ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS Mangaluru City          

ಪಿರ್ಯಾದಿ RAVINDRA N POOJARY ಇವರು ದಿನಾಂಕ 06-03-2024 ರಂದು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ ಪಿರ್ಯಾದಿದಾರರು ಮಂಗಳೂರು ನಗರದಲ್ಲಿ ಖಾಸಗಿ ಫಾರ್ಮ್ ಕಂಪನಿಯ ವೈದ್ಯಕಿಯ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ, ಹೀಗಿರುತ್ತಾ, ಪಿರ್ಯಾದಿದಾರರು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ BPEA EQT  INSTITUTIONAL ಕಂಪನಿಯ  ಜಾಹೀರಾತು ನೋಡಿ, ಅದರ ಮೇಲೆ ಕ್ಲಿಕ್ ಮಾಡಿದಾಗ ಸದ್ರಿ ಜಾಹೀರಾತಿನಲಿದ್ದ ಐಶ್ವರ್ಯಾ ಗುಪ್ತಾ ಎಂಬಾಕೆಯ ವಾಟ್ಸಾಪ್ ನಂಬ್ರ 9863230019 ನೇದರ ಮೂಲಕ  “BPEA EQT  INSTITUTIONAL” ಎಂಬ ವಾಟ್ಸಾಪ್ ಗ್ರೂಪ್ ಅನ್ನು ದಿನಾಂಕ 11-01-2024 ರಂದು ಜಾಯಿನ್ ಮಾಡಿಸಿರುತ್ತಾಳೆ. ಸದ್ರಿ ವಾಟ್ಸಾಪ್ ನಲ್ಲಿ ಹಲವಾರು ಅಡ್ಮಿನ್ ಗಳು ಮತ್ತು ಮೆಂಬರ್ ಗಳು ಇರುತ್ತಾರೆ.ಅಶಿಷ್ ಕನಡೆ ಎಂಬಾತನನ್ನು BPEA EQT   INDIA ಸಂಸ್ಥೆಯ ಮುಖ್ಯಸ್ಥ ಹಾಗೂ ಈ ಗ್ರೂಪಿನ ಮೆಂಟರ್ ಎಂದು ಐಶ್ವರ್ಯಾ ಗುಪ್ತಾ ಎಂಬಾಕೆ ಪರಿಚಯಿಸಿದ್ದಳು ನಂತರ ಕೃಷ್ಣಕುಮಾರ್ ಸಿಂಗ್ ಎಂಬಾತನನ್ನು ಅಕೌಂಟ್  ಮ್ಯಾನೇಜರ್ ಎಂದು ಪರಿಚಯಿಸಿ ಆತನ ವಾಟ್ಸಪ್ ನಂ.6009420660 ನೇದಕ್ಕೆ ಸಂಪರ್ಕಿಸಲು ತಿಳಿಸಿದಳು.ನಂತರ ಕೃಷ್ಣಕುಮಾರ್ ಸಿಂಗ್ ಎಂಬಾತ PEQT  ಎಂಬ INSTITUTIONAL ಅಕೌಂಟ್ ಆ್ಯಪ್ ಲಿಂಕ್ ಕಳುಹಿಸಿ, ದಿನಾಂಕ:20-01-2024 ರಿಂದ 20-02-2024 ರವರಗೆ ಹಂತ ಹಂತವಾಗಿ 12,82,000/- ರೂಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಹಲವು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿರುವುದಾಗಿದೆ.ನಂತರ ಪಿರ್ಯಾದಿದಾರರು ತಾವು ಹೂಡಿದ ಹಣವನ್ನು ಹಿಂಪಡೆಯಲು ಸಾಧ್ಯವಾಗದೆ ಇದ್ದಾಗ  ಪಿರ್ಯಾದಿದಾರರು ತಮ್ಮ ಕುಟುಂಬದವರೊಂದಿಗೆ ಚರ್ಚಿಸಿದಾಗ ತಾವು ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿರುತ್ತದೆ, ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮೂಲಕ “BPEA EQT  INSTITUTIONAL” ಎಂಬ ಹೆಸರನ್ನು ಬಳಸಿಕೊಂಡು ಒಟ್ಟು 12,82,000/- ರೂಗಳನ್ನು ಪಾವತಿಸಿಕೊಂಡು ಯಾವುದೇ ಲಾಭಾಂಶ ನೀಡದೇ ಆನ್ ಲೈನ್ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

 

CEN Crime PS

ದಿನಾಂಕ 06-03-2024 ರಂದು ಸೆನ್ ಕ್ರೈಂ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ ಸತೀಶ್  ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಇರ್ಷಾದ್ (29) ತಂದೆ: ಹನೀಫ್ ವಾಸ: #3-2ಡಿ ಪರಿಯಾಳ ಬೊಟ್ಟು ಆಂಬ್ಲ ಮೊಗರು ಮಂಗಳೂರು ಎಂಬಾತನನ್ನು  ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಮಂಗಳೂರು ನಗರದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಮುಂದಿನ ಕ್ರಮದ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ತಪಾಸಣೆಗೆ ಒಳಪಡಿಸಿದಾಗ ವೈದ್ಯಾಧಿಕಾರಿಗಳು  ಮಾಧಕ ವಸ್ತು ಸೇದಿರುವುದು ದೃಢಪಟ್ಟಿವುದರಿಂದ  ಎನ್ ಡಿಪಿಎಸ್ ಕಾಯಿದೆಯಂತೆ ಕಾನುನು ಕ್ರಮ ಕೈಗೊಂಡಿರುವುದಾಗಿದೆ.

 

CEN Crime PS

ಪ್ರಕರಣದ ಸಾರಾಂಶವೇನೆಂದರೆ 2024 ಜನವರಿ ತಿಂಗಳ ಮೊದಲ ವಾರದಲ್ಲಿ  ರಂದು ಪಿರ್ಯಾದಿ Dr. HENRY FERNANDES ಇವರ ದಾರರು ಇನ್ಸ್ಟಾಗ್ರಾಂ ನಲ್ಲಿ “Allianz Investor App”  ಎಂಬ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಸಲಹೆ ಒದಗಿಸುವ ವಾಟ್ಸ್ ಆಪ್ ಗ್ರೂಪ್ನ ಜಾಹೀರಾತು ನೋಡಿ, ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಸಲಹೆ ಪಡೆದುಕೊಳ್ಳಲು Ällianz Global INv Arjun” ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸೇರಿಕೊಂಡು,ಸದ್ರಿ ಗ್ರೂಪ್ ನಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಬರುವ ಸಂದೇಶಗಳನ್ನು ನೋಡುತ್ತಿದ್ದರು, ನಂತರ ವಾಟ್ಸ್ ಆಪ್ ಗ್ರೂಪ್ ನ ಅಡ್ಮಿನ್ ತಿಳಿಸಿದಂತೆ ಟ್ರೇಡಿಂಗ್ ಬಗ್ಗೆ  all.woweoof.com ಎಂಬ ಆನ್ ಲೈನ್ ಆಪ್ ನಲ್ಲಿ ನೊಂದಣಿ ಮಾಡಿಕೊಂಡು ಸದರಿ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು ಅದರಂತೆ ಸದ್ರಿ ಆಪ್ ಮೂಲಕ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ  ಪಿರ್ಯಾದಿದಾರರು ತನ್ನ ಬಾಬ್ತು ICICI Saving Bank A/c no: 001404014454,  IFSC: ICIC0000014 ನೇಯದರಿಂದ ದಿನಾಂಕ: 13/02/2024 ರಿಂದ 28/02/2024  ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಒಟ್ಟು ರೂ 19,00,017/- ವರ್ಗಾಯಿಸಿ ಮೋಸಹೋಗಿರುತ್ತಾರೆ

 

Mangalore East Traffic PS                          

ಈ ಪ್ರಕರಣದ ಸಾರಾಂಶವೆನೆಂದರೆ  ಜೋಸೆಫ್ ಪ್ರಾಯ: 65 ವರ್ಷ, ಎಂಬುವರು ಯಯ್ಯಾಡಿ ಜಂಕ್ಷನ್ ಬಳಿ ಶ್ರೀರಾಮ್ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 06/03/2024 ರಂದು ಮಧ್ಯಾಹ್ನ ಯಯ್ಯಾಡಿ ಜಂಕ್ಷನ್ ಬಳಿ ಇರುವ ಫಿಸ್ಟ್ ಸ್ಟಾಲ್ ಗೆ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು 12-30 ಗಂಟೆಗೆ ಏರ್ ಪೋರ್ಟ್ ರಸ್ತೆಯ ಡಿವೈಡರ್ ಕಡೆಯಿಂದ ಈಶ್ವರ ಕಟ್ಟೆ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಯಯ್ಯಾಡಿ ಜಂಕ್ಷನ್ ಕಡೆಯಿಂದ ಹರಿಪದವು ಕಡೆಗೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟರ್ ನೊಂದಣಿ ಸಂಖ್ಯೆ: KA-19-HK-2896 ನೇಯದನ್ನು ಅದರ ಸವಾರ ಮಾನವ್ ಎಂಬಾತನು ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ವಾಹನಗಳನ್ನು ಎಡ ಭಾಗದಿಂದ ಓವರ್ ಟೇಕ್ ಮಾಡುವ ಗಡಿಬಿಡಿಯಲ್ಲಿ ಅಜಾಗರೂಕತೆಯಿಂದ ಚಲಾಯಿಸಿ ಢಿಕ್ಕಿ ಪಡಿಸಿದ ಪರಿಣಾಮ ಪಾದಾಚಾರಿ ಜೋಸೇಫ್ ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ತೇಜಸ್ವಿನಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಜೋಸೆಫ್ ರವರ ಎಡ ಕೋಲುಕಾಲಿನಲ್ಲಿ ಮೂಳೆ ಮುರಿತವುಂಟಾಗಿರುವುದಾಗಿ ತಿಳಿಸಿರುತ್ತಾರೆ, ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ

  

Kavoor PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 06/03/2024 ರಂದು, ಮಂಗಳೂರು ನಗರದ  ಕೂಳೂರು ಗ್ರಾಮದ ಪೆಟ್ರೋಲ್ ಪಂಪ್ ಹತ್ತಿರ ಹೋದಾಗ ಸಾರ್ವಜನಿಕ  ಸ್ಥಳದಲ್ಲಿ  ಖಾಲಿದ್  (30 ವರ್ಷ ) ತಂದೆ: ಎ ಅಬ್ದುಲ್ ರೆಹಮಾನ್ @ ಪುತ್ತಕ್  ವಾಸ: ವುಡ್ ವಿಲ್ಲಾ ಪ್ಲಾಟ್ ನಂಬ್ರ :404ಎಂ .ಜಿ.ಸಿ ಶಾಲೆಯ ಬಳಿ  ಬೊಂದೆಲ್ ಮಂಗಳೂರು   ಎಂಬಾತನು  ಎಂಬಾತನು ಮಾದಕ ವಸ್ತು ಸೇವನೆ ಮಾಡಿದಂತೆ ಕಂಡು ಬಂದಿದ್ದು   ಮುಂದಿನ ಕ್ರಮದ ಬಗ್ಗೆ    ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತನನ್ನು ಪರೀಕ್ಷಿಸಿ ಆರೋಪಿತನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ, ಎಂಬಿತ್ಯಾದಿ.

 

Bajpe PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದಿ Anith ಇವರು ದಿನಾಂಕ 04.03.2023 ರಂದು ಸುಮಾರು 21.30 ಗಂಟೆಗೆ ತನ್ನ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದಾಗ ಗುರುಪುರ ಸಹಕಾರಿ ಬ್ಯಾಂಕ್ ನ ಬಳಿ ತಲುಪಿದಾಗ KA19 HM8433 ನೇ ನಂಬ್ರದ ಸ್ಕೂಟರ್ ಚಾಲಕ ಸಾಗರ್ ಎಂಬಾತನು ಕೈಕಂಬ ಕಡೆಯಿಂದ ಗುರುಪುರ ಕಡೆಗೆ ಅತೀ ವೇಗ ಹಾಗೂ ದುಡುಕುತನದಿಂದ ಸ್ಕೂಟರ್ ರನ್ನು ಚಲಾಯಿಸಿಕೊಂಡು ಬಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ರಸ್ತೆಗೆ ಬಿದ್ದಿರುತ್ತಾರೆ. ಪಿರ್ಯಾದಿದಾರರು ಕೂಡಲೇ ಪಾದಾಚಾರಿ ಬಳಿ ಹೋಗಿ ನೋಡಿದಾಗ ಪಾದಾಚಾರಿಯು ಪಿರ್ಯಾದಿದಾರರ ಪರಿಚಯದ ಸತೀಶ್ ರವರಾಗಿದ್ದು, ಅಪಘಾತದಿಂದ ಸತೀಶ್ ರವರ ಹಣೆಗೆ, ಮೂಗಿಗೆ, ಗದ್ದಕ್ಕೆ ಹಾಗೂ ಎರಡು ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಸತೀಶ್ ರವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 07-03-2024 09:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080