ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ.

Mangalore East Traffic PS                          

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಅಶೋಕ್ ಶೆಟ್ಟಿ ರವರು ದಿನಾಂಕ 06-04-2024 ರಂದು ತಮ್ಮ ಕಾರನ್ನು ಚಲಾಯಿಸಿಕೊಂಡು ಬೆಂದೂರ್ ವೆಲ್ ಕಡೆಯಿಂದ ನಂತೂರು ಮಾರ್ಗವಾಗಿ ರಾ.ಹೆ. 66 ರಲ್ಲಿ ಕೆ.ಪಿ.ಟಿ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 01:15 ಗಂಟೆಗೆ ಪದವು ಬಳಿ ಇರುವ ಬಬ್ಬುಸ್ವಾಮಿ ದೇವಸ್ಥಾನದ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂಭಾಗದಲ್ಲಿ ನಂತೂರು ಕಡೆಯಿಂದ ಕೆಪಿಟಿ ಕಡೆಗೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನ ನೊಂದಣಿ ಸಂಖ್ಯೆ KA-21-B-5154 ನೇಯದನ್ನು ಅದರ ಚಾಲಕ ಅಬ್ದುಲ್ ರಝಾಕ್ ಎಂಬಾತನು ಅಜಾಗರೂಕತೆಯಿಂದ ಚಲಾಯಿಸಿ ಡಿವೈಡರ್ ಕಡೆಯಿಂದ ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಾದಾಚಾರಿಗಳಾದ ಮೋಕ್ಷಾ (ಪ್ರಾಯ 14ವರ್ಷ) ಹಾಗೂ ಪ್ರಗತಿ (ಪ್ರಾಯ 15ವರ್ಷ) ರವರಿಗೆ ಢಿಕ್ಕಿಪಡಿಸಿದ ಪರಿಣಾಮಇಬ್ಬರೂ ಬಾಲಕಿಯರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಪಿರ್ಯಾದಿದಾರರು ಗಾಯಾಳುಗಳನ್ನು ಚಿಕಿತ್ಸೆಗಾಗಿ ತಮ್ಮದೇ ಕಾರಿನಲ್ಲಿ ಕರೆದುಕೊಂಡು ಹೋಗಿ ಎ.ಜೆ. ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ

 

Traffic North Police Station                         

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Sharath L Karkera ಇವರು  ದಿನಾಂಕ 06-04-2024 ರಂದು ತನ್ನ ಬಾಬ್ತು ಕಾರು ನಂಬ್ರ KA-20-MH-7424 ನೇದರಲ್ಲಿ ಅವರ ವೈಯುಕ್ತಿಕ ಕೆಲಸದ ನಿಮಿತ್ತ ಮಂಗಳೂರಿನಿಂದ ಸುರತ್ಕಲ್ ಗೆ NH-66 ರಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 11:30 ಗಂಟೆಗೆ ಕುಳಾಯಿ ಹೊನ್ನಕಟ್ಟೆ ಜಂಕ್ಷನ್ ತಲುಪುತ್ತಿದ್ದಂತೆ ನವದುರ್ಗಾ ಇಂಜನಿಯರ್ ವರ್ಕ್ ಕಟ್ಟಡದ ಮುಂದೆ ಪಿರ್ಯಾದಿದಾರರ ಕಾರಿನ ಹಿಂದಿನಿಂದ ಅಂದರೆ ಕೂಳೂರು ಕಡೆಯಿಂದ KA-19-AB-8326 ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಶರೀಪ್ ಎಂ.ಕೆ ಎಂಬಾತನು ತೀರಾ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ  ಪಿರ್ಯಾದಿದಾರರ ಕಾರಿನ ಬಲಬದಿಯ ಹಿಂದಿನ ಚಕ್ರದ ಕಾರಿನ ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಬಲಬದಿಯ  ಹಿಂದಿನ ಚಕ್ರ, ಡಿಸ್ಕ್ ಡೋರ್, ಹಿಂದಿನ ಭಾಗದ ಬೊನೇಟ್ ಸೆಟ್ ಸಂಪೂರ್ಣ ಜಖಂಗೊಂಡಿರುತ್ತದೆ. ಅಪಘಾತದಿಂದ ಪಿರ್ಯಾದಿದಾರರಿಗೆ ಹಾಗೂ ಲಾರಿಯ ಚಾಲಕನಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ

 

Mangalore East PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಅನ್ವರ್ ಪ್ರಾಯ 42 ವರ್ಷ ತಂದೆ : ಅಬುಬಕ್ಕರ್ ವಾಸ : ಬಜಾಲ್ ಪಕ್ಕಲಡ್ಕ ಶಾಫೀ ಕ್ಲೀನಿಕ್ ಹತ್ತಿರ ಮಂಗಳೂರು ಎಂಬುವವರು ದಿನಾಂಕ 06/04/2024 ರಂದು ಮಧ್ಯಾಹ್ನ 02:00 ಗಂಟೆಗೆ ಬೆಲಿಂಡ ಪೆರ್ನಾಂಡಿಸ್ ರವರ ಪಂಪುವೇಲ್ ಕರ್ನಾಟಕ ಬ್ಯಾಂಕ್ ನ ಹಿಂದೆ ಇರುವ ಮನೆಗೆ ಬಾಕಿ ಹಣ ಕೇಳಲು ಹೋದಾಗ ಬೆಲಿಂಡ ಪೆರ್ನಾಂಡಿಸ್ ರವರ ಗಂಡನಾದ ಸಾಯಿನಾಥ ಗಿರಿಧರ್ ಶೆಟ್ಟಿ ಎಂಬುವವರು ಪಿರ್ಯಾದಿದಾರರ ತಲೆಗೆ ಗನ್ ನ್ನು ತೋರಿಸಿ ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು , ಬಾಕಿ ಹಣವನ್ನು ಕೊಡುವುದಿಲ್ಲವೆಂದು ಹೇಳಿರುವುದಾಗಿದೆ ಎಂಬಿತ್ಯಾದಿಯಾಗಿದೆ

 

Traffic South Police Station                        

ಫಿರ್ಯಾದಿದಾರರಾದ ರೈಹಾನ್ ಹುಸೇನ್ ರವರು ದಿನಾಂಕ 31/03/2024 ರಂದು ಸಂಜೆ 7.15 ಗಂಟೆಗೆ ಅವರ ತಂದೆಯವರ ಬಾಬ್ತು KA-13-N-3480 ನೇ ನಂಬ್ರದ ಸ್ವಿಪ್ಟ್ ಕಾರಿನಲ್ಲಿ ತನ್ನ ಗೆಳೆಯನಾದ ಜಿ ಮೊಹಮ್ಮದ್ ಶಹೀರ್ ರವರನ್ನು ಕುಳ್ಳಿರಿಸಿಕೊಂಡು ಮೂಡಬಿದ್ರೆಯಿಂದ ಕಲ್ಲಾಪುವಿನ ಬ್ಲಾಕ್ ಶುಗರ್ ಕಡೆಗೆ ಹೊರಟು ನಂತೂರುನಿಂದಾಗಿ ಕಲ್ಲಾಪು ಕಡೆಗೆ ರಾ. ಹೆದ್ದಾರಿ 66 ರಲ್ಲಿ ಕಾರನ್ನು ಚಲಾಯಿಸಿಕೊಂಡು ಪಂಪ್ ವೆಲ್ ಮೇಲ್ ಸೇತುವೆಯ ಮೇಲೆ ಪಂಪ್ ವೆಲ್ ನ ಮಸೀದಿಯಿಂದ ಸ್ವಲ್ಪ ಮುಂದೆ ಬರುತ್ತಿದ್ದಂತೆ, ಸಮಯ ಸುಮಾರು ರಾತ್ರಿ 8.45 ಗಂಟೆಗೆ ತನ್ನ ಹಿಂದುಗಡೆಯಿಂದ ಅಂದರೆ ನಂತೂರು ಕಡೆಯಿಂದ KL-14-AE-0181 ನೇ ನಂಬ್ರದ ಈಚರ್ ಗೂಡ್ಸ್ ಲಾರಿಯೊಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಕಾರಿನ ಬಲಬದಿಯ ಮುಂದಿನ ಹಾಗೂ ಹಿಂದಿನ ಡೋರ್ ಜಖಂಗೊಂಡಿರುತ್ತದೆ. ಎಂಬಿತ್ಯಾದಿ

 

Ullal PS

ಪ್ರಕರಣದ ಸಾರಾಂಶವೇನೆಂದರೆ ಪ್ರಕರಣದ ಫಿರ್ಯಾದಿದಾರರಾದ ಪುರಷೋತ್ತಮ ರವರು ಸೋಮೇಶ್ವರ ಪುರಸಭೆಯಲ್ಲಿ ರೆವಿನ್ಯೂ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲದೆ ಮಾನ್ಯ ಜಿಲ್ಲಾಧಿಕಾರಿಯವರ ಆದೇಶದಂತೆ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿದ್ದು ಪ್ರಸ್ತುತ ಚುನಾವಣಾ ಪ್ಲೈಯಿಂಗ್ ತಂಡ 1 ರಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ. 5-4-2024 ರಂದು ಫಿರ್ಯಾದಿದಾರರಿಗೆ ಮದ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಚುನಾವಣಾ ಪ್ಲೈಯಿಂಗ್ ತಂಡ 1 ರಲ್ಲಿ ಕರ್ತವ್ಯ ಇದ್ದುದರಿಂದ ಬೆಳಿಗ್ಗೆ ಎಂದಿನಂತೆ ಸೋಮೇಶ್ವರ ಪುರಸಭೆಯಲ್ಲಿ ಕರ್ತವ್ಯದಲ್ಲಿದ್ದು, ಮದ್ಯಾಹ್ನ ಸುಮಾರು 1:09 ಗಂಟೆಯ ಸಮಯಕ್ಕೆ 7386844658 ನೇ ಮೊಬೈಲ್ ನಂಬ್ರದ ವಾಟ್ಸ್ ಆ್ಯಪ್ ಕಾಲ್ ನಿಂದ ಫಿರ್ಯಾದಿದಾರರ ಮೊಬೈಲ್ ನಂ. ಕರೆ ಮಾಡಿದ ವ್ಯಕ್ತಿ ಮಾತನಾಡಿ ಲೋಕಾಯುಕ್ತದಿಂದ ಮಾತನಾಡುತ್ತಿರುವುದು ನಿಮ್ಮ ಮೇಲೆ ಅಲಿಗೇಶನ್ ಬಂದಿದೆ, ಸಾಹೇಬರು ಮಾತನಾಡುತ್ತಾರೆ ಎಂದು ಬೇರೊಬ್ಬ ವ್ಯಕ್ತಿಗೆ ಪೋನ್ ಕೊಟ್ಟು ಅವರು ಮಾತನಾಡಿ ನಿಮ್ಮ ಮೇಲೆ ಅಲಿಗೇಶನ್ ಇದೆ, ನಮ್ಮ ಟೆಕ್ನಿಕಲ್ ತರಹ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ ಮೊದಲು ಮಾತನಾಢಿದ ವ್ಯಕ್ತಿಗೆ ಪೋನ್ ಕೊಟ್ಟು, ಸರಿ ಮಾಡಲು ರೂ.80,000/- ಪೋನ್ ಪೇ ಮಾಡಿ ಎಂದು ಹೇಳಿದಾಗ ಫಿರ್ಯಾದಿದಾರರು ತನಗೆ 9 ತಿಂಗಳಿನಿಂದ ಸಂಬಳ ಆಗಿರುವುದಿಲ್ಲ ಎಂದು ಹೇಳಿದಕ್ಕೆ ರೂ.50,000/- ಆದರೂ ಪೋನ್ ಪೇ ಮಾಡಬೇಕು, ಇಲ್ಲವಾದರೆ ನಿಮಗೆ ತೊಂದರೆ ಕೊಡುವುದಗಿ ಬೆದರಿಕೆ ಹಾಕಿದ್ದು, ನಂತರ ಫಿರ್ಯಾದಿದಾರರು ಸದ್ರಿ ಪೋನ್ ನಂ. 7386844658 ನ್ನು ಟ್ರೂ ಕಾಲರ್ ನಲ್ಲಿ ಪರಿಶೀಲಿಸಿದಾಗ ಸದ್ರಿ ನಂಬರ್ ನ ವ್ಯಕ್ತಿ ಡಿ. ಪ್ರಭಾಕರ. ಲೋಕಾಯುಕ್ತ. ಪಿ.ಐ ಎಂದು ತೋರಿಸಿದ್ದು, ಈ ಬಗ್ಗೆ ಫಿರ್ಯಾದಿದಾರರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಅಧಿಕಾರಿಗಳಲ್ಲಿ ಪೋನ್ ಮೂಲಕ ವಿಷಯ ತಿಳಿಸಿದಾಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿಗಳು ಇರುವುದಿಲ್ಲವಾಗಿ ತಿಳಿಸಿದ್ದು, ಅಲ್ಲದೆ ಫಿರ್ಯಾದಿದಾರರ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ.ಲಿಲ್ಲಿ ನಾಯರ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಕೃಷ್ಣ. ಆರ್. ರವರಿಗೆ ಕೂಡಾ ಇದೇ ರೀತಿ ಬೆದರಿಕೆ ಒಡ್ಡಿರುತ್ತಾರೆ. ಸದ್ರಿ ಪ್ರಭಾಕರ ಮತ್ತು ಇನ್ನೊಬ್ಬ ವ್ಯಕ್ತಿಯು ಫಿರ್ಯಾದಿದಾರರಿಂದ ಹಣವನ್ನು ಮೋಸದಿಂದ ಪಡೆದುಕೊಳ್ಳುವ ಉದ್ದೇಶದಿಂದ ಸದ್ರಿಯವರು ಕರ್ನಾಟಕ ಲೋಕಾಯುಕ್ತ ಎಂದು ನಟಿಸಿ ಫಿರ್ಯಾದಿದಾರರನ್ನು ನಂಬಿಸಿ ಸುಳ್ಳು ಹೇಳಿ ಫಿರ್ಯಾದಿದಾರರಿಗೆ ಮತ್ತು ಕಛೇರಿ ಸಿಬ್ಬಂದಿ ಅಧಿಕಾರಿಗಳಿಗೆ ಹಣಕ್ಕಾಗಿ ಬೆದರಿಕೆ ಒಡ್ಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 07-04-2024 10:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080