ಅಭಿಪ್ರಾಯ / ಸಲಹೆಗಳು

Mulki PS

ದಿನಾಂಕ: 05-03-2023ರಂದು ರಾತ್ರಿ ಸುಮಾರು 8-20 ಗಂಟೆಯ ಸಮಯಕ್ಕೆ ಚಿತ್ರಾಪು ಗ್ರಾಮದ ಘಜನಿ ಶೇಂದಿ ಅಂಗಡಿಯ ಬಳಿಯಲ್ಲಿ ಚಿತ್ರಾಪುವಿನ ಸುಶಾಂತ್ ಮತ್ತು ಚಿತ್ರಾಪು ಶೇಂದಿ ಅಂಗಡಿಯ ಸಚಿನ್ ಯಾನೆ ಜೀವನ್ ಸುವರ್ಣನಿಗೆ ಗಲಾಟೆಯಾಗುತ್ತಾ ಸುಶಾಂತ್ ನು ಸಚಿನ್ ಯಾನೆ ಜೀವನ್ ಸುವರ್ಣನಲ್ಲಿ ನೀನು ನನಗೆ ಯಾಕೆ ಸಿಗರೇಟು ಕೊಡಲಿಲ್ಲ ಎಂದು ಹೇಳಿದಾಗ, ಸುಶಾಂತ್ ಮತ್ತು ಸಚಿನ್ ಯಾನೆ ಜೀವನ್ ಸುವರ್ಣರವರು ಮಾತಿಗೆ ಮಾತು ಬೆಳೆಸಿಕೊಂಡು,  ಸಚಿನ್ ಯಾನೆ ಜೀವನ್ ಸುವರ್ಣನು ಸುಶಾಂತ್ ನ ಹತ್ತಿರ ಬಂದು ನೀನು ಭಾರಿ ಮಾತನಾಡುತ್ತಿಯಲ್ಲ, ಬೇವಾರ್ಸಿ ಎಂದು ಏರು ಧನಿಯಲ್ಲಿ ಬೈಯುತ್ತಾ, ತಡೆದು, ನಿನ್ನನ್ನು ಈಗಲೇ ಮುಗಿಸಿಬಿಡುತ್ತೇನೆ ಎಂದು ಕೈಯಲ್ಲಿದ್ದ ಯಾವುದೋ ಒಂದು ಹರಿತವಾದ ಚಾಕುವಿನಂತೆ ತೋರುವ ಸಾಧನದಿಂದ ಸುಶಾಂತ್ ನ ಎದೆಯ ಬಳಿ ತಿವಿದು ಮಾರಣಾಂತಿಕ ಗಾಯಗೊಳಿಸಿದ್ದು, ರಕ್ತ ಗಾಯಗೊಂಡ ಸುಶಾಂತ್ ನನ್ನು ಪಿರ್ಯಾದಿ Preetham Kundar ಮತ್ತು ನಿತೇಶ್ ರವರು ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Mangalore East PS

 ಪಿರ್ಯಾದಿ RENJALA DHARMENDRA PRABHU  ದಾರರ ದ್ವಿತೀಯ ಪುತ್ರನಾದ  ರಂಜಾಳ ಆಶಿಶ್ ಪ್ರಭು (24) ಎಂಬಾತನು ಇಂಜಿನಿಯರಿಂಗ್ ಪದವಿದರನಾಗಿದ್ದು. ಪ್ರಸ್ತುತ ಕೆಲಸದ ಹುಡುಕಾಟದಲ್ಲಿದ್ದು. ಕೆಲಸ ಸಿಗದೇ ಇರುವ ಬಗ್ಗೆ ಖಿನ್ನತೆಯಿಂದ ಬಳಲುತ್ತಿದ್ದು ನಿನ್ನೆ ದಿನ ದಿನಾಂಕ:05/03/2023 ರಂದು  ಕೆಲಸವನ್ನು ಹುಡುಕುವಂತೆ ಪಿರ್ಯಾದಿದಾರರು ತನ್ನ ಮಗನಿಗೆ ತಿಳಿಸಿದಾಗ ಆತನು ಮನೆಯನ್ನು ಬಿಟ್ಟು ಹೋಗುವುದಾಗಿ ತಿಳಿಸಿ ತನ್ನ ಮೊಬೈಲ್ ಪೋನನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಹೋದವನು  ರಾತ್ರಿ 8-00 ಗಂಟೆಯವರೆಗೆ ವಾಪಸ್ಸು ಬಾರದೇ ಇದ್ದು  ಪಿರ್ಯಾದಿದಾರರು ಕೂಡಲೇ ಸುತ್ತ ಮುತ್ತಲಿನ ಪರಿಸರದಲ್ಲಿ ಹುಡುಕಾಡಿ ಹಾಗೂ  ಸಂಬಂಧಿಕರ ಮನೆಗೆ ಮೊಬೈಲ್ ಕರೆ ಮಾಡಿ ವಿಚಾರಿಸಲಾಗಿ. ಆತನು ಪತ್ತೆಯಾಗದೇ ಇದ್ದು  ಕಾಣೆಯಾದ ಪಿರ್ಯಾದಿದಾರರ ಮಗ  ರಂಜಾಳ ಆಶಿಶ್ ಪ್ರಭು  ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ:

ಹೆಸರು           : ರಂಜಾಳ ಆಶಿಶ್ ಪ್ರಭು ಪ್ರಾಯ 24 ವರ್ಷ .

ಮೈಕಟ್ಟು         : ಸಾಧಾರಣ ಶರೀರ, ಎಣ್ಣೆಗಪ್ಪು ಮೈಬಣ್ಣ, ದುಂಡು ಮುಖ,

ಎತ್ತರ            : 5’9”,

ಭಾಷೆ            : ಕನ್ನಡ,ಇಂಗ್ಲೀಷ್,ಹಿಂದಿ,ಕೊಂಕಣಿ ಭಾಷೆ ಬಲ್ಲವರಾಗಿದ್ದಾರೆ.

Panambur PS   

ಪಿರ್ಯಾದಿ AYISHA ಅವರ  ಊರಿನ  ಸ್ಥಳೀಯ  ಕೆಲವರ  ಮೇಲೆ  ಪಣಂಬೂರು  ಪೊಲೀಸ್ ಠಾಣೆಗೆ   ದೂರು ನೀಡಿದ್ದರಿಂದ  ಕೋಪಗೊಂಡಿದ್ದ  ಆರೋಪಿಗಳು  ದಿನಾಂಕ:05-03-2023 ರಂದು  ರಾತ್ರಿ 9.30 ಗಂಟೆಗೆ  ಪಿರ್ಯಾದಿದಾರರ ಮನೆಯಾದ ಕಸಬ ಬೇಂಗ್ರೆಯ ಎಂ.ಜೆ.ಎಂ. ನಂಬ್ರ 913 ನೇ ಮನೆಯ ಅಂಗಳಕ್ಕೆ ಸಮಾನ ಉದ್ದೇಶದಿಂದ  ಗುಂಪುಗೂಡಿ ಅಕ್ರಮ  ಪ್ರವೇಶ  ಮಾಡಿ ಅವರ ಪೈಕಿ ಸಫಿಯಾ, ಝುಬೇದಾ, ಬೀಫಾತುಮ ರವರು ಪಿರ್ಯಾದಿದಾರರನ್ನು  “ಬೇವರ್ಸಿ  ಸೂಳೆ ನಿಕ್ಕ್ ಆಣಿಂಗರೋ ಮೇಲ್ ಕಂಪ್ಲೈಂಟ್ ಕೊಡು ಕೊರತ್ತರೆ ಆಹಂಕಾರ ಆಯಿಡಲ್ಲೇ ಕೀಲ್ ಬಾ” ಎಂಬಿತ್ಯಾದಿ ಬ್ಯಾರಿ ಭಾಷೆಯಲ್ಲಿ  ಅವಾಚ್ಯವಾಗಿ ಬೈದಿದ್ದು, ‘ಏನು ವಿಷಯ ಮಾತಾಡುತ್ತಿದ್ದೀರಿ, ನೀವೆಲ್ಲಾ ಇಲ್ಲಿಗೆ ಯಾಕೆ ಬಂದಿದ್ದೀರಿ’  ಎಂದು ಪಿರ್ಯಾದಿದಾರರು ಕೇಳುತ್ತಿದ್ದಂತೆಯೇ, ಅಶ್ರಫ್ ಎಂಬವರು   ಪಿರ್ಯಾದಿದಾರರ   ಭುಜಕ್ಕೆ  ಕೈ ಹಾಕಿ, ಎದೆಯ  ಮೇಲಿದ್ದ  ಶಾಲನ್ನು  ಎಳೆದು, ಅಂಗಳಕ್ಕೆ ಎಳೆದು  ಬೀಳಿಸಿದ್ದು, ಆಗ ಮೊಹಮ್ಮದ್  ಎಂಬವನು  ಕೆನ್ನೆಗೆ   ಹೊಡೆದು “ಬೇವರ್ಸಿ  ರಂಡೆ, ಇನ್ನೊಮ್ಮೆ  ಠಾಣೆಗೆ  ಹೋದರೆ  ನಿನ್ನನ್ನು  ಕೊಲ್ಲದೇ   ಬಿಡುವುದಿಲ್ಲ” ಎಂದು  ಜೀವ ಬೆದರಿಕೆಯೊಡ್ಡಿದ್ದು, ಈ ವೇಳೆ ಪಿರ್ಯಾದಿದಾರರ ಮಕ್ಕಳು, ತಂಗಿ, ಅತ್ತೆಯವರು ಬಂದು ಅವರನ್ನು ದೂರ ಮಾಡಿದ್ದು, ಇತರ ಜನ ಸೇರುವುದನ್ನು ನೋಡಿ ‘ನಿನ್ನನ್ನು ನೋಡಿಕೊಳ್ಳುವುದಾಗಿ ಹೇಳಿ ಸ್ಥಳದಿಂದ ತೆರಳಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಂಬಿತ್ಯಾದಿಯಾಗಿರುತ್ತದೆ.

Kavoor PS

ದಿನಾಂಕ 05/03/2023 ರಂದು ರಾತ್ರಿ 9.28 ಗಂಟೆಗೆ ಕೂಳೂರಿನ ಗಡಿಯಾರ ಹೋಟೇಲ್ ನ ಹೊರಗಡೆ ಪಿರ್ಯಾದಿ BABITHA G SHETTY ಗಂಡ ಗಣೇಶ್ ಶೆಟ್ಟಿ ರವರು ಪೋನ್ ನಲ್ಲಿ ಮಾತನಾಡುವ ಸಮಯ ಪರಿಚಯದ ಸುದೀರ್ ಎಂಬವನು ಎಕಾ ಎಕಿ ಯಾಗಿ ಬಂದು ಗಂಡನನ್ನು ಉದ್ದೇಶಿಸಿ “ ಬೇವರ್ಸಿ ರಂಡೆ ಮಗ” ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೂಡಿರುತ್ತಾರೆ, ನಂತರ 7-8 ಜನ ಸೇರಿ ಪಿರ್ಯಾದಿದಾರರ ಗಂಡನನ್ನು ಎಳೆದುಕೊಂಡು ಹೋಗುವ ಸಮಯ ಬಿಡಿಸಲು ಪ್ರಯತ್ನಿಸಿದ ಪಿರ್ಯಾದಿದಾರರು ಮತ್ತು ಕೆಲಸದ ವ್ಯಕ್ತಿ ಚಂದ್ರಹಾಸ ರವರ ಮೇಲೆಯು ಕೂಡಾ ಹಲ್ಲೆ ನಡೆಸಿ, ಪಿರ್ಯಾದಿದಾರ ಮೈ ಮೇಲೆ ಕೈ ಹಾಕಿ ದೂಡಿರುತ್ತಾರೆ ಹಾಗೂ ಪಿರ್ಯಾದಿದಾರ ಗಂಡನಿಗೆ ಸುಧೀರ್ ಎಂಬಾತನು ಚೂರಿ ತೋರಿಸಿ ಜೀವ ಬೆದರಿಕೆ ಹಾಕಿರುತ್ತಾರೆ, ಎಂಬಿತ್ಯಾದಿ.

Bajpe PS

ಪಿರ್ಯಾದಿ Kiran ಮತ್ತು ಅವರ ಸ್ನೇಹಿತರಾದ ರಾಜನ್,ಸಂಜಯ್ ಮತ್ತು ಸುಹಾನ್ ರವರು  ಮಂಗಳೂರು ತಾಲೂಕು ಮರವೂರು ಗ್ರಾಮದಲ್ಲಿರುವ ಕೊಸ್ಟಲ್ ಗಾರ್ಡ್ ಸೈಟ್ ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು ಈ ಸೈಟ್ ನ ಶೆಡ್ ಗಳಲ್ಲಿಯೇ ವಾಸಮಾಡಿಕೊಂಡಿರುತ್ತಾರೆ   ದಿನಾಂಕ 05.03.2023 ರಂದು ರಾತ್ರಿ 8.30 ಗಂಟೆಗೆ ಊಟದ ತಟ್ಟೆ ತೊಳೆಯುವ ವಿಚಾರದಲ್ಲಿ ಪಿರ್ಯಾದಿದಾರರ ಸ್ನೇಹಿತರಾದ  ಸಂಜಯ್ ಮತ್ತು ಸುಹಾನ್ ಯಾದವ್ ಗಲಾಟೆ ಪ್ರಾರಂಬಿಸಿದ್ದು ನಂತರ ಸುಹಾನ್ ನು  ಸಂಜಯ್ ನನ್ನು ಉದ್ದೇಶಿಸಿ ನಾನು ನಿನ್ನ ಮನೆಯ ಕೆಲಸದವನಲ್ಲ ,ಬೋಳಿ ಮಗನೆ ನನಗೆ ತಟ್ಟೆ ತೊಳೆಯಲು ಹೇಳುತ್ತಿಯಾ   ಎಂದು ಕೆಟ್ಟದಾಗಿ ಬೈಯುತ್ತಾ ಕೈಯಿಂದ ಹಲ್ಲೆ ಮಾಡಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಬೇವರ್ಸಿ ಎಂದು ಬೆದರಿಕೆ ಹಾಕಿದಾಗ ರೂಮಿನಲ್ಲಿದ್ದ ಪಿರ್ಯಾದಿದಾರರು ಮತ್ತು ರಾಜನ್ ರವರು  ಗಲಾಟೆಯನ್ನು  ಬಿಡಿಸಿ ನಂತರ  ಪಿರ್ಯಾದಿದಾರರು ತಟ್ಟೆಗಳಿಗೆ ಅನ್ನ ಬಡಿಸುತ್ತಿದ್ದಾಗ ಪಿರ್ಯಾದಿದಾರರ ಹಿಂದೆ ಇದ್ದ ಸುಹಾನ್ ಏಕಾಏಕಿ ಸಂಜಯ್ ಬಳಿ ಹೋಗಿ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳುತ್ತಾ ಬಲವಾಗಿ ಹಿಂದಕ್ಕೆ ದೂಡಿದ ಪರಿಣಾಮ ಸಂಜಯ್ ನು ಹಿಮ್ಮುಖವಾಗಿ ಕೆಳಗಿ ಬಿದ್ದ ಪರಿಣಾಮ ತಲೆಗೆ ಗಂಬೀರ ಸ್ವರೂಪದ ಗಾಯ ಉಂಟಾದವನನ್ನು ಪಿರ್ಯಾದಿದಾರರು ಮತ್ತು ಆತನ ಸ್ನೃಹಿತರು ಸಂಜಯ್ ನನ್ನು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೆನ್ಲಾಕ್ ಆಸ್ಪತ್ರಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06.03.2023 ರಂದು ಬೆಳಗ್ಗೆ 10.00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ

Mangalore Rural PS                                  

ಪಿರ್ಯಾದಿ RAJENDRA B ಮಂಗಳೂರು ಸಿ.ಸಿ.ಬಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಗಳೂರು ನಗರದಲ್ಲಿ ನಡೆಯುವ ಕ್ರಿಕೆಟ್ ಬೆಟ್ಟಿಂಗ್ ಮಟ್ಕಾ ದಂಧೆ, ಹಾಗೂ ಜೂಜಾಟ ಮುಂತಾದ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಲು ಮೇಲಾಧಿಕಾರಿಗಳಿಂದ ನಿರ್ದೇಶಿತರಾಗಿದ್ದು, ಅದರಂತೆ ದಿನಾಂಕ: 04-03-2023 ರಂದು 8-30 ಗಂಟೆಗೆ ಮಂಗಳೂರು ತಾಲೂಕು ವಳಚ್ಚಿಲ್ ಗ್ರಾಮದ ವಳಚ್ಚಿಲ್ ಪದವು ಎಂಬಲ್ಲಿರುವ 05 ಸೆಂಟ್ಸ್ ನಾಗನಾಗಿಣಿ ಸಭಾಭವನದ ಹತ್ತಿರ ಇರುವ ಕೈರು ಎಂಬವರ ಪಿ.ಜಿಯ ಬಳಿ ಇರುವ ಮೊಹಮ್ಮದ್ ಜಾಫರ್ ವಿ.ಹೆಚ್ ಎಂಬಾತನ ಮನೆಯ ಹಿಂದೆ ಇರುವ ಶೆಡ್ನಲ್ಲಿ ಇಸ್ಪೀಟ್ ಎಲೆಗಳ ಸಂಖ್ಯೆ ಮತ್ತು ಚಿಹ್ನೆಗಳ ಆಧಾರದ ಮೇಲೆ ಅಂದರ್ ಬಾಹರ್ ಜೂಜಾಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ  ದಿನಾಂಕ: 04-03-2023 ರಂದು ರಾತ್ರಿ 9-15 ಗಂಟೆಗೆ ಹೊರಟು ವಳಚ್ಚಿಲ್ ಪದವು ತಲುಪಿ ಅಲ್ಲಿನ 05 ಸೆಂಟ್ಸ್ನ ನಾಗನಾಗಿಣಿ ಸಭಾಭವನದ ಹತ್ತಿರ ತಲುಪಿ  ರಾತ್ರಿ 10-00 ಗಂಟೆಗೆ ಅಲ್ಲಿಯ ಕೈರು ಎಂಬವರ ಪಿ ಜಿ ಹಿಂದೆ ಇರುವ ಮೊಹಮ್ಮದ್ ಜಾಫರ್ ವಿ ಹೆಚ್ ಎಂಬವರ ಮನೆಯ ಹಿಂಭಾಗದ ಶೆಡ್ ನಲ್ಲಿ ಸುಮಾರು 09 ರಿಂದ 10 ಜನರು ಒಂದು ಟೇಬಲ್ ಸುತ್ತ ಚೆಯರ್ ಗಳಲ್ಲಿ ಕುಳಿತು ಇಸ್ಪೀಟು ಎಲೆಗಳನ್ನು ಟೇಬಲ್ ಮೇಲೆ ಹಾಕುತ್ತಾ ಅಂದರ್-ಬಾಹರ್ (ಉಲಾಯಿ-ಪಿದಾಯಿ) ಎಂಬುದಾಗಿ ಜೋರಾಗಿ ಹೇಳಿಕೊಂಡು ಒಬ್ಬ ವ್ಯಕ್ತಿಯು ಅಂಕೆ ಮತ್ತು ಸಂಖ್ಯೆಗಳ ಚಿಹ್ನೆಗಳ ಆಧಾರದ ಮೇಲೆ ಅದೃಷ್ಠದ ಜೂಜಾಟಕ್ಕಾಗಿ ಇಸ್ಪೀಟ್ ಎಲೆಗಳನ್ನು ಸದ್ರಿ ಟೇಬಲ್ ಮೇಲೆ ಹಾಕುತ್ತಿದ್ದು, ಸುತ್ತಲೂ ಕುಳಿತ್ತಿದ್ದವರು ಉಲಾಯಿ-ಪಿದಾಯಿ ಎಂದು ಹೇಳುತ್ತಾ ಹಣವನ್ನು ಟೇಬಲ್ ಮೇಲೆ ಹಾಕುತ್ತಿದ್ದು, ಅವರು ಈ ಅಕ್ರಮ ಜೂಜಾಟ ಆಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ರಾತ್ರಿ 10-05 ಗಂಟೆಗೆ ಸ್ಥಳಕ್ಕೆ ದಾಳಿ ಮಾಡಿ ಜೂಜಾಟ ಆಡುತ್ತಿದ್ದವರನ್ನು ಸುತ್ತುವರಿದಾಗ ಅದರಲ್ಲಿದ್ದ 03 ಜನರು ಓಡಿ ಹೋಗಿದ್ದು, ಜೂಜಾಟ ಸ್ಥಳದಲ್ಲಿದ್ದ 07 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಓಡಿ ತಪ್ಪಿಸಿಕೊಂಡವರು ಉಮ್ಮರ್ ವಳಚ್ಚಿಲ್, ಶಾಕೀರ್ ಅರ್ಕುಳ ಬಡ್ಡೂರು ಹಾಗೂ ಇಲಿಯಾಸ್ ಬಿ.ಸಿರೋಡ್ ಎಂಬವರಾಗಿದ್ದು, ಸೆರೆಸಿಕ್ಕ ಆರೋಪಿಗಳು ಮೊಹಮ್ಮದ್ ಜಾಫರ್ ಎಂಬಾತನು ನಡೆಸುತ್ತಿರುವ ಜೂಜಾಟದಲ್ಲಿ ಭಾಗವಹಿಸುತ್ತಿದ್ದು, ಆತನು ಒಂದು ಆಟಕ್ಕೆ ಪ್ರತಿಯೊಬ್ಬರಿಂದ ತಲಾ 200 ರೂಪಾಯಿಯಂತೆ ಹಣ ಪಡೆದು ಜೂಜಾಟ ಆಡಿಸುತ್ತಿದ್ದು, ಆಟಕ್ಕೆ ಬಳಸಿದ ಒಟ್ಟು ರೂ: 20,790/-ನಗದು, ಜೂಜಾಟ ಆಡಲು ಬಳಸಿದ 52 ಇಸ್ಪೀಟ್ ಎಲೆಗಳು, ಆರೋಪಿಗಳು ಕೃತ್ಯಕ್ಕೆ ಬಳಸಿದ 06 ಮೊಬೈಲ್ ಫೋನ್ಗಳು, 02 ಜನ ಆರೋಪಿಗಳು ಸ್ಥಳಕ್ಕೆ ಜೂಜಾಟ ಆಡಲು ಬಂದ 02 ಸ್ಕೂಟರ್ಗಳನ್ನು ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ: 1,50,340/- ಆಗಿದ್ದು, ವಶಕ್ಕೆ ಪಡೆದುಕೊಂಡ ಆರೋಪಿಗಳ  ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದು ಎಂಬಿತ್ಯಾದಿ

Bajpe PS

ಪಿರ್ಯಾದಿ ಮೊಹಮ್ಮದ್  ಶರೀಫ್ ರವರು ದಿನಾಂಕ 04.03.2023 ರಂದು  ಕಾಜಿಲದ ಕಾರಮೊಗರು ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಧ್ಯಾಹ್ಯ ಸುಮಾರು 12.00 ಗಂಟೆಗೆ ಹಿಂದಿನಿಂದ ಅಂದರೆ ಕಾಜಿಲದಿಂದ ಮಳಲಿ ಕಡೆಗೆ ಕೆಎ 19 ಡಿ 8770 ನೇ ನಂಬ್ರದ ಆಟೋ ಗೂಡ್ಸ್ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಪಿರ್ಯಾಧಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ರಸ್ತೆಗೆ ಉರುಳಿ ಬಿದ್ದು, ಪಿರ್ಯಾಧಿದಾರರ ಎಡಗೈ ಮಣಿಗಂಟಿನ ಬಳಿ ಮೂಳೆ ಮುರಿತದ ಗಾಯ, ಎಡ ಕಿವಿಗೆ ಮತ್ತು ಎದೆಗೆ ತರಚಿದ ಗಾಯ ಅಲ್ಲದೇ ಗೂಡ್ಸ್ ವಾಹನ ಮಗುಚಿ ಬಿದ್ದ ಕಾರಣ ಗೂಡ್ಸ್ ವಾಹನದಲ್ಲಿದ್ದ ಜೈನುದ್ದೀನ್ ಎಂಬಾತನಿಗೂ ಕೂಡಾ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಎಂಬಿತ್ಯಾದಿ.

Traffic North Police Station                                                

ಪಿರ್ಯಾದಿದಾರರ  Jithendra ಸ್ನೇಹಿತನಾದ ಮಹಾವೀರ ಸಿಂಗ್ ಎಂಬವರು ದಿನಾಂಕ 04-03-2023 ರಂದು ರಾತ್ರಿ ಊಟ ಮಾಡಲೆಂದು ಕೊಟ್ಟಾರ ಚೌಕಿಗೆ ತನ್ನ ಸ್ನೇಹಿತರಾದ ಲಲಿತ್ ಮತ್ತು ಹೇಮಂತ್ ಎಂಬವರೊಂದಿಗೆ ತೆರಳಿ ಊಟ ಮುಗಿಸಿ ವಾಪಾಸ್ಸು ಮೋಟಾರ್ ಸೈಕಲ್ ನಂಬ್ರ KA-19HK-3121 ನೇಯದರಲ್ಲಿ ತಾನು ಸವಾರಿ ಮಾಡಿಕೊಂಡು ಬರುತ್ತಾ ದಿನಾಂಕ 05-03-2023 ರಂದು ಮುಂಜಾನೆ ಸಮಯ ಸುಮಾರು 00:20 ಗಂಟೆಗೆ ಮಂಗಳೂರು ತಾಲೂಕು, ಕೋಡಿಕಲ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ನೇಯದನ್ನು ದಾಟುವರೇ ಮೋಟಾರ್ ಸೈಕಲನ್ನು ಬಲಕ್ಕೆ ಚಲಾಯಿಸುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕಾರು ನಂಬ್ರ KA-12MB-2764 ನೇಯದನ್ನು ಅದರ ಚಾಲಕ ಸೌಹಾರ್ದ ಹೆಗ್ಡೆ ಎಂಬವರು ಅಮಲು ಪದಾರ್ಥ ಸೇವನೆ ಮಾಡಿ, ಅಮಲು ಪದಾರ್ಥ ಸೇವಿಸಿ ವಾಹನ ಚಾಲನೆ ಮಾಡಿದಲ್ಲಿ ಅಫಘಾತವಾಗಿ ಮಾನವ ಜೀವಕ್ಕೆ ಪ್ರಾಣಾಪಾಯವಾಗುವ ಸಾಧ್ಯತೆ ಇರುವುದನ್ನು ತಿಳಿದಿದ್ದರೂ ಕೂಡಾ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಹಾವೀರ್ ಸಿಂಗ್ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮಹಾವೀರ್ ಸಿಂಗ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡಕಾಲಿನ  ಕೋಲುಕಾಲಿಗೆ ಮತ್ತು ಬಲಕಾಲಿನ ಪಾದದ ಬಳಿ ಮೂಳೆ ಮುರಿತದ ಗಾಯ, ಬಲ ಕಿಬ್ಬೊಟ್ಟೆಯ ಮೇಲೆ ಗುದ್ದಿದ ಗಾಯ ಮತ್ತು ಹಣೆಯ ಬಲ ಬದಿಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳು ಮಹಾವೀರ್ ಸಿಂಗ್ ರವರನ್ನು ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಮಹಾವೀರ್ ಸಿಂಗ್ ರವರು ದಾರಿ ಮಧ್ಯೆ ಮೃತ ಪಟ್ಟಿರುವುದಾಗಿ ತಿಳಿಸಿ ಸೂಚನಾ ಪತ್ರ ನೀಡಿರುವುದಾಗಿದೆ ಎಂಬಿತ್ಯಾದಿ.

Traffic North Police Station               

ಪಿರ್ಯಾದಿ  Hilary Rodrigues ದಿನಾಂಕ 05-03-2023 ರಂದು ತನ್ನ ಆಟೋರಿಕ್ಷಾ ನಂಬ್ರ KA-19-AC-9823 ನೇದರಲ್ಲಿ ಸಂಜೆ ದಾಮಸ್ ಕಟ್ಟೆಯ ಪೊಂಪೈ ಕಾಲೇಜಿನಿಂದ ಪ್ರಣೀತ (18 ವರ್ಷ) ಎಂಬ ಹುಡುಗಿಯನ್ನು ಆಕೆಯ ಮನೆಯಾದ ಕರ್ನಿರೆ ಎಂಬಲ್ಲಿಗೆ ಬಿಡುವರೇ ಬಾಡಿಗೆ ಹೊರಟು ದಾಮಸ್ ಕಟ್ಟೆ-ಕುಕ್ಕಟ್ಟೆ ರಸ್ತೆಯಲ್ಲಿ ಕುಕ್ಕಟ್ಟೆ ಸಮೀಪಿಸುತ್ತಿದ್ದಂತೆ ಸಮಯ ಸುಮಾರು 04:15 ಗಂಟೆಗೆ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ದಾಮಸ್ ಕಟ್ಟೆ ಕಟೆಯಿಂದ KA-19-MC-8639 ನಂಬ್ರದ ವಾಗನ್- ಆರ್ ಕಾನ್ನು ಅದರ ಚಾಲಕನಾದ ವಿದ್ಯಾರಣ್ಯ ರಾವ್ ಎಂಬವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರಿನ ಎಡ ಭಾಗ ಆಟೋರಿಕ್ಷಾದ ಬಲ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾ ಎಡಭಾಗಕ್ಕೆ ವಾಲಿಕೊಂಡು ಬಿದ್ದು,ಎದುರಿನ ಕಾಂಪೌಂಡು ಗೋಡೆಗೆ ತಾಗಿ ನಿಂತಿದ್ದು, ಈ ಆಪಘಾತದ ಪರಿಣಾಮ ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ ಚರ್ಮ ಹರಿತದ ರಕ್ತ ಗಾಯ ಮತ್ತು ಮೂಳೆ ಮುರಿತದ ಗಂಭೀರ ಗಾಯ ಅಲ್ಲದೆ ಎದೆಗೆ ಗುದ್ದಿದ ಮತ್ತು ಬಾಯಿದವಡೆಗೆ ಗುದ್ದಿದ ರೀತಿಯ ಗಾಯವಾಗಿದ್ದು,ಹಾಗೂ ಪ್ರಯಾಣಿಕೆಯಾಗಿದ್ದ ಪ್ರಣೀತರವರಿಗೆ ಕುತ್ತಿಗೆ ಎಡ ಭಾಗ ಮತ್ತು ಎಡಭುಜಕ್ಕೆ ಸಣ್ಣ ಪ್ರಮಾಣದ ಗುದ್ದಿದ ನೋವಾಗಿದ್ದು ಚಿಕಿತ್ಸೆ ಬಗ್ಗೆ ಕನ್ಸೆಟ್ಟಾ ಆಸ್ಪತ್ರೆಗೆ ತೆರಳಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಿರ್ಯಾದಿದಾರರನ್ನು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು ಹಾಗೂ ಪ್ರಣೀತರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಎಂಬಿತ್ಯಾದಿ.

Traffic South Police Station

ದಿನಾಂಕ: 04-03-2023 ರಂದು ಮೋಟಾರ್ ಸೈಕಲ್ ನಂಬ್ರ KL-14-Y-9453   ನೇದರಲ್ಲಿ ಪಿರ್ಯಾದಿ PUNITKUMAR ಸಹ ಸವಾರರಾಗಿ ಹಾಗೂ ಅವರ ಸ್ನೇಹಿತ ರಜಿನ್ ಕುಮಾರ್ ರವರು  ಸವಾರರಾಗಿಯೂ ಹಾಗೂ ಇನ್ನೊಂದು ಮೋಟಾರ್ ಸೈಕಲ್ ನಂಬ್ರ KL-14-AA-4331 ನೇದರಲ್ಲಿ ಕಾರ್ತಿಕ್ ಸವಾರನಾಗಿ ಅನಿಲ್ ಸಹಸವಾರನಾಗಿ ಕುಳಿತುಕೊಂಡು ಮಂಗಳೂರು ಕಡೆಯಿಂದ ಕಾಸರಗೋಡಿನ ಬಂದಿಯೋಡ್ ಕಡೆಗೆ ರಾ.ಹೆ.66 ಡಾಮಾರು ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 01-30 ಗಂಟೆಗೆ ಗೋರಿಗುಡ್ಡೆ ಡಿವೈಡರ್ ಬಳಿ ತಲುಪಿದಾಗ ನಂತೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುತ್ತಿದ್ದ ಕಾರು ನಂಬ್ರ KA-19-MG-4989 ನೇದರ ಚಾಲಕ ಶರತ್ ಶೆಟ್ಟಿ ಎಂಬುವರು ಅಮಲು ಪಧಾರ್ಥ ಸೇವಿಸಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಕಾರ್ತಿಕ್ ರವರು ಸವಾರ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ ಕಾರು ಮತ್ತು ಮೋಟಾರ್ ಸೈಕಲ್ ಹಾಗೂ ಮೋಟಾರ್ ಸವಾರ ಕಾರ್ತಿಕ್ ಹಾಗೂ ಸಹಸವಾರ ಅನಿಲ್ ರವರು ರಸ್ತೆ ಬದಿಯ ಗುಂಡಿಗೆ ಬಿದ್ದು ಸವಾರ ಕಾರ್ತಿಕ್ ರವರಿಗೆ ಬಲಬದಿಯ ಸೊಂಟಕ್ಕೆ ಗುದ್ದಿದ ರೀತಿಯ ಗಂಭೀರ ಗಾಯ, ತಲೆಯ ಹಿಂಬದಿಗೆ ಗುದ್ದಿದ ಗಾಯ ಮತ್ತು ಬಲಕಾಲಿನ ಪಾದದ ಮೇಲೆ ತರಚಿದ ಗಾಯವಾಗಿದ್ದು, ಸಹಸವಾರ ಅನಿಲ್ ರವರಿಗೆ ಬಲಕಾಲಿನ ತೋಡೆಗೆ ಮೂಳೆ ಮುರಿತದ ಗಾಯ ಮತ್ತು ಎಡಕಾಲಿನ ಕೋಲುಕಾಲಿನ ಮೂಳೆ ಮುರಿತದ ಗಾಯ ಹಾಗೂ ಹಣೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಎಂಬಿತ್ಯಾದಿ.

Traffic South Police Station

ಪಿರ್ಯಾದಿ ಯು ಹೆಚ್ ಸಿದ್ದಿಕ್ (52 ವರ್ಷ) ರವರು ದಿನಾಂಕ  04-03-2023 ರಂದು ಅವರ ಬಾಬ್ತು ಕಾರು ನಂಬ್ರ: KA-19-MG-6020 ನೇದನ್ನು ಚಲಾಯಿಸಿಕೊಂಡು ಮಂಗಳೂರಿನ ಸಿಟಿ ಸೆಂಟರ್ ಗೆ ಹೋಗಿ ಅಲ್ಲಿಂದ ವಾಪಾಸ್ಸು ಅವರ ಮನೆಯಾದ ಉಳ್ಳಾಲ ಕಡೆಗೆ ರಾ ಹೆ-66 ರಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವ ಸಮಯ ಸುಮಾರು ರಾತ್ರಿ 8-10 ಗಂಟೆಗೆ ಜಪ್ಪಿನಮೊಗೆರು ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಟ್ಯಾಂಕರ್ ಲಾರಿ ನಂಬ್ರ: TN-37-BW-5599 ನೇದನ್ನು ಅದರ ಚಾಲಕ ಮುರುಗನ್ ಎಸ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಕಾರಿನ ಹಿಂಭಾಗದ ಎಡಭಾಗವು ಸಂಪೂರ್ಣ ಜಖಂಗೊಂಡಿದ್ದು ಹಾಗೂ ಕಾರಿನ ಹಿಂಭಾಗವು ಜಖಂಗೊಂಡಿರುತ್ತದೆ ಈ ಅಪಘಾತದಿಂದ ಅವರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ.

Ullal PS

ಪಿರ್ಯಾದಿ Rohith Sanctus ಪಶ್ಚಿಮ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾಗಿದ್ದು, ಪಿರ್ಯಾದಿದಾರರ ಆಶ್ರಮದಲ್ಲಿ ದಾಖಲು ಮಾಡಿದ್ದ   ಸ್ಟ್ಯಾನಿ ಪಿಂಟೋ ಪ್ರಾಯ 65 ವರ್ಷ ಎಂಬುವರಿಗೆ ವೀಪರಿತ ಕುಡಿತದ ಚಟವಿದ್ದು  ದಿನಾಂಕ 04/03/2023 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಹಲ್ಲಿನ ತಪಾಸಣೆಗೆಂದು ಕೋಟೆಕಾರು ಗ್ರಾಮದ ದೇರಕಟ್ಟೆ ಯೆನೆಪೋಯ ಆಸ್ಪತ್ರೆಗೆ ಆಶ್ರಮದ ಸಿಬ್ಬಂಧಿಯಾದ ಕೌಸಲ್ಯ ಎಂಬುವರು ಕರೆದುಕೊಂಡು  ಹೋಗಿರುತ್ತಾರೆ. ಸ್ಟ್ಯಾನಿ ಪಿಂಟೋ ರವರನ್ನು ತಪಾಸಣೆಗೆಂದು ಒಳಗೆ ಕರೆದುಕೊಂಡು ಹೋದ ಸಮಯ ಆಶ್ರಮದ ಸಿಬ್ಬಂಧಿ ಕೌಸಲ್ಯ ರವರು ವಾಶ್ ರೂಮಿಗೆ ಹೋಗಿದ್ದು ವಾಪಾಸ್ ಬಂದು ನೋಡುವಾಗ ತಪಾಸಣೆಗೆ ಹೋದ ಸ್ಟ್ಯಾನಿ ಪಿಂಟೋ ಪ್ರಾಯ 65 ವರ್ಷ ರವರು ಆಶ್ರಮದ ಸಿಬ್ಬಂಧಿಯಾದ ಕೌಸಲ್ಯರವರಿಗೆ ತಿಳಿಸದೇ  ದಿನಾಂಕ 04/03/2023 ರಂದು ಮದ್ಯಾಹ್ನ  03-00 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ಕಾಣೆಯಾಗಿರುವುದಾಗಿದೆ ಬಿತ್ಯಾದಿ ಪಿರ್ಯಾದಿಯು ನೀಡಿದ ದೂರಿನ ಸಾರಾಂಶ.

Ullal PS   

ಪಿರ್ಯಾದಿ Mohammad Faris N ಮಂಗಳೂರು ಪಾಂಡೇಶ್ವರ ಶ್ರೀನಿವಾಸ ಕಾಲೇಜಿನಲ್ಲಿ 4 ನೇ ವರ್ಷದ ಪಿಶೀಯೋಥೆರಫಿ ಮಾಡಿಕೊಂಡಿದ್ದು, ಪಿರ್ಯಾದಿದಾರರಲ್ಲಿ ಪಿರ್ಯಾದಿದಾರರ ತಂದೆಯಾದ ಪೈಸಲ್ ರವರ ಹೆಸರಿನಲ್ಲಿ ಕೇರಳ, ಪೊನ್ನಾನಿ ಆರ್.ಟಿ.ಓ.ಕಚೇರಿಯಲ್ಲಿ ನೊಂದಣಿಯಾದ ಕೆಎಲ್ 54 ಜೆ 4227 ಯಮಹಾ ಎಫ್ ಝಡ್ ಮೋಟಾರು ಬೈಕ್ ನ್ನು ಉಪಯೋಗ ಮಾಡಿಕೊಂಡಿದ್ದು, ದಿನಾಂಕ:16-02-2023 ರಂದು ಫುಟ್ ಬಾಲ್ ಟೂರ್ನಮೆಂಟ್ ಗೆ ಪಿರ್ಯಾದಿದಾರರು  ಮತ್ತು ಅವರ ಸ್ನೇಹಿತ ಅಲೆನ್ ದೇರಳಕಟ್ಟೆಯ ಯೆನೆಪೋಯಾ ಮೆಡಿಕಲ್ ಕಾಲೇಜಿನ ಬಳಿಯಲ್ಲಿನ ಗ್ರೌಂಡ್ ಗೆ ಬಂದು ವಾಪಾಸು  ಯೆನೆಪೋಯಾ ಮೆಡಿಕಲ್ ಕಾಲೇಜಿನ ಬಳಿಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ರಾತ್ರಿ 7-30 ಗಂಟೆಗೆ ನಿಲ್ಲಿಸಿ, ಸ್ನೇಹಿತನ ಜೊತೆಗೆ ರಸ್ತೆಯ ಇನ್ನೊಂದು ಬದಿಯಲ್ಲಿರುವ ಅಂಗಡಿಗೆ ತೆರಳಿ ನೀರು ಕುಡಿದು ವಾಪಾಸು  ವಾಪಾಸು ರಾತ್ರಿ 7-45 ಗಂಟೆಗೆ ಬಂದು ನೋಡಿದಾಗ ಪಾರ್ಕಿಂಗ್ ಮಾಡಿದ ಮೋಟಾರು ಬೈಕ್ ಕಾಣಿಸಲಿಲ್ಲ. ಈ ಮೋಟಾರು ಬೈಕ್ ನಲ್ಲಿ ಪಿರ್ಯಾದಿದಾರರು ಇರಿಸಿದ್ದ ಬ್ಯಾಗ್ ನಲ್ಲಿದ್ದ ಕಾಲೇಜು ಐಡಿ, ಫುಟ್ ಬಾಲ್ ಶೂ, ಹೆಲ್ಮಟ್-2, ಫೆಡರಲ್ ಬ್ಯಾಂಕ್ ಎಟಿಎಂ ಇವುಗಳು ಕಾಣೆಯಾಗಿರುತ್ತದೆ. ನಂತರ ಪಿರ್ಯಾದಿದಾರರು  ಮೋಟಾರು ಬೈಕ್ ನ್ನು ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿದ್ದು, ಮೋಟಾರು ಬೈಕ್ ಪತ್ತೆಯಾಗಿರುವುದಿಲ್ಲ. ಮೋಟಾರು ಬೈಕ್ ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಬೈಕ್ ನ್ನು ಪತ್ತೆ ಮಾಡಿಕೊಡಬೇಕಾಗಿ  ನೀಡಿದ ಪಿರ್ಯಾದಿ ಎಂಬಿತ್ಯಾದಿ.

Ullal PS

ಪಿರ್ಯಾದಿ Chappagaddi Eruku Naidu  ಮಗ MBBS ಮುಗಿದ ನಂತರ ಉನ್ನತ ವಿಧ್ಯಾಬ್ಯಾಸಕ್ಕಾಗಿ ಕಾಯುತ್ತಿರುವಾಗ ದಿನಾಂಕ 29-11-2022 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ Sai Consultant ನ ಸುಪ್ರಿಯಾ ಎಂಬುವರು ಮೋಬೈಲ್ ನಂಬ್ರ  ದಿಂದ ಕಳುಹಿಸಿದ  ಸಂದೇಶದಂತೆ ಪಿರ್ಯಾದಿದಾರರ ಮಗ ಸುಪ್ರಿಯಾ ರವರನ್ನು ಸಂಪರ್ಕಿಸಿದಾಗ ಅತಿ ಕಡಿಮೆ ಮೊತ್ತ 1 ಕೋಟಿ ರೂಪಾಯಿಗಳಲ್ಲಿ ನಿಮಗೆ MD Dermatology ವಿಭಾಗದಲ್ಲಿ  PG  ಸೀಟ್ ಮಂಗಳೂರಿನ ಕಣಚೂರು ಮೇಡಿಕಲ್ ಕಾಲೇಜು ದೇರಳಕಟ್ಟೆ ಇಲ್ಲಿ ನೀಡುವುದಾಗಿ ನಂಬಿಸಿದಂತೆ  ಪಿರ್ಯಾದಿದಾರರು ದಿನಾಂಕ 02-12-2022 ರಂದು ಮಂಗಳೂರು ದೇರಳಕಟ್ಟೆಗೆ ಬಂದು ಅವೆನ್ಯೂ ಪ್ಲಾಜಾ ಲಾಡ್ಜ್ ನಲ್ಲಿ ಉಳಿದುಕೊಂಡು ಸುಪ್ರಿಯಾರವರು ತಿಳಿಸಿದ ಏಜೆಂಟ್ ಮನೋಜ್ ಎಂಬುವರು ಪೋನ್ ಮುಖಾಂತರ ಸಂಪರ್ಕಿಸಿ ಮನೋಜ್ ರವರ ಜೋತೆ ಜಯಂತಿ ಹಾಗೂ ಇನ್ನೊಬ್ಬ ಸಹಾಯಕ ವ್ಯಕ್ತಿಯು  ಪಿರ್ಯಾದಿದಾರರ ಮಗನ ದಾಖಲಾತಿ ಜೆರಾಕ್ಸ ಪ್ರತಿಯನ್ನು ಪಡೆದು  KEA ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿ  ಟೋಕನ್ ಅಡ್ವಾನ್ಸ್ ಆಗಿ 50000/- ಹಣ ಪಡೆದಿರುತ್ತಾರೆ. ನಂತರ ದಿನಾಂಕ 03-12-2022 ರಂದು ಮನೋಜನು ಜಯಂತಿ ಹಾಗೂ ಇನ್ನೊಬ್ಬ ಸಹಾಯಕನನ್ನು  ಕರೆದುಕೊಂಡು ಬಂದು ಪಿರ್ಯಾದಿದಾರರು ತಂಗಿದ್ದ ಹೋಟೆಲ್ ನಲ್ಲಿ ನಗದು ಮೋತ್ತ 49,50,000/- ರೂಪಾಯಿಗಳು ಹಾಗೂ 12,64,000/- ರೂಪಾಯಿಗಳ ಡಿಡಿ ರೂಪದಲ್ಲಿ ಪಿರ್ಯಾದಿದಾರರಿಂದ ಪಡೆದು, ಬಾಕಿ ಉಳಿದ 50 ಲಕ್ಷ ರೂಪಾಯಿಗಳನ್ನು 2 ವರ್ಷಗಳಲ್ಲಿ ಕಂತಿನ ರೂಪದಲ್ಲಿ ನೀಡುವಂತೆ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರ ಮಗ PG  ಸೀಟ್ ಅಲೋಟ್ ಮೆಂಟ್ ಪ್ರತಿಯನ್ನು ನೀಡುವಂತೆ ಕೇಳಿದಾಗ,ಕಣಚೂರ್ ಮೆಡಿಕಲ್  ಕಾಲೇಜ್ ನ ಸೀಲ್ ಹಾಗೂ ಡೀನ್ ರವರ ಸಹಿ ಇರುವ  ಅಲೋಟ್ ಮೆಂಟ್ ಪ್ರತಿ ನೀಡಿ,ಹಾಗೂ KEA ರವರ ನಕಲಿ E-mail, ID  keauthority-ka@nic.in ಸೃಷ್ಠಿಸಿ ಆ ಇ-ಮೇಲ್ ದಿಂದ ದಿನಾಂಕ 06-12-2022 ರಂದು ಮಗನ ಇ-ಮೇಲ್ ಗೆ Selected For MD Dermatology Course at Kanachur Medical Collage Institute  ಎಂದು ಮೇಲ್ ಸಂದೇಶ ಬಂದಿದ್ದು ಈ ಬಗ್ಗೆ 11-01-2023 ರಂದು ಜಯಂತಿಯವರಲ್ಲಿ ವಿಚಾರಿಸಿದಾಗ ನಿಮ್ಮ ಸೀಮ್ಮ ಸೀಟ್ ಕಾನ್ಸಲ್ ಆಗಿದೆ ನೀವು ನೀಡಿದ  ಹಣವನ್ನು 15 -20 ದಿನಗಳಲ್ಲಿ ವಾಪಾಸು ನಿಡಲಾಗುವುದು, ನಿಮ್ಮ ಡಿಡಿಯನ್ನು ನಿಮಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ನಂತರ ದಿನಾಂಕ 12-01-2023 ರಂದು ಬೆಂಗಳೂರಿನ KEA ಕಚೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ KEA ಕಚೇರಿಯಿಂದ ಯಾವುದೇ ಸಂದೇಶ ಕಳುಹಿಸಿರುವುದಿಲ್ಲ, ಎಂಬುವುದು ತಿಳಿದು ಬಂದು ನಂತರ ದಿನಾಂಕ 20-02-2023 ರಂದು ಪಿರ್ಯಾದಿದಾರರು ಮಂಗಳೂರಿನ ಕಣಚೂರು ಮೇಡಿಕಲ್ ಕಾಲೇಜು ದೇರಳಕಟ್ಟೆ ಇಲ್ಲಿಗೆ ಬಂದು ವಿಚಾರಿಸಿದಾಗ ಮೋಸ ಹೋಗಿದ್ದು ತಿಳಿದು ನಕಲಿ ಇ-ಮೇಲ್ ಸೃಷ್ಠಿಸಿ ಅದರಿಂದ ಸಂದೇಶ ಕಳುಹಿಸಿ ಹಾಗೂ ನಕಲಿ ಅಲೋಟ್ ಮೆಂಟ್ ಪ್ರತಿ ನೀಡಿ 50 ಲಕ್ಷ ಹಣ ಪಡೆದು ವಾಪಾಸು ನೀಡದೆ,  ಪಿರ್ಯಾದಿದಾರರ ಮಗನ 1 ವರ್ಷದ ಕಾಲದ ವಿಧ್ಯಾಬ್ಯಾಸ ಕಾಲಹರಣ ಮಾಡಿ, ಮೋಸ ಮಾಡಿದ ಸುಪ್ರಿಯಾ,ಮನೋಜ್,ಹಾಗೂ ಜಯಂತಿ ಹಾಗೂ ಇನ್ನೂಬ್ಬ ಸಹಾಯಕನ ವಿರುದ್ದ ಕಾನೂನು ಕ್ರಮ ಕೈಗೋಳ್ಳ ಬೇಕೆಂಬಿತ್ಯಾದಿಯಾಗಿ

 

ಇತ್ತೀಚಿನ ನವೀಕರಣ​ : 06-03-2023 07:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080