಮದ ಬಗ್ಗೆ  ವೈದ್ಯಕೀಯ ತಪಾಸಣೆ ಬಗ್ಗೆ ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಲಾಗಿದ್ದು ಸದ್ರಿ ಮಂಗಳೂರು ನಗರದ ಕುಂಟಿಕಾನದ ಎ.ಜೆ.ಆಸ್ಪತ್ರೆಯ ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು “Tetrahydracannabinoid (Marijuana) POSITIVE” ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಬರ್ಕೆ ಪೊಲೀಸ್ ಠಾಣಾ ಅ.ಕ್ರ 10/2024 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

Barke PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 06-02-2024 ರಂದು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಉಲ್ಲಾಸ್.ಎಮ್ ಇವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯ ದಲ್ಲಿರು ಸಮಯ , ಮಂಗಳೂರು ನಗರದ ಸುಲ್ತಾನ್ ಭತ್ತೇರಿ ಬಳಿ ಬಳಿ ತಲುಪಿದಾಗ ರಾಜ್ ಖಿಲ್ಕೋ ಪ್ರಾಯ 19 ವರ್ಷ ತಂದೆ: ತುಮ ಖಿಲ್ಕೋ @ ಸಿಯಾಮ್ ಖಿಲ್ಕೋ ವಾಸ: ಜಯಪ್ರಕಾಶನಗರ, ಪಹಂತೋಲಾ, ರಾಂಚಿ ಜಾರ್ಖಂಡ್ ಹಾಲಿ ವಿಳಾಸ: ಸಿಟಿ ಅರೇನಾ, ಕೋಡಿಯಾಲ್ ಗುತ್ತು ಮಂಗಳೂರು ಎಂಬ ಯುವಕನೊಬ್ಬನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು, ಇವರನ್ನು ಮುಂದಿನ ಕ್ರಮದ ಬಗ್ಗೆ  ವೈದ್ಯಕೀಯ ತಪಾಸಣೆ ಬಗ್ಗೆ ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಲಾಗಿದ್ದು ಸದ್ರಿ ಮಂಗಳೂರು ನಗರದ ಕುಂಟಿಕಾನದ ಎ.ಜೆ.ಆಸ್ಪತ್ರೆಯ ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು “Tetrahydracannabinoid (Marijuana) POSITIVE” ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಬರ್ಕೆ ಪೊಲೀಸ್ ಠಾಣಾ ಅ.ಕ್ರ 11/2024 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ.

 

Barke PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 06-02-2024 ರಂದು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕಿ ರೇಖಾ.ಆರ್ ಇವರು, ಠಾಣಾ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಶ್ರೀದೇವಿ ಕಾಲೇಜ್ ಬಳಿ ತಲುಪಿದಾಗ ಜೈಸ್ ತಿರ್ಕಿ ಪ್ರಾಯ 19 ವರ್ಷ ತಂದೆ: ಬಿರ್ಸಾ ತಿರ್ಕಿ ವಾಸ:ಸಫಾರಮ್, ರಾಂಚಿ, ಜಾರ್ಖಂಡ್ ಹಾಲಿ ವಿಳಾಸ: ಸಿಟಿ ಅರೇನಾ, ಕೋಡಿಯಾಲ್ ಗುತ್ತು ಮಂಗಳೂರು ಎಂಬ ಯುವಕನೊಬ್ಬನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು, ಇವರನ್ನು ಮುಂದಿನ ಕ್ರಮದ ಬಗ್ಗೆ  ವೈದ್ಯಕೀಯ ತಪಾಸಣೆ ಬಗ್ಗೆ ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಲಾಗಿದ್ದು ಸದ್ರಿ ಮಂಗಳೂರು ನಗರದ ಕುಂಟಿಕಾನದ ಎ.ಜೆ.ಆಸ್ಪತ್ರೆಯ ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು ತಪಾಸಣೆಯನ್ನು ಮಾಡಿ ವೈದ್ಯರು “Tetrahydracannabinoid (Marijuana) POSITIVE” ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಬರ್ಕೆ ಪೊಲೀಸ್ ಠಾಣಾ ಅ.ಕ್ರ 12/2024 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ.

 

Crime PS Mangaluru City                   

ಈ  ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರಾದ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ.ಶರಣಪ್ಪ ಭಂಡಾರಿ  ರವರಿಗೆ ದೊರತ ಮಾಹಿತಿ ಯಂತೆ, ಉಳ್ಳಾಲ ತಾಲೂಕಿನ ತಲಪಾಡಿ, ಕೆ.ಸಿರೋಡ್ ನ  ಪಿಲಿಕೂರು ಎಂಬಲ್ಲಿನ ಅಲಂಕಾರುಗುಡ್ಡೆ ಎಂಬಲ್ಲಿ ಸಿಲ್ವರ್ ಬಣ್ಣದ  ಮಹೇಂದ್ರ ಬೊಲೆರೋ ವಾಹನ ನಂಬರ್: MH 04 EX 6576 ನೇದರಲ್ಲಿ  ಇಬ್ಬರು ಯುವಕರು ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾದ ಕಟ್ಟುಗಳನ್ನು  ಇಟ್ಟುಕೊಂಡು ಮಂಗಳೂರು ಮತ್ತು ಕೇರಳ ರಾಜ್ಯಕ್ಕೆ ಕೊಂಡು ಹೋಗಿ ಮಾರಾಟ ಮಾಡಲು ನಿಂತಿರುವುರುವುದಾಗಿದ್ದು, ಈ ಬಗ್ಗೆ ಮೇಲಾಧಿಕಾರಿಯವರ ಋ ಅಧಿಕಾರ ಪತ್ರ ವನ್ನು ಪಡೆದುಕೊಂಡು ಸಿಬ್ಬಂದಿ ಯವರೊಂದಿಗೆ ದಾಳಿ ಮಾಡಿದಾಗ   MH 04 EX 6576 ಬೊಲೆರೋ ವಾಹನದಲ್ಲಿರುವ  ಇಬ್ಬರನ್ನು ಸಿಬ್ಬಂದಿಯವರು  ಇವರನ್ನು ವಿಚಾರಿಸಿದಾಗ

 ಅನೂಪ್ ಎಂ.ಎಸ್. ಪ್ರಾಯ 28 ವರ್ಷ ತಂದೆ: ಶಾಜು ಎಂ.ಎಲ್, ವಾಸ: ಮೂಲಪಳಪ್ಪಿಲ್ ಹೌಸ್, ವೆಲ್ಲಾರ್ ಮಲ ಅಂಚೆ, ಚೂರಮಲ  ಗ್ರಾಮ, ವೈತಿರಿ ತಾಲೂಕು, ವಯನಾಡು ಜಿಲ್ಲೆ, ಕೇರಳ ರಾಜ್ಯ

 ಲತೀಪ್ ಕೆ.ವಿ, ಪ್ರಾಯ 36 ವರ್ಷ, ತಂದೆ: ಅಜೀಜ್.ಕೆ.ಕೆ, ವಾಸ: ಕಿನಾಕುಲ್ ವಳಿಪಾತ್ ಹೌಸ್, ಪಡೆಯಂಗೋಡು, ಪಡಿಯೂರು ಗ್ರಾಮ, ಇರಿಕೂರು ಅಂಚೆ, ಇರಿಟ್ಟಿ ತಾಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ  ಎಂದು ತಿಳಿಸಿರುತ್ತಾರೆ.

ಮತ್ತು ಇವರು ಮಾಧಕ ವಸ್ತುವಾದ ಗಾಂಜಾವನ್ನು  ಒರಿಸ್ಸಾದಿಂದ ಮಂಗಳೂರು ನಗರ  ಮತ್ತು ಕೇರಳ ರಾಜ್ಯದಲ್ಲಿ ಮಾರಾಟ ಮಾಡಲು ಬಂದು ನಿಂತು ಗಿರಾಕಿಗಳಿಗೆ ಕಾಯುತ್ತಿರುವುದಾಗಿ ತಿಳಿಸಿದ್ದು ನಂತರ ಅವರಿಂದ ಅಂದಾಜು ಒಟ್ಟು 28,00,000/-ರೂಪಾಯಿ ಮೌಲ್ಯದ ಒಟ್ಟು 120.110 ಕೆ.ಜಿ ತೂಕದ ಗಾಂಜಾವನ್ನು ಮತ್ತು ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ  ಬೊಲೆರೋ ವಾಹನ, ನಗದು 4,020/-ರೂಪಾಯಿ ವಶಪಡಿಸಿಕೊಂಡಿದ್ದು, ಈ ಬಗ್ಗೆ  ಮಂಗಳೂರು ಸೆನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಅಪರಾಧ ಪೊಲೀಸ್  ಠಾಣಾ ಅ.ಕ್ರ. 17/2024 ಕಲಂ: ಕಲಂ: 8(C), 20(b) (ii) (C) NDPS Act 1985, ಮತ್ತು ಕಲಂ: 34 ಭಾದಂಸಂ ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

 

Mangalore East Traffic PS         

ಪಿರ್ಯಾದಿದಾರರಾದ ಚಂದ್ರಶೇಖರ್  ಇವರು ದಿನಾಂಕ 02-02-2024 ರಂದು ತನ್ನ ಬಾಬ್ತು ನೊಂದಣಿ ಸಂಖ್ಯೆ: KA-19-HN-9880 ನಂಬ್ರದ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಲ್ಮಠ ಕಡೆಯಿಂದ ಅಂಬೇಡ್ಕರ್ ಜಂಕ್ಷನ್ ಕಡೆಗೆ ಬಂದು ಅಲ್ಲಿಂದ ಫಳ್ನೀರ್ ಕಡೆಗೆ ಇರುವ ರಸ್ತೆಗೆ ಹೋಗಲೆಂದು ಬೈಕನ್ನು ಎಡಕ್ಕೆ ತಿರುಗಿಸಿ ಸ್ವಲ್ಪ ದೂರ ಮುಂದೆ ತಲುಪುತ್ತಿದ್ದಂತೆ ಮಧ್ಯಾಹ್ನ ಸಮಯ ಬಲ್ಮಠ ಕಡೆಯಿಂದ ಬರುತ್ತಿದ್ದ ನೊಂದಣಿ ಸಂಖ್ಯೆ: KL-14-Y-7707 ನಂಬ್ರದ ಕಾರನ್ನು ಅದರ ಚಾಲಕ ಫಾಹೀಂ ಎಂಬಾತನು ಫಳ್ನೀರ್ ಕಡೆಗೆ ಹೋಗಲೆಂದು ಒಮ್ಮೆಲೆ ಏಕಾಏಕಿಯಾಗಿ ದುಡುಕುತನದಿಂದ ಓವರ್ ಟೇಕ್ ಮಾಡುವ ಗಡಿಬಿಡಿಯಲ್ಲಿ ಪಿರ್ಯಾದಿದಾರರು ಚಲಾಯಿಸಿಕೊಂಡಿದ್ದ ಮೋಟಾರ್ ಸೈಕಲಿಗೆ ಢಿಕ್ಕಿಪಡಿಸಿದ್ದು, ಈ ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಕಾರು ಚಾಲಕ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಎಡ ಕೋಲು ಕಾಲಿನಲ್ಲಿ ಮೂಳೆ ಮೂರಿತದ ಗಾಯವಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಎಂಬಿತ್ಯಾದಿ

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ Amith ಇವರು  ದಿನಾಂಕ: 06-02-2024 ರಂದು ತಾನು ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ  KA-20-D-9847 ನೇ ಬಸ್ ನಲ್ಲಿ ಸುಮಾರು 16.51 ಗಂಟೆಗೆ  ತೊಕ್ಕೊಟ್ಟಿನಿಂದ ಕಿನ್ಯಾ ಕಡೆಗೆ ಹೋಗುವ ಪ್ರಯಾಣಿಕರನ್ನು ಹತ್ತಿಸಿ ಹೊರಟು ಚಾಲಕ ಇಸಾಕ್ ನು ಬಸ್ಸನ್ನು ಚಲಾಯಿಸುತ್ತಾ ಕುತ್ತಾರನಿಂದಾಗಿ ಮುಂದೆ ದೇರಳಕಟ್ಟೆ ಹೋಗುತ್ತಾ ದೇರಳಕಟ್ಟೆ ಪೆಟ್ರೋಲ್ ಪಂಪ ಬಳಿ ತಲುಪುತ್ತಿದ್ದಂತೆ ಸುಮಾರು 17.15 ಗಂಟೆಗೆ ಎದುರಿನಿಂದ ಕಣಚೂರು ಕಡೆಯಿಂದ ಕುತ್ತಾರ್ ಕಡೆಗೆ KA-19-HM-6462 ನೇ ಮೋಟಾರ್ ಸೈಕಲ್ ಸವಾರ ತಂಝಿಲ್ ನು ಸಹ ಸವಾರ ರಮೀಝ್ ನನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅದರ ಮುಂದುಗಡೆ ಇದ್ದ ಕಾರೊಂದನ್ನು ಓವರ ಟೇಕ್ ಮಾಡಿ ಬಂದು ಪಿರ್ಯಾದಿದಾರರ ಬಸ್ ನ್ನು ಒಮ್ಮೇಲೆ ನೋಡಿ ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ಸ್ಕಿಡ್ ಆಗಿ ಅದರ ಸವಾರ ಹಾಗೂ ಸಹ ಸವಾರನು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದನ್ನು ನೋಡಿ  ಬಸ್ ಚಾಲಕನು ಒಮ್ಮೇಲೆ ಬ್ರೇಕ್ ಹಾಕಿ ಬಸ್ಸ್ ನ್ನು ನಿಧಾನಿಸಿದರೂ ಮೋಟಾರು ಸೈಕಲ್ ಬಂದು ಬಸ್ ನ ಮುಂದಿನ ಬಲಭಾಗದ ಕಾರ್ನರ್ ಗೆ ತಾಗಿ ನಿಂತಿರುತ್ತದೆ. ಕೊಡಲೇ ಪಿರ್ಯಾದಿದಾರರು, ಬಸ್ ನ ಚಾಲಕ ಹಾಗೂ ಪ್ರಯಾಣಿಕರು ರಸ್ತೆಗೆ ಬಿದ್ದಿರುವ ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರನನ್ನು ಉಪಚರಿಸಿ ನೋಡಲಾಗಿ ಮೋಟಾರು ಸೈಕಲ್ ನ ಸವಾರನ ತಲೆಯ ಬಲಬದಿ ಹಾಗೂ ಬಲ ಕಿವಿಯ ಬಳಿ, ಎಡಕೈ ಹೆಬ್ಬೆಟ್ಟಿನ ಬಳಿ ರಕ್ತಗಾಯವಾಗಿರುತ್ತದೆ . ಹಾಗೂ ಬಲ ಮೊಣಕಾಲಿಗೆ ಬಲಗೈ ಗಂಟಿಗೆ , ತರಚಿದ ಗಾಯ ಮತ್ತು ಕುತ್ತಿಗೆಯ ಹಿಂಭಾಗ ಗುದ್ದಿದ ಗಾಯವಾಗಿರುತ್ತದೆ. ಮೋಟಾರು ಸೈಕಲ್ ಸಹ ಸವಾರನಿಗೆ ಬಲಗೈ ಮುಂಗೈಗೆ, ಮೊಣಗಂಟಿಗೆ, ಬಲಗಾಲಿನ ಗಂಟಿಗೆ ಹಾಗೂ ಕೋಲು ಕಾಲಿಗೆ ತರಚಿದ ಗಾಯವಾಗಿರುತ್ತದೆ.  ಅಲ್ಲಿ ಸೇರಿದ್ದ ಜನರು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಗಾಯಾಳುಗಳನ್ನು ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 07-02-2024 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080